Don't Miss!
- Sports
ಕೋಟಿ ಕೊಟ್ರೂ ಡಕ್ಔಟ್ ಆಗಿದ್ದೀಯಾ ಎಂದು ಐಪಿಎಲ್ ತಂಡದ ಮಾಲೀಕ ಕೆನ್ನೆಗೆ ಹೊಡೆದಿದ್ರು: ರಾಸ್ ಟೇಲರ್!
- News
Breaking: ಕರ್ನಾಟಕದಲ್ಲಿ 2ನೇ ದಿನವೂ ಕೊರೊನಾದಿಂದ 5 ಮಂದಿ ಸಾವು!
- Lifestyle
ಸ್ವಾತಂತ್ರ್ಯದ ಅಮೃತ ಮಹೋತ್ಸಕ್ಕೆ ಸ್ಪೆಷಲ್ ರೆಸಿಪಿ: ತಿರಂಗಾ ಹಲ್ವಾ
- Automobiles
ಇವಿ ಬಸ್ ಸೇವೆಗಾಗಿ 1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ
- Technology
ಬ್ಲೂ ಬೋಲ್ಡ್ N2 ಸ್ಮಾರ್ಟ್ಫೋನ್ ಬಿಡುಗಡೆ! ಏನೆಲ್ಲಾ ಫೀಚರ್ಸ್ ಲಭ್ಯ!
- Finance
ಕೇರಳ ಲಾಟರಿ: 'ಕಾರುಣ್ಯ KR 562' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ವಿಡಿಯೋ: 'ರಂಗಿತರಂಗ' ಅಂದ್ರೆ 'ರಣರಂಗ', ಎಂದ ಶಿವಣ್ಣ
ಸಾಮಾನ್ಯವಾಗಿ ಮಾಧ್ಯಮದವರು ಚಿತ್ರರಂಗ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಸಂದರ್ಶನ ಮಾಡುವುದು, ಅವರ ಬಗ್ಗೆ ಬರೆಯುವುದು ಕೇಳುವುದು ಎಲ್ಲ ಸರ್ವೇ ಸಾಮಾನ್ಯ. ಆದ್ರೆ ಒಂದು ಹಿಟ್ ಚಿತ್ರದ ನಿರ್ದೇಶಕ ಸ್ಯಾಂಡಲ್ ವುಡ್ ಸ್ಟಾರ್ ನಟನನ್ನು ತಮ್ಮ ಚಿತ್ರದ ಬಗ್ಗೆ ಅವರ ಅಭಿಪ್ರಾಯ ಹಾಗೂ ಚಿತ್ರದ ಬಗ್ಗೆ ಕೇಳಿರುವುದು ನಿಮಗೆ ಗೊತ್ತಾ?.
ಅಂದಹಾಗೆ ಈ ಸಂಗತಿ ನಡೆದಿರೋದು ಎಲ್ಲಿ ಅಂದರೆ ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಚಿತ್ರ 'ರಂಗಿತರಂಗ' ದ ನಿರ್ದೇಶಕ ಅನುಪ್ ಭಂಡಾರಿ ಹಾಗೂ ಚಿತ್ರದ ನಾಯಕ ನಿರುಪ್ ಭಂಡಾರಿ ಅವರು ಸ್ಯಾಂಡಲ್ ವುಡ್ ನ ಟಾಪ್ ಸ್ಟಾರ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರನ್ನು, ಅವರ ನಿವಾಸದಲ್ಲಿ ಸಂದರ್ಶನ ಮಾಡಿ, ತಮ್ಮ ಚಿತ್ರದ ಬಗ್ಗೆ ಅಭಿಪ್ರಾಯ ಕೇಳಿದ್ದಾರೆ.
ಸ್ವಲ್ಪ ದಿನಗಳ ಹಿಂದೆ ಹ್ಯಾಟ್ರಿಕ್ ಹೀರೋ ಶಿವಣ್ಣ ಅವರು ಭಂಡಾರಿ ಸಹೋದರರ 'ರಂಗಿತರಂಗ' ಚಿತ್ರವನ್ನು ಒರೆಯಾನ್ ಮಾಲ್ ನಲ್ಲಿ ಭಂಡಾರಿ ಬ್ರದರ್ಸ್ ಜೊತೆ ಕುಳಿತು ವೀಕ್ಷಿಸಿದ್ದು, ಚಿತ್ರದ ಬಗ್ಗೆ ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.[ಭಂಡಾರಿ ಬ್ರದರ್ಸ್ 'ರಂಗಿತರಂಗ'ಕ್ಕೆ ಭಾರಿ ಕಂಟಕ]
ನಟ ಶಿವಣ್ಣ ಅವರಿಗೆ 'ರಂಗಿತರಂಗ' ಚಿತ್ರದಲ್ಲಿ ಅತ್ಯಂತ ಮೆಚ್ಚುಗೆಯಾದ ಪಾತ್ರವೆಂದರೆ, ಅದು ಡೈಲಾಗ್ ಕಿಂಗ್ ಸಾಯಿ ಕುಮಾರ್ ಮಾಡಿದ ಪಾತ್ರವಂತೆ. ಜೊತೆಗೆ 'ರಂಗಿತರಂಗ' ಅಂದಕೂಡಲೇ ಶಿವಣ್ಣ ಅವರಿಗೆ ಪಟ್ಟಾ ಅಂತ ನೆನಪಾಗೋದು 'ರಣರಂಗ' ಅಂತೆ. ಹೀಗೆ ಶಿವಣ್ಣ ಅವರು ತಮ್ಮ ಕಲರ್ ಫುಲ್ ಅನುಭವವನ್ನು ಹಂಚಿಕೊಂಡಿದ್ದಾರೆ.
ಭಂಡಾರಿ ಸಹೋದರರು ಹಾಗೂ ಕರುನಾಡಿನ ಚಿರಯುವಕ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನಡುವೆ ನಡೆದ ಕಲರ್ ಫುಲ್ 'ರಂಗಿತರಂಗ' ದ ಬಗ್ಗೆ ನಡೆದ ಸಂದರ್ಶನದ ವಿಡಿಯೋ ಇಲ್ಲಿದೆ ನೋಡಿ..
ಅನುಪ್ ಭಂಡಾರಿ: ಸರ್ 'ರಂಗಿತರಂಗ' ಸಿನಿಮಾ ನೋಡಿದ್ದೀರಾ. ಈ ಚಿತ್ರದಲ್ಲಿ ನಿಮಗೆ ಏನ್ ಇಷ್ಟ ಆಯ್ತು.
ಶಿವಣ್ಣ: ಈ ಚಿತ್ರ ನನಗೆ ತುಂಬಾ ಇಷ್ಟ ಆಯ್ತು, ಫಿಲ್ಮ್, ಕಾನ್ಸೆಪ್ಟ್, ಚಿತ್ರದ ಮೇಕಿಂಗ್, ಎಲ್ಲರ ಪರ್ಫಾಮೆನ್ಸ್, ಎಲ್ಲದರಲ್ಲೂ ವಿಭಿನ್ನತೆ ಇದೆ. ಜೊತೆಗೆ ಚಿತ್ರದಲ್ಲಿರುವ ಸಣ್ಣ ಸಣ್ಣ ವಿಷಯಗಳು ತುಂಬಾ ಚೆನ್ನಾಗಿದೆ. ಭಯದ ವಾತಾವರಣ, ಹಾಗೂ ಮಂಗಳೂರಿನ ಸಂಸ್ಕೃತಿ, ಯಕ್ಷಗಾನ, ಅದ್ರಲ್ಲಿರುವ ಮೇಕಪ್ ಇವೆಲ್ಲಾ ಸಿನಿಮಾಕ್ಕೆ ಪೆಕ್ಯೂಲರ್ ಟಚ್ ನೀಡಿದೆ.
ಅದ್ರಲ್ಲೂ ಒಂದು ಸಾಂಗ್ ನಲ್ಲಂತೂ ನೀವು ಬಳಸ್ಕೊಂಡ ಲೈಟಿಂಗ್ಸ್ ಬಂದಾಗ ಡಾರ್ಕ್ ಶೇಡ್, ಲೈಟ್ ಶೇಡ್ ಆಮೇಲೆ ಫುಲ್ ಕಲರ್ ಫುಲ್, ನಂತರ ಒಮ್ಮೆಗೆ ಗ್ಲಾಮರಸ್, ಜೊತೆಗೆ ಬ್ಯೂಟಿಫುಲ್ ರಾಕ್ ಅಂಡ್ ರೋಲ್ ಆಫ್ ದ ಸಾಂಗ್, ಆಮೇಲೆ ರೊಮ್ಯಾಂಟಿಕ್ ಥಿಂಗ್ಸ್ ಇವೆಲ್ಲಾ ಒಟ್ಟಾಗಿ ಇದೊಂಥರಾ, ಫೆಂಟಾಸ್ಟಿಕ್ ಅನುಭವ ಅಂತ ನನಗನ್ನಿಸುತ್ತದೆ. ಒಟ್ನಲ್ಲಿ 'ರಂಗಿತರಂಗ' ಅಂದ್ರೆ ನನಗೆ ಅನಿಸಿದ ಮಟ್ಟಿಗೆ ಅದೊಂದು 'ರಣರಂಗ'.[ಚಿತ್ರ ವಿಮರ್ಶೆ : 'ರಂಗಿತರಂಗ' ಬಲು ರೋಚಕ]

ಅನುಪ್: ನೀವು ಸಿನಿಮಾ ನೋಡ್ತಾ ನಿರುಪ್ ಅವರ ಪಾತ್ರವನ್ನು ಇಮ್ಯಾಜೀನ್ ಮಾಡ್ಕೊಂಡೆ ಅಂತ ಹೇಳಿದ್ರಿ ಅಲ್ವಾ. ನೀವು ಸೂಪರ್ ಸ್ಟಾರ್ ಅನ್ನೋದನ್ನ ಮರೆತು, ಒಬ್ಬ ಸಾಮಾನ್ಯ ನಟನಾಗಿದ್ರೆ, ಒಂದ್ವೇಳೆ ನಿಮಗೆ ಅಂತ ಪಾತ್ರ ಮಾಡ್ಬೇಕು ಅನಿಸಿದ್ರೆ ನೀವು ಈ ಚಿತ್ರದಲ್ಲಿ ಯಾವ ಪಾತ್ರ ಮಾಡ್ತಾ ಇದ್ರಿ.
ಶಿವಣ್ಣ: ನನಗೆ ಆ ಥರ ಅವಕಾಶ ಇದ್ದಿದ್ದರೆ ನಾನು ಸಾಯಿಕುಮಾರ್ ಪಾತ್ರ ಮಾಡೋಕೆ ಇಷ್ಟ ಪಡ್ತಾ ಇದ್ದೆ. ಯಾಕಂದ್ರೆ ಅದು ತುಂಬಾ ಡಿಫರೆಂಟ್ ಕ್ಯಾರೆಕ್ಟರ್. ಯಾಕಂದ್ರೆ ಎಲ್ಲೂ ನಿಮಗೆ ಬಿಟ್ಟುಕೊಡಲ್ಲ, ಇವರೇ ಇರಬಹುದೇನೋ ಅಂತ ಎಲ್ಲೂ ಗೊತ್ತಾಗಲ್ಲ. ಕೊನೆ ತನಕನೂ ಸೀಕ್ರೆಟ್ ಓಪನ್ ಆಗಲ್ಲ. ತುಂಬಾ ಒಳ್ಳೆ ಪಾತ್ರ. ಮತ್ತೆ ಕಾಮಿಡಿ ಪಾತ್ರನೂ ತುಂಬಾ ಇಷ್ಟ ಆಯ್ತು.
ಜೊತೆಗೆ ಕೆಲವೊಂದು ಪಾತ್ರಗಳನ್ನು ನೀವು ಬಿಟ್ಟೇ ಬಿಡದೆ, ಕೆಲವೊಂದು ಕಡೆ ಮತ್ತೆ ಮತ್ತೆ ತರೋಕೆ ಪ್ರಯತ್ನ ಪಟ್ರಿ ಅದು ಒಬ್ಬ ಡೈರೆಕ್ಟರ್, ಸಿನಿಮಾ ಮಾಡುವ ಬ್ಯೂಟಿಫುಲ್ ವೇ. ಇದು ನನಗೆ ತುಂಬಾ ಇಂಟ್ರೆಸ್ಟ್ ಕೊಡ್ತು. ಅದ್ರಲ್ಲೂ ನೀವು ಫ್ಲಾಶ್ ಬ್ಯಾಕ್ ಕಥೆಗಳನ್ನ ಮಾಡಿದ್ದು ಮೈಂಡ್ ಬ್ಲೊಯಿಂಗ್, ಆ ಇಬ್ಬರು ಹುಡುಗೀರು ಸಖತ್ ಆಗಿ ಆಕ್ಟ್ ಮಾಡಿದ್ದಾರೆ.
ಇನ್ನು ನಿರುಪ್ ಅವರ ಡ್ಯಾನ್ಸ್ ನ ಪ್ರತಿಯೊಂದು ಸ್ಟೆಪ್ಸ್, ಮೂಮೆಂಟ್, ಆ ಸಾಂಗ್ ತಕ್ಕ ಹಾಗೆ ಎಕ್ಸ್‌ಪ್ರೆಷನ್ಸ್, ಎಲ್ಲವೂ ತುಂಬಾ ಚೆನ್ನಾಗಿದೆ. ಅದ್ರಲ್ಲೂ ಆ ಯಕ್ಷಗಾನದ ಹಾಡಿಗೆ ನೀವು ಮಾಡಿದ ಆ ಪ್ರತಿಯೊಂದು ಮೂಮೆಂಟ್ ಗಳು ಕೂಡ ಸಖತ್ ಆಗಿತ್ತು. ಎಲ್ಲರಿಗೂ ಬರಲ್ಲ ಆ ಥರ ಮಾಡೋಕೆ ಯಾಕಂದ್ರೆ ಆ ಹಾಡಿನಲ್ಲಿ ಹಾಗೂ ನಿರುಪ್ ಮಾಡಿರೋ ಸ್ಟೆಪ್ಸ್ ನಲ್ಲಿ ಕ್ಲಾಸಿಕಲ್ ಟಚ್ ಇತ್ತು. ಆ ಪರ್ಫಾಮೆನ್ಸ್ ನಲ್ಲಿ ವ್ಯಾಲ್ಯೂ ಇತ್ತು. ನನಗಂತೂ ಅದನ್ನ ನೋಡಿದಾಗ 'ರಥಸಪ್ತಮಿ' ಯ 'ಶಿಲೆಗಳು ಸಂಗೀತವ ಹಾಡಿದೆ' ನೆನಪಾಯಿತು. ಸೋ ನನಗೆ ತುಂಬಾ ಇಷ್ಟ ಆಯ್ತು.