»   » ಸ್ಟಂಟ್ ಮಾಡಲು ಹೋಗಿ ಕಾಲು ಮೂಳೆ ಮುರಿದುಕೊಂಡ ಟಾಮ್ ಕ್ರೂಸ್

ಸ್ಟಂಟ್ ಮಾಡಲು ಹೋಗಿ ಕಾಲು ಮೂಳೆ ಮುರಿದುಕೊಂಡ ಟಾಮ್ ಕ್ರೂಸ್

Posted By:
Subscribe to Filmibeat Kannada

ಮೈನವಿರೇಳಿಸುವ ಸಾಹಸ ದೃಶ್ಯಗಳನ್ನು ಚಿತ್ರೀಕರಿಸಲು ಹೋಗಿ ಕಲಾವಿದರು ಮಾಡಿಕೊಳ್ಳುತ್ತಿರುವ ಅನಾಹುತಗಳು, ಅವಘಡಗಳು ಒಂದೆರಡಲ್ಲ. ಎಷ್ಟೇ ಮುಂಜಾಗ್ರತೆ, ಸುರಕ್ಷತಾ ಕ್ರಮಗಳನ್ನು ಕೈಗೊಂಡರೂ, ಒಬ್ಬರಲ್ಲ ಒಬ್ಬರು ಪೆಟ್ಟು ತಿನ್ನುತ್ತಲೇ ಇದ್ದಾರೆ. ಈಗ ಹಾಲಿವುಡ್ ನಟ ಟಾಮ್ ಕ್ರೂಸ್ ಗೂ ಆಗಿರುವುದು ಇದೇ.!

'ಮಿಶನ್ ಇಂಪಾಸಿಬಲ್-6' ಚಿತ್ರದ ಚಿತ್ರೀಕರಣದಲ್ಲಿ ತೊಡಗಿದ್ದ ಪ್ರಖ್ಯಾತ ಹಾಲಿವುಡ್ ನಟ ಟಾಮ್ ಕ್ರೂಸ್, ಸ್ಟಂಟ್ ಮಾಡಲು ಹೋಗಿ ಕಾಲು ಮೂಳೆ ಮುರಿದುಕೊಂಡಿದ್ದಾರೆ. ಮುಂದೆ ಓದಿರಿ...

ಚಿತ್ರೀಕರಣದಲ್ಲಿ ನಡೆದಿದ್ದೇನು.?

ಭಾನುವಾರ (ಆಗಸ್ಟ್ 13) ಲಂಡನ್ ನಲ್ಲಿ 'ಮಿಶನ್ ಇಂಪಾಸಿಬಲ್-6' ಚಿತ್ರದ ಚಿತ್ರೀಕರಣ ನಡೆಯುತ್ತಿತ್ತು. ಚಿತ್ರದ ನಾಯಕ ಟಾಮ್ ಕ್ರೂಸ್ ಒಂದು ಕಟ್ಟಡದಿಂದ ಇನ್ನೊಂದಕ್ಕೆ ಜಿಗಿಯಬೇಕಿತ್ತು. ಆಗಲೇ ನೋಡಿ ಅವಘಡ ಸಂಭವಿಸಿದ್ದು.

ಡ್ಯೂಪ್ ಇಲ್ಲ.!

ಸ್ಟಂಟ್ ಎಷ್ಟೇ ಕಷ್ಟ ಇದ್ದರೂ, ಡ್ಯೂಪ್ ಇಲ್ಲದೇ ಅದನ್ನ ನೀರು ಕುಡಿದಷ್ಟೇ ಸಲೀಸಾಗಿ ಮಾಡುವಲ್ಲಿ ಟಾಮ್ ಕ್ರೂಸ್ ಹೆಸರುವಾಸಿ. ಹೀಗಾಗಿ, 'ಮಿಶನ್ ಇಂಪಾಸಿಬಲ್-6' ಚಿತ್ರದ ಸ್ಟಂಟ್ ಮಾಡಲು ತಾವೇ ಮುಂದಾದರೇ ಹೊರತು ಡ್ಯೂಪ್ ಬಳಸಲಿಲ್ಲ. ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಂಡು, ಹಗ್ಗ ಬಳಸಿ ಒಂದು ಬಿಲ್ಡಿಂಗ್ ನಿಂದ ಇನ್ನೊಂದಕ್ಕೆ ಜಿಗಿಯಲು ಸಿದ್ದವಾದರು.

ಗುರಿ ಮಿಸ್ ಆಯ್ತು.!

ಒಂದು ಕಟ್ಟಡದಿಂದ ಇನ್ನೊಂದಕ್ಕೆ ಜಿಗಿಯುವಾಗ, ಟಾಮ್ ಕ್ರೂಸ್ ರವರ ಗುರಿ ತಪ್ಪಿತು. ಪರಿಣಾಮ ಟಾಮ್ ಕ್ರೂಸ್ ಕಾಲಿನ ಮೂಳೆ ಮುರಿಯಿತು.

ಬೆಡ್ ರೆಸ್ಟ್ ನಲ್ಲಿ ಟಾಮ್ ಕ್ರೂಸ್

ಕಾಲು ಮೂಳೆ ಮುರಿದಿರುವ ಕಾರಣ ಟಾಮ್ ಕ್ರೂಸ್ ಸದ್ಯ ಚಿಕಿತ್ಸೆ ಪಡೆದು ಬೆಡ್ ರೆಸ್ಟ್ ನಲ್ಲಿದ್ದಾರೆ. ಅವರು ಸಂಪೂರ್ಣ ಗುಣಮುಖರಾಗಿ, ನಡೆದಾಡಲು ಸಾಧ್ಯವಾಗುವುದಕ್ಕೆ ಕನಿಷ್ಟ ಅಂದರೂ ಇನ್ನೂ ಮೂರ್ನಾಲ್ಕು ತಿಂಗಳು ಬೇಕು.

Avatar 2 Coming Soon

'ಮಿಶನ್ ಇಂಪಾಸಿಬಲ್' ಮತ್ತು 'ಟಾಮ್ ಕ್ರೂಸ್'

'ಮಿಶನ್ ಇಂಪಾಸಿಬಲ್' ಸೀರೀಸ್ ನಿಂದಲೇ ಜನಪ್ರಿಯತೆ ಪಡೆದ ಟಾಮ್ ಕ್ರೂಸ್ ಹಾಲಿವುಡ್ ನ ಅತ್ಯಂತ ಕಾಸ್ಟ್ಲಿ ನಟ. ಗೋಲ್ಡನ್ ಗ್ಲೋಬ್ ಅವಾರ್ಡ್ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿರುವ ಟಾಮ್ ಕ್ರೂಸ್ ಅಭಿನಯದ 'ಮಿಶನ್ ಇಂಪಾಸಿಬಲ್-6' ಚಿತ್ರಕ್ಕೆ Christopher McQuarrie ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಮಿಶನ್ ಇಂಪಾಸಿಬಲ್-6' ಚಿತ್ರ ಮುಂದಿನ ವರ್ಷ ತೆರೆಗೆ ಬರುವ ಸಾಧ್ಯತೆ ಇದೆ.

English summary
Hollywood Actor Tom Cruise breaks ankle after 'Mission:Impossile 6' stunt goes wrong while shooting in London.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada