»   » ಇಂದು(ಫೆ.2) 9ನೇ ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ

ಇಂದು(ಫೆ.2) 9ನೇ ಅಂತರರಾಷ್ಟ್ರೀಯ ಸಿನಿಮೋತ್ಸವಕ್ಕೆ ಚಾಲನೆ

Posted By:
Subscribe to Filmibeat Kannada

9ನೇ ಅಂತರರಾಷ್ಟ್ರೀಯ ಸಿನಿಮೋತ್ಸವ ಇಂದು ಬೆಂಗಳೂರಿನಲ್ಲಿ ಆರಂಭಗೊಳ್ಳಲಿದೆ. ಚಿತ್ರೋತ್ಸವಕ್ಕೆ ಇಂದು ಸಂಜೆ 6 ಗಂಟೆಗೆ ವಿಧಾನಸೌಧದ ಮುಂಭಾಗದಲ್ಲಿ ಸಿಎಂ ಸಿದ್ದರಾಮಯ್ಯ ನವರು ಉದ್ಭಾಟಿಸಿ ಚಾಲನೆ ನೀಡಲಿದ್ದಾರೆ.[9ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ವಿಶೇಷತೆಗಳು!]

ದಕ್ಷಿಣ ಭಾರತದ ಖ್ಯಾತ ಚಲನಚಿತ್ರ ಕಲಾವಿದೆ ಶ್ರೀಮತಿ ಸುಹಾಸಿನಿ ಹಾಗೂ ಖ್ಯಾತ ಚಲನಚಿತ್ರ ಕಲಾವಿದ ಮತ್ತು ನಿರ್ದೇಶಕರಾದ ರಮೇಶ್ ಅರವಿಂದ್ ಅವರು ಕಾರ್ಯಕ್ರಮ ನಿರ್ವಹಣೆ ಮಾಡಲಿದ್ದು, ಈಜಿಫ್ಟಿನ ಖ್ಯಾತ ನಿರ್ದೇಶಕಿ ಹಲಾ ಖಲೀಲ್, ಬಂಗಾಲಿ ಹೆಸರಾಂತ ನಿರ್ದೇಶಕ ಬುದ್ಧದೇವದಾಸ್ ಗುಪ್ತ, ನಟ ಪುನೀತ್ ರಾಜ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.[9ನೇ ಬೆಂಗಳೂರು ಚಿತ್ರೋತ್ಸವದಲ್ಲಿ 12 ಕನ್ನಡ ಚಿತ್ರಗಳು: ಯಾವುವು?]

9th Bengaluru International Film Festival begin today

9ನೇ ಅಂತರರಾಷ್ಟ್ರೀಯ ಸಿನಿಮೋತ್ಸವ ನಾಳೆ(ಫೆ.3) ಯಿಂದ ಫೆ.9ರ ವರೆಗೆ ಬೆಂಗಳೂರು ಮತ್ತು ಮೈಸೂರಿನಲ್ಲಿಯೂ ನಡೆಯಲಿದ್ದು, ಬೆಂಗಳೂರಿನ ಒರಾಯನ್ ಮಾಲಿನ ಫಿವಿಆರ್ ಸಿನಿಮಾಸ್ ನ 11 ಬೆಳ್ಳಿತೆರೆಯ ಮೇಲೆ ಹಾಗು ಮೈಸೂರಿನ ಮಾಲ್ ಆಫ್ ಮೈಸೂರು ಐನಾಕ್ಸ್ ಸಿನೆಮಾಸ್ ನ 4 ಬೆಳ್ಳಿ ಪರದೆಯ ಮೇಲೆ ಚಿತ್ರಗಳ ಪ್ರದರ್ಶನ ನಡೆಯಲಿದೆ. ವಿಶ್ವದ ಅತ್ಯುತ್ತಮ 60 ದೇಶಗಳ 240 ಚಿತ್ರಗಳು ವಿವಿಧ ವಿಭಾಗಗಳಲ್ಲಿ ಪ್ರದರ್ಶನ ಕಾಣಲಿವೆ.

9th Bengaluru International Film Festival begin today

ಉದ್ಘಾಟನೆ ಚಿತ್ರವಾಗಿ ಅಲ್ಗೇರಿಯಾದ ಮಹ್ಮದ್ ಹಮಿದಿ ನಿರ್ದೇಶನದ ಲಾವ ವಚೆ ಚಿತ್ರ ಪ್ರದರ್ಶನವಾಗಲಿದ್ದು, ಭಾರತದ ಬುದ್ಧದೇವ್ ದಾಸ್ ಗುಪ್ತ ಅವರ ಕುರಿತ ಸಾಕ್ಷಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತಿದೆ.

ಚಿತ್ರೋತ್ಸವ ಉದ್ಘಾಟನೆ ಸಂದರ್ಭದಲ್ಲಿ ವಿಧಾನಸೌಧದ ಭವ್ಯ ಹಿನ್ನೆಲೆಯಲ್ಲಿ ಕನ್ನಡ ಚಿತ್ರೋದ್ಯಮ ಇತಿಹಾಸ ಹಾಗೂ ಕಲೆ, ಸಂಸ್ಕೃತಿ ಚಿತ್ರ ಮೂಡಿಸುವ ವಿಡಿಯೋ ಮ್ಯಾಪಿಂಗ್ ಪ್ರದರ್ಶನವನ್ನು ಸಹ ಹಮ್ಮಿಕೊಳ್ಳಲಾಗಿದೆ. ಚಿತ್ರೋತ್ಸವ ಉದ್ಘಾಟನೆ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರಾಭಿವೃದ್ದಿ ಮತ್ತು ಹಜ್ ಸಚಿವ ಆರ್ ರೋಷನ್ ಬೇಗ್ ಅವರು ವಹಿಸಲಿದ್ದು, ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಹಾಗೂ ಕರ್ನಾಟಕ ವಿಧಾನಸಭೆ ಸಭಾಧ್ಯಕ್ಷ ಕೆ.ಬಿ. ಕೋಳಿವಾಡ ಅವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.

English summary
The 9th edition of the Bengaluru International Film Festival (Biffes) will start today.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada