»   » ನಟಿ ಅಮೂಲ್ಯ ಗುಂಗಿನಲಿ ಬಸವರಾಜ್ ಬದುಕು ಬರ್ಬಾದ್

ನಟಿ ಅಮೂಲ್ಯ ಗುಂಗಿನಲಿ ಬಸವರಾಜ್ ಬದುಕು ಬರ್ಬಾದ್

Posted By:
Subscribe to Filmibeat Kannada
Amoolya in Cheluvina Chittara
ಇದು ಜೂನ್ 2007 ರಲ್ಲಿ ಬಿಡುಗಡೆಗೊಂಡ ಗಣೇಶ್, ಅಮೂಲ್ಯ ಅಭಿನಯದ ಚೆಲುವಿನ ಚಿತ್ತಾರ ನೋಡಿದ ಪ್ರೇಕ್ಷಕನ ಕಥೆಯಲ್ಲ ವ್ಯಥೆಯಿದು. ಈ ಚಿತ್ರವನ್ನು ಮೂರು ಬಾರಿ ನೋಡಿದ ಹುಬ್ಬಳ್ಳಿಯ ಬಸವರಾಜ್ ಎನ್ನುವ ವ್ಯಕ್ತಿ ಅಕ್ಷರಶಃ ಭೂಮಿಯಲ್ಲಿ ಇದ್ದೂ ಇಲ್ಲದವನಾಗಿದ್ದಾನೆ.

ಬಸವರಾಜ್ ಪಾಲಿಗೆ ಮಾತೆತ್ತಿದರೆ ಅಮೂಲ್ಯ, ಕೂತು ನಿಂತರೆ, ಊಟ ನಿದ್ದೆಯಲ್ಲಿ ಎಲ್ಲೆಲ್ಲೂ ಅಮೂಲ್ಯ ಆವರಿಸಿಕೊಂಡಿದ್ದಾರೆ. ಈತನನ್ನೇ ನಂಬಿಕೊಂಡು ಜೀವನಬಂಡಿ ಸಾಗಿಸುತ್ತಿರುವ ಕುಟುಂಬ ಏನು ಮಾಡುವುದೆಂದು ತೋಚದೆ ಕಂಗಾಲಾಗಿವೆ.

ಚಿತ್ರವನ್ನು ಮೂರು ಬಾರಿ ನೋಡಿದ ಬಸವರಾಜ್ ಬರಬರುತ್ತಾ ಅಮೂಲ್ಯಾ ಗುಂಗಿಗೆ ಒಳಗಾಗಿದ್ದಾನೆ. ಒಂದೆರಡು ದಿನಗಳ ನಂತರ ಸುಧಾರಿಸಿಕೊಳ್ಳ ಬಹುದು ಎನ್ನುವ ಕುಟುಂಬದ ನಂಬಿಕೆ ಹುಸಿಯಾಗಿದೆ. ದಿಕ್ಕೇ ತೋಚದ ಕುಟುಂಬದ ಗೋಳು ನೋಡಲಾಗದು. ಹಲವು ವರ್ಷಗಳಿಂದ ಬಸವರಾಜ್ ಕುಟುಂಬಕ್ಕೆ ಈ ನೋವಿನಿಂದ ಹೊರಬರಲಾಗುತ್ತಿಲ್ಲ.

ಶಿಸ್ತಿನಿಂದ ದುಡಿದು ಕುಟುಂಬದ ಜವಾಬ್ದಾರಿಯನ್ನು ಹೆಗಲೇರಿಸಿಕೊಂಡಿದ್ದ ಬಸವರಾಜ್ ಪಾಲಿಗೆ ಚೆಲುವಿನಚಿತ್ತಾರದ ನಾಯಕಿ ಅಮೂಲ್ಯ ಈಗ ಸರ್ವಶ್ವ. ತಾಯಿ, ತಂಗಿ, ನೆಂಟರಿಷ್ಟರು, ಆಜುಬಾಜಿನವರು ಏನೇ ಮಾತಾಡಿದರೂ ಬಸವರಾಜ್ ಉತ್ತರ..ಅಮೂಲ್ಯ .. ಅಮೂಲ್ಯ..ಅಮೂಲ್ಯ.

ಈ ಚಿತ್ರ ಬಿಡುಗಡೆಯಾದಾಗ ಬಹಳಷ್ಟು ಪ್ರೇಮಿಗಳು ಮನೆಯಿಂದ ಪರಾರಿಯಾದ ಘಟನೆ ನಿಮಗೆ ಗೊತ್ತಿರುವ ವಿಚಾರ. ಆ ಪಟ್ಟಿಗೆ ಇದು ಮತ್ತೊಂದು ಸೇರ್ಪಡೆ, ಆದರೆ ಚಿತ್ರಕಥೆ ಬೇರೆಯಷ್ಟೇ. ಚಿತ್ರರಸಿಕರು ಚಿತ್ರವನ್ನು ಒಂದು ಮನೋರಂಜನೆಗಾಗಿ ನೋಡಿ ಅದರಲ್ಲಿರುವ ಒಳ್ಳೆತನವನ್ನು ತನ್ನದಾಗಿಸಿ ಕೊಂಡರೆ ಒಳ್ಳೆಯದಲ್ಲವೇ.. ಇಲ್ಲವಾದಲ್ಲಿ ಇಂತಹ ಇನ್ನಷ್ಟು ಲೇಖನ ನಾವು ಬರೆಯದೆ ಬೇರೆ ವಿಧಿಯಿಲ್ಲ.

English summary
Cheluvina Chittara movie madness destroyed life of Basavaraj, Hubli.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X