»   »  ನಿರ್ಮಾಪಕಿ ಶಿಲ್ಪಾ ಗಣೇಶ್ ವಿರುದ್ಧ ದೂರು

ನಿರ್ಮಾಪಕಿ ಶಿಲ್ಪಾ ಗಣೇಶ್ ವಿರುದ್ಧ ದೂರು

Subscribe to Filmibeat Kannada

'ಮಳೆಯಲಿ ಜೊತೆಯಲಿ' ಹಾಗೂ 'ಮಳೆಬಿಲ್ಲೇ' ಚಿತ್ರದ ನಿರ್ಮಾಪಕರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾರಣ, ಆ ಚಿತ್ರಗಳ ಸಿನಿಮಾ ಭಿತ್ತಿ ಚಿತ್ರಗಳನ್ನು ಗೋಡೆಗೆ ಅಂಟಿಸಿ ಬೆಂಗಳೂರು ನಗರದ ಅಂದಚೆಂದವನ್ನು ಕೆಡಿಸಿದ್ದಾರೆ ಎಂಬ ಆರೋಪ.ಈ ಸಂಬಂಧ 'ಮಳೆಯಲಿ ಜೊತೆಯಲಿ' ಹಾಗೂ 'ಮಳೆಬಿಲ್ಲೇ' ಚಿತ್ರದ ನಿರ್ಮಾಪಕರ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಭಿತ್ತಿ ಚಿತ್ರಗಳನ್ನು ಅಂಟಿಸಿ ನಗರದ ಅಂದಗೆಡಿಸುವವರ ವಿರುದ್ಧ ಕಾರ್ಯಾಚರಣೆ ಕೈಗೊಂಡಿರುವ ಪಾಲಿಕೆಅಧಿಕಾರಿಗಳು, ಮಳೆಯಲಿ ಜೊತೆಯಲಿ ನಿರ್ಮಾಪಕಿ ಶಿಲ್ಪಾ ಗಣೇಶ್ ಹಾಗೂ ಮಳೆ ಬಿಲ್ಲೇ ನಿರ್ಮಾಪಕರಾದ ಟಿ.ಎಸ್.ಆನಂದ್ ಮತ್ತು ಎಚ್.ಆರ್.ಕೋದಂಡರಾಮ ಅವರ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬೆಂಗಳೂರು ರಾಜಾಜಿನಗರದ ಡಾ.ರಾಜ್ ಕುಮಾರ್ ರಸ್ತೆಯ ವಿವೇಕಾನಂದ ಕಾಲೇಜಿನ ಗೋಡೆಯ ಮೇಲೆ ಎರಡೂ ಚಲನಚಿತ್ರಗಳ ಭಿತ್ತಿಪತ್ರಗಳನ್ನು ಅಂಟಿಸಲಾಗಿತ್ತು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪಾಲಿಕೆ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada