For Quick Alerts
  ALLOW NOTIFICATIONS  
  For Daily Alerts

  ಗುಲಾಬಿ ಟಾಕೀಸ್ ಶ್ರೇಷ್ಠ ಚಿತ್ರ; ಪುನೀತ್ ಶ್ರೇಷ್ಠ ನಟ

  By Staff
  |
  ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಕನ್ನಡ ಚಿತ್ರರಂಗದ ಹೆಮ್ಮೆಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಅವರ ರಾಜ್ಯದ ಚಿತ್ರಪ್ರೇಮಿಗಳ ವೀಕ್ಷಣೆಗೆ ದಕ್ಕದ ಗುಲಾಬಿ ಟಾಕೀಸು ಚಿತ್ರಕ್ಕೆ ಈ ಸಾಲಿನ ಅತ್ಯುತ್ತಮ ಚಿತ್ರಎಂದು ಘೋಷಿಸಲಾಗಿದೆ. ನಟಿ ಉಮಾಶ್ರೀ ಅವರು ಶ್ರೇಷ್ಠ ನಟಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಶ್ರೇಷ್ಠ ನಟ ಪ್ರಶಸ್ತಿ ಪುನೀತ್ ರಾಜ್ ಕುಮಾರ್ ಅವರ ಪಾಲಾಗಿದೆ.

  ಗುಲಾಬಿ ಟಾಕೀಸ್ ಚಿತ್ರಕ್ಕೆ ಪ್ರಶಸ್ತಿ ಗಳಿಸುವ ನಿರೀಕ್ಷೆಯಿತ್ತು. ಚಿತ್ರಕ್ಕೆ ಮೂರು ಪ್ರಶಸ್ತಿಗಳು ದಕ್ಕಿರುವುದು ಸಂತೋಷ ಹೆಚ್ಚಿಸಿದೆ ಎಂದು ನಿರ್ದೇಶಕ ಗಿರೀಶ್ ಕಾಸರವಳ್ಳಿ ಪ್ರತಿಕ್ರಿಯಿಸಿದರು.

  2007-08ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ ಪಟ್ಟಿಯನ್ನು ರಾಜ್ಯ ಸರ್ಕಾರದ ಐಟಿ ಬಿಟಿ ಹಾಗೂ ವಾರ್ತಾ ಸಚಿವ ಕಟ್ಟಾ ಸುಬ್ರಮಣ್ಯ ನಾಯ್ಡು ಅವರು ಬಿಡುಗಡೆ ಮಾಡಿದರು. ಇಂದು 4.15ರ ವೇಳೆಗೆ ಮಾಧ್ಯಮದವರಿಗೆ ಪ್ರಶಸ್ತಿ ಪಡೆದವರ ವಿವರಗಳನ್ನು ನೀಡಿದರು. ಸಚಿವರ ಜೊತೆಗೆ ವಾರ್ತಾ ಮತ್ತು ಪ್ರಸಾರ ಖಾತೆ ಇಲಾಖೆಯ ನಿರ್ದೇಶಕ ವಿಶು ಕುಮಾರ್ ಹಾಗೂ ಇಲಾಖೆಯ ಕಾರ್ಯದರ್ಶಿಜಯರಾಮರಾಜೇ ಅರಸ್ ಉಪಸ್ಥಿತರಿದ್ದರು.

  ಪ್ರಶಸ್ತಿಗೆ ಪಡೆದವರ ವಿವರ ಇಂತಿದೆ:

  ಪುಟ್ಟಣ್ಣ ಕಣಗಾಲ್ ಪ್ರಶಸ್ತಿ: ನಿರ್ದೇಶಕ ರೇಣುಕಾ ಶರ್ಮ.
  ಡಾ.ರಾಜ್ ಕುಮಾರ್ ಪ್ರಶಸ್ತಿ: ಡಾ. ವಿಷ್ಣುವರ್ಧನ್.
  ಜೀವಮಾನ ಶ್ರೇಷ್ಠ ಪ್ರಶಸ್ತಿ: ಪಾರ್ವತಮ್ಮ ರಾಜ್ ಕುಮಾರ್.
  (ಸುಬ್ಬಯ್ಯ ನಾಯ್ಡು ಪ್ರಶಸ್ತಿ)ಶ್ರೇಷ್ಠ ನಟ: ಪುನೀತ್ ರಾಜ್ ಕುಮಾರ್ (ಚಿತ್ರ: ಮಿಲನ)
  ಶ್ರೇಷ್ಠ ನಟಿ: ಉಮಾಶ್ರೀ (ಚಿತ್ರ: ಗುಲಾಬಿ ಟಾಕೀಸು)
  ಶ್ರೇಷ್ಠ ಬಾಲನಟ: ಲಿಖಿತ್ (ಚಿತ್ರ: ನಾನು ಗಾಂಧಿ)
  ಶ್ರೇಷ್ಠ ಬಾಲನಟಿ: ಪ್ರಕೃತಿ( ಚಿತ್ರ:ಗುಬ್ಬಚ್ಚಿಗಳು)

  ಅತ್ಯುತ್ತಮ ಚಿತ್ರ1: ಗುಲಾಬಿ ಟಾಕೀಸು (ನಿರ್ದೇಶಕ: ಗಿರೀಶ್ ಕಾಸರವಳ್ಳಿ, ನಿರ್ಮಾಪಕ:ಬಸಂತ್ ಕುಮಾರ್ ಪಾಟೀಲ್)
  ಅತ್ಯುತ್ತಮ ಚಿತ್ರ2: ಮೊಗ್ಗಿನಜಡೆ (ನಿರ್ದೇಶಕ: ಪಿ.ಆರ್ .ರಾಮದಾಸ್ ನಾಯ್ಡು,ನಿರ್ಮಾಪಕರು: ಪಿ.ಆರ್ .ರಾಮದಾಸ್ ನಾಯ್ಡು,ಬೀರಪ್ಪ)
  ಅತ್ಯುತ್ತಮ ಚಿತ್ರ3: ಮಾತಾಡ್ ಮಾತಾಡು ಮಲ್ಲಿಗೆ (ನಿರ್ದೇಶಕ:ನಾಗತಿಹಳ್ಳಿ ಚಂದ್ರಶೇಖರ್ ,ನಿರ್ಮಾಪಕ:ಕೆ.ಮಂಜು)
  ಸಾಮಾಜಿಕ ಕಳಕಳಿಯ ಚಿತ್ರ:ಬನದ ನೆರಳು (ನಿರ್ದೇಶಕ ಮತ್ತು ನಿರ್ಮಾಪಕ: ಉಮಾಶಂಕರ ಸ್ವಾಮಿ)
  ಮಕ್ಕಳ ಚಿತ್ರ:ಏಕಲವ್ಯ (ನಿರ್ದೇಶಕ:ಬರಗೂರು ರಾಮಚಂದ್ರಪ್ಪ,ನಿರ್ಮಾಣ: ಅಭಿರುಚಿ ಚಿತ್ರ)
  ಅತ್ಯುತ್ತಮ ಪ್ರಾದೇಶಿಕ ಚಿತ್ರ: ಬಿರ್ಸೆ( ತುಳು)


  ಅತ್ಯುತ್ತಮ ಪೋಷಕ ನಟ:ರಾಜೇಶ್ (ಚಿತ್ರ:ಮೊಗ್ಗಿನಜಡೆ )
  ಅತ್ಯುತ್ತಮ ಪೋಷಕ ನಟಿ:ಸ್ಮಿತಾ (ಚಿತ್ರ: ಅವ್ವ)
  ಅತ್ಯುತ್ತಮ ಸಂಗೀತ ನಿರ್ದೇಶಕ: ಸಾಧುಕೋಕಿಲ (ಚಿತ್ರ:ಇಂತಿ ನಿನ್ನ ಪ್ರೀತಿಯ )
  ಅತ್ಯುತ್ತಮ ಹಿನ್ನೆಲೆ ಗಾಯಕ: ಎಸ್ ಪಿ ಬಾಲಸುಬ್ರಮಣ್ಯ (ಚಿತ್ರ: ಸವಿಸವಿನೆನಪು ಚಿತ್ರದ 'ನೆನಪು.. ನೆನಪು..')
  ಅತ್ಯುತ್ತಮ ಹಿನ್ನೆಲೆ ಗಾಯಕಿ: ವಾಣಿ (ಚಿತ್ರ: ಇಂತಿ ನಿನ್ನ ಪ್ರೀತಿಯ ಚಿತ್ರದ 'ಮಧುವನ ಕರೆದರೆ....')
  ಅತ್ಯುತ್ತಮ ಗೀತೆ ರಚನೆಕಾರ: ಗೊಲ್ಲಹಳ್ಳಿ ಶಿವಪ್ರಸಾದ್( "ಝುಣ ಝುಣ ಕಾಂಚನ..".ಚಿತ್ರ: ಮಾತಾಡ್ ಮಾತಾಡು ಮಲ್ಲಿಗೆ)
  ಅತ್ಯುತ್ತಮ ಕಥೆಗಾರ: ಪಿ ಲಂಕೇಶ್( ಚಿತ್ರ: ಅವ್ವ)
  ಅತ್ಯುತ್ತಮ ಚಿತ್ರಕಥೆ: ಗಿರೀಶ್ ಕಾಸರವಳ್ಳಿ( ಚಿತ್ರ: ಗುಲಾಬಿ ಟಾಕೀಸು)
  ಅತ್ಯುತ್ತಮ ಕಲಾ ನಿರ್ದೇಶಕ: ಜಿ. ಮೂರ್ತಿ( ಚಿತ್ರ: ಕುರುನಾಡು)
  ಅತ್ಯುತ್ತಮ ನಿರ್ದೇಶಕ: ಗಿರೀಶ್ ಕಾಸರವಳ್ಳಿ (ಚಿತ್ರ: ಗುಲಾಬಿ ಟಾಕೀಸು)
  ಅತ್ಯುತ್ತಮ ಛಾಯಾಗ್ರಾಹಕ: ಹೆಚ್ ಸಿ.ವೇಣು (ಚಿತ್ರ: ಆ ದಿನಗಳು )
  ಅತ್ಯುತ್ತಮ ಸಂಕಲನಕಾರ: ಸುರೇಶ್ ಅರಸ್ (ಚಿತ್ರ:ಸವಿಸವಿನೆನಪು )
  ಅತ್ಯುತ್ತಮ ಸಂಭಾಷಣಾಕಾರ: ಅಗ್ನಿಶ್ರೀಧರ್(ಚಿತ್ರ: ಆ ದಿನಗಳು)
  ಅತ್ಯುತ್ತಮ ಧ್ವನಿಗ್ರಹಣ: ಎನ್ ಕುಮಾರ್ (ಚಿತ್ರ: ಆಕ್ಸಿಡೆಂಟ್)
  ಅತ್ಯುತ್ತಮ ಕಂಠದಾನ ಕಲಾವಿದ: ಸುದರ್ಶನ್(ಚಿತ್ರ : ಆ ದಿನಗಳು)
  ಅತ್ಯುತ್ತಮ ಕಂಠದಾನ ಕಲಾವಿದೆ: ಚಂಪಾ ಶೆಟ್ಟಿ (ಚಿತ್ರ: ಕುರುನಾಡು)

  ಕೇಸರಿ ಹರವೂ ಅವರ ನೇತೃತ್ವದ ಆಯ್ಕೆ ಸಮಿತಿಯಲ್ಲಿ ನಿರ್ದೇಶಕ ಅನಂದ್ ರಾಜು,ನಿರ್ಮಾಪಕ ವಿಜಯಕುಮಾರ್, ಪತ್ರಕರ್ತ ಕೆ ಎಸ್ ವಾಸು, ಗಾಯಕಿ ರತ್ನಮಾಲಾ ಪ್ರಕಾಶ್ ,ಛಾಯಾಗ್ರಾಹಕ ಅಶೋಕ ನಾಯ್ಡು, ರಂಗನಟಿ ಮಾಲತಿ ಸುಧೀರ್ , ವಾರ್ತಾ ಮತ್ತು ಪ್ರಸಾರ ಖಾತೆ ಇಲಾಖೆಯ ನಿರ್ದೇಶಕ ವಿಶು ಕುಮಾರ್ ಅವರು 45 ಚಿತ್ರಗಳನ್ನು ವೀಕ್ಷಿಸಿ ಪ್ರಶಸ್ತಿಗೆ ಅಂತಿಮ ಪಟ್ಟಿಯನ್ನು ಆಯ್ಕೆ ಮಾಡಿದ್ದಾರೆ.

  ಕೊಸರು: 'ಬನದ ನೆರಳು' ಚಿತ್ರ ಇನ್ನೂ ಚಿತ್ರಮಂದಿರದಲ್ಲಿ ಬಿಡುಗಡೆ ಕಂಡಿಲ್ಲ. 'ಗುಲಾಬಿ ಟಾಕೀಸು' ಬೆಂಗಳೂರಿನ ಪಿವಿಆರ್ ನಲ್ಲಿ ಮೂರು ವಾರ ಓಡಿತ್ತು. ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶನ 'ಗುಬ್ಬಚ್ಚಿಗಳು' ಚಿತ್ರ ಇನ್ನೂ ಕರ್ನಾಟಕದಲ್ಲಿ ತೆರೆ ಕಾಣಬೇಕಿದೆ. ಬಾಕ್ಸಾಫೀಸಿನಲ್ಲಿ ಸೋಲುಂಡ 'ಸವಿಸವಿನೆನಪು 'ಚಿತ್ರಕ್ಕೆ ಪ್ರಶಸ್ತಿಯ ಸಮಾಧಾನ ಸಿಕ್ಕಿದೆ. ಅತ್ಯುತ್ತಮ ಹಿನ್ನೆಲೆ ಗಾಯಕಿ ಪ್ರಶಸ್ತಿ ಪಡೆದ ವಾಣಿ ಅವರು ಸಂಗೀತ ನಿರ್ದೇಶಕ ಹರಿಕೃಷ್ಣ ಅವರ ಪತ್ನಿ. ಖ್ಯಾತ ಸಂಗೀತಗಾರ ಜಿ.ಕೆ. ವೆಂಕಟೇಶ್ ಅವರ ಮೊಮ್ಮಗಳು ಎಂಬುದು ವಿಶೇಷ.

  ಇದನ್ನೂ ಓದಿ:

  ಸಿಂಹನ ಬದಲು ಸಿನಿಮಾ ನೋಡಲಿರುವ ಕೇಸರಿ</a><a href=2008ರಲ್ಲಿ ಪ್ರಕಟವಾದ ಚಿತ್ರವಿಮರ್ಶೆಗಳ ಪಟ್ಟಿ" title="ಸಿಂಹನ ಬದಲು ಸಿನಿಮಾ ನೋಡಲಿರುವ ಕೇಸರಿ2008ರಲ್ಲಿ ಪ್ರಕಟವಾದ ಚಿತ್ರವಿಮರ್ಶೆಗಳ ಪಟ್ಟಿ" />ಸಿಂಹನ ಬದಲು ಸಿನಿಮಾ ನೋಡಲಿರುವ ಕೇಸರಿ2008ರಲ್ಲಿ ಪ್ರಕಟವಾದ ಚಿತ್ರವಿಮರ್ಶೆಗಳ ಪಟ್ಟಿ

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X