Don't Miss!
- Finance
ಅದಾನಿ ಗ್ರೂಪ್ ಬಿಕ್ಕಟ್ಟಿನ ಮಧ್ಯೆ ಭರವಸೆ ನೀಡಿದ ವಿತ್ತ ಸಚಿವೆ, ಹೇಳಿದ್ದೇನು?
- Lifestyle
ಗಂಡ-ಹೆಂಡತಿ ಜಗಳವಾಡಿದರೆ ಈ ಪ್ರಯೋಜನಗಳೂ ಇವೆ!
- Technology
ಕ್ಯಾನನ್ ಕಂಪೆನಿಯಿಂದ ಹೊಸ ಪ್ರಿಂಟರ್ ಬಿಡುಗಡೆ! ಏನೆಲ್ಲಾ ಸೌಲಭ್ಯವಿದೆ ಗೊತ್ತಾ?
- News
ಪಾಕಿಸ್ತಾನ: ಕರಾಚಿಯ ಮಸೀದಿಯ ಮೇಲೆ ಮತ್ತೊಂದು ದಾಳಿ- ವಿಡಿಯೋ
- Automobiles
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
- Sports
ಸ್ಪಿನ್ನರ್ಗಳ ವಿರುದ್ಧ ಪರದಾಡುವ ಕೊಹ್ಲಿಗೆ ಆಸಿಸ್ ಸರಣಿಗೂ ಮುನ್ನ ಪಠಾಣ್ 'ಆಕ್ರಮಣಕಾರಿ' ಸಲಹೆ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಪೃಥ್ವಿ', 'ಸವಾರಿ' ಅಂತಹ ಸಿನಿಮಾಗಳಿಗೆ ಸಂಗೀತ ನೀಡಿರೋ ಮಣಿಕಾಂತ್ ಕದ್ರಿ ಜರ್ನಿಗೆ 2 ದಶಕ!
ಜಗತ್ತಿನಲ್ಲಿ ಸಂಗೀತವೇ ಇಲ್ಲ ಸಿನಿಮಾ ಬಂದಿದ್ದು ತೀರಾ ಅಂದರೆ ತೀರಾ ವಿರಳ ಇರಬಹುದು. ಒಂದು ಸಿನಿಮಾಗೆ ಸಂಗೀತ ಅನ್ನೋದು ಬೇಕೇ ಬೇಕು. ಅದರಲ್ಲೂ ಕನ್ನಡ ಸಿನಿಮಾಗಳಲ್ಲಿ ಮ್ಯೂಸಿಕ್ ಇಲ್ಲದೆ ಹೋದರೆ, ಅದನ್ನು ಪ್ರೇಕ್ಷಕರೇ ಇಷ್ಟ ಪಡುವುದಿಲ್ಲ. ಹೀಗಾಗಿ ಸಂಗೀತ ನಿರ್ದೇಶಕರಿಗೆ ಸ್ಯಾಂಡಲ್‌ವುಡ್‌ನಲ್ಲಿ ಬೇಡಿಕೆ ಹೆಚ್ಚು.
ಇದೂವರೆಗೂ ಕನ್ನಡ ಸಿನಿಮಾಗಳಲ್ಲಿ ಹಲವು ದಿಗ್ಗಜರು ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಸೂಪರ್ ಹಿಟ್ ಹಾಡುಗಳನ್ನು ನೀಡಿದ್ದಾರೆ. ಇಂತಹ ಸಂಗೀತ ನಿರ್ದೇಶಕರಲ್ಲಿ ಮಣಿಕಾಂತ್ ಕದ್ರಿ ಕೂಡ ಒಬ್ಬರು. ಇವರು ಸಂಗೀತ ಜರ್ನಿ ಆರಂಭಿಸಿ ಈಗ ಬರೋಬ್ಬರಿ 2 ದಶಕಗಳೇ ಆಗಿವೆ.
ಮನಸ್ಸಿಗೆ ಹಿತವೆನಿಸುವ ಹಾಡು, ಮನಸ್ಸಿಗೆ ಮುದ ನೀಡೋ ಸಂಗೀತದ ಮೂಲಕ ಮಣಿಕಾಂತ್ ಕದ್ರಿ ಎಲ್ಲರ ಮನಸ್ಸು ಗೆದ್ದಿದ್ದಾರೆ. ಸದ್ಯ ಇದೇ ಸಂಗೀತ ನಿರ್ದೇಶಕ ಸ್ಯಾಂಡಲ್‌ವುಡ್ ಅಂಗಳದಲ್ಲಿ ಎರಡು ದಶಕಗಳನ್ನು ಪೂರೈಸಿದ್ದಾರೆ.
ಮಣಿಕಾಂತ್ ಕದ್ರಿ ಯಾವುದೇ ಜಾನರ್ ಸಿನಿಮಾಗಳಿಗೆ ಸಂಗೀತ ನೀಡಿದ್ರೂ ಅಲ್ಲೊಂದು ಮ್ಯಾಜಿಕ್ ಇದ್ದೇ ಇರುತ್ತೆ. ಟ್ಯೂನ್ ಹಾಕಿದ ಹಾಡುಗಳು ಸದಾ ಗುನುಗುವಂತೆ ಮಾಡುತ್ತೆ. 'ಪೃಥ್ವಿ', 'ಸವಾರಿ', 'ಸವಾರಿ 2', 'ಮದುವೆ ಮನೆ', 'ನಡುವೆ ಅಂತರವಿರಲಿ', 'ರನ್ ಆಂಟನಿ' ಅಂತಹ ಸಿನಿಮಾಗಳ ಹಾಡುಗಳೇ ಇದಕ್ಕೆ ಸಾಕ್ಷಿ.
ಅಂದ್ಹಾಗೆ ಮಣಿಕಾಂತ್ ಕದ್ರಿ 'ಗಣೇಶ' ಸಿನಿಮಾ ಮೂಲಕ ಚಂದನವನಕ್ಕೆ ಕಾಲಿಟ್ಟಿದ್ದಾರೆ. ಸಂಗೀತ ನಿರ್ದೇಶಕನಾಗಿ ಎಂಟ್ರಿ ಕೊಟ್ಟ ಮಣಿಕಾಂತ್ ಕದ್ರಿ 'ಕ್ರೇಜಿಲೋಕ', 'ಪೃಥ್ವಿ', 'ಸವಾರಿ', 'ಸವಾರಿ 2', 'ರನ್ ಆಂಟನಿ', 'ನಡುವೆ ಅಂತರವಿರಲಿ', 'ಮೂಕಹಕ್ಕಿ', 'ಮಳೆಬಿಲ್ಲೆ', 'ಸ್ವಯಂವರ', 'ಜಾತ್ರೆ', 'ಮಿಸ್ಟರ್ ಗರಗಸ' ಸೇರಿದಂತೆ ಹಲವು ಸಿನಿಮಾಗಳಿಗೆ ಟ್ಯೂನ್ ಹಾಕಿದ್ದಾರೆ.
ಕನ್ನಡ ಸಿನಿಮಾಗಳಂತೆ ತುಳು ಚಿತ್ರರಂಗಕ್ಕೂ ಇವರ ಕೊಡುಗೆ ದೊಡ್ಡದಿದೆ. ಹದಿನೈದಕ್ಕೂ ಹೆಚ್ಚು ತುಳು ಸಿನಿಮಾಗಳಿಗೆ ಮಣಿಕಾಂತ್ ಕದ್ರಿ ಸಂಗೀತ ನೀಡಿದ್ದಾರೆ. ಹೀಗೆ ಇಪತ್ತು ವರ್ಷಗಳಲ್ಲಿ ಸುಮಾರು ಎಪ್ಪತ್ತಕ್ಕೂ ಅಧಿಕ ಸಿನಿಮಾಗಳಿಗೆ ಮಣಿಕಾಂತ್ ಕದ್ರಿ ಸಂಗೀತವಿದೆ.

ಸದ್ಯ ಡಾರ್ಲಿಂಗ್ ಕೃಷ್ಣ ಅಭಿನಯದ 'ಮಿಸ್ಟರ್ ಬ್ಯಾಚುಲರ್' ಸಿನಿಮಾ ಬಿಡುಗಡೆಯಾಗಬೇಕಿದೆ. ಹಾಗೇ ಬಿ.ಎಸ್.ಲಿಂಗದೇವರು ನಿರ್ದೇಶನದ 'ವಿರಾಟಪುರ ವೈರಾಗಿ', ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ 'ಬಿರ್ದುದ ಕಂಬಳ', ಗುರುದೇಶಪಾಂಡೆ ನಿರ್ಮಾಣದ 'ಪೆಂಟಗಾನ್' ಜೊತೆಗೆ ಕನ್ನಡ ಹಾಗೂ ತೆಲುಗಿನಲ್ಲಿ ನಿರ್ಮಾಣವಾಗಿರೋ 'ಲೈನ್ ಮ್ಯಾನ್' ಚಿತ್ರಗಳು ರಿಲೀಸ್‌ಗೆ ತುದಿಗಾಲಲ್ಲಿ ನಿಂತಿವೆ.
ಮಣಿಕಾಂತ್ ಕದ್ರಿ ಸಮಾಜಮುಖಿ ಕೆಲಸಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ತಂದೆ ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಹೆಸರಲ್ಲಿ ಟ್ರಸ್ಟ್ ತೆರೆದಿದ್ದಾರೆ. ಈ ಮೂಲಕ ಯುವ ಕಲಾವಿದರಿಗೆ ವೇದಿಕೆ ಮಾಡಿಕೊಟ್ಟಿದ್ದಾರೆ. ಈ ಮೂಲಕ ನಶಿಸಿ ಹೋಗುತ್ತಿರುವ ಜಾನಪದ ಹಾಡುಗಳನ್ನು ಉಳಿಸಿಕೊಳ್ಳುವ ಕೆಲಸವನ್ನು ಈ ಟ್ರಸ್ಟ್ ಮೂಲಕ ಮಾಡುತ್ತಿದ್ದಾರೆ.