For Quick Alerts
  ALLOW NOTIFICATIONS  
  For Daily Alerts

  'ಬನಾರಸ್‌' ಬಿಡುಗಡೆಯ ಬಳಿಕವೂ ನಿಲ್ಲದ ಬೆಳಕಿನ ಕವಿತೆ ಹಾಡಿನ ಕ್ರೇಜ್!

  |

  ಜಯತೀರ್ಥ ನಿರ್ದೇಶನದ ಬನಾರಸ್ ಸಿನಿಮಾ ಪಂಚಭಾಷೆಗಳಲ್ಲೂ ತೆರೆಕಂಡು ಉತ್ತಮ ಪ್ರದರ್ಶನವನ್ನು ಕಾಣ್ತಿದೆ. ಎಲ್ಲ ಅಡೆ ತಡೆಗಳನ್ನೂ ಮೀರಿ, ನೀರಿಕ್ಷೆಯಂತೆ ಕರ್ನಾಟಕವೂ ಸೇರಿದಂತೆ ಎಲ್ಲ ರಾಜ್ಯದ ಪ್ರೇಕ್ಷಕ ವರ್ಗಗಳಲ್ಲೂ ಮೆಚ್ಚುಗೆ ಪಡೆದು ಗಟ್ಟಿಯಾಗಿ ಕಾಲೂರಿ ನಿಂತಿದೆ.

  ಝೈದ್ ಖಾನ್ ಹಾಗೂ ಸೋನಲ್ ಮೊಂತೆರೋ ಜೋಡಿ ಚಿತ್ರ ನೋಡಿದವರನ್ನು ಮೋಡಿ ಮಾಡಿದೆ. ಇಂಥಹದ್ದೊಂದು ರೋಮಾಂಚಕ ಗೆಲುವಿನ ಪ್ರಭೆಯಲ್ಲಿ ಮಿಂದೇಳುತ್ತಿರುವ ಬನಾರಸ್‌ಗೆ ಸಿನಿಮಾ ಗೆಲುವಿನೊಂದಿಗೆ ಹಾಡಿನ ಗೆಲುವು ಸಂಭ್ರಮಕ್ಕೆ ಸೇರಿಕೊಂಡಿದೆ.

  Exclusive: ಲೆಜೆಂಡ್ ಮಗನ ಜೊತೆ ಸಪ್ತಮಿ ಗೌಡ ಡ್ಯೂಯೆಟ್: ಇಷ್ಟಕ್ಕೆಲ್ಲಾ ಕಾರಣ 'ಕಾಂತಾರ' ಸಕ್ಸಸ್!Exclusive: ಲೆಜೆಂಡ್ ಮಗನ ಜೊತೆ ಸಪ್ತಮಿ ಗೌಡ ಡ್ಯೂಯೆಟ್: ಇಷ್ಟಕ್ಕೆಲ್ಲಾ ಕಾರಣ 'ಕಾಂತಾರ' ಸಕ್ಸಸ್!

  ಹೌದು, ಚಿತ್ರ ರಿಲೀಸ್‌ಗೂ ಮೊದಲು ಮೊಷನ್ ಪೋಸ್ಟರ್, ಟ್ರೈಲರ್, ಹಾಡುಗಳ ಮೂಲಕವೇ ದಾಖಲೆ ಬರೆದಿದ್ದ ಬನಾರಸ್, ಸಂಗೀತ ಪ್ರೇಮಿಗಳಿಗೆ ಹೆಚ್ಚು ಆತ್ಮೀಯವೆನಿಸಿದ್ದು ನಿಜ. ಈ ಮೂಲಕ ಸಿನೆಮಾ ಗೆಲುವಿಗೂ ಮೊದಲೇ ಗೆದ್ದಿತ್ತು. ಒಂದರ ಹಿಂದೊಂದು ರಿಲೀಸ್ ಆಗಿ ಪುಳಕಿತಗೊಳಿಸಿದ್ದದ್ದು ಈ ಸಿನಿಮಾದ ಮೋಹಕ ಹಾಡುಗಳೇ.

  ಚಿತ್ರದ ರಿಲೀಸ್‌ಗೂ ಮೊದಲೇ ಸಿನಿಪ್ರಿಯರನ್ನು ಭೇಟಿಯಾಗೋ ಹಾಡುಗಳು ಗೆದ್ದರೆ ಸಿನಿಮಾವೂ ಗೆಲ್ಲುತ್ತೆ ಅನ್ನೋದು ಸಿನಿಮಾ ರಂಗದ ಹಳೇ ಫಾರ್ಮುಲಾ. ಆದರೆ, ಅದು ಕಾಲಕಾಲಕ್ಕೆ ನಿಜವಾಗುತ್ತಾ, ಕೆಲವೊಮ್ಮೆ ಮತ್ತಷ್ಟು ಭರವಸೆಯನ್ನುಮೂಡಿಸುತ್ತ ನಡೆದುಬಂದಿದೆ. ಹೀಗಿರುವಾಗ ಸಂಗೀತ ನಿರ್ದೇಶಕ ಬಿ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಯಲ್ಲಿ ತೇಲಿ ಬಂದ ಅದ್ಭುತ ಹಾಡುಗಳು ಮೋಡಿ ಮಾಡಿದ್ದವು. ಈ ಮೂಲಕ ಹಾಡುಗಳಿಂದಲೇ ಗೆಲುವು ದಾಖಲಿಸಿದ ಚಿತ್ರಗಳ ಸಾಲಿನಲ್ಲಿ ಬನಾರಸ್ ಕೂಡಾ ತನ್ನದೇ ಆದ ಸ್ಥಾನ ಗಿಟ್ಟಿಸಿಕೊಂಡಿದೆ.

  ಮೊದಲು ಮಾಯಗಂಗೆ ಹಾಡು ತನ್ನದೇ ಮತ್ತಿನಲ್ಲಿ ತೇಲುವಂತೆ ಮಾಡಿ, ತನ್ನದೇ ಟ್ರೆಂಡ್ ಸೆಟ್ ಮಾಡಿತ್ತು. ಈ ಹಾಡಿನ್ನೂ ಟ್ರೆಂಡಿಂಗ್ ನಲ್ಲಿದ್ದು, ಚಿತ್ರ ರಿಲೀಸ್‌ಗೆ ಡೇ ಕೌಂಟ್ ಆರಂಭವಾದ ಹೊತ್ತಲ್ಲೇ, ಬೆಳಕಿನ ಕವಿತೆ ಎಂಬ ಹಾಡು ತೆರೆಕಂಡು ಮತ್ತಷ್ಟು ಕ್ರೇಜ್ ಹುಟ್ಟುಹಾಕಿದ್ದು ಗೊತ್ತಿರೋ ಸಂಗತಿ. ಬನಾರಸ್ ಬಿಡುಗಡೆಗೊಂಡ ಬಳಿಕವೂ ಆ ಚಿತ್ರದ ಹಾಡಿನ ಬಗೆಗಿದ್ದ ಕ್ರೇಜ್ ಹೆಚ್ಚಾಗಿದೆಯೇ ಹೊರತು, ಒಂದಿಂಚೂ ಕಡಿಮೆಯಾಗಿಲ್ಲ. ಹಾಡುಗಳ ಬಗ್ಗೆ ಯಾವ ರೇಂಜಿಗೆ ಕ್ರೇಜ್ ಮೂಡಿದೆಯೆಂದರೆ, ಕನ್ನಡವೂ ಸೇರಿದಂತೆ ಐದು ಭಾಷೆಗಳಲ್ಲಿ ಈ ಹಾಡಿಗೀಗ ಏಳು ಮಿಲಿಯನ್ನಿಗೂ ಅಧಿಕ ವೀಕ್ಷಣೆ ಸಿಕ್ಕಿದೆ.

  Zaid Khan Starrer Banaras Movie Song Belakina Kavithe Crossed 7 Million

  ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯದ ಬೆಳಕಿನ ಕವಿತೆ ಹಾಡಂತೂ ಸಾಹಿತ್ಯ ಮತ್ತು ದೃಷ್ಯಗಳ ಮೂಲಕವೂ ಪ್ರೇಕ್ಷಕರನ್ನು ಸೆಳೆದು ಅದೇ ಗುಂಗಿನಲ್ಲಿ ತೇಲುವಂತೆ ಮಾಡಿತ್ತು.. ಅರುಣ್ ಸಾಗರ್ ಕಲಾ ನಿರ್ದೇಶನ ಮತ್ತು ಎ ಹರ್ಷ ಅವರ ಕೋರಿಯೋಗ್ರಫಿ ಬೆಳಕಿನ ಕವಿತೆಯನ್ನ ಕಣ್ಣಿಂದ ಮರೆಯಾಗದಂತೆ ಸೆರೆಹಿಡಿದಿತ್ತು. ಹಾಗಾಗಿಯೇ ರಿಲೀಸ್ ನಂತರವೂ ಹಾಡಿನ ಮೇಲೆ ಅಭಿಮಾನಿಗಳಿಗೆ ಇದ್ದ ಕ್ರೇಜ್ ಗಮನೀಯವಾಗಿ ಏರುಗತಿಯಲ್ಲೇ ಸಾಗುತ್ತಿದೆ. ಒಟ್ನಲ್ಲಿ ಉತ್ತಮ ಪ್ರದರ್ಶನದ ಜೊತೆಗೆ ಬನಾರಸ್ ಸಿನೆಮಾದ ಓಟ ಖುಷಿಯಲ್ಲಿರುವ ಸಿನೆಮಾ ತಂಡಕ್ಕೆ ಬೆಳಕಿನ ಕವಿತೆಗೆ ಸಿಕ್ಕ ೭ ಮಿಲಿಯನ್ ಮೀರಿದ ವೀವರ್ಸ್ ಗಳ ಸಂಖ್ಯೆಯೂ ಪುಳಕಿತಗೊಳಿಸಿದೆ.

  English summary
  Zaid Khan Starrer Banaras Movie Song Belakina Kavithe Crossed 7 Million, Know More.
  Friday, November 11, 2022, 12:45
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X