»   » ಶಿವಣ್ಣ ನಿಜವಾಗಿಯೂ ತಂದೆಗೆ ತಕ್ಕ ಮಗ: ದುನಿಯಾ ವಿಜಯ್

ಶಿವಣ್ಣ ನಿಜವಾಗಿಯೂ ತಂದೆಗೆ ತಕ್ಕ ಮಗ: ದುನಿಯಾ ವಿಜಯ್

Posted By:
Subscribe to Filmibeat Kannada
Duniya Vijay
ಅಣ್ಣಾವ್ರ ಬಗ್ಗೆ ಬಹಳಷ್ಟು ಕೇಳಿ ಪಟ್ಟಿದ್ದೆ. ಅವರ ಸರಳತೆ, ಸಹ ಕಲಾವಿದರ ಮೇಲೆ ತೋರುವ ಪ್ರೀತಿ, ಪಾತ್ರದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳುವ ರೀತಿ ಮುಂತಾದ ರಾಜಣ್ಣ ಅವರ ಅತ್ಯಮೂಲ ಗುಣಗಳನ್ನು ಶಿವರಾಜ್ ಕುಮಾರ್ ನಲ್ಲಿ ಕಾಣುತ್ತಿದ್ದೇನೆ ಎಂದು ದುನಿಯಾ ವಿಜಯ್ ಹೇಳಿದ್ದಾರೆ.

ಶಿವಣ್ಣ ಜೊತೆ ಅಭಿನಯಿಸಿದ ಅನುಭವ ನನಗೆ ಬಹಳ ಇದೆ. ಅವರ ರಾಕ್ಷಸ, ರಿಷಿ, ಜೋಗಿ ಮುಂತಾದ ಚಿತ್ರಗಳಲ್ಲಿ ಸಣ್ಣ ಪಾತ್ರದಲ್ಲಿ ಅಭಿನಯಿಸಿದ್ದೆ. ಶೂಟಿಂಗ್ ಸಮಯಕ್ಕೆ ಸರಿಯಾಗಿ ಬರುವುದು, ಎಲ್ಲಾ ಕಲಾವಿದರನ್ನು ತಾರತಮ್ಯ ಇಲ್ಲದೆ ನೋಡುವುದು, ನಿರ್ಮಾಪಕ ಮತ್ತು ನಿರ್ದೇಶಕರಿಗೆ ಇವರು ನೀಡುವ ಗೌರವ ಇಂತಹ ಹಲವಾರು ಅವರ ಗುಣಗಳು ಬೇರೆ ಕಲಾವಿದರಿಗೂ ಅನುಕರಣೆಯಾಗಲಿ ಎಂದು ವಿಜಯ್ ಆಶಿಸಿದ್ದಾರೆ.

ಸುವರ್ಣ ನ್ಯೂಸ್ ವಾಹಿನಿಯಲ್ಲಿ ಮಾತನಾಡುತ್ತಾ ವಿಜಯ್, ಇಂತಹ ಉತ್ತಮ ಗುಣಗಳು ಶಿವಣ್ಣ ಅವರಿಗೆ ಡಾ.ರಾಜ್ ಅವರಿಂದಲೇ ಬರಬೇಕು. ಶಿವರಾಜ್ ಕುಮಾರ್ ಅವರಿಂದ ಕನ್ನಡ ಚಿತ್ರರಂಗಕ್ಕೆ ಒಳ್ಳೆದಾಗಲಿ, ಯುವ ಪ್ರತಿಭೆಗಳಿಗೆ ಅವರು ಮಾರ್ಗದರ್ಶನ ನೀಡಲಿ. ನಮ್ಮ ಚಿತ್ರರಂಗವನ್ನು ಎತ್ತರಕ್ಕೆ ಬೆಳೆಸಲಿ. ಆತ ನಿಜವಾಗಲೂ ತಂದೆಗೆ ತಕ್ಕ ಮಗ ಎಂದು ಬಿರುದು ನೀಡಿದ್ದಾರೆ.

English summary
In a interview with Suvarna News, Kannada film actor Duniya Vijay praising about Shivaraj Kumar.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada