X
ಕನ್ನಡ » ಚಲಚಿತ್ರಗಳು » ಮಾಯಾಬಜಾರ್ 2016
ಮಾಯಾಬಜಾರ್ 2016

ಮಾಯಾಬಜಾರ್ 2016

Drama | 28 Feb 2020 | U/A | 133 Mins
Kannada

2.5 /5 Users

0 /5 Filmibeat

ಮಾಯಾಬಜಾರ್ 2016 ಕಥೆ

ಪುನೀತ್ ರಾಜಕುಮಾರ್ ರವರ ಪಿ.ಆರ್.ಕೆ ಬ್ಯಾನರ್ ಅಡಿಯಲ್ಲಿ ನಿರ್ಮಾಣಗೊಂಡಿರುವ ಮಾಯಾಬಜಾರ್ 2016 ಚಿತ್ರವನ್ನು ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಎಂ ಗೋವಿಂದ್ ಬಂಡವಾಳ ಹೂಡಿದ್ದಾರೆ. ಮಿಥುನ್ ಮುಕುಂದನ್ ಸಂಗೀತ ನೀಡಿದ್ದಾರೆ. 2016 ರಲ್ಲಿ ಭಾರತದ ಕೇಂದ್ರ ಸರ್ಕಾರ 500 ಮತ್ತು 1000 ಮುಖಬೆಲೆಯ ನೋಟು ಅಮಾನ್ಯೀಕರಣ ಮಾಡುತ್ತದೆ. ಆಗ ಬೆಂಗಳೂರಿನಲ್ಲಿ ಜರುಗಿದ ಘಟನೆಯೊಂದನ್ನು ಆಧರಿಸಿ ಈ ಚಿತ್ರವನ್ನು ತಯಾರಿಸಿದ್ದಾರೆ. ನಿರ್ದೇಶಕರು ಒಂದು ಗಂಭೀರ ಘಟನೆಯನ್ನು ಹಾಸ್ಯದ ಮೂಲಕ ಹೇಳಿದ್ದಾರೆ. ಕಥೆ : ಕೊಳಗೇರಿಯಲ್ಲಿ ಜೀವಿಸುತ್ತಿರುವ ವ್ಯಕ್ತಿ ಕುಬೇರ (ರಾಜ್ ಬಿ ಶೆಟ್ಟಿ) ಹೆಸರಿಗೆ ತಕ್ಕಹಾಗೆ ಕುಬೇರನಾಗಬೇಕು ಎನ್ನುವ ಕನಸು ಕಾಣುತ್ತ, ಕನಸನ್ನು ನನಸು ಮಾಡಿಕೊಳ್ಳಲು ಆತ ಯಾವ ಹಾದಿಯನ್ನು ತುಳಿಯಲು ಹಿಂಜರಿಯದ ಮನುಷ್ಯ. ಕೆಲಸ ವಿಲ್ಲದೆ ಖಾಲಿ ಕೂತಿರುವ ರಾಜಿ (ವಸಿಷ್ಠ ಸಿಂಹ) ಮತ್ತು ಶ್ರೀಮಂತ ಮನೆಯ ಹುಡುಗಿ ಚೈತ್ರಾ ರಾವ್ ಪ್ರೀತಿಸುತ್ತಿರುತ್ತಾರೆ. ಕರ್ತವ್ಯವೆ ದೇವರೆಂದು ನಂಬಿ ನಿಯತ್ತಿನಿಂದ ಬದುಕುತ್ತಿದ್ದ ಪೊಲೀಸ್ ಆಫೀಸರ್ ಜೋಸೆಫ್, ಪತ್ನಿ ಉಷಾ (ಸುಧಾರಾಣಿ)ಗೆ ಕ್ಯಾನ್ಸರ್ ಇರುವುದು ಗೊತ್ತಾಗುತ್ತೆ. ಮಗನ ಶಾಲೆಯ ಫೀಸ್ ಕಟ್ಟಲು ಒದ್ದಾಡುತ್ತಿದ್ದ ಜೋಸೆಫ್ ಪತ್ನಿಯ ಆಸ್ಪತ್ರೆಯ ಖರ್ಚು ಹೊಂದಿಸಲು ಪರದಾಡುವ ಸ್ಥಿತಿಗೆ ಬರುತ್ತಾರೆ. ಹೇಗಾದರು ಮಾಡಿ ಪತ್ನಿಯನ್ನು ಉಳಿಸಿಕೊಳ್ಳಬೇಕು ಎನ್ನುವ ಕಾರಣಕ್ಕೆ ನ್ಯಾಯದ ದಾರಿ ಬಿಟ್ಟು ಕುಬೇರನ ಜೊತೆ ಸೇರಿಕೊಳ್ಳುತ್ತಾರೆ. ಜೋಸೆಫ್ ನ ಅಧಿಕಾರ, ಕುಬೇರನ ಕಳ್ಳ ಬುದ್ದಿ. ಇಬ್ಬರು ಸೇರಿ ಹಣ ದೋಚಲು ಪ್ರಾರಂಭಿಸುತ್ತಾರೆ. ಇದರ ನಡುವೆ ರಾಜಿ ಬಳಿ ತಗಲಾಕಿಕೊಂಡು ಕೊನೆಗೆ ಆತನನ್ನು ಇವರ ಜೊತೆ ಸೇರಿಸಿಕೊಳ್ಳುತ್ತಾರೆ. ಒಟ್ನಲ್ಲಿ ಮೂವರು ಹಣದ ಹಿಂದೆ ಓಡಲು ಪ್ರಾರಂಭಿಸುತ್ತಾರೆ. ಹಣದ ಹಿಂದೆ ಓಡುತ್ತಿದ್ದವರಿಗೆ ನೋಟ್ ಬ್ಯಾನ್ ಮತ್ತಷ್ಟು ಆಘಾತ ನೀಡುತ್ತೆ.
Read More

ಮಾಯಾಬಜಾರ್ 2016 ಕಲಾವಿದರು ಮತ್ತು ಸಿಬ್ಬಂದಿ

ಮಾಯಾಬಜಾರ್ 2016 ಕ್ರೂ ಮಾಹಿತಿ

ನಿರ್ದೇಶಕ ರಾಧಾಕೃಷ್ಣ ರೆಡ್ಡಿ
ಕಥೆ ರಾಧಾಕೃಷ್ಣ ರೆಡ್ಡಿ
ಸಿನಿಮಾಟೋಗ್ರಫಿ ಅಭಿಷೇಕ್ ಜಿ ಕಾಸರಗೋಡ್
ಸಂಪಾದಕ ಜಗದೀಶ್ ಎನ್
ಸಂಗೀತ ಮಿಧುನ್ ಮುಕುಂದನ್
ನಿರ್ಮಾಪಕ ಅಶ್ವಿನಿ ಪುನೀತ್ ರಾಜಕುಮಾರ್, ಎಂ ಗೋವಿಂದ್
ಬಜೆಟ್ TBA
ಬಾಕ್ಸ್ ಆಫೀಸ್ TBA
ಒಟಿಟಿ ಪ್ಲಾಟ್ ಫಾರ್ಮ್ TBA
ಒಟಿಟಿ ರಿಲೀಸ್ ದಿನಾಂಕ TBA

ಮಾಯಾಬಜಾರ್ 2016 ಟ್ರೇಲರ್

Video Thumbnail

ಮಾಯಾಬಜಾರ್ 2016 ಪಾಟ್ಲುಗಳು

ಮಾಯಾಬಜಾರ್ 2016 ಸಿನಿಮಾ ನೋಡುಗರ ವಿಮರ್ಶೆ

  • ಕಥೆ
  • ಕ್ರಿಯೆ
  • ದಿಕ್ಕು
  • ಚಿತ್ರ ರೇಟಿಂಗ್

×
2.5 /5 Your Rating

ಮಾಯಾಬಜಾರ್ 2016

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+