For Quick Alerts
  ALLOW NOTIFICATIONS  
  For Daily Alerts

  'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾಗೆ ಸಾಥ್ ಕೊಟ್ಟ ಸತೀಶ್ ನೀನಾಸಂ!

  |

  ಕನ್ನಡ ಚಿತ್ರರಂಗದ ಇತ್ತೀಚೆಗೆ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ಅದರಲ್ಲೂ ಸಿನಿಮಾದ ಟೈಟಲ್‌ಗಳು ಪ್ರೇಕ್ಷಕರನ್ನು ಸೆಳೆಯುತ್ತಿವೆ. ಇತ್ತೀಚೆಗೆ 'ಧರಣಿ ಮಂಡಲ ಮಧ್ಯದೊಳಗೆ' ಅನ್ನೋ ಅಪ್ಪಟ ಕನ್ನಡ ಚಿತ್ರದ ಶೀರ್ಷಿಕೆ ಸಿನಿಪ್ರಿಯರನ್ನು ಸೆಲೆಯುತ್ತಿದೆ.

  'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ಸದ್ಯ ರಿಲೀಸ್‌ಗೆ ರೆಡಿಯಾಗಿದೆ. ನಿಧಾನವಾಗಿ ಈ ಸಿನಿಮಾ ಪ್ರಚಾರ ಆರಂಭಿಸಿದೆ. ಕ್ರಿಯೇಟಿವ್ ಆಗಿ ಪ್ರಮೋಷನ್ ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದೆ. ಈ ಕಾರಣಕ್ಕೆ ಇತ್ತೀಚೆಗೊಂದು ಹೊಸ ವೀಡಿಯೋ ಸಾಂಗ್ ಅನ್ನು ಬಿಡುಗಡೆ ಮಾಡುವ ಮೂಲಕ ಗಮನ ಸೆಳೆಯುತ್ತಿದೆ.

  ಹೊಚ್ಚ ಹೊಸ ರಿಯಾಲಿಟಿ ಶೋ ನಡೆಸಿಕೊಡಲು ಮುಂದಾದ ಜೀ ಕನ್ನಡ ವಾಹಿನಿಹೊಚ್ಚ ಹೊಸ ರಿಯಾಲಿಟಿ ಶೋ ನಡೆಸಿಕೊಡಲು ಮುಂದಾದ ಜೀ ಕನ್ನಡ ವಾಹಿನಿ

  ಈ ಸಿನಿಮಾ ಹಾಡೊಂದಕ್ಕೆ ಸ್ಯಾಂಡಲ್‌ವುಡ್ ಅಧ್ಯಕ್ಷ ಶರಣ್ ಹಾಗೂ ಸಂಗೀತ ನಿರ್ದೇಶಕ ಹಾಗೂ ಗಾಯಕ ವಾಸುಕಿ ವೈಭವ್ ಹಾಡಿದ್ದಾರೆ. "ವಾಟರ್ ಮೇಲೆ ವಾಕಿಂಗ್ ಹೊಂಟವ್ನೆ.." ಅನ್ನೋ ಪೆಪ್ಪಿ ಸಾಂಗ್ ರಿಲೀಸ್ ಆಗಿದೆ. ವಿಶೇಷ ಅಂದರೆ, ಈ ಸಾಂಗ್ ಅನ್ನು ನಟ ನೀನಾಸಂ ಸತೀಶ್ ರಿಲೀಸ್ ಮಾಡಿದ್ದಾರೆ.

  ಈ ಹಾಡಿನಲ್ಲಿ ಓಂಕಾರ್, ಜಯಶ್ರೀ ಆರಾಧ್ಯ ಸೇರಿದಂತೆ ಸಿದ್ದು ಮೂಲಿಮನಿ ಅಂತಹ ಕಲಾವಿದರು ಕಾಣಿಸಿಕೊಂಡಿದ್ದಾರೆ. ಚಿತ್ರತಂಡದ ಪ್ರಕಾರ ಈ ಹಾಡು ಪಡ್ಡೆ ಹುಡುಗರಿಗೆ ಸಿಕ್ಕಾಪಟ್ಟೆ ಇಷ್ಟ ಆಗುವುದರಲ್ಲಿ ಅನುಮಾನವೇ ಇಲ್ಲ ಎನ್ನುತ್ತಿದೆ. ಫ್ರೆಶ್ ಟ್ಯೂನ್ ಎನಿಸೋ ಈ ಹಾಡು ಹೊಸತನದಿಂದ ಕೂಡಿದೆ.

  ಕೆಲವು ದಿನಗಳ ಹಿಂದೆ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ಹಾಡೊಂದನ್ನು ರಿಲೀಸ್ ಮಾಡಲಾಗಿತ್ತು. ಈ ಹಾಡನ್ನು ವಿಜಯ್ ಪ್ರಕಾಶ್ ಹಾಡಿದ್ದರು. 'ಮಾತು ಮಾತಲ್ಲೇ' ಅನ್ನೋ ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿ ಸಿನಿಪ್ರಿಯರ ಮನಗೆದ್ದಿತ್ತು.

  ಈಗ ಇದೇ ಸಿನಿಮಾದ ಎರಡನೇ ಸಾಂಗ್ ಕೂಡ ರಿಲೀಸ್ ಆಗಿದೆ. ಅಂದ್ಹಾಗೆ 'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾ ವ್ಯಕ್ತಿ, ವ್ಯಕ್ತಿತ್ವ, ಸಂಬಂಧ ಹಾಗೂ ಸಂದರ್ಭಗಳ‌ ಜೊತೆ ನಡೆಯುವ ಸಂಘರ್ಷ. ಕ್ರೈಂ, ಥ್ರಿಲ್ಲರ್, ಡ್ರಾಮಾ ಹೀಗಾಗಿ ಎಲ್ಲಾ ತರಹದ ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟ ಆಗಲಿದೆ. ಪೂರಿ ಜಗನ್ನಾಥ್ ಜೊತೆ ಕೆಲಸ ಮಾಡಿ ಅನುಭವ ಇರುವ ಶ್ರೀಧರ್ ಶಿಕಾರಿಪುರ ಈ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ.

  Dharani Mandala Madhyadolage Kannada Movie Song Released By Ninasam Sathish

  'ಧರಣಿ ಮಂಡಲ ಮಧ್ಯದೊಳಗೆ' ಸಿನಿಮಾದಲ್ಲಿ 'ಗುಳ್ಟು' ಖ್ಯಾತಿಯ ನವೀನ್ ಶಂಕರ್, ಐಶಾನಿ ಶೆಟ್ಟಿ ಲೀಡ್ ರೋಲ್‌ನಲ್ಲಿ ನಟಿಸಿದ್ದು, ಯಶ್ ಶೆಟ್ಟಿ, ಸಿದ್ದು ಮೂಲಿಮನಿ, ಪ್ರಕಾಶ್ ತುಮ್ಮಿನಾಡು, ಓಂಕಾರ್, ನಿತೇಶ್ ಮಹಾನ್, ಜಯಶ್ರೀ ಆರಾಧ್ಯ, ಶಾಂಭವಿ ನಟಿಸಿದ್ದಾರೆ.

  English summary
  Dharani Mandala Madhyadolage Kannada Movie Song Released By Ninasam Sathish, Know More.
  Thursday, October 20, 2022, 23:48
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X