For Quick Alerts
  ALLOW NOTIFICATIONS  
  For Daily Alerts

  ಮೆಟ್ರೋ ಕಾಮಗಾರಿ ಅವಘಡ: ಕಾರಿನಲ್ಲಿ ಚಲಿಸುತ್ತಿದ್ದ ನಟಿ ಅಪಾಯದಿಂದ ಪಾರು

  |

  ಮಲಯಾಳಂ ನಟಿ ಅರ್ಚನಾ ಕವಿ ದೊಡ್ಡ ಪ್ರಮಾದದಿಂದ ಪಾರಾಗಿದ್ದಾರೆ. ಕಾರಿನಲ್ಲಿ ಚಲಿಸುತ್ತಿದ್ದಾಗ ಕಾರಿನ ಮೇಲೆ ಮೆಟ್ರೋ ಕಾಮಗಾರಿಯ ಅವಶೇಷಗಳು (ಸಿಮೆಂಟ್ ಅವ‍ಶೇಷ) ಬಿದ್ದು ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಯಾರಿಗೂ ಆಪಾಯ ಆಗಿಲ್ಲ. ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದುಬಂದಿದೆ.

  ಈ ಬಗ್ಗೆ ನಟಿ ಅರ್ಚನಾ ಕವಿ ಟ್ವಿಟ್ಟರ್ ನಲ್ಲಿ ಫೋಟೋಗಳನ್ನ ಶೇರ್ ಮಾಡಿದ್ದು, ಮೆಟ್ರೋ ಅಧಿಕಾರಿಗಳಿಗೆ ಮತ್ತು ಮುನ್ಸಿಪಾಲ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

  'ಏರ್ ಪೋರ್ಟ್ ಗೆ ಹೋಗುವ ವೇಳೆ ಕಾರಿನ ಮೇಲೆ ಮೆಟ್ರೋಗೆ ಸಂಬಂಧಿಸಿದ ಅವಶೇಷಗಳು ಬಿದ್ದಿದೆ. ಈ ಬಗ್ಗೆ ಮೆಟ್ರೋ ಅಧಿಕಾರಿಗಳು ಗಮನ ಹರಿಸಬೇಕು. ಕಾರಿನ ಮಾಲೀಕರಿಗೆ ಪರಿಹಾರ ನೀಡಬೇಕು. ಮುಂದಿನ ದಿನದಲ್ಲಿ ಈ ರೀತಿ ಘಟನೆ ಸಂಭವಿಸಿದಂತೆ ಜಾಗೃತಿವಹಿಸಬೇಕು' ಎಂದು ಮನವಿ ಮಾಡಿದ್ದಾರೆ.

  ನಟಿ ಅರ್ಚನಾ ಕವಿ ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಮೆಟ್ರೋ ಅಧಿಕಾರಿಗಳು 'ಈ ಘಟನೆಯನ್ನ ಗಂಭೀರವಾಗಿ ಪರಿಗಣಿಸುತ್ತೇವೆ. ಕಾರು ಚಾಲಕನ ಜೊತೆ ಮಾತನಾಡುವುದಕ್ಕೆ ಪ್ರಯತ್ನ ಮಾಡುತ್ತಿದ್ದೇವೆ. ಈ ಪ್ರಾಜೆಕ್ಟ್ ಸುರಕ್ಷಿತವಾಗಿ ನಡೆಯುವಂತೆ ಕ್ರಮ ಜರುಗಿಸುತ್ತೇವೆ' ಎಂದು ವಿವರಿಸಿದ್ದಾರೆ. ಆದರೆ ನೆಟ್ಟಿಗರು ಮಾತ್ರ ಮೆಟ್ರೋ ಸಿಬ್ಬಂದಿಯನ್ನ ಟ್ರೋಲ್ ಮಾಡ್ತಿದ್ದಾರೆ.

  ಈ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಕೂಡ ಪ್ರತಿಕ್ರಿಯಿಸಿದ್ದು, 'ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡುತ್ತೇವೆ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುತ್ತೇವೆ. ಕಾರು ಮಾಲೀಕರಿಗೆ ಪರಿಹಾರ ಕೊಡಿಸುವ ದೃಷ್ಠಿಯಲ್ಲಿ ಪ್ರಯತ್ನ ಮಾಡುತ್ತೇವೆ. ಭವಿಷ್ಯದಲ್ಲಿ ಇಂತಹ ಘಟನೆ ಸಂಭವಿಸದಂತೆ ನೋಡಿಕೊಳ್ಳುತ್ತೇವೆ' ಎಂದು ತಿಳಿಸಿದ್ದಾರೆ.

  ಇನ್ನು ನಟಿ ಅರ್ಚನಾ ಕವಿ ಬಗ್ಗೆ ಹೇಳುವುದಾದರೇ ಹನಿ ಬಿ, ಪಟ್ಟಂ ಪೋಲೆ, ನಾಡೋಡಿಮನಂ ಹಾಗೂ ತಮಿಳಿನ ಅರವಾನ್, ಜ್ಞಾನ ಕಿರುಕ್ಕುನ್ ಅಂತಹ ಸಿನಿಮಾದಲ್ಲಿ ನಟಿಸಿದ್ದಾರೆ.

  English summary
  Malayalam actress archana kavi has escape from road accident while she was way to kochi airport. A concrete slab of metro fell on her moving car.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X