X
ಕನ್ನಡ » ಚಲಚಿತ್ರಗಳು » ಇರುವುದೆಲ್ಲವ ಬಿಟ್ಟು
ಇರುವುದೆಲ್ಲವ ಬಿಟ್ಟು

ಇರುವುದೆಲ್ಲವ ಬಿಟ್ಟು

Romance | 21 Sep 2018 | U |
Kannada

2.5 /5 Users

4 /5 Filmibeat

ಇರುವುದೆಲ್ಲವ ಬಿಟ್ಟು ಕಥೆ

ಪೂರ್ವಿ (ಮೇಘನಾ ರಾಜ್) ಒಂದು ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿರುತ್ತಾಳೆ. ಕೆಲಸ, ಹಣ, ಹೆಸರಿನ ಹಿಂದೆ ಓಡುವ ಪೂರ್ವಿಗೆ ರಾಯಲ್ ಲೈಫ್ ಲೀಡ್ ಮಾಡಬೇಕು ಎಂಬ ಗುರಿ ಇರುತ್ತದೆ. ಆಫೀಸ್ ನಲ್ಲಿ ಬೇರೆಯವರಿಂದ ಆರ್ಡರ್ ಮಾಡಿಸಿಕೊಳ್ಳುತ್ತಿದ್ದ ಜಾಗದಲ್ಲಿ ಇದ್ದ ಪೂರ್ವಿ ತಾನೇ ಆರ್ಡರ್ ಮಾಡುವ ಸ್ಥಾನಕ್ಕೆ ಹೋಗಬೇಕು ಎಂಬ ಬಯಕೆ ಇಟ್ಟುಕೊಂಡಿತ್ತಾಳೆ. ಅದೇ ರೀತಿ ತನ್ನ ಗುರಿ ಸಾಧಿಸುತ್ತಾಳೆ.ಆಫೀಸ್ ನಲ್ಲಿ ತನ್ನ ಜೊತೆಗೆ ಕೆಲಸ ಮಾಡುವ ದೇವ್ (ತಿಲಕ್) ಹಾಗೂ ಪೂರ್ವಿ ನಡುವೆ ಪ್ರೀತಿ ಪ್ರೇಮ ಪ್ರಣಯ ಶುರು ಆಗುತ್ತದೆ. ಊರಿನಲ್ಲಿರುವ ಪೂರ್ವಿ ತಂದೆಗೆ ಈ ವಿಷಯ ತಿಳಿಯುತ್ತದೆ. ಅಲ್ಲಿಂದ ತಂದೆ - ಮಗಳ ನಡುವೆ ಅಂತರ ಶುರು ಆಗುತ್ತದೆ. ಅದು ಯಾವ ಮಟ್ಟಕ್ಕೆ ಅಂದರೆ, ಪೂರ್ವಿ ತನ್ನ ಪಾಲಿಗೆ ಸತ್ತಳು ಎಂದೇ ಆ ತಂದೆ ನಿರ್ಧಾರ ಮಾಡುತ್ತಾರೆ. ಪ್ರೊಫೆಶನಲ್ ಆಗಿ ಎತ್ತರಕ್ಕೆ ಬಳೆಯುವ ಪೂರ್ವಿ, ಪರ್ಸನಲ್ ಆಗಿ ಕುಗ್ಗುತ್ತಿರುತ್ತಾಳೆ. ದೇವ್ ಹಾಗೂ ತಂದೆ, ತಾಯಿಯನ್ನು ದೂರ ಮಾಡಿಕೊಂಡ ಪೂರ್ತಿಗೆ ಆಕಸ್ಮಿಕವಾಗಿ ಆಕಾಶ್ (ಶ್ರೀ ಮಹದೇವ್) ಪರಿಚಯ ಆಗುತ್ತದೆ. ಯಾವಾಗಲೂ ಗೊಂಬೆಗಳ ಜೊತೆಗೆ ಇರುವ ಆಕಾಶ್ ಅದಕ್ಕೂ ಜೀವ ನೀಡುವ ಹುಡುಗ. ಆತನ ಜೊತೆಗೆ ಸೇರಿದ ಮೇಲೆ ಪೂರ್ವಿ ಬದುಕಿನಲ್ಲಿ ಮತ್ತೊಮ್ಮೆ ಖುಷಿ ಸಿಗುತ್ತದೆ. ಹೀಗಿದ್ದ ಪೂರ್ವಿಗೆ ಕೆಲಸ, ಗುರಿ, ಹೆಸರು, ಹಣಕ್ಕಿಂತ ಸಂಬಂಧ ದೊಡ್ಡದು ಎಂದು ತಿಳಿಯುತ್ತದೆ. ಒಂದು ಬದುಕಿನಲ್ಲಿ ತಂದೆ, ದೇವ್, ಆಕಾಶ್, ಪೂರ್ವಿ ಈ ನಾಲ್ಕು ಭಾವನೆಗಳು ಇರುತ್ತದೆ. ಇದರಲ್ಲಿ ಪೂರ್ವಿ ಯಾರ ಭಾವನೆ ಜೊತೆಗೆ ಬೆರೆತು ಹೋಗುತ್ತಾಳೆ ಎನ್ನುವುದು ಚಿತ್ರದ ಹೈಲೈಟ್.
Read More

ಇರುವುದೆಲ್ಲವ ಬಿಟ್ಟು ಕಲಾವಿದರು ಮತ್ತು ಸಿಬ್ಬಂದಿ

ಇರುವುದೆಲ್ಲವ ಬಿಟ್ಟು ಕ್ರೂ ಮಾಹಿತಿ

ನಿರ್ದೇಶಕ ಕಾಂತರಾಜ ಕನ್ನಲ್ಲಿ
ಸಿನಿಮಾಟೋಗ್ರಫಿ NA
ಸಂಪಾದಕ NA
ಸಂಗೀತ ವಿ ಶ್ರೀಧರ್
ನಿರ್ಮಾಪಕ ದೇವರಾಜ್ ದಾವಣಗೆರೆ
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಇರುವುದೆಲ್ಲವ ಬಿಟ್ಟು ವಿಮರ್ಶಕರ ವಿಮರ್ಶೆ

kannada.filmibeat.com
ಇರುವುದೆಲ್ಲವ ಬಿಟ್ಟು' ಸಿನಿಮಾ ಖಂಡಿತ ನಿರಾಸೆ ಮಾಡುವುದಿಲ್ಲ. ಸ್ವಾಭಿಮಾನ ಎಲ್ಲರಿಗೂ ಇರಬೇಕು. ಆದರೆ 'ಸಂಬಂಧಗಳಿಗಿಂತ ಸ್ವಾಭಿಮಾನ ದೊಡ್ಡದಲ್ಲ' ಎಂಬ ಸತ್ಯವನ್ನು ಈ ಸಿನಿಮಾ ಹೇಳುತ್ತದೆ. ಇದು ಭಾವನೆಗಳ ಮೇಲೆ ನಿಂತಿರುವ ಸಿನಿಮಾ.ಸಿನಿಮಾದಲ್ಲಿ ಆಕ್ಷನ್, ಕಾಮಿಡಿ ನಟರು, ಐಟಂ ಸಾಂಗ್, ಬಿಲ್ಡಪ್ ಡೈಲಾಗ್ ಯಾವುದು ಇಲ್ಲ. ಈ ಎಲ್ಲ ಇಲ್ಲಗಳ ನಡುವೆ ಸಿನಿಮಾದಲ್ಲಿ ಒಂದು ಜೀವ ಇದೆ. ಸಂಬಂಧ ಹಾಗೂ ಭಾವನೆಗಳೆ ಹೀರೋ ಹೀರೋಯಿನ್ ಆಗಿರುವ ಈ ಚಿತ್ರವನ್ನು ನೀವು ನೋಡಿ.

ಇರುವುದೆಲ್ಲವ ಬಿಟ್ಟು ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಇರುವುದೆಲ್ಲವ ಬಿಟ್ಟು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+