For Quick Alerts
  ALLOW NOTIFICATIONS  
  For Daily Alerts

  'ಕೆಜಿಎಫ್ 2'ನಲ್ಲಿ ರಾಕಿ ಭಾಯ್ ಲುಕ್ ಹೇಗಿರಲಿದೆ?: 'ಗರುಡ' ಕೊಟ್ಟ ಎಕ್ಸ್‌ಕ್ಲ್ಯೂಸಿವ್ ಮಾಹಿತಿ

  |

  ಕೆಜಿಎಫ್ ಚಾಪ್ಟರ್ 1ರಲ್ಲಿ ರಾಕಿ ಬಾಯ್ ಅವರಂತೆಯೇ ಮನೆಮಾತಾದವರು ಖಳನಾಯಕನ ಪಾತ್ರಧಾರಿ ಗರುಡ. ರಾಮಚಂದ್ರ ರಾಜು ಎಂಬ ಹೆಸರು ಮರೆತು ಹೋಗುವಂತೆ ಗರುಡ ಪಾತ್ರದಲ್ಲಿ ಅವರು ಜನರಿಗೆ ಹತ್ತಿರವಾಗಿದ್ದಾರೆ. ಕೆಜಿಎಫ್ 1ರಲ್ಲಿಯೇ ಅವರ ಪಾತ್ರ ಅಂತ್ಯವಾಗಿದೆ. ದೇಶದಾದ್ಯಂತ ಸಂಚಲನ ಮೂಡಿಸಿದ ಈ ಚಿತ್ರ ಗರುಡ ಅವರಿಗೂ ದೇಶದ ಅನೇಕ ಕಡೆ ಅಭಿಮಾನಿಗಳನ್ನು ಹುಟ್ಟುಹಾಕಿದೆ. ಅಭಿನಯಿಸಿದ ಮೊದಲ ಚಿತ್ರದಲ್ಲಿಯೇ ದೊಡ್ಡ ಚಿತ್ರವೊಂದರ ವಿಲನ್ ಆಗಿ ಹೆಸರು ಗಳಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಅದು ಗರುಡ ರಾಮ್‌ಗೆ ಒಲಿದಿತ್ತು.

  ಕೆಜಿಎಫ್ ಚಾಪ್ಟರ್ 2ನಲ್ಲಿ ತಮ್ಮ ಪಾತ್ರ ಮುಂದುವರಿಯದೆ ಇರುವುದರ ಬಗ್ಗೆ ತಮಗೆ ಬೇಸರವಿಲ್ಲ ಎನ್ನುತ್ತಾರೆ ಗರುಡ ರಾಮ್. ಈ ಬೃಹತ್ ಚಿತ್ರದ ಭಾಗವಾಗಿ ಕೆಲಸ ಮಾಡಿರುವುದು ಅವರಿಗೆ ಬಹಳ ಖುಷಿ ನೀಡಿದೆಯಂತೆ. ಇದರ ಬೆನ್ನಲ್ಲೇ ಅವರಿಗೆ ತಮಿಳು ಮತ್ತು ತೆಲುಗು ಸಿನಿಮಾಗಳಿಂದಲೂ ಅವಕಾಶಗಳು ಬರುತ್ತಿವೆ. ದೂರದ ರಾಜ್ಯಗಳಿಗೆ ಹೋದಾಗ ಅಭಿಮಾನಿಗಳು ಬಂದು ಫೋಟೊ ತೆಗೆಸಿಕೊಳ್ಳುತ್ತಾರೆ. ಇಂತಹ ಸಣ್ಣಪುಟ್ಟ ಸಂಗತಿಗಳೂ ಅವರಿಗೆ ಸಂತಸ ಹೆಚ್ಚಿಸುತ್ತಿದೆ. 'ಫಿಲ್ಮಿಬೀಟ್'ಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಕೆಜಿಎಫ್ 1 ಮತ್ತು ಚಾಪ್ಟರ್ 2ರ ಕುರಿತು ಕೆಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ.

  'KGF-2' ರಿಲೀಸ್ ಮುಂದಕ್ಕೆ: ಈ ವರ್ಷ ಯಶ್ ಸಿನಿಮಾ ಬಿಡುಗಡೆ ಆಗುವುದು ಅನುಮಾನ?

  ಸಂಜಯ್ ದತ್‌ ಪಾತ್ರದಿಂದ ಹೆಚ್ಚಿದ ಪವರ್

  ಸಂಜಯ್ ದತ್‌ ಪಾತ್ರದಿಂದ ಹೆಚ್ಚಿದ ಪವರ್

  ಕೆಜಿಎಫ್ ಚಾಪ್ಟರ್ 2 ಚಿತ್ರದ ಸಂಜಯ್ ದತ್ ಪೋಸ್ಟರ್ ನೋಡಿಯೇ ನಾನು ಕಳೆದು ಹೋದೆ. ಗರುಡ ಪಾತ್ರವೇ ಕ್ರೂರ ಎಂದರೆ ಇದು ಅದಕ್ಕಿಂತಲೂ ಕ್ರೂರ. ಇನ್ನು ಪಾತ್ರ ಹೇಗಿರಬಹುದು ಎಂದು ಊಹಿಸಿ. ಈ ಸಿನಿಮಾ ನೋಡಲು ನಾನೂ ಕಾಯುತ್ತಿದ್ದೇನೆ. ಅವರೊಬ್ಬ ಲೆಜೆಂಡ್. ಮಹಾನ್ ನಟರಲ್ಲಿ ಒಬ್ಬರು. ಅವರು ಈ ಚಿತ್ರದಲ್ಲಿ ನಟಿಸಿರುವುದು ಹತ್ತುಪಟ್ಟು ಪವರ್ ಸಿಕ್ಕಂತೆ.

  ಸಂಜಯ್ ದತ್ ನೀಡಿದ ಕಾಂಪ್ಲಿಮೆಂಟ್

  ಸಂಜಯ್ ದತ್ ನೀಡಿದ ಕಾಂಪ್ಲಿಮೆಂಟ್

  ಸಂಜಯ್ ದತ್ ಅವರನ್ನು ಸೆಟ್‌ನಲ್ಲಿ ಭೇಟಿ ಮಾಡಿದ್ದೆ. ಆಗ ಅವರು ಈ ಪಾತ್ರದ ಅವತಾರದಲ್ಲಿ ಇರಲಿಲ್ಲ. ಹೀಗಾಗಿ ಅವರ ಲುಕ್ ಹೇಗಿರುತ್ತದೆ ಎಂದು ಗೊತ್ತಿರಲಿಲ್ಲ. ಅವರಿಗೆ ಮೊದಲು ನನ್ನ ಪರಿಚಯ ಆಗಿರಲಿಲ್ಲ. ನಾನೇ ಗರುಡ ಎಂದು ತಿಳಿದ ನಂತರ, 'ಒಬ್ಬ ಮನುಷ್ಯನನ್ನು ನೋಡಿ ಮೊದಲ ಬಾರಿಗೆ ಭಯ ಆಗಿತ್ತು. ಅದು ನಿಮ್ಮನ್ನು ನೋಡಿ' ಎಂದು ಕಾಂಪ್ಲಿಮೆಂಟ್ ನೀಡಿದ್ದನ್ನು ಗರುಡ ನೆನಪಿಸಿಕೊಂಡಿದ್ದಾರೆ.

  ಹೇಗಿದ್ದಾನೆ ನೋಡಿ ಕೆಜಿಎಫ್‌ನ ಅಧೀರ: ಸಂಜಯ್ ದತ್ ಲುಕ್ ಅನಾವರಣ

  ಈ ಪಾತ್ರ ಪ್ರಶಾಂತ್ ನೀಲ್ ಕೊಡುಗೆ

  ಈ ಪಾತ್ರ ಪ್ರಶಾಂತ್ ನೀಲ್ ಕೊಡುಗೆ

  ಈ ಪಾತ್ರ ಪ್ರಶಾಂತ್ ನೀಲ್ ಅವರ ಕೊಡುಗೆ. ಯಶ್ ಅವರೊಂದಿಗೆ ಒಂದು ಮೀಟಿಂಗ್‌ಗೆ ಹೋಗಿದ್ದ. ವಾಪಸ್ ಬರುವಾಗ ಸಿನಿಮಾದಲ್ಲಿ ನಟಿಸುತ್ತೀರಾ ಎಂದು ಕೇಳಿದ್ದರು. ಆಯ್ತು ಎಂದಿದ್ದೆ. ಹಾಗಾದರೆ ಗಡ್ಡ ಬಿಡು ಎಂದರು. ಹಾಗೆ ಹೇಳಿ ಒಂದು ವರ್ಷದ ನಂತರ ಆಡಿಷನ್ ನಡೆದಿದ್ದು. ಮೊದಲ ನೀಡಿದ್ದು ಬೇರೆ ಪಾತ್ರ. ಆದರೆ ಯಾವುದೇ ಕಾರಣಕ್ಕೆ ಆ ಪಾತ್ರವನ್ನು ತೆಗೆದು ಹಾಕಿದ್ದರು. ಹೀಗಾಗಿ ಯಾವುದಾದರೂ ಸಣ್ಣ ಪಾತ್ರ ಕೊಡಿ ಎಂದಿದ್ದೆ. ಒಂದು ದಿನ ಬಿಟ್ಟು ಗರುಡನ ಪಾತ್ರ ಮಾಡು ಎಂದರು. ನನಗೆ ಕಥೆಯೇ ಗೊತ್ತಿರಲಿಲ್ಲ. ಬೇರೆ ಸಹಾಯಕರೊಬ್ಬರು ಅದು ಬಹಳ ದೊಡ್ಡ ಪಾತ್ರ ಎಂದ ಬಳಿಕ ಭಯವಾಯ್ತು. ಆದರೆ ಮಾಡು ಎಂದು ಪ್ರಶಾಂತ್ ನೀಲ್ ಮಾಡಿಸಿದರು.

  ಪಾತ್ರಕ್ಕೆ ಇದ್ದ ಮಹತ್ವ ಗೊತ್ತಿರಲಿಲ್ಲ

  ಪಾತ್ರಕ್ಕೆ ಇದ್ದ ಮಹತ್ವ ಗೊತ್ತಿರಲಿಲ್ಲ

  ಎಲ್ಲ ಪಾತ್ರಗಳಿಗೂ ಅದರದ್ದೇ ಆದ ತೂಕ ಇರುತ್ತದೆ ಎಂದು ಅಂದುಕೊಂಡಿದ್ದೆನೇ ಹೊರತು ನನ್ನ ಪಾತ್ರವೂ ಮುಖ್ಯ ಎಂದುಕೊಂಡಿರಲಿಲ್ಲ. ತಂದೆ ತಾಯಿ, ಪತ್ನಿ ಎಲ್ಲ ಜತೆಗೆ ಕುಳಿತು ಸಿನಿಮಾ ನೋಡಿದ್ದೆವು. ಸಿನಿಮಾ ಸಾಗುತ್ತಿದ್ದರೂ ನನ್ನ ಪಾತ್ರವೇ ಬರುತ್ತಿರಲಿಲ್ಲ. ಯಾವಾಗ ಬರುತ್ತದೆ ಎಂದು ಮನೆಯವರು ಕೇಳುತ್ತಲೇ ಇದ್ದರು. ಒಮ್ಮೆ ಎಂಟ್ರಿ ಕೊಟ್ಟಾಗ ನನಗೇ ಮೈಜುಂ ಎಂದಿತು. ಸಿನಿಮಾ ಮುಗಿಸಿ ಈಚೆ ಬಂದಾಗ ರೆಸ್ಪಾನ್ಸ್ ನೋಡಿ ಖುಷಿಯಾಯ್ತು. ಯಶ್ ಬಾಸ್‌ಗೆ ಹಗ್ ಮಾಡಿ ಇಂದಿನಿಂದ ಲೈಫ್ ಚೇಜ್ ಆಯ್ತು ಎಂದುಕೊ ಎಂದರು.

  ಒಮ್ಮೆ ಸಿಗುವ ಅವಕಾಶ

  ಒಮ್ಮೆ ಸಿಗುವ ಅವಕಾಶ

  ಯಶ್ ಅವರ ಕೈಗೆ ನಾನು ಸಿಗದೆ ಹೋಗಿದ್ದರೆ ಬಿಲ್ಡರ್ ಆಗಿರುತ್ತಿದ್ದೆ. ಸ್ನೇಹಿತನ ಸಿನಿಮಾಗಳಿಗೆ ಸಹಾಯಕನಾಗಿ ಮಾಡುತ್ತಿದ್ದ ನನ್ನನ್ನು ಅವರು ಬದಲಿಸಿದರು. ಒಳ್ಳೆಯ ಸಿನಿಮಾದಲ್ಲಿ ಒಳ್ಳೆಯ ಪಾತ್ರ ಮಾಡಬೇಕು ಎಂದಷ್ಟೇ ಇತ್ತು. ಕೆಲವರಿಗೆ ಜೀವನದಲ್ಲಿ ಒಮ್ಮೆ ಸಿಗುವ ಅವಕಾಶ. ಸಿಕ್ಕಾಗ ಅದಕ್ಕೆ ಸಂಪೂರ್ಣವಾಗಿ ಅರ್ಪಿಸಿಕೊಳ್ಳಬೇಕು. ಈಗ ಆ ಕೆಲಸ ಮಾತನಾಡುತ್ತಿದೆ.

  ರಾಕಿ ಬಾಯ್ ನೋಡಿದರೆ ಕಳೆದು ಹೋಗ್ತೀರಿ

  ರಾಕಿ ಬಾಯ್ ನೋಡಿದರೆ ಕಳೆದು ಹೋಗ್ತೀರಿ

  ಸಂಜಯ್ ದತ್ ಅವರ 'ಅಧೀರ' ಪಾತ್ರದ ಪೋಸ್ಟರ್ ನೋಡಿ ಭಾರತ ಬೆರಗಾಗಿದೆ. ಇನ್ನು ರಾಕಿ ಭಾಯ್ ಅವರ ಪೋಸ್ಟರ್ ನೋಡಿದರೆ ಕಳೆದು ಹೋಗುತ್ತೀರಿ. ಅವರು ಎರಡನೆಯ ಭಾಗಕ್ಕಾಗಿ ತಮ್ಮ ಲುಕ್ ಬದಲಿಸಿಕೊಂಡಿದ್ದಾರೆ. ಬಾಡಿಯನ್ನು ಸ್ಟೀಲ್ ಥರ ರೆಡಿ ಮಾಡಿದ್ದಾರೆ. ಪಾತ್ರಕ್ಕಾಗಿ ತುಂಬಾ ಶ್ರಮಪಟ್ಟಿದ್ದಾರೆ. ಎರಡನೆಯ ಚಾಪ್ಟರ್ ಯಾವ ಹಾಲಿವುಡ್ ಚಿತ್ರಕ್ಕೂ ಕಡಿಮೆಯಿಲ್ಲ. ದಶಕದ ಸಿನಿಮಾ ಎಂದು ಗುರುತಿಸುವ ಮರೆಯಲಾಗದ ಮಹಾನ್ ಚಿತ್ರಗಳ ಸಾಲಿಗೆ ಕೆಜಿಎಫ್ ಚಾಪ್ಟರ್ 2 ಸೇರ್ಪಡೆಯಾಗುತ್ತದೆ ಎಂದು ಗರುಡ ಭವಿಷ್ಯ ನುಡಿದಿದ್ದಾರೆ.

  ಬಿಡುಗಡೆಗೂ ಮುನ್ನ ಮತ್ತೊಂದು ದಾಖಲೆ ಬರೆದ 'ಕೆಜಿಎಫ್ ಚಾಪ್ಟರ್ 2'

  English summary
  KGF Chapter 1 villain Garuda speaks about how he got selected to the film and KGF Chapter 2.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X