»   » ರಸಿಕರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಎರೋಟಿಕ್ ಸಿನ್ಮಾಗಳು

ರಸಿಕರ ಎದೆಯಲ್ಲಿ ಅವಲಕ್ಕಿ ಕುಟ್ಟಿದ ಎರೋಟಿಕ್ ಸಿನ್ಮಾಗಳು

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ಉತ್ತಮ ಪ್ರೇಮಕಥೆಯುಳ್ಳ ರೋಮ್ಯಾಂಟಿಕ್' ಎಂಬ ವಿಭಾಗದಿಂದ ಹಾರಿ 'ಎರೋಟಿಕ್' ಎನಿಸಿಕೊಂಡ ಅನೇಕ ಇಂಗ್ಲೀಷ್ ಚಿತ್ರಗಳು ಸದಾಕಾಲ ಕಾಡುತ್ತವೆ. ನೀಲಿ ಚಿತ್ರಗಳ ಪಟ್ಟಿಗೆ ಸೇರದೆ ಪ್ರೇಮ ಕಾಮ ಬೆರೆತ ಥ್ರಿಲ್ಲರ್, ಕಾಮಿಡಿ ಚಿತ್ರಗಳಾಗಿ ಬೋಲ್ಡ್ ಆಂಡ್ ಬ್ಯೂಟಿಫುಲ್ ಎನಿಸಿಕೊಂಡ ಎರೋಟಿಕ್ ಚಿತ್ರಗಳ ಪಟ್ಟಿಗೆ ಫಿಫ್ಟಿ ಶೇಡ್ಸ್ ಆಫ್ ಗ್ರೇ ಹೊಸ ಸೇರ್ಪಡೆ.

  ಫಿಫ್ಟಿ ಶೇಡ್ಸ್ ಆಫ್ ಗ್ರೇ ಕಾದಂಬರಿ ಈಗಾಗಲೇ ಲಕ್ಷಾಂತರ ಕಾಪಿ ಮಾರಾಟವಾಗಿ ಹೊಸ ದಾಖಲೆ ಬರೆದಿದೆ. ಈಗ ಫೆ.13ರಂದು ತೆರೆ ಕಾಣಲಿರುವ ಅದೇ ಹೆಸರಿನ ಚಿತ್ರಕ್ಕಾಗಿ ಸಿನಿರಸಿಕರು ಒಂಟಿಕಾಲಲ್ಲಿ ಕಾದಿದ್ದಾರೆ. [2014ರಲ್ಲಿ ಸದ್ದು ಮಾಡಿದ ಚಿತ್ರದ ಟ್ರೈಲರ್ ಗಳು]

  ಫಿಫ್ಟಿ ಶೇಡ್ಸ್ ಆಫ್ ಗ್ರೇ ಚಿತ್ರದಲ್ಲಿ ಕಾಮೋದ್ರೇಕ ಸನ್ನಿವೇಶಗಳಿವೆ, ನಗ್ನತೆ ಇದೆ ಎಂದು 18 ವಯಸ್ಕರ ಚಿತ್ರ ಎಂದು ಬಿಬಿಎಫ್ ಸಿ ಸರ್ಟಿಫಿಕೇಟ್ ನೀಡಿದೆ.[2014ರ ಟಾಪ್ ಕಾಮೋದ್ರೇಕ ಸಿನ್ಮಾಗಳು]

  ಪ್ರೇಮ, ಕಾಮ ಬೆರೆತ ಎರೋಟಿಕ್ ಥ್ರಿಲ್ಲರ್ ಇಷ್ಟಪಡುವವರು ಶರೋನ್ ಸ್ಟೋನ್ ಳನ್ನು ಮರೆಯಲು ಸಾಧ್ಯವೇ? 'ಸೆಕ್ರೆಟರಿ', 'ಲಾಸ್ಟ್ ಟ್ಯಾಂಗೋ ಇನ್ ಪ್ಯಾರೀಸ್' ನಂಥ ಚಿತ್ರಗಳು ಇತರೆ ಚಿತ್ರಗಳಿಗೆ ಪೈಪೋಟಿ ನೀಡಿ ಚಿತ್ರಮಂದಿರಗಳಲ್ಲಿ ತುಂಬಿದ ಗೃಹ ಪ್ರದರ್ಶನ ಕಂಡಿದ್ದನ್ನು ಮೆಲುಕು ಹಾಕಬಹುದು.

  ಅದರೆ, ಅನೇಕ ಚಿತ್ರಗಳು ರೇಟೆಡ್ ಎಕ್ಸ್ ಎನಿಸಿಕೊಂಡು ಚಿತ್ರಮಂದಿರಕ್ಕೆ ಬರಲಾಗದೆ ಒದ್ದಾಡಿದ್ದುಂಟು. 1933 ರಿಂದ ಇಲ್ಲಿ ತನಕ ಇಂಥ ಚಿತ್ರಗಳತ್ತ ಇಣುಕಿ ನೋಡಿ ಟಾಪ್ ಚಿತ್ರಗಳನ್ನು ಆಯ್ಕೆ ಮಾಡಿ ಇಲ್ಲಿ ನೀಡಲಾಗಿದೆ..[ಮಿಸ್ ಮಾಡದೇ ನೋಡಬೇಕಾದ 2014ರ ಚಿತ್ರಗಳು]

  ಎಕ್ಟಸಿ, 1933

  ಚೆಕ್ ಭಾಷೆ ಸಿನಿಮಾ 1940 ರ ತನಕ ಅಮೆರಿಕದಲ್ಲಿ ಪ್ರದರ್ಶನಗೊಂಡಿರಲಿಲ್ಲ. ಚಿತ್ರದಲ್ಲಿ ನಗ್ನತೆ, ಕಾಮೋದ್ರೇಕ ದೃಶ್ಯಗಳಿವೆ ಎಂದು ನಿರ್ಬಂಧ ಹೇರಲಾಗಿತ್ತು.

  ಮಿಡ್ ನೈಟ್ ಕೌಬಾಯ್, 1969

  ಅಕಾಡೆಮಿ ಪ್ರಶಸ್ತಿ ಗೆದ್ದ ಶ್ರೇಷ್ಠ ಚಿತ್ರಗಳ ಪೈಕಿ 'ಎಕ್ಸ್' ರೇಟೆಡ್ ಸಿನಿಮಾ ಎಂದ್ರೆ ಇದೊಂದೆ. ಇಬ್ಬರು ತರುಣರು ನ್ಯೂಯಾರ್ಕ್ ಗೆ ಬಂದು ಕ್ಯಾಸನೋವಾಗಳಾಗಿ ಕೊನೆಗೆ ಸೆಕ್ಸ್ ಗಾಗಿ ಹಣ ಪಡೆಯುವ ಮಟ್ಟಕ್ಕಿಳಿಯುವ ಕಥೆ ಇದರಲ್ಲಿದೆ.

  ಹೆನ್ರಿ ಅಂಡ್ ಜೂನ್, 1990

  ಎನ್ ಸಿ -17 ರೇಟಿಂಗ್ ಪಡೆದಿರುವ ಈ ಚಿತ್ರ ರೋಮ್ಯಾಂಟಿಕ್ ಅಥವ ಎರೋಟಿಕ್ ತ್ರಿಕೋನ ಪ್ರೇಮಕಥೆ ಹೊಂದಿದ್ದು, ಲೇಖಕ ಹೆನ್ರಿ ಮಿಲ್ಲರ್, ಆತನ ಪತ್ನಿ ಜೂನ್ ಹಾಗೂ ಅನೈಸ್ ನಿನ್ ನಡುವಿನ ಕಥೆ ಇದೆ.

  ಲಾಸ್ಟ್ ಟ್ಯಾಂಗೋ ಇನ್ ಪ್ಯಾರೀಸ್, 1972

  ಕ್ಲಾಸಿಕ್ ಫ್ರೆಂಚ್ ಚಿತ್ರ ಇಲ್ಲದಿದ್ದರೆ ಈ ಪಟ್ಟಿಯೇ ಅಪೂರ್ಣವಾಗುತ್ತದೆ. 70ರ ದಶಕದಲ್ಲಿ ಈ ಚಿತ್ರಕ್ಕೆ ಭಾರಿ ವಿರೋಧ ವ್ಯಕ್ತವಾಗಿತ್ತು. ವಿಧವೆ ಹಾಗೂ ನಿಶ್ಚಿತಾರ್ಥವಾಗಿರುವ ಪುರುಷನೊಬ್ಬನ ಜೊತೆಗಿನ ಸಂಬಂಧದ ಕಥೆ ಬ್ರಾಂಡೋ ಹಾಗೂ ಬರ್ನಾರ್ಡೋ ಬರ್ಟೋಲುಚಿ ಅವರನ್ನು ಆಸ್ಕರ್ ಅಂಗಳಕ್ಕೆ ತಂದಿತ್ತು.

  9/12 ವೀಕ್ಸ್, 1986

  ಆರ್ಟ್ ಗ್ಯಾಲರಿ ಉದ್ಯೋಗಿ ಹಾಗೂ ವಾಲ್ ಸ್ಟ್ರೀಟ್ ಬ್ರೋಕರ್ ನಡುವಿನ ಪ್ರೇಮ ಕಾಮದ ಕಥೆಯುಳ್ಳ ಈ ಚಿತ್ರದಲ್ಲಿ ಸಕತ್ ಹಾಟ್ ದೃಶ್ಯಗಳಿವೆ. ಅಡುಗೆ ಮನೆಯಲ್ಲಿರುವ ಐಸ್ ಕ್ರೀಮ್ ಹಣ್ಣು ಹಂಪಲು ಕಾಮದಾಟಕ್ಕೆ ಬಳಸಿರುವ ಪರಿ ನೋಡಿಯೇ ತೀರಬೇಕು.

  ಸೆಕ್ರೆಟರಿ, 2002

  ಬಿಡಿಎಸ್ ಎಂ ಥೀಮ್ ಹೊಂದಿರುವ ಈ ಚಿತ್ರದ ಮುಂದಿನ ಭಾಗವಾಗಿ ಫಿಫ್ಟಿ ಶೇಡ್ಸ್ ನಲ್ಲಿ ಕಾಣಬಹುದು. ಜೇಮ್ಸ್ ಸ್ಪೇಡರ್ ಬಾಸ್ ಆಗಿ ಮ್ಯಾಗಿ ಜಿಲ್ಲೆನ್ಹಾಲ್ ಸಹಾಯಕಿಯಾಗಿ ನಟಿಸಿದ್ದಾರೆ.

  ಬೇಸಿಕ್ ಇನ್ಸ್ಟಿಂಕ್ಟ್, 1992

  90ರ ದಶಕದಿಂದ ಪಡ್ಡೆಗಳನ್ನು ಕಾಡುತ್ತಿರುವ ಶರೋನ್ ಸ್ಟೋನ್ ಅಭಿನಯದ ಈ ಚಿತ್ರ ಆರ್ ರೇಟಿಂಗ್ ಪಡೆಯುವುದಕ್ಕೂ ಮುನ್ನ ಇನ್ನೂ ಎರೋಟಿಕ್ ಆಗಿತ್ತಂತೆ. ವಿಚಾರಣೆ ವೇಳೆ ಮೈಕಲ್ ಡಗ್ಲಾಸ್ ಮುಂದೆ ಕಾಲು ಎತ್ತಿ ಹಾಕಿ ಕುಳಿತುಕೊಳ್ಳುವ ಸೀನ್ ಇರಬಹುದು ಅಥವಾ ಇಬ್ಬರ ನಡುವಿನೆ ಪ್ರಣಯ ದೃಶ್ಯವಿರಬಹುದು. ನಿರ್ದೇಶಕ ಪಾಲ್ ವರ್ಹೊವಿನ್ 30ಸೆಕೆಂಡ್ ಕತ್ತರಿಯಾಡಿಸಿ ಆರ್ ರೇಟಿಂಗ್ ಗೆ ಇಳಿಸಿದರಂತೆ.

  ಪ್ಲೇಷರ್ ಅಂಡ್ ಪ್ಲೇನ್, 2013

  9/12 ವೀಕ್ಸ್ ನಿರ್ದೇಶಕ ಹೊರ ತಂದ ಮತ್ತೊಂದು ಕಾಮೋದ್ರೇಕ ಚಿತ್ರ ಇದಾಗಿದ್ದು, ಸಾಫ್ಟ್ ಕೋರ್ ಸೆಕ್ಷನ್ ನಲ್ಲಿ ಜನಪ್ರಿಯವಾಯಿತು.

  ಫಿಫ್ಟಿ ಶೇಡ್ಸ್ ಆಫ್ ಗ್ರೇ, 2015

  2011 ರಲ್ಲಿ ಬ್ರಿಟಿಶ್ ಲೇಖಕ ಇ.ಎಲ್ ಜೇಮ್ಸ್ ಬರೆದ ಕಾಮೋನ್ಮತ್ತ ಸನ್ನಿವೇಶಗಳುಳ್ಳ, ವಿಶ್ವದ 51 ಭಾಷೆಗಳಿಗೆ ಅನುವಾದವಾಗಿರುವ, ಸುಮಾರು 100 ಮಿಲಿಯನ್ ಇ ಕಾಪಿಗಳು ಮಾರಾಟವಾಗಿರುವ ಕೃತಿ ತೆರೆಯ ಮೇಲೆ ಫೆ.13, 2015 ಬರಲು ಸಿದ್ಧವಾಗಿದೆ.

  English summary
  All of us have the 'Fifty Shades of Grey' obsession which is killing us and before the long wait for 13th February gets over. While we wait for 'Fifty Shades of Grey' to release, here is a look at the other tabooed films which were bold and raunchy enough to stand-out.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more