For Quick Alerts
  ALLOW NOTIFICATIONS  
  For Daily Alerts

  'ರಂಗಿತರಂಗ' ತಮಿಳಿಗೆ ರಿಮೇಕ್ ಆಗ್ತಾ ಇದೆ-ಅನುಪ್ ಭಂಡಾರಿ

  By Suneetha
  |

  ಪ್ರಪಂಚದಾದ್ಯಂತ ಜನಮೆಚ್ಚುಗೆ ಗಳಿಸಿದ ಅಪ್ಪಟ ಕನ್ನಡಿಗರ 'ರಂಗಿತರಂಗ' ತಮಿಳು ಭಾಷೆಗೆ ರಿಮೇಕ್ ಆಗುತ್ತಿದೆ ಅಂದರೆ ಕನ್ನಡಿಗರಾದ ನಮಗಿದು ಹೆಮ್ಮೆಯ ವಿಷಯ ಅಲ್ವಾ?. ಇದೀಗ ನಟ ಶಿವಣ್ಣ ಹಾಗೂ ಭಂಡಾರಿ ಸಹೋದರರು ಸಂದರ್ಶನದ ಮುಂದುವರಿದ ಭಾಗ ಇಲ್ಲಿದೆ. ಮುಂದೆ ಓದಿ...

  ಅನುಪ್: ಚಿಕ್ಕಂದಿನಿಂದಲೂ ನಾವಿಬ್ಬರು ನಿಮ್ಮ ಸಿನಿಮಾಗಳನ್ನು ನೋಡ್ಕೊಂಡು ಬೆಳೆದವರು, ನಿಮ್ಮನ್ನೇ ಫಾಲೋ ಮಾಡ್ಕೊಂಡು ಬಂದವರು. ಅಂತದ್ರಲ್ಲಿ ಇದೀಗ ನಿಮ್ಮ ಜೊತೆ ಕುತ್ಕೊಂಡು ನಮ್ಮ ಸಿನಿಮಾದ ಬಗ್ಗೆ ನಿಮ್ಮಲ್ಲಿ ಅಭಿಪ್ರಾಯ ಕೇಳೋದು ಅಂದ್ರೆ ತುಂಬಾ ಖುಷಿಯಾಗ್ತಾ ಇದೆ.

  ಶಿವಣ್ಣ: ಹಾ!! ಅಪ್ಪಾಜಿ ಯಾವಾಗ್ಲೂ ಹೇಳ್ತಾ ಇದ್ರು, ನಾವು ಯಾರನ್ನ, ಯಾವಾಗ, ಹೇಗೆ ಭೇಟಿ ಆಗ್ತೇವೆ ಅಂತ ಗೊತ್ತಾಗಲ್ಲ. ನೋಡಿ ಇವಾಗ ನೀವೇ 4th, 5th ಕ್ಲಾಸ್ ನಲ್ಲಿರುವಾಗಿನಿಂದ ನನ್ನ ಸಿನಿಮಾಗಳನ್ನು ನೋಡ್ಕೊಂಡು ಬಂದಿದ್ದೀರಿ. ಇದೀಗ 25 ವರ್ಷಗಳ ನಂತರ ನೀವೇ 'ರಂಗಿತರಂಗ' ಸಿನಿಮಾ ಮಾಡಿದ್ದೀರಾ. ಈಗ ನನ್ ಜೊತೆ ಕುತ್ಕೊಂಡು ಮಾತಾಡ್ತ ಇದ್ದೀರಾ ಇದೊಂದು ಕಾಕತಾಳೀಯ ಅಲ್ವಾ.[ಪವರ್ ಸ್ಟಾರ್ ಗೆ ಆಕ್ಷನ್-ಕಟ್ ಹೇಳ್ತಾರಾ?, ರಂಗಿ ನಿರ್ದೇಶಕ]

  ಅಪ್ಪಾಜಿ ಯಾವಾಗ್ಲೂ ಹೇಳ್ತಾ ಇದ್ರು, ಒಳ್ಳೆ ಸಿನಿಮಾಗಳನ್ನು ನೋಡಿ ಅದನ್ನು ಎಂಜಾಯ್ ಮಾಡಿ ಅಂತ. ಇದೀಗ ಗೀತಾಗೂ ಹೇಳಿದೆ. ಅವರೂ ನೋಡೋ ಇಂಟ್ರೆಸ್ಟ್ ತೋರ್ಸಿದ್ದಾರೆ. ಕನ್ನಡ ಇಂಡಸ್ಟ್ರಿಯಲ್ಲಿ ಇಂತಹ ಸಿನಿಮಾಗಳು ಇನ್ನು ಬರಬೇಕು. ಆವಾಗ ನಾವು ಬೇರೆ ಭಾಷೆಗಳ ಚಿತ್ರಗಳೊಟ್ಟಿಗೆ ನಾವು ಕಂಪೇರ್ ಮಾಡಬಹುದು. ಇಲ್ಲಾಂದ್ರೆ ನಾವು ಅದ್ಹೇಗೆ ಕಂಪೇರ್ ಮಾಡಕ್ಕಾಗುತ್ತೆ.

  ಅನುಪ್: ಇದೀಗ 'ರಂಗಿತರಂಗ' ವನ್ನು ತಮಿಳಿಗೆ ರಿಮೇಕ್ ಮಾಡೋಕೆ ರೈಟ್ಸ್ ಪರ್ಚೆಸ್ ಮಾಡುವ ಎಲ್ಲಾ ಮಾತುಕತೆಗಳು ನಡೀತಾ ಇವೆ. ಈಗಾಗಲೇ ದೊಡ್ಡ-ದೊಡ್ಡ ಕಂಪೆನಿಗಳು ರಿಮೇಕ್ ಹಕ್ಕು ಖರೀದಿಸಲು ನಮ್ಮನ್ನ ಸಂಪರ್ಕಿಸಿದ್ದಾರೆ. ಆದ್ರಿಂದ ಈ ಸುದ್ದಿ ಸ್ಯಾಂಡಲ್ ವುಡ್ ಗೆ ಒಂದು ಹೆಮ್ಮೆಯ ಸಂಗತಿ ಅಲ್ವಾ ಸರ್.

  ಶಿವಣ್ಣ: ಖಂಡಿತ, ಖಂಡಿತ ಅನುಪ್,

  ಅನುಪ್: ನಿಮಗೆ ಮ್ಯೂಸಿಕ್ ತುಂಬಾ ಇಷ್ಟ ಆಯ್ತು ಅಂದ್ರಿ.ನೀವು ಈ ಚಿತ್ರದಲ್ಲಿ ನಿಮ್ಮ ಫೇವರೆಟ್ ಅಂತ ಯಾವ ಸಾಂಗ್ ಚ್ಯೂಸ್ ಮಾಡ್ತೀರಿ.[ವಿಡಿಯೋ: ನೀವು ನೋಡಿರದ 'ರಂಗಿತರಂಗ'ದ ದೃಶ್ಯಗಳು]

  ಶಿವಣ್ಣ: ಎಲ್ಲಾ ಸಾಂಗ್ ಇಷ್ಟ ಆಯ್ತು ನನಗೆ, ಅದ್ರಲ್ಲೂ ತುಂಬಾ ಇಷ್ಟ ಆಗಿದ್ದು, ಟಂಗ್ ಟ್ವಿಸ್ಟರ್ ಸಾಂಗ್, ಇಟ್ಸ್ ಅ ವೆರಿ ಬ್ಯೂಟಿಫುಲ್. ಆ ಲಿರಿಕ್ಸ್ ಅದಕ್ಕೆ ನಾನು ನಿಮ್ಮತ್ರ ಕೇಳಿದ್ದು, ಯಾವುದು ನಿಮ್ಮ ಮುಂದಿನ ಸಿನಿಮಾ ಅಂತ. ಯಾಕಂದ್ರೆ ನನಗೆ ಕ್ಯೂರಿಯಾಸಿಟಿ ಇದೆ ಮುಂದೇನು ಮಾಡ್ತೀರಾ ಅಂತ.

  ನಿರುಪ್: ಸರ್ ನಮಗೆ, ನಿಮ್ಮಿಂದ ಏನಾದ್ರೂ ಸಲಹೆ-ಸೂಚನೆ.

  ಶಿವಣ್ಣ: ನೀವು ಈಗೇನು ಮಾಡಿದ್ದೀರಾ ಅದನ್ನೇ ಫಾಲೋ ಮಾಡಿ. ನಿಮ್ಮ ಮನಸ್ಸಲ್ಲಿ ಏನ್ ಬರುತ್ತೆ ಅದನ್ನೇ ಮಾಡಿ. ನಾನು ಬೇರೆ ಏನಾದ್ರೂ ದೊಡ್ಡದು ಮಾಡಬೇಕು ಅಂತ ಯೋಚನೆ ಮಾಡೋಕೆ ಹೋಗಬಾರದು. ನಿಮಗೆ ಏನ್ ಅನ್ಸುತ್ತೆ ಅದನ್ನ ಮಾಡಿ. ಯಾಕಂದ್ರೆ ನೀವೀಗ ನಿಮ್ಮ ಸಕ್ಸಸ್ ಅನ್ನ ಎಂಜಾಯ್ ಮಾಡ್ತೀದ್ದೀರಲ್ಲ. ಡೋಂಟ್ ಬ್ರೇಕ್ ಯುವರ್ ಮೈಂಡ್. ಎಲ್ಲ ಸಿನಿಮಾ ಫಸ್ಟ್ ಸಿನಿಮಾ ಅಂತಾನೇ ಅಂದುಕೊಳ್ಳಿ.

  ಅನುಪ್: ಕೊನೆಯದಾಗಿ, 'ರಂಗಿತರಂಗ' ನೋಡಿರೋರಿಗೆ, ನೋಡದೇ ಇರೋರಿಗೆ ನೀವು ಏನ್ ಹೇಳೋಕೆ ಇಷ್ಟ ಪಡ್ತೀರಾ?.

  ಶಿವಣ್ಣ: ಫಸ್ಟ್ ನಾನು ಎಲ್ಲ ಪ್ರೇಕ್ಷಕರಿಗೆ ಥ್ಯಾಂಕ್ಸ್ ಹೇಳೋಕೆ ಇಷ್ಟ ಪಡ್ತೀನಿ. ಯಾಕಂದ್ರೆ ಹೊಸಬರ ಚಿತ್ರಕ್ಕೆ ಇಷ್ಟರಮಟ್ಟಿಗೆ ಎನ್ ಕರೇಜ್ ಮಾಡಿದ್ದಾರೆ, ಅಂದ್ರೆ ಇದು ತುಂಬಾ ಒಳ್ಳೆಯ ಬೆಳವಣಿಗೆ. ಇವತ್ತು 'ರಂಗಿತರಂಗ' ಅಂತ ಸಿನಿಮಾನ ಜನ ಗುರುತಿಸಿದ್ದಾರೆ. ಇಷ್ಟು ದೊಡ್ಡ ಸ್ಥಾನ ಕೊಟ್ಟಿದ್ದಾರೆ ಅಂದ್ರೆ ಅವರಿಗೆ ಧನ್ಯವಾದ ಹೇಳಲೇಬೇಕು. ನಿಜವಾಗ್ಲೂ ಅಭಿಮಾನಿಗಳು ದೇವರು. ಒಂದೊಂದು ಬಾರಿ ದೇವರು ಇದ್ದಾರೆ ಅನ್ನೋದಕ್ಕೆ ಇದೇ ಜೀವಂತ ಸಾಕ್ಷಿ. ಇಡೀ ಕರ್ನಾಟಕದ ಜನ ನಿಮ್ಮ ಪ್ರತಿಭೆಯನ್ನ ಗುರುತಿಸಿದ್ದಾರೆ. ಅವರಿಗೆ ಧನ್ಯವಾದ ಹಾಗೂ ನಿಮಗೂ ವಿಶ್ ಯೂ ಆಲ್ ದ ಬೆಸ್ಟ್.

  ಅನುಪ್: ಸಿನಿಮಾ ನೋಡದವರಿಗೆ.

  ಶಿವಣ್ಣ: ಹೇ ಫಸ್ಟ್ ಹೋಗಿ ನೋಡ್ರೋ, ಇನ್ನು ನೋಡಿಲ್ವಾ?. ಆಕ್ಚುವಲಿ ನನ್ನೇ ನಾನು ಪ್ರಶ್ನೆ ಮಾಡ್ಕೋಬೇಕು ಯಾಕೆ ನೀನು ಇಷ್ಟು ಲೇಟ್ ಆಗಿ ನೋಡಿದೆ, ಅಂತ. ಆದ್ರೆ ನನಗೆ ನನ್ನ ಮಗಳ ಮದುವೆ ಗಡಿಬಿಡಿಯಲ್ಲಿ ನೋಡೋಕ್ಕಾಗಿಲ್ಲ. 100 ದಿನ ದಾಟಿದ ಮೇಲು ಥಿಯೇಟರ್ ನಲ್ಲಿ 75% ಜನ ಇದ್ದಾರೆ ಅಂದ್ರೆ ಸೋ ನೈಸ್.

  ಅನುಪ್: ತುಂಬಾ ಥ್ಯಾಂಕ್ಸ್, ನಮ್ಮ ಸಿನಿಮಾ ನೋಡಿದ್ದಕ್ಕೆ, ನಮ್ಮೊಂದಿಗೆ ಸಮಯ ಕಳೆದಿದ್ದಕ್ಕೆ. ನಾವು 125ನೇ ದಿನವನ್ನು ಸಂಭ್ರಮದಿಂದ ಆಚರಿಸಬೇಕು ಅಂತ ಪ್ಲಾನ್ ಮಾಡಿದ್ದೀವಿ ನೀವು ಖಂಡಿತ ಬರಬೇಕು.

  ಶಿವಣ್ಣ: ಖಂಡಿತವಾಗ್ಲೂ ಬರ್ತಿನಿ. ಗೆಸ್ಟ್ ಆಗಿ ಅಲ್ಲ ಬದ್ಲಾಗಿ ಒಬ್ಬ ಪಾರ್ಟಿಸಿಪೇಟ್ ಆಗಿ ಬರುತ್ತೇನೆ.

  English summary
  Kannada Actor Dr. Shiva Rajkumar on 'RangiTaranga' - Interviewed by Anup & Nirup Bhandari. Watch Video, 'RangiTaranga' movie features Kannada actor Nirup Bhandari, Actress Avanthika Shetty, Actress Radhika Chetan in the lead role. The movie is directed by Anup Bhandari.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X