»   » ತಮಿಳು ನಟ ಮಾಧವನ್‌ಗೆ ಮೊಳಕಾಲು ಮೂಳೆ ಲಟಕ್

ತಮಿಳು ನಟ ಮಾಧವನ್‌ಗೆ ಮೊಳಕಾಲು ಮೂಳೆ ಲಟಕ್

Posted By:
Subscribe to Filmibeat Kannada
ತಮಿಳು ನಟ ಮಾಧವನ್‌ಗೆ ಮೊಳಕಾಲು ಮೂಳೆ ಲಟಕ್ ಎಂದಿದೆ. ಈ ಹಿಂದೊಮ್ಮೆ '3 ಈಡಿಯಟ್ಸ್' ಚಿತ್ರೀಕರಣದ ವೇಳೆ ಮಂಡಿಮೂಳೆ ಮುರಿದುಕೊಂಡಿದ್ದರು ಮಾಧವನ್. ಈಗ ಮತ್ತೊಮ್ಮೆ ತಮಿಳಿನ 'ವೆಟ್ಟೈ' ಚಿತ್ರೀಕರಣ ವೇಳೆ ಮೊಳಕಾಲ ಮೂಳೆಯನ್ನು ಲಟಕ್ ಎನ್ನಿಸಿಕೊಂಡಿದ್ದಾರೆ.

ಕಾಲಿಗೆ ಶಸ್ತ್ರಚಿಕಿತ್ಸೆ ಮಾಡಲೇಬೇಕಾಗಿದ್ದು ಅವರು ಆಸ್ಟ್ರೇಲಿಯಾದಲ್ಲಿ ಚಿಕಿತ್ಸೆ ಪಡೆಯಲಿದ್ದಾರೆ. ನವೆಂಬರ್ 9ರಂದು ಚೆನ್ನೈನಲ್ಲಿ 'ವೆಟ್ಟೈ' ಚಿತ್ರೀಕರಣ ನಡೆಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಆದಷ್ಟು ಬೇಗ ಚಿತ್ರೀಕರಣ ಮುಗಿಸಿ ಮುಂಬೈಗೆ ಮಾಧವನ್ ಹೊರಡಬೇಕಾಗಿತ್ತಂತೆ. ಆ ತರಾತುರಿಯಲ್ಲಿ ಕಾಲು ಮುರಿದುಕೊಂಡು ಈಗ ಮನೆಯಲ್ಲಿ ಕೂರುವಂತಾಗಿದೆ.

ಮುಂಬೈನಲ್ಲಿ ನಡೆಯಲಿರುವ ಚಿತ್ರೀಕರಣದಲ್ಲಿ ಮಾಧವನ್‌ಗೆ ಬಿಪಾಶಾ ಬಸು ಸಾಥ್ ನೀಡಬೇಕಾಗಿತ್ತು. ಈಗ ಪರಿಸ್ಥಿತಿ ಹೀಗಾಗಿರುವುದರಿಂದ ಚಿತ್ರೀಕರಣ ಒಂದು ವಾರ ಮುಂದೂಡಲ್ಪಟ್ಟಿದೆ. ಒಂದು ವಾರ ಫಿಜಿಯೋಥೆರಪಿ ಚಿಕಿತ್ಸೆ ಪಡೆದು ಬಿಪಾಶಾ ಜೊತೆ ಅಭಿನಯಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಆಸ್ಟ್ರೇಲಿಯಾಗೆ ಮಾಧವನ್ ಹೊರಡಲಿದ್ದಾರೆ. (ಏಜೆನ್ಸೀಸ್)

English summary
Actor Madhavan injured during Tamil film Vettai shooting in Chennai on November 9. The actor will now have to fly down to Australia for further treatment where he might have to undergo a surgery for the same.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada