»   » 'ಗ್ಯಾಂಗ್ ಸ್ಟಾ': ಕನ್ನಡದಲ್ಲಿ ಮತ್ತೊಂದು ರ್ಯಾಪ್ ಸಾಂಗ್

'ಗ್ಯಾಂಗ್ ಸ್ಟಾ': ಕನ್ನಡದಲ್ಲಿ ಮತ್ತೊಂದು ರ್ಯಾಪ್ ಸಾಂಗ್

Posted By:
Subscribe to Filmibeat Kannada

ಸಂಗೀತ ಪ್ರೇಮಿಗಳು ಆಗಾಗ ಇಂಗ್ಲೀಷ್ ರ್ಯಾಪ್ ಹಾಡುಗಳನ್ನು ಕೇಳಿದಾಗ ಮತ್ತು ನೋಡಿದಾಗ, ನಮ್ಮ ಕನ್ನಡದಲ್ಲೂ ರ್ಯಾಪ್ ಸಾಂಗ್ ಇದ್ದಿದ್ರೆ ಎಷ್ಟೊಂದು ಚೆನ್ನಾಗಿರೋದು ಅಲ್ವಾ? ಅನ್ನೋ ಪ್ರಶ್ನೆ ಹಾಕಿಕೊಳ್ಳುತ್ತಿದ್ದರು. ಆದ್ರೆ ಈಗ ಸಾಲು ಸಾಲಾಗಿ ಕನ್ನಡದಲ್ಲಿ ರ್ಯಾಪ್ ಸಾಂಗ್ ಗಳು ರಿಲೀಸ್ ಆಗುತ್ತಿವೆ.[ಚಂದನ್ ಶೆಟ್ಟಿಯ 'ಚಾಕೋಲೇಟ್ ಗರ್ಲ್' ನೇಹಾ ಶೆಟ್ಟಿ]

ಕನ್ನಡ ರ್ಯಾಪರ್ ಚಂದನ್ ಶೆಟ್ಟಿ '3 ಪೆಗ್' ಹಾಡು ಯುವ ಮನಸ್ಸುಗಳಲ್ಲಿ ಸಂಗೀತದ ಬಗ್ಗೆ ಹೊಸ ಸಂಚಲನ ಉಂಟುಮಾಡಿದೆ, ಈಗ ಕನ್ನಡದಲ್ಲಿ ರ್ಯಾಪ್ ಸಾಂಗ್ ಗಳು ಹೆಚ್ಚು ನಿರ್ಮಾಣ ಆಗುತ್ತಿದ್ದು, ಮೊನ್ನೆಯಷ್ಟೇ ಒಂದು ಕನ್ನಡ ರ್ಯಾಪ್ ಹಾಡು ಯೂಟ್ಯೂಬ್ ನಲ್ಲಿ ಬಿಡುಗಡೆ ಆಗಿದೆ.

Watch Kannada Rap Song 'Gangstaa' by Rapper BG Mandy and Sleek Dawg

ಅಂದಹಾಗೆ ಈ ಹಿಂದೆ ಇಂಗ್ಲೀಷ್ ರ್ಯಾಪ್ ಸಾಂಗ್ ನಿರ್ಮಾಣದಲ್ಲಿ ತೊಡಗಿಕೊಂಡಿದ್ದ ಬಿ.ಜಿ ಮ್ಯಾಂಡಿ ಮತ್ತು ಅವರ ಟೀಮ್ ಕನ್ನಡದಲ್ಲಿ 'ಗ್ಯಾಂಗ್ ಸ್ಟಾ' ಎಂಬ ಹೊಸ ರ್ಯಾಪ್ ಹಾಡನ್ನು ಬಿಡುಗಡೆ ಮಾಡಿದೆ. ಈ ಹಾಡನ್ನು ಸಂಯುಕ್ತ ಪ್ರೊಡಕ್ಷನ್ ಅಡಿಯಲ್ಲಿ ಶಿವ ಪ್ರಕಾಶ್, ಜಗದೀಶ್ ರಾಜ್ ಮತ್ತು ಚೇತನ್ ಗೋಪಲಾ ಕೃಷ್ಣ ನಿರ್ಮಾಣ ಮಾಡಿದ್ದಾರೆ.[ವಿಡಿಯೋ: ಕನ್ನಡದ ರ‍್ಯಾಪ್ ಕಿಂಗ್ ಜೊತೆ ಐಂದ್ರಿತಾ 'ಸೌಂದರ್ಯ ಸಮರ']

'ಗ್ಯಾಂಗ್ ಸ್ಟಾ' ಕನ್ನಡ ರ್ಯಾಪ್ ಹಾಡು ಸಂಪೂರ್ಣ ಕನ್ನಡ, ಕನ್ನಡ ಜನರು ಮತ್ತು ಕಲೆಯ ಬಗ್ಗೆ ಸಾಹಿತ್ಯ ಹೊಂದಿದ್ದು, Sleek Dawg ಸಾಹಿತ್ಯ ಬರೆದಿದ್ದಾರೆ. ಬಿ.ಜಿ ಮ್ಯಾಂಡಿ ಸಂಗೀತ ಸಂಯೋಜನೆ ನೀಡಿದ್ದು, ಪ್ರಮೋದ್ ಜೊಯಿಸ್ ಛಾಯಾಗ್ರಹಣ ನಿರ್ವಹಣೆ ಮಾಡಿದ್ದಾರೆ. 'ಗ್ಯಾಂಗ್ ಸ್ಟಾ' ಕನ್ನಡ ರ್ಯಾಪ್ ಎಚ್ ಡಿ ವಿಡಿಯೋ ಹಾಡನ್ನು ನೋಡಲು.. ಕ್ಲಿಕ್ ಮಾಡಿ.

English summary
Rapper BG Mandy and Sleek Dawg were recently released their 'Gangstaa' HD rap Song.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada