For Quick Alerts
  ALLOW NOTIFICATIONS  
  For Daily Alerts

  ಪಡ್ಡೆ ಹುಡುಗರ ಹಾರ್ಟ್‌ಬೀಟ್ ಹೆಚ್ಚಿಸಿದ ಪಾಯಲ್ ರಜಪೂತ್: ಹಬೀಬಿ ಎಂದ ಡಾಲಿ ಧನಂಜಯ್!

  |

  ಡಾಲಿ ಧನಂಜಯ್ ಸ್ಯಾಂಡಲ್‌ವುಡ್‌ನ ಬ್ಯುಸಿ ನಟ. ಕನ್ನಡ ಅಷ್ಟೇ ಅಲ್ಲ. ತೆಲುಗು ಸಿನಿಮಾಗಳಲ್ಲೂ ನಟಿಸುತ್ತಿದ್ದಾರೆ. ಇನ್ನೊಂದು ಕಡೆ ನಟನೆ ಜೊತೆ ಜೊತೆಗೆ ನಿರ್ಮಾಪಕನಾಗಿಯೂ ಬ್ಯುಸಿಯಾಗಿದ್ದಾರೆ.

  ಡಾಲಿ ಧನಂಜಯ್ 'ಹೆಡ್ ಬುಷ್' ಸಿನಿಮಾ ಬಿಡುಗಡೆ ಮಾಡುವುದಕ್ಕೆ ಓಡಾಡುತ್ತಿದ್ದಾರೆ. ಕಳೆದೊಂದು ತಿಂಗಳಿನಿಂದ 'ಹೆಡ್ ಬುಷ್' ಸಿನಿಮಾದ ಪ್ರಚಾರದಲ್ಲಿ ಡಾಲಿ ಅಂಡ್ ಟೀಮ್ ನಿರತವಾಗಿದೆ. ಡಾಲಿಯಂತೂ ಕಳೆದ ಕೆಲವು ದಿನಗಳಿಂದ ರೆಟ್ರೋ ಲುಕ್‌ನಲ್ಲಿ ಜಯರಾಜ್ ಅವತಾರ ತಾಳಿದ್ದಾರೆ.

  ಅಂಬಾಸಿಡರ್ ಕಾರಿಗೆ 'ಹೆಡ್‌ಬುಷ್' ಪೋಸ್ಟರ್ ಅಂಟಿಸಿ ಪ್ರಚಾರಕ್ಕೆ ಬಿಟ್ಟ ಡಾಲಿ: ಎಲ್ಲೆಲ್ಲಿ ಓಡುತ್ತೆ?ಅಂಬಾಸಿಡರ್ ಕಾರಿಗೆ 'ಹೆಡ್‌ಬುಷ್' ಪೋಸ್ಟರ್ ಅಂಟಿಸಿ ಪ್ರಚಾರಕ್ಕೆ ಬಿಟ್ಟ ಡಾಲಿ: ಎಲ್ಲೆಲ್ಲಿ ಓಡುತ್ತೆ?

  'ಹೆಡ್‌ ಬುಷ್' ಈ ತಿಂಗಳು ಬಿಡುಗಡೆಯಾಗುತ್ತಿರುವ ಎಕ್ಸ್‌ಪೆಕ್ಟೆಡ್ ಸಿನಿಮಾಗಳಲ್ಲೊಂದು. ಈಗಾಗಲೇ 'ಬಡವ ರಾಸ್ಕಲ್' ಸಿನಿಮಾ ನಿರ್ಮಾಣ ಮಾಡಿ ಗೆದ್ದಿರೋ ಧನಂಜಯ್ 'ಹೆಡ್‌ಬುಷ್' ಮೂಲಕ ಮತ್ತೊಮ್ಮೆ ನಿರ್ಮಾಣಕ್ಕೆ ಇಳಿದಿದ್ದಾರೆ. ಸದ್ಯ ಇದೇ ಸಿನಿಮಾದ ಹಾಡೊಂದು ರಿಲೀಸ್ ಆಗಿದೆ.

  ಹುಡುಗ ಹಾರ್ಟ್‌ಬೀಟ್ ಹೆಚ್ಚಿಸಿದ ಹಬೀಬಿ

  ಹುಡುಗ ಹಾರ್ಟ್‌ಬೀಟ್ ಹೆಚ್ಚಿಸಿದ ಹಬೀಬಿ

  ಧನಂಜಯ್ ಕನ್ನಡ ಚಿತ್ರರಂಗದಲ್ಲಿ ಕೇವಲ ನಟನೆಯಲ್ಲಷ್ಟೇ ಅಲ್ಲ, ಬರವಣಿಗೆಯಲ್ಲೂ ಗುರುತಿಸಿಕೊಂಡಿದ್ದಾರೆ. ಹೀಗಾಗಿ ನಟ ರಾಕ್ಷಸ ಜೊತೆಗೆ ಪದ ರಾಕ್ಷಸ ಅನ್ನೋ ಬಿರುದೂ ಬಂದಿದೆ. ಸಕಲಕಲಾವಲ್ಲಭ ಧನಂಜಯ್ ನಟಿಸಿ, ನಿರ್ಮಿಸಿರೋ 'ಹೆಡ್ ಬುಷ್' ಸಿನಿಮಾ ತೆರೆಗೆ ಬರಲು ರೆಡಿಯಾಗಿದೆ. ಅದಕ್ಕಾಗಿ ಸಿನಿಮಾ ತಂಡ ಭರ್ಜರಿ ಪ್ರಚಾರ ಮಾಡುತ್ತಿದೆ. ಸದ್ಯ ಇದೇ ಸಿನಿಮಾ ಹಬೀಬಿ ಹಾಡೊಂದನ್ನು ರಿಲೀಸ್ ಮಾಡಿದ್ದು, ಪ್ರೇಕ್ಷಕರು ಹಾಗೂ ಪಡ್ಡೆ ಹುಡುಗರ ಹಾರ್ಡ್ ಬೀಟ್ ಹೆಚ್ಚು ಮಾಡಿದೆ.

  ಪಾಯಲ್ ಹೆಜ್ಜೆ ಹುಡುಗರು ಪಾಗಲ್

  ಪಾಯಲ್ ಹೆಜ್ಜೆ ಹುಡುಗರು ಪಾಗಲ್

  'ಹೆಡ್ ಬುಷ್' ಸಿನಿಮಾದ ಮತ್ತೊಂದು ಹೈಲೈಟ್ ಅಂದರೆ ನಟಿ ಪಾಯಲ್ ರಜಪೂತ್. ತೆಲುಗಿನ 'ಆರ್‌ಎಕ್ಸ್ 100' ಸಿನಿಮಾದಲ್ಲಿ ಬೋಲ್ಡ್ ಅವತಾರವೆತ್ತಿದ್ದ ನಟಿ ಈಗ ಡಾಲಿ ಜೊತೆ ಹಬೀಬಿಯಾಗಿ ಹೆಜ್ಜೆ ಹಾಕಿದ್ದಾರೆ. ಪಂಜಾಬಿ ಬೆಡಗಿ ಪಾಯಲ್ ರಜಪೂತ್ ಮೈಮಾಟಕ್ಕೆ ಹುಡುಗರು ಪಾಗಲ್ ಆಗಿಬಿಟ್ಟಿದ್ದಾರೆ. ಟಾಲಿವುಡ್‌ನಲ್ಲಿ ಬೋಲ್ಡ್ ಲುಕ್‌ನಿಂದ ಹಲ್‌ಚಲ್ ಎಬ್ಬಿಸಿದ್ದ ಪಾಯಲ್ ಈಗ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಟ್ಟಿದ್ದಾರೆ. ಸ್ಯಾಂಡಲ್‌ವುಡ್ ಜೈರಾಜ್ ಜೊತೆ ಮಸ್ ಆಗಿ ಸ್ಟೆಪ್ಸ್ ಹಾಕಿದ್ದಾರೆ.

  ಹಬೀಬಿ ಅಂತ ಬರೆದ ಧನಂಜಯ್

  ಹಬೀಬಿ ಅಂತ ಬರೆದ ಧನಂಜಯ್

  ಡಾಲಿ ಧನಂಜಯ್ 'ಹೆಡ್ ಬುಷ್' ಸಿನಿಮಾದಲ್ಲಿ ಡಾನ್ ಜಯರಾಜ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿಯೇ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಇಷ್ಟು ದಿನ ಖಡಕ್ ಪಾತ್ರದಲ್ಲಿ ರಂಜಿಸಿರೊ ಡಾಲಿ ನಟ ರಾಕ್ಷಸ ಎಂದೇ ಜನಪ್ರಿಯ. ಈಗ ಇದೇ ಸಿನಿಮಾ ಹಬೀಬಿ ಸಾಂಗಿಗೆ ತಾವೇ ಸ್ವತ: ಸಾಹಿತ್ಯ ರಚಿಸಿದ್ದಾರೆ. ಈ ಮೂಲಕ ಅಭಿಮಾನಿಗಳು ಡಾಲಿಗೆ ಪದ ರಾಕ್ಷಸ ಎಂದು ಬಿರುದು ನೀಡಿದ್ದಾರೆ.

  ಅರೇಬಿಕ್ ಕ್ಯಾಬರೇ ಸಾಂಗ್

  ಅರೇಬಿಕ್ ಕ್ಯಾಬರೇ ಸಾಂಗ್

  'ಬಡವರಾಸ್ಕಲ್', 'ಆರ್ಕೆಸ್ಟ್ರಾ' ಸಿನಿಮಾಗಳಿಗೂ ಡಾಲಿ ಧನಂಜಯ್ ಸಾಹಿತ್ಯ ಬರೆದಿದ್ದರು. ಈಗ ಹೆಡ್ ಬುಷ್‌ಗಾಗಿ ಅರೇಬಿಕ್ ಶೈಲಿಯ ಹಾಡಿಗೆ ಸಾಹಿತ್ಯ ಬರೆದಿದ್ದಾರೆ. ಡಾಲಿ ಧನಂಜಯ ಸಾಹಿತ್ಯ. ಚರಣ್ ರಾಜ್ ಸಂಗೀತದ ಅರೇಬಿಕ್ ಶೈಲಿಯ ಕ್ಯಾಬರೇ ಹಾಡು ಮೆಚ್ಚುಗೆ ಗಳಿಸಿದೆ. ಇನ್ನು 'ಹೆಡ್ ಬುಷ್' ಸಿನಿಮಾ ಇದೇ ತಿಂಗಳ 21ಕ್ಕೆ ತೆರೆಗೆ ಬರ್ತಿದ್ದು ಡಾಲಿ ಧನಂಜಯ್ ಜಯರಾಜ್ ಆಗಿ ಪ್ರೇಕ್ಷಕರ ಮುಂದೆ ರೆಟ್ರೋ ಸ್ಟೈಲ್‌ನಲ್ಲಿ ಗ್ರ್ಯಾಂಡ್ ಎಂಟ್ರಿ ಕೊಡುತ್ತಿದ್ದಾರೆ. ಈ ಸಿನಿಮಾಗೆ ಅಗ್ನಿ ಶ್ರೀಧರ್ ಕಥೆ, ಶೂನ್ಯ ನಿರ್ದೇಶನವಿದೆ.

  'ಯಕ್ಷ ಸಿನಿಮಾ ಬಳಿಕ ಸೋತರೆ ಜೀವನ ಹಿಂಗಿರುತ್ತೆ ಅನ್ನೋದು ಗೊತ್ತಾಯ್ತು'- ನಟ ಯೋಗಿ'ಯಕ್ಷ ಸಿನಿಮಾ ಬಳಿಕ ಸೋತರೆ ಜೀವನ ಹಿಂಗಿರುತ್ತೆ ಅನ್ನೋದು ಗೊತ್ತಾಯ್ತು'- ನಟ ಯೋಗಿ

  English summary
  Dhananjay Wrote Habibi Song For Head Bush Payal Rajput is the Dancer, Know More.
  Thursday, October 6, 2022, 19:15
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X