ವಿಜಯ್ ಪ್ರಕಾಶ್ ಹಾಡಿರುವ ಹೊಸ ಹಾಡು ಕೇಳಿದ್ರಾ.?
ಕನ್ನಡ ಚಿತ್ರರಂಗದಲ್ಲಿ ಸದ್ಯ ವಿಜಯ್ ಪ್ರಕಾಶ್ ಅವರ ಪರ್ವ ಕಾಲ. ವಿಜಯ್ ಪ್ರಕಾಶ್ ಒಂದು ಹಾಡು ಹಾಡಿದ್ರೆ ಆ ಸಾಂಗ್ ಸೂಪರ್ ಹಿಟ್ ಆಗುತ್ತೆ ಎನ್ನುವುದು ಗಾಂಧಿನಗರದ ಟ್ರೆಂಡ್ ಆಗಿದೆ. ಅದಕ್ಕಾಗಿಯೇ ಪ್ರತಿಯೊಂದು ಚಿತ್ರದಲ್ಲೂ ವಿಜಯ್ ಪ್ರಕಾಶ್ ಅವರಿಗಾಗಿಯೇ ಒಂದು ಹಾಡು ಮೀಸಲಾಗಿರುತ್ತಿದೆ.['ದಾದಾ ಈಸ್ ಬ್ಯಾಕ್' ಟ್ರೈಲರ್ ಬಿಡುಗಡೆ ಮಾಡಿದ ಸುದೀಪ್]
ವಿಜಯ್ ಪ್ರಕಾಶ್ ಅವರು ಕುಡುಕರ ಹಾಡಿಗೆ ಫೇಮಸ್ ಎನ್ನುತ್ತಿದ್ದ ಸ್ಯಾಂಡಲ್ ವುಡ್, ಈಗ ಬೇರೆ ಬೇರೆ ರೀತಿಯ ಹಾಡುಗಳನ್ನ ಅವರಿಂದ ಹಾಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ವಿಜಯ್ ಪ್ರಕಾಶ್ ಅವರು ಧ್ವನಿಯಲ್ಲಿ ಮೂಡಿದ್ದ 'ಬೊಂಬೆ ಹೇಳುತೈತೆ' ಹಾಡು ಯ್ಯೂಟ್ಯೂಬ್ ನಲ್ಲಿ 2 ಕೋಟಿ ವೀಕ್ಷಕರನ್ನ ಪಡೆದುಕೊಂಡಿತ್ತು. ಹೀಗಿರುವಾಗ ವಿಜಯ್ ಅವರ ವಾಯ್ಸ್ ನಲ್ಲಿ ಮತ್ತೊಂದು ಹೊಸ ಹಾಡು ಮೂಡಿ ಬಂದಿದೆ.[ಗಾಯಕ ವಿಜಯ್ ಪ್ರಕಾಶ್ ರವರ ಕೇಳರಿಯದ ಕಣ್ಣೀರ ಕಥೆ]

'ಬೊಂಬೆಗಳ ಲವ್' ಖ್ಯಾತಿಯ ಅರುಣ್, ತಮಿಳು ನಟ ಪಾರ್ಥಿಭನ್ ನಟಿಸಿರುವ 'ದಾದಾ ಈಸ್ ಬ್ಯಾಕ್' ಚಿತ್ರದ ಸೆಂಟಿಮೆಂಟ್ ಹಾಡೊಂದಕ್ಕೆ ವಿಜಯ್ ಪ್ರಕಾಶ್ ದ್ವನಿಯಾಗಿದ್ದಾರೆ. ''ಈ ಭೂಮಿ ಮೇಲೆ ಇಲ್ಲ ನೀನು ಭಗವಂತ......'' ಎಂಬ ಅದ್ಭುತ ಸಾಲುಗಳನ್ನ ವಿ.ಮನೋಹರ್ ಅವರು ಬರೆದಿದ್ದು, ಈ ಹಾಡಿಗೆ ಅನೂಪ್ ಸೀಳಿನ್ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಮೇಕಿಂಗ್ ವಿಡಿಯೋ ಈಗ ಬಿಡುಗಡೆಯಾಗಿದ್ದು, ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 'ದಾದಾ ಈಸ್ ಬ್ಯಾಕ್' ಚಿತ್ರದಲ್ಲಿ ವಿಜಯ್ ಪ್ರಕಾಶ್ ಅವರು ಹಾಡಿರುವ ಹಾಡು ಇಲ್ಲಿದೆ ನೋಡಿ....


Click it and Unblock the Notifications











