»   » ಜುರಾಸಿಕ್ ವರ್ಲ್ಡ್ ಟ್ರೇಲರ್ ಗೊಂದು ಟೀಸರ್ ಬಂತು!

ಜುರಾಸಿಕ್ ವರ್ಲ್ಡ್ ಟ್ರೇಲರ್ ಗೊಂದು ಟೀಸರ್ ಬಂತು!

By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಮೊದಲ ಎರಡು ಜುರಾಸಿಕ್ ಪಾರ್ಕ್ ಸಿನಿಮಾಗಳನ್ನು ನಿರ್ಮಿಸಿ, ನಿರ್ದೇಶಿಸಿ ಇತಿಹಾಸ ಸೃಷ್ಟಿಸಿದ ಹಾಲಿವುಡ್ ನ ಶ್ರೇಷ್ಠ ಚಿತ್ರಕರ್ಮಿ ಸ್ಟೀವನ್ ಸ್ಪೀಲ್ಬರ್ಗ್ ಈಗ ಮತ್ತೆ ಡೈನೋಸರ್ ಗಳನ್ನು ಹಿಡಿದುಕೊಂಡು ವಿಭಿನ್ನ ಬಗೆಯಲ್ಲಿ ಬೆಳ್ಳಿತೆರೆಯ ಮೇಲೆ ದಾಳಿ ಮಾಡಲು ಸಿದ್ಧವಾಗಿರುವುದು ನಿಮಗೆಲ್ಲ ತಿಳಿದೇ ಇದೆ. ಈ ಬಗ್ಗೆ ಮೂರು ವರ್ಷದ ಕೆಳಗೆ ಫಿಲ್ಮಿ ಬೀಟ್ ನಲ್ಲಿ ವರದಿ ಮಾಡಲಾಗಿತ್ತು.

ಈಗ ಜುರಾಸಿಕ್ ಪಾರ್ಕ್ ಸರಣಿಯ ನಾಲ್ಕನೇ ಚಿತ್ರ ಜುರಾಸಿಕ್ ವರ್ಲ್ಡ್ ಬಗ್ಗೆ ಅಧಿಕೃತ ವೆಬ್ ತಾಣದಿಂದ ಸುದ್ದಿ ಬಂದಿದೆ. ಚಿತ್ರದ ಟ್ರೇಲರ್ ಬಿಡುಗಡೆಗೆ ಈಗಾಗಲೇ ದಿನಗಣನೆ ಆರಂಭವಾಗಿದೆ. ಸದ್ಯಕ್ಕೆ ಚಿತ್ರ ಟೀಸರ್ ಬಿಡುಗಡೆ ಮಾಡಲಾಗಿದ್ದು, ಯುನಿವರ್ಸಲ್ ಪಿಕ್ಚರ್ಸ್ ನಿರ್ಮಾಣ ಈ ಚಿತ್ರದ 20 ಸೆಕೆಂಡುಗಳ ಟೀಸರ್ ನಲ್ಲಿ ನೀರು ತುಂಬಿದ ಗಾಜಿನ ಲೋಟ ಅಲುಗಾಡುವ ಫುಟೇಜ್ ಇದೆ. ಪರಿಪೂರ್ಣ ಟ್ರೇಲರ್ ಗೂ ಮುನ್ನ ಕುತೂಹಲ ಕಾಯ್ದುಕೊಳ್ಳುವ ಟೀಸರ್ ನ್ನು ಬಿಡುಗಡೆ ಮಾಡಲಾಗಿದೆ. [ಥ್ರಿಲ್ ಇರದ ಟ್ರೇಲರ್ ಗೂ ಕೋಟಿ ಮಂದಿ ಮೆಚ್ಚುಗೆ]

ಜುರಾಸಿಕ್ ಪಾರ್ಕ್ ಅಧಿಕೃತ ವೆಬ್ ತಾಣದ ಪ್ರಕಟಣೆ ಪ್ರಕಾರ ನವೆಂಬರ್ 27ರ ಥ್ಯಾಂಕ್ ಗಿವಿಂಗ್ ಡೇ ರಾತ್ರಿ 9ಗಂಟೆಗೆ ಜುರಾಸಿಕ್ ವರ್ಲ್ಡ್ ಚಿತ್ರದ ಟ್ರೇಲರ್ ಬಿಡುಗಡೆಯಾಗಲಿದೆ.

ಭಾರತೀಯ ನಟ ಇರ್ಫಾನ್ ಖಾನ್ ನಟನೆಯ ಮರ್ಸ್ರಾನಿ ಪಾತ್ರದ ವಿಶ್ಲೇಷಣೆ, ಜುರಾಸಿಕ್ ಪಾರ್ಕ್ III ರ ಚಿತ್ರೀಕರಣ ಸಂದರ್ಭದ ಕುತೂಹಲಕಾರಿ ಅಂಶಗಳುಳ್ಳ ಪ್ರತ್ಯೇಕ ವೆಬ್ ಸೈಟ್ ಕೂಡಾ ಯೂನಿವರ್ಸಲ್ ಸ್ಟುಡಿಯೋ ಅಭಿಮಾನಿಗಳಿಗೆ ತೆರೆದಿದೆ. ಜಾನ್ ಹಮ್ಮಂಡ್ ಪಾತ್ರ(ದಿವಂಗತ ರಿಚರ್ಡ್ ಅಟೆನ್ ಬರೋ ಪಾತ್ರಧಾರಿ) 2005ರಿಂದ ಬೆಳೆದ ರೀತಿ ಬಗ್ಗೆ ಕೂಡಾ ತಿಳಿಯಬಹುದು.

ಮೈಕಲ್ ಕ್ರಿಚ್ಟನ್ ಅವರ ಡೈನೋಸರರ್ಸ್ ಕಾದಂಬರಿ ಆಧಾರದ ಮೇಲೆ ಜುರಾಸಿಕ್ ಪಾರ್ಕ್ ಚಿತ್ರಗಳು ರೂಪುಗೊಂಡಿದೆ. 2001ರಲ್ಲಿ ಬಿಡುಗಡೆಗೊಂಡ ಜುರಾಸಿಕ್ ಪಾರ್ಕ್ 3 ಅನ್ನು ಸ್ಪೀಲ್ಬರ್ಗ್ ಬದಲಿಗೆ ಜೊ ಜಾನ್ ಸ್ಟನ್ ನಿರ್ದೇಶಿಸಿದ್ದರು. ನಾಲ್ಕನೇ ಸರಣಿಯಲ್ಲೂ ಜಾನ್ ತೊಡಗಿಕೊಳ್ಳುವ ಸಾಧ್ಯತೆಗಳು ಕಂಡು ಬಂದಿತ್ತು. ಆದರೆ, ಚಿತ್ರ ನಿರ್ಮಾಣ ಮಾತ್ರ ಮಾಡುತ್ತಿರುವ ಸ್ಪೀಲ್ಬರ್ಗ್ ನಿರ್ದೇಶನದ ಹೊಣೆಯನ್ನು ಕಾಲಿನ್ ಟ್ರೆವೊರೊಗೆ ನೀಡಿದ್ದಾರೆ. ಯುಎಸ್, ಯುಕೆಯಲ್ಲಿ ಜೂನ್12, 2015ರಂದು ಚಿತ್ರ ತೆರೆಗೆ ಬರುವ ನಿರೀಕ್ಷೆಯಿದೆ.

Jurassic World

ಜುರಾಸಿಕ್ ಪಾರ್ಕ್ ಅಂಡ ದ ಲಾಸ್ಟ್ ವರ್ಲ್ಡ್ ಸರಣಿ ಎರಡು ಚಿತ್ರಗಳು ಕ್ರಮವಾಗಿ 915 ಮಿಲಿಯನ್ ಯುಎಸ್ ಡಾಲರ್ ಹಾಗೂ 619 ಯುಎಸ್ ಡಾಲರ್ ಗಳಿಸಿದ್ದವು. ಆದರೆ ಮೂರನೇ ಆವೃತ್ತಿ ಮಾತ್ರ 369 ಮಿಲಿಯನ್ ಯುಎಸ್ ಡಾಲರ್ ಗಳಿಸಿತ್ತು. ಸ್ಪೀಲ್ಬರ್ಗ್ ನ ಡೈರೆಕ್ಟರ್ ಮ್ಯಾಜಿಕ್ ಅಲ್ಲಿ ಮಾಯವಾಗಿತ್ತು. ನಾಲ್ಕನೇ ಸರಣಿ ಕಥೆ ಏನಾಗುವುದೋ ಕಾದು ನೋಡೋಣ...

English summary
WATCH: 'Jurassic World' Teaser Trailer. The 20 seconds teaser trailer which shows a glass of water vibrating footage, is just a glimpse of what to expect from the full fledged official trailer of the movie!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada