»   » ನಟ ಚೇತನ್ ಚಂದ್ರಗೆ ಮಲೆನಾಡ ಹುಡುಗಿ ಜೊತೆ ಕಂಕಣ ಭಾಗ್ಯ

ನಟ ಚೇತನ್ ಚಂದ್ರಗೆ ಮಲೆನಾಡ ಹುಡುಗಿ ಜೊತೆ ಕಂಕಣ ಭಾಗ್ಯ

Posted By:
Subscribe to Filmibeat Kannada

'ಪ್ರೇಮಿಸಂ' ಖ್ಯಾತಿಯ ಸ್ಯಾಂಡಲ್ ವುಡ್ ನ ಮೋಸ್ಟ್ ಎಲಿಜಬೆಲ್ ಬ್ಯಾಚುಲರ್ ನಟ ಚೇತನ್ ಚಂದ್ರ ಸದ್ಯದಲ್ಲೇ ನವ ಬಾಳಿಗೆ ಕಾಲಿಡಲಿದ್ದಾರೆ.[ಐಶ್ವರ್ಯಾಗೆ ಬಿಸ್ಕೆಟ್ ಹಾಕಲಿರುವ ಚೇತನ್ ಚಂದ್ರ]

ಚೇತನ್ ಚಂದ್ರ ತಾವು ಪ್ರೀತಿಸಿದ ಮಲೆನಾಡ ಹುಡುಗಿ ಜೊತೆ ಏಪ್ರಿಲ್ ನಲ್ಲಿ ದಾಂಪತ್ಯ ಜೀವನಕ್ಕೆ ಅಡಿ ಇಡಲಿದ್ದಾರೆ.

ಮಲೆನಾಡ ಹುಡುಗಿ ಜೊತೆ ಮದುವೆ?

ನಟ ಚೇತನ್ ಚಂದ್ರ ಮಲೆನಾಡಿನ ಸಾಗರದ ತಮ್ಮ ಗೆಳತಿಯೊಬ್ಬಳ ಕೈಹಿಡಿಯಲಿದ್ದಾರೆ.

ಚೇತನ್ ಚಂದ್ರ ಕೈ ಹಿಡಿಯುವ ಹುಡುಗಿ ಯಾರು?

ಚೇತನ್ ಚಂದ್ರ ಕೈ ಹಿಡಿಯಲಿರುವ ಹುಡುಗಿ ರಚನಾ ಹೆಗಡೆ. ಇವರು ವೃತ್ತಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದಾರೆ.

ಪ್ರೀತಿಸಿದ ಹುಡುಗಿ ಜೊತೆ ಕಂಕಣ ಭಾಗ್ಯ

ನಟ ಚೇತನ್ ಚಂದ್ರ ಮತ್ತು ರಚನಾ ಹೆಗಡೆ ಪರಸ್ಪರ ಪ್ರೀತಿಸುತ್ತಿದ್ದರು. ಎರಡು ವರ್ಷಗಳಿಂದ ಪ್ರೀತಿಸುತ್ತಿದ್ದ ಈ ಜೋಡಿ ಈಗ ನವ ಬಾಳಿಗೆ ಕಾಲಿಡುತ್ತಿದ್ದಾರೆ ಎಂದು ಮೂಲಗಳ ಪ್ರಕಾರ ತಿಳಿಯಲಾಗಿದೆ.

ಲವ್ ಕಮ್ ಆರೆಂಜ್ಡ್ ಮ್ಯಾರೇಜ್

ಪರಸ್ಪರ ಪ್ರೀತಿಸುತ್ತಿದ್ದ ನಟ ಚೇತನ್ ಚಂದ್ರ ಮತ್ತು ರಚನಾ ಹೆಗಡೆ, ಕುಟುಂಬಸ್ಥರು ಗ್ರೀನ್ ಸಿಗ್ನಲ್ ನೀಡಿದ ನಂತರ ಮದುವೆ ಆಗಲು ಸಿದ್ದವಾಗಿದ್ದು, ಇದು ಲವ್ ಕಮ್ ಆರೆಂಜ್ಡ್ ಮ್ಯಾರೇಜ್ ಆಗಿದೆ.

ಮದುವೆ ಯಾವಾಗ?

ಏಪ್ರಿಲ್ 17 ರಂದು ಸಾಗರದ ಭದ್ರಕಾಳಿ ಮಂಟಪದಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ವಿವಾಹ ನೇರವೇರಲಿದೆ.

English summary
'Premisum' Fame Kannada Actor Chetan Chandra to get married Rachana Hegade on April.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada