For Quick Alerts
  ALLOW NOTIFICATIONS  
  For Daily Alerts

  ಚೆನ್ನೈನ ಬಿಗ್ ಬಾಸ್ ಮನೆಯಲ್ಲಿ ದುರಂತ: ಓರ್ವ ವ್ಯಕ್ತಿ ಸಾವು

  By Bharath Kumar
  |

  ವಿವಾದಗಳಿಂದಲೇ ಹೆಚ್ಚು ಸದ್ದು ಮಾಡುತ್ತಿರುವ ತಮಿಳು ಬಿಗ್ ಬಾಸ್ ಈಗ ದುರಂತವೊಂದಕ್ಕೆ ಸಾಕ್ಷಿಯಾಗಿದೆ. ಬಿಗ್ ಬಾಸ್ ಮನೆಯಲ್ಲಿ ದುರಂತವೊಂದು ಸಂಭವಿಸಿದ್ದು, ಎಸಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಾವನ್ನಪ್ಪಿದ್ದಾನೆ.

  ಸಾವಿಗೀಡಾದ ವ್ಯಕ್ತಿಯ ಹೆಸರು ಗುಣಶೇಖರ್ ಎಂದು ಗುರುತಿಸಲಾಗಿದ್ದು, ಅರಿಯೂಲುರು ಗ್ರಾಮದವರು ಎಂಬ ಮಾಹಿತಿ ಸಿಕ್ಕಿದೆ. ಶನಿವಾರ ಈ ಘಟನೆ ನಡೆದಿದ್ದು, ಎರಡನೇ ಮಹಡಿಯಿಂದ ಕೆಳಗೆ ಬಿದ್ದು ಗಂಭೀರವಾಗಿ ಗಾಯವಾಗಿದ್ದ. ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.

  'ಬಿಗ್ ಬಾಸ್' ಪ್ರೇಮಿಗಳ ಬಗ್ಗೆ ಹೀಗೊಂದು ಸುಳ್ಳು ಸುದ್ದಿ, ಸುಳ್ಳು ಸಾಕ್ಷಿ.!'ಬಿಗ್ ಬಾಸ್' ಪ್ರೇಮಿಗಳ ಬಗ್ಗೆ ಹೀಗೊಂದು ಸುಳ್ಳು ಸುದ್ದಿ, ಸುಳ್ಳು ಸಾಕ್ಷಿ.!

  ಚೆನ್ನೈನ ಚೆಂಬರಾಂಬಕ್ಕಮ್ ನಲ್ಲಿರುವ ಇವಿಪಿ ಫಿಲ್ಮಿ ಸಿಟಿಯಲ್ಲಿ ಬಿಗ್ ಬಾಸ್ ಶೋ ರೆಕಾರ್ಡಿಂಗ್ ನಡೆಯುತ್ತಿದೆ. ಈ ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಇನ್ನು ಪ್ರಕರಣ ದಾಖಲಿಸಕೊಂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.

  'ಬಿಗ್ ಬಾಸ್' ಮನೆಯೊಳಗೆ ಈ 'ಕಾಮಿಡಿ ಕ್ವೀನ್' ಹೋಗೋದು ಪಕ್ಕಾ.!'ಬಿಗ್ ಬಾಸ್' ಮನೆಯೊಳಗೆ ಈ 'ಕಾಮಿಡಿ ಕ್ವೀನ್' ಹೋಗೋದು ಪಕ್ಕಾ.!

  ಎಸಿ ಸಮಸ್ಯೆಯಾಗಿದ್ದರಿಂದ ಗುಣಶೇಖರ್ ಅವರು ಎರಡನೆ ಮಹಡಿಗೆ ಹೋಗಿ ಕೆಲಸದಲ್ಲಿ ತೊಡಗಿದ್ದರು. ಆದ್ರೆ, ಕಾಲು ಜಾರಿ ಕೆಳಗೆ ಬಿದ್ದಿದ್ದಾರೆ ಎನ್ನಲಾಗುತ್ತಿದೆ.

  'ಬಿಗ್ ಬಾಸ್' ಪ್ರಸಾರ ಸಮಯ ಬದಲಾಗುತ್ತಿದೆ.!'ಬಿಗ್ ಬಾಸ್' ಪ್ರಸಾರ ಸಮಯ ಬದಲಾಗುತ್ತಿದೆ.!

  ಇನ್ನು ಕಳೆದ ವರ್ಷವೂ ತಮಿಳು ಬಿಗ್ ಬಾಸ್ ನಲ್ಲಿ ದುರಂತವೊಂದು ನಡೆದಿತ್ತು. ಮುಂಬೈ ಮೂಲದ ಫ್ಲಂಬರ್ (plumber) ಹೀಗೆ ಬಿಗ್ ಬಾಸ್ ಸೆಟ್ ನಲ್ಲಿ ಸಾವಿಗೀಡಾಗಿದ್ದರು.

  English summary
  Big Boss Tamil season 2 has been making the news recently. A tragedy struck the Kamal Haasan show recently when a worker on the sets died on September 8. Read on for more details.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X