For Quick Alerts
  ALLOW NOTIFICATIONS  
  For Daily Alerts

  ದುಬೈನಲ್ಲಿ ಹಾಡುತ್ತಿದ್ದಾಗ ಗಾಯಕಿ ಚಿತ್ರಾ ಬದುಕಿಗೆ ಸಿಡಿಲಿನಂತೆ ಅಪ್ಪಳಿಸಿತ್ತು ಆ ಆಘಾತಕಾರಿ ಸುದ್ದಿ...

  |

  ತಮ್ಮ ಸುಮಧುರ ಕಂಠದಿಂದ ಮನೆಮಾತಾದವರು ಗಾಯಕಿ ಕೆ.ಎಸ್. ಚಿತ್ರಾ. ಎಂತಹ ಕ್ಲಿಷ್ಟಕರ ಹಾಡನ್ನೂ ಲೀಲಾಜಾಲವಾಗಿ ಹಾಡುವಷ್ಟು ಸಂಗೀತ ಶಕ್ತಿ ಅವರಿಗೆ ಒಲಿದಿದೆ. ಕೇರಳದಲ್ಲಿ ಹುಟ್ಟಿದ ಅವರು ಅನೇಕ ಭಾಷೆಗಳಲ್ಲಿ ಹಾಡಿದ್ದರೂ ಕನ್ನಡಿಗರ ಪಾಲಿಗೆ ಅವರು 'ಕನ್ನಡದ ಕೋಗಿಲೆ'. ಅವರ ಕಂಠ, ಕನ್ನಡ ಉಚ್ಚಾರಣೆ ಅವರು ಕನ್ನಡದವರೇ ಎನ್ನುವಷ್ಟು ಅವರನ್ನು ಜನರಿಗೆ ಹತ್ತಿರವಾಗಿಸಿದೆ.

  S P B ಹಾಡಿದ ಕೊರೊನ ಹಾಡು ಕೇಳಿದ್ರೆ ನೀವು ಅಳೋದು ಪಕ್ಕಾ | Filmibeat Kannada

  1986ರಿಂದ ಕನ್ನಡದಲ್ಲಿ ಹಾಡುತ್ತಿರುವ ಅವರು ನೂರಾರು ಹಾಡುಗಳನ್ನು ಹಾಡಿದ್ದಾರೆ. ಕನ್ನಡ, ಮಲಯಾಳಂ, ತೆಲುಗು, ತಮಿಳು, ಹಿಂದಿ ಸೇರಿದಂತೆ 1979ರಿಂದ ಇಲ್ಲಿಯವರೆಗೆ ವಿವಿಧ ಭಾಷೆಗಳಲ್ಲಿ 25,000ಕ್ಕೂ ಹೆಚ್ಚು ಹಾಡುಗಳಿಗೆ ದನಿಯಾಗಿದ್ದಾರೆ. ಆದರೆ ಅವರ ವೈಯಕ್ತಿಕ ಬದುಕು ಅವರ ಸಂಗೀತದಷ್ಟೇ ನಾದಮಯವಾಗಿಲ್ಲ. ಎಲ್ಲವೂ ಚೆನ್ನಾಗಿದೆ ಎಂದು ಖುಷಿಯಾಗಿ ಇದ್ದಾಗಲೇ ಅವರ ಜೀವನದಲ್ಲಿ ದುರಂತವೊಂದು ಸಂಭವಿಸಿತ್ತು. ಮುಂದೆ ಓದಿ...

  ಬಾಡಿಗೆ ಜೋಪಡಿಯಿಂದ ಬೃಹತ್ ಬಂಗ್ಲೆ: ಖ್ಯಾತ ಗಾಯಕಿಯ ಸ್ಪೂರ್ತಿದಾಯಕ ಜರ್ನಿಬಾಡಿಗೆ ಜೋಪಡಿಯಿಂದ ಬೃಹತ್ ಬಂಗ್ಲೆ: ಖ್ಯಾತ ಗಾಯಕಿಯ ಸ್ಪೂರ್ತಿದಾಯಕ ಜರ್ನಿ

  ಭಾವುಕ ಬರಹ ಹಂಚಿಕೊಂಡ ಚಿತ್ರಾ

  ಭಾವುಕ ಬರಹ ಹಂಚಿಕೊಂಡ ಚಿತ್ರಾ

  ಇತ್ತೀಚೆಗೆ ಫೇಸ್‌ಬುಕ್‌ನ ತಮ್ಮ ಪುಟದಲ್ಲಿ ಚಿತ್ರಾ, ಮಗಳ ಫೋಟೊವನ್ನು ಹಾಕಿಕೊಂಡು ಭಾವುಕ ಮಾತುಗಳನ್ನು ಹಂಚಿಕೊಂಡಿದ್ದರು. ಸದಾ ನಗುಮೊಗದ, ಅಚ್ಚುಮೆಚ್ಚಿನ ಗಾಯಕಿಯ ಬದುಕಿನಲ್ಲಿ ಇಂತಹದ್ದೊಂದು ಕಹಿ ಘಟನೆ ನಡೆದಿತ್ತು ಎನ್ನುವುದು ಹೆಚ್ಚಿನವರಿಗೆ ಗೊತ್ತಿರಲಿಲ್ಲ. ಚಿತ್ರಾ ಅವರ ಬರಹ ಓದಿದವರನ್ನೂ ಭಾವುಕರನ್ನಾಗಿಸಿದೆ.

  ಆ ಪುಟಾಣಿ ಇಂದು ಇದ್ದಿದ್ದರೆ...

  ಆ ಪುಟಾಣಿ ಇಂದು ಇದ್ದಿದ್ದರೆ...

  ಚಿತ್ರಾ ಅವರು ತಮ್ಮ ಮಗಳನ್ನು ಚಿಕ್ಕ ವಯಸ್ಸಿನಲ್ಲಿಯೇ ಕಳೆದುಕೊಂಡಿದ್ದರು. ಮಗಳು ನಂದನಾ ಅವರನ್ನು ಅಗಲಿದಾಗ ಆ ಪುಟಾಣಿಗೆ ಕೇವಲ 9 ವರ್ಷ. ಪುಟ್ಟ ಹೆಜ್ಜೆಗಳನ್ನು ಇರಿಸುತ್ತಾ ಮನೆಯ ತುಂಬಾ ನಲಿದಾಡಿಕೊಂಡಿದ್ದ ನಂದನಾರನ್ನು ತನ್ನಂತೆಯೇ ಬೆಳೆಸುವ ಆಸೆ ಹೊಂದಿದ್ದರು. ಸಂಗೀತಗಾರರ ಕುಟುಂಬದಲ್ಲಿ ಜನಿಸಿದ್ದ ಚಿತ್ರಾ ಅವರ ಮಗಳು ಬದುಕಿದ್ದರೆ, ಮತ್ತೊಬ್ಬ ಗಾಯಕಿ ಸಂಗೀತ ಲೋಕಕ್ಕೆ ಸಿಗುತ್ತಿದ್ದರು. ಆದರೆ ವಿಧಿ ಬರಹ ಬೇರೆಯೇ ಇತ್ತು.

  ದುಬಾರಿಯಾದರು ಗಾಯಕ ಸಿದ್ ಶ್ರೀರಾಮ್: ಒಂದು ಹಾಡಿಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು?ದುಬಾರಿಯಾದರು ಗಾಯಕ ಸಿದ್ ಶ್ರೀರಾಮ್: ಒಂದು ಹಾಡಿಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು?

  ದುಬೈನಲ್ಲಿದ್ದಾಗ ಎರಗಿದ ಸುದ್ದಿ

  ದುಬೈನಲ್ಲಿದ್ದಾಗ ಎರಗಿದ ಸುದ್ದಿ

  ಈ ಕಹಿ ಘಟನೆ ನಡೆದು ಒಂಬತ್ತು ವರ್ಷಗಳೇ ಕಳೆದಿದೆ. 2011ರ ಏಪ್ರಿಲ್ 14ರಂದು ದುಬೈನಲ್ಲಿ ನಡೆಯುತ್ತಿದ್ದ ಎ.ಆರ್. ರೆಹಮಾನ್ ಸಂಗೀತ ಕಾರ್ಯಕ್ರಮದಲ್ಲಿ ಚಿತ್ರಾ ಭಾಗವಹಿಸಿದ್ದರು. ಅಲ್ಲಿ ಹಾಡುತ್ತಾ ಸಭಿಕರನ್ನು ರಂಜಿಸುತ್ತಿರುವಾಗ ಊರಲ್ಲಿ ಮಗಳು ನಂದನಾ ಆಕಸ್ಮಿಕವಾಗಿ ಈಜುಕೊಳದಲ್ಲಿ ಬಿದ್ದು ಮುಳುಗಿ ಮೃತಪಟ್ಟ ಘಟನೆ ಬರಸಿಡಿಲಿನಂತೆ ಅಪ್ಪಳಿಸಿತ್ತು.

  ಹೃದಯಸ್ಪರ್ಶಿ ಬರಹ

  ಹೃದಯಸ್ಪರ್ಶಿ ಬರಹ

  ಏಪ್ರಿಲ್ 14ರಂದು ಮಗಳ ಪುಣ್ಯಸ್ಮರಣೆಯ ದಿನದಂದು ಚಿತ್ರಾ ಅವರನ್ನು ನೆನೆದು ಭಾವುಕರಾಗಿದ್ದಾರೆ. ಎಂತಹವರ ಕಣ್ಣಲ್ಲೂ ನೀರು ತರಿಸುವಂತಹ ಹೃದಯಸ್ಪರ್ಶಿ ಬರಹವೊಂದನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಈಗ ತಮ್ಮ ಎದೆಯತ್ತರಕ್ಕೆ ಬೆಳೆದು ನಿಲ್ಲಬೇಕಿದ್ದ ಮಗಳು ತನ್ನೊಂದಿಗಿಲ್ಲ ಎಂಬ ಅವರ ನೋವು ಹೇಗಿರಬಹುದು ಎನ್ನುವುದನ್ನು ಆ ಬರಹ ವಿಷಾದದ ಭಾವನೆಯೊಂದಿಗೆ ವಿವರಿಸುತ್ತದೆ.

  ಕನ್ನಡ ಗಾಯಕಿ ಅನನ್ಯ ಭಟ್ ಹಾಡು ಕೇಳಿ ಕಣ್ಣೀರು ಹಾಕಿದ ಸದ್ಗುರುಕನ್ನಡ ಗಾಯಕಿ ಅನನ್ಯ ಭಟ್ ಹಾಡು ಕೇಳಿ ಕಣ್ಣೀರು ಹಾಕಿದ ಸದ್ಗುರು

  ಆ ಮಾತು ಸತ್ಯವಲ್ಲ....

  ಆ ಮಾತು ಸತ್ಯವಲ್ಲ....

  'ಪ್ರತಿಯೊಂದು ಜನನಕ್ಕೂ ಒಂದು ಉದ್ದೇಶವಿರುತ್ತದೆ ಮತ್ತು ಆ ಉದ್ದೇಶ ಪೂರ್ಣಗೊಂಡ ಬಳಿಕ ಅವರು ಶಾಶ್ವತವಾದ ಜಗತ್ತಿಗೆ ಹೊರಡುತ್ತಾರೆ ಎಂದು ಜನರು ಹೇಳುವುದನ್ನು ನಾನು ಕೇಳಿದ್ದೇನೆ. ಹಾಗೆಯೇ ಕಾಲವೇ ಎಲ್ಲವನ್ನೂ ಗುಣಪಡಿಸುತ್ತದೆ ಎಂದು ಸಹ ಹೇಳುತ್ತಾರೆ. ಆದರೆ ಅಂತಹ ಸನ್ನಿವೇಶದಲ್ಲಿ ಸಾಗಿರುವ ಜನರಿಗೆ ಗೊತ್ತು ಅದು ಸತ್ಯವಲ್ಲ ಎಂದು. ಅದರ ನೋವು ಈಗಲೂ ಹಸಿಯಾಗಿದೆ ಮತ್ತು ಅತೀವ ನೋವು ನೀಡುತ್ತಿದೆ. ಮಿಸ್ ಯೂ ನಂದನಾ' ಎಂದು ಭಾವುಕವಾಗಿ ಬರೆದಿದ್ದಾರೆ.

  ಸ್ವರ್ಗದಿಂದ ಬಂದ ದೇವತೆ

  ಸ್ವರ್ಗದಿಂದ ಬಂದ ದೇವತೆ

  ಕಳೆದ ವರ್ಷದ ಡಿಸೆಂಬರ್ 18ರಂದು ಕೂಡ ಚಿತ್ರಾ, ಮಗಳನ್ನು ನೆನಪಿಸಿಕೊಂಡು ಫೇಸ್‌ಬುಕ್‌ನಲ್ಲಿ ಬರೆದಿದ್ದರು. ಅಂದು ನಂದನಾ ಹುಟ್ಟಿದ ದಿನ (2002ರ ಡಿ. 18). 'ಸ್ವರ್ಗದಿಂದ ಬಂದ ದೇವತೆಯೊಬ್ಬಳು ನಮ್ಮ ಬದುಕನ್ನು ಕನಸೋ ಎಂಬಂತೆ ಬದಲಿಸಿದಳು. ನೀನೊಂದು ನಿಧಿ. ನಮ್ಮ ಬದುಕಿನಲ್ಲಿ ನಡೆದ ಅತ್ಯುತ್ತಮ ಸಂಗತಿ. ಹ್ಯಾಪಿ ಬರ್ಥಡೇ ಪ್ರೀತಿಯ ನಂದನಾ' ಎಂದು ಹೇಳಿದ್ದರು.

  English summary
  Singer KS Chithra has penned an emotional note on her social media page remembering her late daughter Nandana.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X