ಕನ್ನಡ ಆಡಿಯೋ ಬಿಡುಗಡೆ ಮಾಡಿದ ಕ್ರಿಸ್ ಗೇಲ್

ಗುಡ್ ಶೆಪರ್ಡ್ ಆಡಿಟೋರಿಯಂನಲ್ಲಿ ನಡೆದ ಈ ಧ್ವನಿಸುರುಳಿ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಬಹುತೇಕ ಸದಸ್ಯರು ಹಾಜರಿದ್ದರು. 'ನಮಸ್ಕಾರ, ಎಲ್ಲರೂ ಚೆನ್ನಾಗಿದ್ದೀರಾ' ಎಂದು ಕನ್ನಡದಲ್ಲಿ ಮಾತು ಆರಂಭಿಸಿದ ಗೇಲ್, ಚಿತ್ರ ಯಶಸ್ವಿಯಾಗಲಿ ಎಂದು ಹಾರೈಸಿದರು. ಚಿತ್ರದ ಒಂದು ಹಾಡಿಗೆ ಚಿತ್ರತಂಡದ ಜೊತೆಗೆ ಭರ್ಜರಿ ಸ್ಟೆಪ್ ಹಾಕಿದ ಗೇಲ್ ಶ್ರೀನಗರ ಕಿಟ್ಟಿ ಮತ್ತು ಚಿತ್ರದ ನಾಯಕಿಯರನ್ನು ಅಭಿನಂದಿಸಿದರು.
ಅನಂತರಾಜು ನಿರ್ದೇಶನದ ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ಹರಿಪ್ರಿಯ, ಸ್ಮಿತಾ(ನಿವೇದಿತಾ), ಮಾನ್ಸಿ, ಶರಣ್, ದಿಲೀಪ್, ಆನಂದ್, ಸತ್ಯಜಿತ್, ಸಂಗೀತ ಮುಂತಾದವರು ಪ್ರಮುಖ ಭೂಮಿಕೆಯಲ್ಲಿದ್ದಾರೆ.
ಚಿತ್ರಕ್ಕೆ ಕೆ ರವಿಕುಮಾರ್ ಸಾನಾರ ಛಾಯಾಗ್ರಹಣವಿದೆ. ಜೆಸಿಗಿಫ್ಟ್ ಸಂಗೀತ ನೀಡಿರುವ ಚಿತ್ರಕ್ಕೆ ನಿರ್ದೇಶಕ ಯೋಗರಾಜ್ ಭಟ್ "ಕಾಂಜಿಪಿಂಜಿ" ಎನ್ನುವ ಹಾಡಿಗೆ ಸಾಹಿತ್ಯ ಬರೆದಿದ್ದಾರೆ.
More from Filmibeat
English summary
Royal Challengers Bangalore(IPL5)dashing opener, Jamaican, Vijay Mallyas heart throb Christopher Henry Gayle released Kannada movie audio 'Kiladi Kitty' in Good Shepherd auditorium Bangalore on Tuesday.


Click it and Unblock the Notifications











