Kathanar Trailer Review: ಅನುಷ್ಕಾ ಶೆಟ್ಟಿಯ 'ಕಥನಾರ್' ಸಿನಿಮಾ ಟ್ರೈಲರ್ ಹೇಗಿದೆ?
ಕರಾವಳಿಯ ಸ್ವೀಟಿ ಅನುಷ್ಕಾ ಶೆಟ್ಟಿ ಇತ್ತೀಚೆಗೆ ಸಿನಿಮಾಗಳಿಂದ ಕೊಂಚ ಮಟ್ಟಿಗೆ ದೂರವೇ ಉಳಿದಿದ್ದಾರೆ. ಇತ್ತೀಚೆಗೆ ಬಹಳ ದಿನಗಳ ಬಳಿಕ ನಟಿಸಿದ ತೆಲುಗು ಸಿನಿಮಾ 'ಘಾಟಿ' ಕೂಡ ಬಾಕ್ಸಾಫೀಸ್‌ನಲ್ಲಿ ಗೆಲ್ಲಲಿಲ್ಲ. ಹೆಚ್ಚು ಕಡಿಮೆ 'ಘಾಟಿ' ಸಿನಿಮಾದ ಜೊತೆಯಲ್ಲಿಯೇ ಶುರುವಾಗಿದ್ದ ಮಲಯಾಳಂ ಪ್ಯಾನ್ ಇಂಡಿಯಾ ಸಿನಿಮಾ 'ಕಥನಾರ್' ಈಗ ಬಿಡುಗಡೆಗೆ ಸಜ್ಜಾಗುತ್ತಿದೆ.
ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಮಲೆಯಾಳಂ ಚಿತ್ರ 'ಕಥನಾರ್' ಟ್ರೈಲರ್ ರಿಲೀಸ್ ಮಾಡಲಾಗಿದೆ. ಕೇರಳದ ಶ್ರೀಮಂತ ನಿರ್ಮಾಪಕರಲ್ಲಿ ಒಬ್ಬರಾದ ಗೋಕುಲಂ ಗೋಪಾಲನ್ ಅವರ 'ಶ್ರೀ ಗೋಕುಲಂ ಮೂವೀಸ್' ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದೆ. ಇದು ಅನುಷ್ಕಾ ಶೆಟ್ಟಿಗೆ ಕಮ್ ಬ್ಯಾಕ್ ಸಿನಿಮಾ ಆಗಬಹುದೆಂಬ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳು ಇದ್ದಾರೆ.

'ಕಥನಾರ್' ಸಿನಿಮಾಗೆ ರೋಜಿನ್ ಥಾಮಸ್ ಆಕ್ಷನ್ ಕಟ್ ಹೇಳಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಅನ್ನು ಚಿತ್ರತಂಡ ರಿಳಿಸ್ ಮಾಡಿದೆ. ಭಾರೀ ಕುತೂಹಲದೊಂದಿಗೆ ಕಾಯುತ್ತಿದ್ದ ಅನುಷ್ಕಾ ಅಭಿಮಾನಿಗಳಿಗೆ ಸ್ವಲ್ಪ ಸಿಹಿ.. ಸ್ವಲ್ಪ ಕಹಿ ಸಿಕ್ಕಿದೆ ಅದ್ಯಾಕೆ? 'ಕಥನಾರ್' ಟ್ರೈಲರ್ ಹೇಗಿದೆ? ಹೈಲೈಟ್‌ಗಳೇನು? ಅನ್ನೋದನ್ನು ತಿಳಿಯುವುದಕ್ಕೆ ಮುಂದೆ ಓದಿ.
ಅನುಷ್ಕಾ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರೆ, ಇನ್ನೊಂದು ಕಡೆ ಮಾಲಿವುಡ್‌ನ ಸ್ಟಾರ್ ನಟ ಜಯಸೂರ್ಯ, ಪ್ರಭುದೇವ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೊಂದಿಗೆ ಸನೂಪ್ ಸಾನ್, ಸ್ಯಾಂಡಿ, ದೇವಿಕಾ, ನಿತೀಶ್ ಭಾರದ್ವಾಜ್, ವಿನೀತ್, ಹರೀಶ್ ಉತ್ತಮನ್, ಶ್ರೀಕಾಂತ್ ಮುರಳಿ, ಕುಲಪ್ರೀತ್ ಯಾದವ್ ಸೇರಿದಂತೆ ಹಲವು ಮಂದಿ ಕಲಾವಿದರು ನಟಿಸಿದ್ದಾರೆ. ಎಲ್ಲಕ್ಕಿಂತ ಹೆಚ್ಚಾಗಿ ಅನುಷ್ಕಾ ಶೆಟ್ಟಿ ಈ ಸಿನಿಮಾದ ಪ್ರಮುಖ ಪಾತ್ರದಲ್ಲಿ ಇರೋದ್ರಿಂದ ಎಲ್ಲರ ಗಮನ ಇಲ್ಲೇ ಇದೆ.


Click it and Unblock the Notifications











