»   » 'ವೀಕೆಂಡ್ ವಿತ್ ರಮೇಶ್' ಬಗ್ಗೆ ರಮೇಶ್ ಅರವಿಂದ್ ಮನದಾಳದ ಮಾತುಗಳು

'ವೀಕೆಂಡ್ ವಿತ್ ರಮೇಶ್' ಬಗ್ಗೆ ರಮೇಶ್ ಅರವಿಂದ್ ಮನದಾಳದ ಮಾತುಗಳು

Posted By:
Subscribe to Filmibeat Kannada
For Quick Alerts
ALLOW NOTIFICATIONS
For Daily Alerts

  'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮ ಅಂದ್ರೇನೆ ಜನರಿಗೆ ಒಂದು ಕ್ರೇಜ್. ಯಾಕೆ ಅಂತ ನಿಮ್ಮನ್ನ ನೀವೇ ಪ್ರಶ್ನಿಸಿ ಕೊಳ್ಳಿ. ಉತ್ತರ ಸಿಗುತ್ತೆ. ಜೀ ಕನ್ನಡ ವಾಹಿನಿಯ ಈ ಕಾರ್ಯಕ್ರಮದ ಮೂರನೇ ಸೀಸನ್ ಇಂದಿನಿಂದ(ಮಾರ್ಚ್ 25) ಆರಂಭಗೊಳ್ಳುತ್ತಿದೆ.['ವೀಕೆಂಡ್ ವಿತ್ ರಮೇಶ್'ಗೆ ಸಾಧಕರನ್ನು ಕರೆತರುವುದೇ ದೊಡ್ಡ ಚಾಲೆಂಜ್: ರಾಘವೇಂದ್ರ ಹುಣಸೂರು]

  ರಮೇಶ್ ಅರವಿಂದ್ ಇಂದಿನಿಂದ ನಿಮ್ಮ ಮನೆಗೆ 'ಪ್ರೀತಿಯಿಂದ ರಮೇಶ್... ಸ್ಫೂರ್ತಿಯಿಂದ ರಮೇಶ್' ಆಗಿ ಬರುತ್ತಿದ್ದಾರೆ. ಸೋತ ಮನಸ್ಸುಗಳಿಗೆ ಜೀವ ತುಂಬುವ ಈ ಕಾರ್ಯಕ್ರಮ ಕಳೆದ ಮೂರು ವರ್ಷಗಳಿಂದ ಕರ್ನಾಟಕದ ಮನೆ ಮಾತಾಗಿದೆ. ಆದರೆ ಈ ಕಾರ್ಯಕ್ರಮದ ಯಶಸ್ಸಿಗೆ ಕಾರಣಗಳೇನು? ರಮೇಶ್ ಅರವಿಂದ್ ಅವರ ಮನದಲ್ಲಿ ಈ ಟಾಕ್ ಶೋ ಯಾವ ರೂಪ ಪಡೆದಿದೆ ಗೊತ್ತಾ?ಈ ಪ್ರಶ್ನೆಗಳಿಗೆ ಅವರೇ ಕೊಟ್ಟ ಉತ್ತರ ಇಲ್ಲಿದೆ.

  ರಮೇಶ್ ಅರವಿಂದ್ ನಡೆಸಿಕೊಡುವ 'ವೀಕೆಂಡ್ ವಿತ್ ರಮೇಶ್' ಜರ್ನಿ ಬಗ್ಗೆ ನಿಮ್ಮ ಫಿಲ್ಮಿಬೀಟ್ ನೊಂದಿಗೆ ಮಾತನಾಡಿದ್ದಾರೆ. ಕಾರ್ಯಕ್ರಮದ ಅನುಭವ, ಅನಿಸಿಕೆ, ತಮಗೆ ಎದುರಾಗುವ ಚಾಲೆಂಜ್ ಬಗ್ಗೆ ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

  ಸಂದರ್ಶನ: ಸುನೀಲ್ ಬಿಂಡಹಳ್ಳಿ

  'ವೀಕೆಂಡ್ ವಿತ್ ರಮೇಶ್' ಕಿರುತೆರೆಯಲ್ಲಿ ಸ್ಪೆಷಲ್ ಪ್ರೋಗ್ರಾಂ, ಅದನ್ನ ನೀವ್ ನಡೆಸಿಕೊಡ್ತಿದ್ದೀರಾ, ಅನುಭವದ ಬಗ್ಗೆ ಹೇಳಿ..

  -ಇದು ಒಂದು ಟಾಕ್ ಶೋ ಮತ್ತು ಸಂದರ್ಶನದ ಶೋ ಅಂತ ಆಗ್ತಿರೋದಲ್ಲ. ಪ್ರೇಕ್ಷಕರ ಜೊತೆ ಬೇರೆಯದೇ ಕನೆಕ್ಷನ್ ಹೊಂದಿದೆ. ಉದಾಹರಣೆಗೆ 'ಅಮೆರಿಕಾ.. ಅಮೇರಿಕಾ' ಚಿತ್ರ ನೋಡಿದಾಗ ಆಡಿಯನ್ಸ್ ಗೆ ಒಂದು ಕನೆಕ್ಷನ್ ಸಿಗೋದು. ಅದೇ ರೀತಿ ನನಗೂ 'ವೀಕೆಂಡ್ ವಿತ್ ರಮೇಶ್'ಗೂ ಕನೆಕ್ಷನ್ ಇದೆ.

  'ವೀಕೆಂಡ್ ವಿತ್ ರಮೇಶ್' ಕ್ಲಿಕ್ ಆಗಲು ಮೂರು ಕಾರಣ..

  - ಮೊದಲನೇಯದಾಗಿ ಸಮಾಜದಲ್ಲಿ ಹಲವರು ತಮ್ಮ ಜೀವನ ಅಂದುಕೊಂಡಂತೆ ಆಗುತ್ತಿಲ್ಲ ಅನ್ನೋ ಕೊರಗಿನಲ್ಲಿರುತ್ತಾರೆ. ಆ ಸಮಸ್ಯೆ ದೊಡ್ಡ ದೊಡ್ಡ ಸಾಧಕರಿಗೂ ಇರುತ್ತೆ ಅನ್ನೋದು 'ವೀಕೆಂಡ್ ವಿತ್ ರಮೇಶ್' ಶೋನಲ್ಲಿ ಅನಾವರಣ ಆಗುತ್ತೆ. ಕಾರ್ಯಕ್ರಮ ನೋಡುವುದರಿಂದ ಜೀವನದಲ್ಲಿ ಸೋತ ಹಲವರಿಗೆ ಅವರ ಬಗ್ಗೆ ಆತ್ಮಸ್ಥೈರ್ಯ ಬರುತ್ತೆ.

  ಎರಡನೇಯದಾಗಿ..

  - ಜೀವನ ಸುಮಧುರ ಅಲ್ಲ ಸುಂದರ. ಕಷ್ಟಗಳೂ ಎಲ್ಲರಿಗೂ ಇದ್ದದ್ದೇ. ಈಗ ಪ್ರಕಾಶ್ ರೈ ಬರ್ತಾರೆ ಅಂದ್ರೆ ಅವರು ಎಲ್ಲರ ರೀತಿನೇ ಇದ್ದದ್ದು. ಅವರೂ ಸಹ ಅಕ್ಕ, ತಂಗಿ, ಅಣ್ಣ ತಮ್ಮಂದಿರ ಜೊತೆ ನಿಮ್ಮ ಮನೇಲಿ ನೀವು ಹೇಗಿದ್ರೋ ಅವರು ಅದೇ ರೀತಿ ಇದ್ರು. ಆದರೆ ಯಾವಾಗ ಅವರು ಅವರ ಕೆಲಸದ ಮೇಲೆ ಹೆಚ್ಚು ಗಮನಹರಿಸಿದ್ರೋ ಆಗ ಅವರು ಸಾಧನೆ ಮಾಡಿದ್ದು ಅನ್ನೋದು ತಿಳಿಯುತ್ತೆ. ನೋಡುಗರಿಗೆ ಅರೇ... ಇವರು ನಮ್ಮ ತರನೇ ಇದ್ದಿದ್ದು....ನಮ್ಮ ತರನೇ ಕ್ರಿಕೆಟ್ ಆಡಿದ್ದು, ನಮ್ ರೀತಿಲೇ ಸ್ಕೂಲ್ ಗೆ ಹೋಗಿಲ್ಲ. ಹಾಗಿದ್ರೆ ನಮಗೂ ಉತ್ತಮ ಜೀವನವಿದೆ ಅನಿಸುತ್ತೆ. ನಾವು ಏನಾದ್ರು ಸಾಧಿಸಬಹುದು ಅನ್ನೋ ಸ್ಪಿರಿಟ್ ಬರುತ್ತೆ. ಸೋತವರಿಗೆ ಭರವಸೆ ನೀಡುವ ಕಾರ್ಯಕ್ರಮ ಇದು.

  ಪ್ರೀತಿಯಿಂದ ರಮೇಶ್.. ಸ್ಫೂರ್ತಿಯಿಂದ ರಮೇಶ್..

  - ನನಗೆ ಫಸ್ಟ್ ಎಪಿಸೋಡ್ ಮುಗಿದ ನಂತರ ನೆಮ್ಮದಿಗಿಂತ ಯಶಸ್ಸು ಬೇರೊಂದಿಲ್ಲ ಅನ್ನೋದು ತಿಳಿತು. ಎಲ್ಲರ ಜೀವನದಲ್ಲೂ ಹೋರಾಟ ಇದೆ. ಆದ್ರೆ ಬೇರೆ ಬೇರೆ ಲೆವೆಲ್ ನಲ್ಲಿದೆ. ಆದ್ದರಿಂದಲೇ 'ವೀಕೆಂಡ್ ವಿತ್ ರಮೇಶ್' ನಲ್ಲಿ ಪ್ರೀತಿಯಿಂದ ರಮೇಶ್.. ಸ್ಫೂರ್ತಿಯಿಂದ ರಮೇಶ್.. ರನ್ನು ನೋಡಲು ಸಾಧ್ಯ.

  'ವೀಕೆಂಡ್ ವಿತ್ ರಮೇಶ್'ಗೆ ಸೂಕ್ತ ಆಂಕರ್ ನಿಮ್ಮನ್ನ ಬಿಟ್ರೆ, ಯಾರಿಂದಲೂ ಸಾಧ್ಯವಿಲ್ಲ ಅನ್ನೋದು ಜನರ ಅಭಿಪ್ರಾಯ...

  -ಖುಷಿ ಆಗುತ್ತೆ. ಕಾರ್ಯಕ್ರಮದ ಯಶಸ್ಸಿಗೆ ಅದರ ಸ್ಪಿರಿಟ್ ಮತ್ತು ನಿರೂಪಕದ ಸ್ಪಿರಿಟ್ ಒಂದೇ ಇರಬೇಕು. ನಂಬಿಕೆ ಇಲ್ಲದೆ ನಾಟಕ ಮಾಡಿ ಏನೆ ಮಾಡಿದ್ರು ವರ್ಕ್ ಔಟ್ ಆಗೋದಿಲ್ಲ.

  ಎದುರು ಕುಳಿತಿರುವವರ ಸಾಧನೆ ಒಪ್ಪಿಕೊಳ್ಳಬೇಕು..

  - ಎದುರು ಕುಳಿತಿರುವ ಸಾಧಕನನ್ನು ಮನಪೂರಕವಾಗಿ ಒಪ್ಪಿಕೊಳ್ಳಬೇಕು. ಯಾಕಂದ್ರೆ ಕೆಲವೊಮ್ಮೆ ನಿಮ್ಮ ಎದುರುಗಡೆ ನಿಮಗಿಂತ ಕಿರಿಯವರು ಇರುತ್ತಾರೆ. ಸಮಕಾಲಿನವರು ಇರುತ್ತಾರೆ. ಅಂತಹ ಸಮಯದಲ್ಲಿ ನಿಮ್ಮ ಕಿರೀಟವನ್ನು ಪಕ್ಕಕ್ಕೆ ಇಟ್ಟು ಒಬ್ಬ ಪ್ರೇಕ್ಷಕನಾಗಿ ನೋಡಬೇಕು. ಅವರ ಸಾಧನೆಯನ್ನು ಪ್ರೀತಿಸಬೇಕು. ಇದು ಬೇಸಿಕಲಿ ಬೇಕೇ ಬೇಕು. ಅಲ್ಲಿ ಬರುವ ಎಲ್ಲರ ಜೊತೆಯಲ್ಲೂ ಬೆರೆಯಬೇಕಾಗುತ್ತೆ. ಇಲ್ಲ ಅಂದ್ರೆ ಒಂದು ಕಾರ್ಯಕ್ರಮಕ್ಕೆ ಯಶಸ್ಸು ಸಿಗುವುದಿಲ್ಲ. ವ್ಯಕ್ತಿಗೂ ಯಶಸ್ಸು ಸಿಗುವುದಿಲ್ಲ.

  ಹಿಂದೆ ಗೇಮ್ ಶೋ'ಗಳನ್ನು ನಡೆಸಿಕೊಟ್ಟಿದ್ದೀರಿ? ಅವುಗಳಿಗೆ ಹೋಲಿಸಿದ್ರೆ 'ವೀಕೆಂಡ್ ವಿತ್ ರಮೇಶ್' ಹೇಗೆ ವಿಭಿನ್ನ..

  -ತುಂಬಾ ಡಿಫರೆನ್ಸ್ ಇದೆ. ಕೆಲವೊಂದು ಶೋಗಳನ್ನು ಮತ್ತೆ ಮತ್ತೆ ನೋಡಬೇಕು ಅನಿಸುತ್ತೆ. ಅಂತಹ ಶೋಗಳಲ್ಲಿ ಮುಂದೆ ಇರುವುದು 'ವೀಕೆಂಡ್ ವಿತ್ ರಮೇಶ್' ಒಂದೇ. ಕಾರಣ ಇದು ಒಂದು ಲೈಫ್. ಒಬ್ಬರು ಸಾಧಕರ ಜೀವನವನ್ನು ಎರಡು ಗಂಟೆಯಲ್ಲಿ ಹೇಳುವ ವಿಭಿನ್ನ ಪ್ರಯತ್ನವಿದು.

  ಫಸ್ಟ್ ಸೀಸನ್ ನಲ್ಲಿ ಯೋಗರಾಜ್ ಭಟ್ ನಿಮ್ಮನ್ನ ಕೂರಿಸಿ ನಿರೂಪಣೆ ಮಾಡಿದ್ರು. ಆಗ ಆದ ಅನುಭವ?

  - ಅದು ಬಿಗ್ ಸರ್ಪೈಸ್. ಫಸ್ಟ್ ಸೀಸನ್ ನ ಲಾಸ್ಟ್ ಎಪಿಸೋಡ್ ಅದು. ಸ್ಟೇಜ್ ಎಲ್ಲಾ ಎಕ್ಸ್ ಸ್ಟ್ರಾ ಡೆಕೋರೇಷನ್ ನಲ್ಲಿತ್ತು. ಏನೋ ಕಾದಿದೆ ಅಂದುಕೊಂಡಿದೆ. ಯೋಗ್ ರಾಜ್ ಭಟ್ ನನ್ನನ್ನ ಕೂರಿಸಿ ಮಾತಾಡ್ ತಾರೆ ಅಂತ ಗೊತ್ತಿರಲಿಲ್ಲ. ಅಲ್ಲದೇ ಟೀಮ್ ನನಗೆ ಇವತ್ತು ಸರ್ ಪ್ರೈಸ್ ಗೆಸ್ಟ್ ಒಬ್ರು ಬರ್ತಿದ್ದಾರೆ ಅಂತ ಹೇಳಿದ್ರು. ಅದು ನಾನೇ ಅಂದುಕೊಂಡಿರಲಿಲ್ಲ. ನನ್ನ ಫ್ಯಾಮಿಲಿಯವರು ಸಹ ನನಗೆ ಹೇಳಿರಲಿಲ್ಲ.

  ಕಾರ್ಯಕ್ರಮಕ್ಕೆ ಮೆಂಟಲಿ ಹೇಗ್ ತಯಾರಾಗುತ್ತೀರಿ?

  - ಸಿಕ್ಕಾಪಟ್ಟೆ ಪೇಷನ್ಸ್ ಬೇಕು. ಯಾಕಂದ್ರೆ 9-12 ಗಂಟೆಗಳ ಕಾಲ ನಿರಂತರವಾಗಿ ನಿಂತಿರಬೇಕು. ಅದೊಂದು ದೊಡ್ಡ ಸಮಸ್ಯೆ. ಮೆಂಟಲಿ ಪ್ರಿಪೇರ್ ಅಂದ್ರೆ ನಾನು ಯಾವುದೇ ಕಾರ್ಯಕ್ರಮ ಮಾಡಬೇಕಾದ್ರು ನಮ್ಮ ಕನ್ನಡ ಸಾಹಿತ್ಯ, ಕನ್ನಡ ಪುಸ್ತಕಗಳನ್ನು ಓದುತ್ತಲೇ ಇರುತ್ತೇನೆ. ನಾಲಿಗೆಯಲ್ಲಿ ಸದಾ ಕನ್ನಡ ಪದಗಳನ್ನೇ ಹುಡುಕುತ್ತಿಬೇಕು. ಇದು ಬಹಳ ಮುಖ್ಯ.

  ನೀವು ಒಬ್ಬರು ವೀಕ್ಷಕರಾಗಿ 'ವೀಕೆಂಡ್ ವಿತ್ ರಮೇಶ್' ನೋಡಿದ್ರೆ?

  -ತುಂಬಾ ಇಂಟ್ರೆಸ್ಟ್ ಅಗಿರುತ್ತೆ. ಆ ಫಾರ್ಮ್ಯಾಟ್ ಸಹ ಆಗೇ ಸ್ಪೆಷಲ್ ಅಗಿದೆ. ಯಾಕಂದ್ರೆ ಸಾಧನೆಯ ಒಂದೊಂದೆ ಮೆಟ್ಟಿಲುಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಸಾಧಕರ ಹೈಸ್ಕೂಲ್, ಕಾಲೇಜು, ನಂತರ ಹೀಗೆ ಸ್ಟೆಪ್ ಬೈ ಸ್ಟೆಪ್ ಯಶಸ್ಸನ್ನು ನೋಡೋಕೆ ಒಂದು ಖುಷಿ. ಅವರ ಅಕ್ಕ, ಅಣ್ಣ, ಸರ್ಪೈಸ್ ಎಂಟ್ರಿಗಳು ಸೂಪರ್. ಸಾಧಕ, ಒಬ್ಬ ಸಾಧಕ ಎಂಬುದನ್ನು ಮರೆತು ಕಾಮನ್ ಮ್ಯಾನ್ ಆಗಿ ನಾನೊಬ್ಬ ಮಗ, ಅಳಿಯ, ಅಣ್ಣ, ಸ್ನೇಹಿತನಾಗಿ ಹೊರಹೊಮ್ಮುತ್ತ ಹೋಗುತ್ತಾನೆ. ಅದನ್ನ ನೋಡೋಕೆ ಯಾರಿಗೆ ಖುಷಿ ಆಗೋಲ್ಲ ಹೇಳಿ. ಸಾಧಕರ ಸಾಧನೆಗಳ ಜೊತೆ ಸಂಬಂಧಗಳನ್ನು ನೋಡೋದು ಕ್ಯೂರಿಯಾಸಿಟಿ.

  English summary
  Zee Kannada Channel's popular 'Weekend with Ramesh 3' is all set to start from today (March 25). Here is the interview of 'Weekend with Ramesh 3' Host Ramesh Aravind.

  Kannada Photos

  Go to : More Photos

  ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Filmibeat sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Filmibeat website. However, you can change your cookie settings at any time. Learn more