»   » ಸಂದರ್ಶನ: Rank ಸ್ಟಾರ್ ಗುರುನಂದನ್ ಚಿತ್ರಗಳಲ್ಲಿ ಸ್ಮೈಲೇ ಸ್ಪೆಷಲ್..!

ಸಂದರ್ಶನ: Rank ಸ್ಟಾರ್ ಗುರುನಂದನ್ ಚಿತ್ರಗಳಲ್ಲಿ ಸ್ಮೈಲೇ ಸ್ಪೆಷಲ್..!

Posted By:
Subscribe to Filmibeat Kannada

Rank ಸ್ಟಾರ್ 'ಗುರುನಂದನ್' ಈಗ ಮನೆಮಾತಾಗಿದ್ದಾರೆ. ಜನರೇ ನೀವು ನಗಿ ಅಂತ ಒಂದು ಮಾತು ಹೇಳದೇ 'ಫಸ್ಟ್ Rank ರಾಜು' ಚಿತ್ರದಲ್ಲಿ ಸಿಕ್ಕಾಪಟ್ಟೆ ಮನರಂಜನೆ ನೀಡಿದ್ರು. ಆದ್ರೆ ಈಗ ಚಿತ್ರದ ಟೈಟಲ್ ನಲ್ಲೇ 'ಸ್ಮೈಲ್ ಪ್ಲೀಸ್' ಅಂತ ಹೆಸರಿಟ್ಟುಕೊಂಡು ಸ್ಯಾಂಡಲ್ ವುಡ್ ಸಿನಿ ಪ್ರಿಯರ ಕುತೂಹಲ ಕೆರಳಿಸಿದ್ದಾರೆ.['ಸ್ಮೈಲ್ ಪ್ಲೀಸ್' ಆಡಿಯೋ ರಿಲೀಸ್ ಮಾಡಿದ ರಾಕಿಂಗ್ ಸ್ಟಾರ್]

'ಸ್ಮೈಲ್ ಪ್ಲೀಸ್' ಚಿತ್ರತಂಡ ಶೂಟಿಂಗ್ ಕಂಪ್ಲೀಟ್ ಮಾಡಿ, ಇತ್ತೀಚೆಗಷ್ಟೆ ಆಡಿಯೋ ರಿಲೀಸ್ ಮಾಡಿತ್ತು. ಈಗ ಚಿತ್ರದ ಬಿಡುಗಡೆ ದಿನಾಂಕವನ್ನು ಫಿಕ್ಸ್ ಮಾಡಿದೆ. ನಟ ಗುರುನಂದನ್ ಕೆಲ ಸಮಯ 'ನಿಮ್ಮ ಫಿಲ್ಮಿಬೀಟ್ ' ಜೊತೆ ಇತ್ತೀಚೆಗೆ ತಾನೆ ಮಾತಿಗೆ ಸಿಕ್ಕಿದರು. ಖುಷಿಯಿಂದ ಮಾತನಾಡಿದ ಗುರುನಂದನ್ 'ಸ್ಮೈಲ್ ಪ್ಲೀಸ್' ಚಿತ್ರದ ವಿಶೇಷತೆ ಏನು, ಸಿನಿಮಾನ ನಾವ್ಯಾಕೆ ನೋಡ್ಬೇಕು. ಅಂತಹ ವಿಶೇಷತೆ ಚಿತ್ರದಲ್ಲಿ ಏನಿದೆ ಎಂಬುದನ್ನು ಹಂಚಿಕೊಂಡಿದ್ದಾರೆ.

'ಸ್ಮೈಲ್ ಪ್ಲೀಸ್' ಚಿತ್ರದ ನಟ ಗುರುನಂದನ್ ಜೊತೆ ನಾವು ನಡೆಸಿದ ಸಂದರ್ಶನದಲ್ಲಿ ಅವರು ನೀಡಿದ ಮಾಹಿತಿ ಈ ಕೆಳಗಿನಂತಿವೆ.

ಸಿನಿಮಾಗೆ 'ಸ್ಮೈಲ್ ಪ್ಲೀಸ್' ಟೈಟಲ್ ಏಕೆ?

ಇಂದಿನ ಒತ್ತಡ ಜೀವನದಲ್ಲಿ ಎಲ್ಲರು ಹೆಚ್ಚಾಗಿ ಮುಖ ಗಂಟಾಗಿಕೊಂಡೆ ಇರುತ್ತಾರೆ. ಜನರ ಲೈಫ್ ಸ್ಟೈಲ್ ಇಂದ ಅವರ ನಗುನೇ ಹೊರಟು ಹೋಗುತ್ತಿದೆ. ಆದ್ದರಿಂದ ಆ ರೀತಿ ಇರಬೇಡಿ ಪ್ಲೀಸ್ ನಗಿ ಅನ್ನೋ ಮೆಸೇಜ್ ಅನ್ನು ಹೇಳೋಕೆ ಹೊರಟಿದ್ದೇವೆ.[100% ಮನರಂಜನೆ: 'ರಾಜು ಕನ್ನಡ ಮೀಡಿಯಂ' ಟೀಸರ್ ನೋಡಿದ್ರಾ?]

ನಿಮ್ಮ ಪಾತ್ರದ ಬಗ್ಗೆ ಹೇಳಿ?

"ಹೀರೋ ಗೆ ಎನೋ ಒಂದು ದೊಡ್ಡ ತೊಂದರೆ ಇರುತ್ತದೆ. ಅದು ಏನು ಅನ್ನೋದು ಸಿನಿಮಾದಲ್ಲಿ ಗೊತ್ತಾಗುತ್ತೆ. ಹೀರೋ ತನಗೆ ಎಷ್ಟೇ ನೋವು ಇದ್ದರೂ ಜನರನ್ನು ನಗಿಸುತ್ತಾನೆ. ನಗುವನ್ನೇ ನೋಡದ ಒಂದು ದೊಡ್ಡ ಫ್ಯಾಮಿಲಿಗೆ ಹೋಗಿ ಎಲ್ಲರನ್ನು ನಗಿಸುತ್ತಾನೆ".

'ಫಸ್ಟ್ Rank ರಾಜು' ಥರಾ ಈ ಸಿನಿಮಾನು ಮನರಂಜನೆ ನೀಡುತ್ತಾ?

ಹೌದು, ಇದು ಪಕ್ಕಾ ಎಲ್ಲರಿಗೂ ಖುಷಿ ಕೊಡುವ ಫ್ಯಾಮಿಲಿ ಎಂಟರ್ ಟೈನರ್ ಮತ್ತು ಎಮೋಶನಲ್ ಸಿನಿಮಾ.

ಸ್ಮೈಲ್ ಪ್ಲೀಸ್ ಸ್ಪೆಷಲ್ ಏನು?

ಸ್ಮೈಲೇ ಸ್ಪೆಷಲ್. ಒಳ್ಳೇ ತಾರಾ ಬಳಗ ಇದೆ. ಕಾವ್ಯಾ ಶೆಟ್ಟಿ, ನೆಹಾ ಪಾಟೀಲ್, ಸುಧಾ ಬೆಳವಾಡಿ, ರಂಗಾಯಣ ರಘು 'ಸ್ಮೈಲ್ ಪ್ಲೀಸ್'ಗೆ ಸಾಥ್ ಕೊಟ್ಟಿದ್ದಾರೆ.

ನಾಯಕಿ ಬಗ್ಗೆ ಹೇಳಿ?

'ಇಷ್ಟ ಕಾಮ್ಯ' ಚಿತ್ರದಲ್ಲಿ ಅಭಿನಯಿಸಿದ್ದ ಕಾವ್ಯ ಶೆಟ್ಟಿ ಈ ಚಿತ್ರದಲ್ಲಿ ನಟಿಸಿದ್ದಾರೆ. ಒಂದು ಉತ್ತಮ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಆದ್ರೆ ಅವರು ನಗೋದಿಲ್ಲಾ. ಅವರನ್ನು ನಗಿಸುವ ಪ್ರಯತ್ನವು ಇದೆ.

ಚಿತ್ರೀಕರಣ ಎಲ್ಲೆಲ್ಲಿ? ಹಾಡುಗಳ ಬಗ್ಗೆ ಹೇಳಿ..

ಚಿಕ್ಕಮಗಳೂರು, ಮಂಗಳೂರು, ಮಲೆನಾಡು ಬ್ಯಾಕ್ ಡ್ರಾಪ್, ಸಕಲೇಶ್ವರ, ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ಮೂರು ಹಾಡುಗಳಿದ್ದು, ಈಗಾಗಲೇ ಹಿಟ್ ಆಗಿವೆ. ಕೆ.ಮಂಜು ನಿರ್ಮಾಣದ 40 ನೇ ಸಿನಿಮಾ ಇದು. ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಚಿತ್ರ ನಿರ್ಮಾಣ ಮತ್ತು ರಿಲೀಸ್ ಲೇಟ್ ಆಗಿದ್ದು ಏಕೆ?

ಆಕ್ಚುಲಿ ಸಿನಿಮಾ ನಿರ್ಮಾಣ ಲೇಟಾಗಿಲ್ಲ. ಈ ಸಿನಿಮಾ 2016 ಅಕ್ಟೋಬರ್ ನಲ್ಲೇ ರಿಲೀಸ್ ಆಗಬೇಕಿತ್ತು. ನಿರ್ಮಾಣ ಆಗಿ ಮುಗಿದಿತ್ತು. ಅದೇ ಸಮಯಕ್ಕೆ 'ಸಂತು ಸ್ಟ್ರೈಟ್ ಫಾರ್ವರ್ಡ್' ಸಹ ಮುಗಿದಿತ್ತು. ಇದರ ನಂತರ ರಿಲೀಸ್ ಮಾಡೋಣ ಎಂಬ ಪ್ಲಾನ್ ಮಾಡಲಾಗಿತ್ತು. ಆದ್ರೆ ನರೇಂದ್ರ ಮೋದಿ ಅವರ 'ಡಿಮಾನಿಟೈಜೇಶನ್' ನಿಂದ ಚಿತ್ರ ಬಿಡುಗಡೆಗೆ ಲೇಟ್ ಆಯಿತು.

'ರಾಜು' ಎಂಬ ಬ್ರ್ಯಾಂಡ್ ನಿಮ್ಮ ಲಕ್ಕಿ ಹೆಸರಾ?

'ರಾಜು' ಎಂಬ ಬ್ರ್ಯಾಂಡ್ ನನಗೆ ಮಾತ್ರ ಲಕ್ಕಿ ಹೆಸರಲ್ಲಾ.. ಸ್ಯಾಂಡಲ್ ವುಡ್ ಗೆ ಲಕ್ಕಿ ಹೆಸರು. ಕನ್ನಡ ಸಿನಿಮಾ ರಂಗದ ಲೆಜೆಂಡ್ ಡಾ.ರಾಜ್ ಕುಮಾರ್ ಅವರ ಹೆಸರು ಯಾರಿಗೆ ತಾನೆ ಲಕ್ಕಿ ಆಗೋದಿಲ್ಲಾ ಹೇಳಿ..! ಖಂಡಿತಾ ಇದು ನನಗೆ ಲಕ್ಕಿ ಹೆಸರು. ಅಲ್ಲದೇ 'ಫಸ್ಟ್ Rank ರಾಜು' ಚಿತ್ರದಲ್ಲಿ ರಾಜು ಎಂಬ ಹೆಸರಿನಿಂದಲೇ ನನಗೆ ಯಶಸ್ಸು ಸಿಕ್ಕಿದೆ. ಅಂತಹ ಕಥೆಗಳೇ ಸಿಗುತ್ತಿರುವುದರಿಂದ ಚಿತ್ರಗಳ ಹೆಸರಿನಲ್ಲಿ 'ರಾಜು' ಎಂಬ ಟೈಟಲ್ ಮುಂದುವರೆಯುತ್ತಿದೆ ಅಷ್ಟೆ..

ನಿಮ್ಮ ಅಭಿನಯದಲ್ಲಿ ಸೀರೀಸ್ ಆಫ್ ಕಾಮಿಡಿ ಚಿತ್ರಗಳೇ ಬರುತ್ತಿವೆ...!

ಸೀರೀಸ್ ಆಫ್ ಕಾಮಿಡಿ ಅಂತ ಏನು ಅಲ್ಲಾ. ನನಗೆ ಫ್ಯಾಮಿಲಿ ಓರಿಯೆಂಟೆಡ್ ಮತ್ತು ಮೆಸೇಜ್ ನೀಡುವ ಸಿನಿಮಾಗಳನ್ನು ಮಾಡುವ ಆಸೆ. ಆದ್ದರಿಂದ..

ಸಿನಿಮಾ ರಿಲೀಸ್ ಯಾವಾಗ?

ಫೆಬ್ರವರಿ 10 ಕ್ಕೆ 'ಸ್ಮೈಲ್ ಪ್ಲೀಸ್' ರಿಲೀಸ್ ಆಗುತ್ತಿದೆ.

English summary
Actor Gurunandan Upcoming Movie 'Smile Please' will hit the theatres on February 10. Here is Exclusive Interview of Gurunandan with Filmibeat Kannada. Take a look..
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada