For Quick Alerts
  ALLOW NOTIFICATIONS  
  For Daily Alerts

  ಮೆಹಬೂಬಗಾಗಿ 'ಉಸಿರೇ ಉಸಿರೇ..' ಎಂದ ಬಿಗ್ ಬಾಸ್ ಶಶಿ!

  |

  ಬಿಗ್ ಬಾಸ್ ವಿನ್ನರ್ ಶಶಿ ನಟಿಸಿರುವ 'ಮೆಹಬೂಬ' ಸಿನಿಮಾ ಸೈಲೆಂಟಾಗಿ ಸದ್ದು ಮಾಡುತ್ತಿದೆ. ಕೆಲವು ದಿನಗಳು ಸದ್ದಿಲ್ಲದೆ ಸೈಲೆಂಟ್ ಆಗಿ ಶಶಿಯ ಸಿನಿಮಾ ಮತ್ತೆ ಸೌಂಡು ಮಾಡುತ್ತಿದೆ. ಮೊನ್ನೆ ತಾನೇ ಇದೇ ಸಿನಿಮಾದ ಹಾಡೊಂದು ರಿಲೀಸ್ ಆಗಿತ್ತು. ಈಗ ಮತ್ತೊಂದು ಹಾಡನ್ನು ಬಿಡುಗಡೆಯಾಗಿದೆ.

  'ಮೆಹಬೂಬ' ಸಿನಿಮಾ ಬಹಳ ದಿನಗಳ ಹಿಂದಷ್ಟೇ ಸೆಟ್ಟೇರಿತ್ತು. ಕೇರಳದಲ್ಲಿ ನಡೆದ ನೈಜ ಘಟನೆಯನ್ನು ಆಧರಿಸಿದ ಈ ಸಿನಿಮಾವನ್ನು ನಿರ್ಮಿಸಲಾಗಿದೆ. ಅಂದ್ಹಾಗೆ ಬೆಂಗಳೂರು ಸುತ್ತಮುತ್ತಲೇ ಈ ಸಿನಿಮಾದ ಬಹುತೇಕ ಶೂಟಿಂಗ್ ಮಾಡಿದ್ದು, ಸಿನಿಮಾ ಮುಕ್ತಾಯದ ಹಂತದಲ್ಲಿದೆ.

  'ಬಿಗ್ ಬಾಸ್' ಶಶಿ ನಾಯಕನಾಗಿ ನಟಿಸಿರುವ 'ಮೆಹಬೂಬ' ಹಾಡುಗಳು ಒಂದೊಂದಾಗೇ ರಿಲೀಸ್ ಆಗುತ್ತಿವೆ. ಸದ್ಯ ವಿ.ರಘುಶಾಸ್ತ್ರಿ ಈ ಸಿನಿಮಾದ 'ಉಸಿರೇ ಉಸಿರೇ.. ಹಾಡುಗೆ ಸಾಹಿತ್ಯ ರಚಿಸಿದ್ದಾರೆ. ಹಾಗೇ 'ಎದೆ ತುಂಬಿ ಹಾಡುವೆನು' ಖ್ಯಾತಿಯ ನದಿರಾ ಭಾನು ಈ ಹಾಡನ್ನು ಇಂಪಾಗಿ ಹಾಡಿದ್ದಾರೆ. ಮ್ಯಾಥ್ಯೂಸ್‌ ಮನು ಸಂಗೀತ ನೀಡಿದ್ದು, ಶಶಿ ಹಾಗೂ ಪಾವನ ಗೌಡ ಈ ಹಾಡಿನಲ್ಲಿ ಕಾಣಿಸಿಕೊಂಡಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  ಸ್ಕಂದ ಎಂಟರ್ ಟೈನ್‌ಮೆಂಟ್‌ನ ಪ್ರಸನ್ನ ಶ್ರೀನಿವಾಸ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕೇರಳದ ನಡೆದ ನೈಜಘಟನೆ ಆಧರಿಸಿರುವ ಈ ಚಿತ್ರವನ್ನು ಅನೂಪ್ ಆಂಟೋನಿ ನಿರ್ದೇಶ ಮಾಡಿದ್ದಾರೆ. ಸದ್ಯ ಬಾಕಿ ಉಳಿದಿದ್ದ 'ಮೆಹಬೂಬ' ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಜೋರಾಗಿ ನಡೆಯುತ್ತಿವೆ.

  'ಮೆಹಬೂಬ' ಸಿನಿಮಾ ಸಂಭಾಷಣೆಯನ್ನು ಸಾಹಿತ್ಯ ರಚಿಸಿರೊ ರಘುಶಾಸ್ತ್ರಿ ಅವರೇ ಬರೆದಿದ್ದಾರೆ. ಕಿರಣ್ ಹಂಪಾಪುರ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಮಾಸ್ ಮಾದ ಸಾಹಸ ನಿರ್ದೇಶನ ಹಾಗೂ ಕಲೈ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

  Bigg Boss Winner Shashi Mehabooba Movie Usire Usire Song Released

  ಶಶಿ ಜೊತೆ ನಾಯಕಿಯಾಗಿ ಪಾವನ ಗೌಡ ನಟಿಸಿದ್ದಾರೆ. ಇವರೊಂದಿಗೆ ಕಬೀರ್ ದುಹಾನ್ ಸಿಂಗ್, ಸಲ್ಮಾನ್ (ಕಿರಿಕ್ ಪಾರ್ಟಿ), ಬುಲೆಟ್ ಪ್ರಕಾಶ್, ಜೈಜಗದೀಶ್, ವಿಜಯಲಕ್ಷ್ಮಿ ಸಿಂಗ್, ಕಲ್ಯಾಣಿರಾಜು, ಸಂದೀಪ್, ಧನರಾಜ್ ಮುಂತಾದವರು ಈ ಚಿತ್ರದಲ್ಲಿದ್ದಾರೆ. ಇತ್ತೀಚೆಗೆ ಇದೇ ಸಿನಿಮಾದ ಸುಮಧುರ ಹಾಡೊಂದು ರಿಲೀಸ್ ಆಗಿತ್ತು. ರಘುಶಾಸ್ತ್ರಿ ಬರೆದಿದ್ದ "ದೇವರು ದೇವರು..." ಎಂಬ ಭಾವೈಕ್ಯತೆ ಸಾರುವ ಹಾಡು ಸಂಗೀತ ಪ್ರಿಯರ ಮನಗೆದ್ದಿದೆ.

  English summary
  Bigg Boss Winner Shashi Mehabooba Movie Usire Usire Song Released, Know More.
  Tuesday, October 18, 2022, 23:50
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X