For Quick Alerts
ALLOW NOTIFICATIONS  
For Daily Alerts

ಕಾಮೋದ್ರೇಕ ಚಿತ್ರ 'ಫಿಫ್ಟಿಶೇಡ್ಸ್ ಆಫ್ ಗ್ರೇ' ಗೆ ಭಾರತದಲ್ಲಿ ನಿಷೇಧ

By ಜೇಮ್ಸ್ ಮಾರ್ಟಿನ್
|

2014ರಲ್ಲಿ ಎಲ್ಲಾ ದಾಖಲೆಗಳನ್ನು ಮುರಿದು ಸಿನಿರಸಿಕರನ್ನು ಆಕರ್ಷಿಸಿದ ಟ್ರೈಲರ್ ಗಳ ಪೈಕಿ ಫಿಫ್ಟಿ ಶೇಡ್ಸ್ ಆಫ್ ಗ್ರೇ ಕೂಡಾ ಒಂದು. ಕಾದಂಬರಿ ಆಧಾರಿತ ಈ ಚಿತ್ರ ಕೊನೆಗೂ ಭಾರತದಲ್ಲಿ ರಿಲೀಸ್ ಆಗಲಿದೆ ಎಂದು ಅಭಿಮಾನಿಗಳು ಅಂದುಕೊಳ್ಳುವಷ್ಟರಲ್ಲಿ ನಿಷೇಧದ ಬೋರ್ಡ್ ತಗುಲಿಹಾಕಲಾಗಿದೆ.

ಕ್ರಿಶ್ಚಿಯನ್ ಗ್ರೇ ಅಭಿಮಾನಿಗಳು ಸದ್ಯಕ್ಕೆ ಆನ್ ಲೈನ್ ನಲ್ಲಿ ಕದ್ದು ಅಥವಾ ಡಿವಿಡಿ ಬರುವ ತನಕ ಕಾಯಬೇಕಾಗಿದೆ. ಸದ್ಯಕ್ಕೆ ದೊಡ್ಡ ಪರದೆಯಲ್ಲಿ ರೋಮ್ಯಾಂಟಿಕ ಥ್ರಿಲ್ಲರ್ ನೋಡುವ ಅವಕಾಶ ಸಿಗುವುದಿಲ್ಲ. ಭಾರತದ ಸೆನ್ಸಾರ್ ಬೋರ್ಡ್ ಈ ಚಿತ್ರ ನೋಡಲು ಯೋಗ್ಯವಲ್ಲ. ಪೋರ್ನ್ ಕೆಟಗರಿಗೂ ಸೇರ್ಪಡೆ ಮಾಡಲು ಯೋಗ್ಯ ಎಂದು ನಿರ್ಧರಿಸಿಬಿಟ್ಟಿದೆ. [2014ರಲ್ಲಿ ಸದ್ದು ಮಾಡಿದ ಚಿತ್ರದ ಟ್ರೈಲರ್ ಗಳು]

ಅದರೆ, ಈ ಚಿತ್ರಕ್ಕೆ ನಿಷೇಧ ಹೇರಿದ್ದು ಏಕೆ? ಎಂಬ ಸರಳ ಪ್ರಶ್ನೆಗೆ ಸೆನ್ಸಾರ್ ಬೋರ್ಡ್ ಅಧ್ಯಕ್ಷ ಶ್ರವಣ್ ಕುಮಾರ್ ಇನ್ನೂ ಉತ್ತರಿಸಿಲ್ಲ. ಬಿಡಿಎಸ್ ಎಂ ಥೀಮ್ ಇರುವ ನಗ್ನತೆಯೇ ಹೆಚ್ಚಾಗಿರುವ ದೃಶ್ಯವುಳ್ಳ, ಕಾಮೋದ್ರೇಕ ಸನ್ನಿವೇಶಗಳುಳ್ಳ ಈ ಚಿತ್ರ ಕಳೆದ ದಶಕದಲ್ಲೇ ಮೋಸ್ಟ್ ಎರೋಟಿಕ್ ಮೂವಿ ಎನಿಸಿಕೊಂಡಿದೆ.

2014ರಲ್ಲಿ ಫಿಫ್ಟಿ ಶೇಡ್ಸ್ ಆಫ್ ಗ್ರೇ ಚಿತ್ರದ ಟ್ರೈಲರ್ ಅತಿ ಹೆಚ್ಚು ಬಾರಿ ವೀಕ್ಷಣೆ ಪಡೆದುಕೊಂಡಿದೆ. ಮೊದಲ ವಾರವೇ 36.4 ಮಿಲಿಯನ್ ವೀಕ್ಷಣೆ ಪಡೆದ ಫಿಫ್ಟಿ ಶೇಡ್ಸ್ ಆಫ್ ಗ್ರೇ ವರ್ಷದ ಕೊನೆಗೆ 95 ಮಿಲಿಯನ್ ವೀಕ್ಷಣೆ ಪಡೆದುಕೊಂಡಿತ್ತು. [2014ರ ಟಾಪ್ ಕಾಮೋದ್ರೇಕ ಸಿನ್ಮಾಗಳು]

2011 ರಲ್ಲಿ ಬ್ರಿಟಿಶ್ ಲೇಖಕ ಇ.ಎಲ್ ಜೇಮ್ಸ್ ಬರೆದ ಕಾಮೋನ್ಮತ್ತ ಸನ್ನಿವೇಶಗಳುಳ್ಳ, ವಿಶ್ವದ 51 ಭಾಷೆಗಳಿಗೆ ಅನುವಾದವಾಗಿರುವ, ಸುಮಾರು 100 ಮಿಲಿಯನ್ ಇ ಕಾಪಿಗಳು ಮಾರಾಟವಾಗಿರುವ ಕೃತಿ ತೆರೆಯ ಮೇಲೆ ಫೆ.14, 2015 ಬರಲು ಸಿದ್ಧವಾಗಿತ್ತು.ಅದರೆ, ಭಾರತದಲ್ಲಿ ಬ್ಯಾನ್ ಆಗಿದೆ.

ಭಾರತಕ್ಕೂ ಮೊದಲು ಯುಎಇ, ಚೀನಾ, ಕೀನ್ಯಾ, ಮಲೇಷಿಯಾ ಮುಂತಾದ ದೇಶಗಳಲ್ಲಿ ಬೇರೆ ಬೇರೆ ಕಾರಣಕ್ಕೆ ಚಿತ್ರಕ್ಕೆ ನಿಷೇಧ ಹೇರಲಾಗಿದೆ. ಅಮೆರಿಕದಲ್ಲಿ 'ಆರ್' ರೇಟಿಂಗ್ ಪಡೆದು ತೆರಕಂಡಿರುವ ಈ ಚಿತ್ರ ಬ್ಲಾಕ್ ಬ್ಲಾಸ್ಟರ್ ಎನಿಸಿಕೊಂಡಿದೆ.

English summary
Sad news for Indians as the fans of Christian Grey will not get to see him on the big screen here.Fifty Shades of Grey is based on the bestselling novel by British author, E.L. James. The movie released in the US with an R-rating and has been a blockbuster hit at worldwide box office.

Kannada Photos

Go to : More Photos
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more