»   » ಹಾಸ್ಯನಟ ಬುಲ್ಲೆಟ್ ಪ್ರಕಾಶ್ ಪ್ರಾಣಾಪಾಯದಿಂದ ಪಾರು

ಹಾಸ್ಯನಟ ಬುಲ್ಲೆಟ್ ಪ್ರಕಾಶ್ ಪ್ರಾಣಾಪಾಯದಿಂದ ಪಾರು

Posted By:
Subscribe to Filmibeat Kannada

ಹಾಸ್ಯ ನಟ ಬುಲ್ಲೆಟ್ ಪ್ರಕಾಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೊದಲೆಳೆ ಅಂತರದಲ್ಲಿ ಗಂಡಾಂತರದಿಂದ ತಪ್ಪಿಸಿಕೊಂಡಿದ್ದಾರೆ. ಬೈಕ್ ಏರಿ ಸಣ್ಣ ಸ್ಟಂಟ್ ಮಾಡಬೇಕಿದ್ದ ಬುಲ್ಲೆಟ್ ಪ್ರಕಾಶ್, ಆಯತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.

ಅಸಲಿಗೆ ಆಗಿದ್ದು ಇಷ್ಟು...ಅದು ನಟ ಪ್ರಜ್ವಲ್ ದೇವರಾಜ್ ಅಭಿನಯದ 'ಭುಜಂಗ' ಚಿತ್ರದ ಶೂಟಿಂಗ್ ಸ್ಪಾಟ್. ಮೈಸೂರು ಜಿಲ್ಲೆಯ ವರುಣಾದಲ್ಲಿ ಲೋಕೇಷನ್. ಅಲ್ಲಿ, ನಟ ಪ್ರಜ್ವಲ್ ದೇವರಾಜ್ ಬೈಕ್ ಓಡಿಸುತ್ತಿದ್ದರೆ, ಹಿಂಬದಿಯಲ್ಲಿ ಬುಲ್ಲೆಟ್ ಪ್ರಕಾಶ್ ಕೂತಿದ್ದರು.

Actor Bullet Prakash escapes mishap during Bhujanga shooting

ಚೇಸಿಂಗ್ ಸೀನ್ ಆದ್ದರಿಂದ ವ್ಹೀಲಿಂಗ್ ಮಾಡುವ ಸಣ್ಣ ಸ್ಟಂಟ್ ಇತ್ತು. ಮುಂಜಾಗ್ರತ ಕ್ರಮವಾಗಿ ಪ್ರಜ್ವಲ್ ದೇವರಾಜ್ ಮತ್ತು ಬುಲ್ಲೆಟ್ ಪ್ರಕಾಶ್ ಗೆ ರೋಪ್ ಕಟ್ಟಲಾಗಿತ್ತು. ಆದ್ರೆ, ಸ್ಟಂಟ್ ಮಾಡುವ ಹೊತ್ತಿಗೆ ಬುಲ್ಲೆಟ್ ಪ್ರಕಾಶ್ ಗೆ ಕಟ್ಟಲಾಗಿದ್ದ ರೋಪ್ ಕಟ್ ಆಗಿಬಿಡ್ತು. [ಬುಲ್ಲೆಟ್ ಪ್ರಕಾಶ್ ನಿರ್ಮಾಣದಲ್ಲಿ ದರ್ಶನ್ ಚಿತ್ರ]

ಬ್ಯಾಲೆನ್ಸ್ ಮಿಸ್ ಆಗಿ ಬುಲ್ಲೆಟ್ ಪ್ರಕಾಶ್ ಕೆಳಗೆ ಬಿದ್ದರು. ತಕ್ಷಣ ಎಚ್ಚರವಹಿಸಿದ ಚಿತ್ರತಂಡ ಬುಲ್ಲೆಟ್ ಪ್ರಕಾಶ್ ರನ್ನ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಬರಿ ಪಡುವಂಥದ್ದೇನಿಲ್ಲ ಅಂತ ಬುಲ್ಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಬಗ್ಗೆ 'ಭುಜಂಗ' ಚಿತ್ರತಂಡ ಸ್ಪಷ್ಟಪಡಿಸಿದೆ.

English summary
Kannada Actor Bullet Prakash had a narrow escape with minor injury during the bike stunt which was shot for Actor Prajwal Devaraj starrer 'Bhujanga' in Mysore.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada