For Quick Alerts
  ALLOW NOTIFICATIONS  
  For Daily Alerts

  'ಸಲಗ'ನ ಅರಗಿನಿ ಸಂಜನಾ ಆನಂದ್‌ಗೆ 'ಸೂತ್ರಧಾರಿ'ಯಾದ ಚಂದನ್ ಶೆಟ್ಟಿ !

  |

  ಹೊಸ ವರ್ಷ ಬಂತು ಅಂದರೆ, ಎಲ್ಲೆಡೆ ಸಂಭ್ರಮ ಸಡಗರ ಮನೆ ಮಾಡುತ್ತೆ. ಯುವಕರು ಮೋಜು-ಮಸ್ತಿ ಮಾಡುವುದರ ಮೂಡ್‌ನಲ್ಲಿ ಇರುತ್ತಾರೆ. ಇಂತಹ ಯುವಕರಾಗಿ ಚಂದನ್ ಶೆಟ್ಟಿ ಪ್ರತಿ ವರ್ಷ ಹೊಸ ಹಾಡುಗಳನ್ನು ನೀಡುತ್ತಾರೆ.

  ಅದರಲ್ಲೂ ಹೊಸ ವರ್ಷಕ್ಕೆ ಅಂತಾನೇ ಕನ್ನಡ ಗಾಯಕ ಕಮ್ ಸಂಗೀತ ನಿರ್ದೇಶಕ ಚಂದನ್ ಶೆಟ್ಟಿ ಹೆಜ್ಜೆ ಹಾಕುವ ಹಾಡನ್ನು ಕಂಪೋಸ್ ಮಾಡಿ ರಿಲೀಸ್ ಮಾಡುತ್ತಾರೆ. ಪ್ರತಿ ವರ್ಷ ಇಂತಹದ್ದೊಂದು ವಾಡಿಕೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ.

  ಈ ಬಾರಿ ಚಂದನ್ ಶೆಟ್ಟಿ ಬತ್ತಳಿಕೆಯಿಂದ ಹೊಸ ವರ್ಷಕ್ಕಂತಾನೇ ಪಾರ್ಟಿ ಸಾಂಗ್ ಇದೂವರೆಗೂ ರಿಲೀಸ್ ಆಗಿಲ್ಲ. ಹಾಗಂತ ನಿರಾಸೆಯಾಗೋ ಅಗತ್ಯವೇನೂ ಇಲ್ಲ. ಪಾರ್ಟಿ ಸಾಂಗ್ ಇಲ್ಲದೆ ಹೋದರೂ ಹೆಜ್ಜೆ ಹಾಕುವ ಹಾಡೊಂದು ಸಿಗಲಿದೆ.

  ಕನ್ನಡದ ಗಾಯಕ ಚಂದನ್ ಶೆಟ್ಟಿ ಹಾಡುಗಳನ್ನು ಕೇಳದ ಜನರೇ ಇಲ್ಲ. ಪಡ್ಡೆ ಹುಡುಗರು ಹಾಗೂ ಹುಡುಗಿಯರ ಮನಗೆದ್ದ ಚಂದನ್ ಶೆಟ್ಟಿ ಇದೇ ಮೊದಲ ಬಾರಿಗೆ ನಾಯಕ ನಟನಾಗಿ ಅಭಿನಯಿಸಿದ್ದಾರೆ. ನವರಸನ್ ನಿರ್ಮಾಣದ ಮಾಡುತ್ತಿರುವ "ಸೂತ್ರಧಾರಿ" ಸಿನಿಮಾದಲ್ಲಿ ಚಂದನ್ ಶೆಟ್ಟಿ ನಾಯಕನಾಗಿ ನಟಿಸುತ್ತಿದ್ದಾರೆ. ಇದೇ ಸಿನಿಮಾ ಹಾಡು ಬಿಡುಗಡೆಗೆ ಸಜ್ಜಾಗಿದೆ.

  'ಸೂತ್ರಧಾರಿ' ಸಿನಿಮಾ ಈಗಾಗಲೇ ಶೇ.90ರಷ್ಟು ಶೂಟಿಂಗ್ ಮುಗಿದಿದೆ. ಹೀಗಾಗಿ ಚಿತ್ರದ ಮೊದಲ ಹಾಡಿನ ಚಿತ್ರೀಕರಣ ಇನೋವೇಟೀವ್ ಫಿಲ್ಮ್ ಸಿಟಿಯಲ್ಲಿ ಅದ್ದೂರಿಯಾಗಿ ಸೆಟ್ಟೆರಿದೆ. ಇದು 'ಸೂತ್ರಧಾರಿ' ಸಿನಿಮಾದ ಇಂಟ್ರುಡಕ್ಷನ್ ಸಾಂಗ್. ಈ ಹಾಡನ್ನು ಸ್ವತ: ಚಂದನ್ ಶೆಟ್ಟಿ ಕಂಪೋಸ್ ಮಾಡಿ ಹಾಡಿದ್ದಾರೆ.

  Chandan Shetty Movie Sutradhari Song With Sanjana Releasing On Dec 27th

  ಈ ಕಾರಣಕ್ಕೆ ಈ ಹಾಡು ಸಾಕಷ್ಟು ನಿರೀಕ್ಷೆಯನ್ನು ಮೂಡಿಸಿದೆ. ಚಂದನ್ ಶೆಟ್ಟಿ ಹೊಸ ವರ್ಷಕ್ಕೆ ಬಿಡುಗಡೆ ಮಾಡುವ ಪಾರ್ಟಿ ಸಾಂಗ್‌ನಲ್ಲಿ ಕನ್ನಡದ ಸ್ಟಾರ್ ನಟಿ ಇದ್ದೇ ಇರುತ್ತಾರೆ. ಹಾಗೇ ಈ ಬಾರಿ ಕೂಡ ಸಿನಿಮಾ ಸಾಂಗ್ ಆಗಿದ್ದರೂ, ಈ ಹಾಡಿನಲ್ಲಿ ಸಂಜನಾ ಆನಂದ್ ಕಾಣಿಸಿಕೊಂಡಿದ್ದಾರೆ. ಅಂದ್ಹಾಗೆ ಸಂಜನಾ ಆನಂದ್ ಗಾಯಕ ಕಮ್ ನಟ ಚಂದನ್ ಶೆಟ್ಟಿಗೆ ಜೋಡಿಯಾಗಿದ್ದಾರೆ. ಈ ಹಾಡು ಇದೇ ಡಿಸೆಂಬರ್ 27ರಂದು ಬೆಳಗ್ಗೆ 10.35ಕ್ಕೆ ಬಿಡುಗಡೆಯಾಗಲಿದ್ದು, ಹೊಸ ವರ್ಷಕ್ಕೆ ಕಿಕ್ ಕೊಡಲಿದೆ.

  English summary
  Chandan Shetty Movie Sutradhari Song With Sanjana Releasing On Dec 27th, Know More.
  Wednesday, December 21, 2022, 23:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X