»   » 30ರ ಸುಂದರ ರಮೇಶ್ ಅರವಿಂದ್ 18 ಸೂಪರ್ ಹಿಟ್ ಚಿತ್ರಗಳು

30ರ ಸುಂದರ ರಮೇಶ್ ಅರವಿಂದ್ 18 ಸೂಪರ್ ಹಿಟ್ ಚಿತ್ರಗಳು

Posted By:
Subscribe to Filmibeat Kannada

ಚಿತ್ರರಂಗ ಕಂಡ ಪ್ರತಿಭಾನ್ವಿತ ನಟ ಕಮ್ ನಿರ್ದೇಶಕರಲ್ಲಿ ರಮೇಶ್ ಅರವಿಂದ್ ಕೂಡಾ ಒಬ್ಬರು. 1964ರಲ್ಲಿ ತಮಿಳುನಾಡಿನ ಕುಂಭಕೋಣಂನಲ್ಲಿ ಜನಿಸಿದ ಈ ಹ್ಯಾಂಡ್ಸಮ್ ಹೀರೋ ಇಂಜಿನಿಯರಿಂಗ್ ಪದವಿ ಮುಗಿಸಿದ್ದು ಬೆಂಗಳೂರಿನಲ್ಲಿ.

ಕಾಲೇಜು ಜೀವನದಲ್ಲಿ ಹಲವು ಪಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ರಮೇಶ್ ಪ್ರತಿಭೆಯನ್ನು ಗುರುತಿಸಿದ್ದ ಭಾರತೀಯ ಚಿತ್ರೋದ್ಯಮದ ದೊಡ್ಡ ಹೆಸರು ದಿವಂಗತ ಕೆ ಬಾಲಚಂದರ್.

ಬೆಳ್ಳಿತೆರೆಯಲ್ಲಿ ಕಾಣಿಸಿಕೊಳ್ಳಬೇಕೆನ್ನುವ ರಮೇಶ್ ಕನಸಿಗೆ ಬಾಲಚಂದರ್ ನೀರೆರೆದು ಪೋಷಿಸಿದ್ದು 1986ರಲ್ಲಿ ಬಿಡುಗಡೆಯಾದ ಸೂಪರ್ ಹಿಟ್ 'ಸುಂದರ ಸ್ವಪ್ನಗಳು' ಚಿತ್ರದ ಮೂಲಕ.

ರಮೇಶ್ ಅರವಿಂದ್, ಶಿವರಾಜ್ ಕುಮಾರ್ ಮತ್ತು ಜಗ್ಗೇಶ್ ಬೆಳ್ಳಿತೆರೆಗೆ ಪಾದಾರ್ಪಾಣೆ ಮಾಡಿದ್ದು ಹೆಚ್ಚುಕಮ್ಮಿ ಒಂದೇ ಸಮಯದಲ್ಲಿ.

ಕಿರುತೆರೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿರುವ ರಮೇಶ್ ಅವರ 'ವೀಕೆಂಡ್ ವಿತ್ ರಮೇಶ್' ಮೊದಲ ಸೀರೀಸ್ ಸೂಪರ್ ಹಿಟ್ ಆಗಿತ್ತು.

ತನ್ನ ಸಿನಿಮಾ ವೃತ್ತಿ ಬದುಕಿನ ಮೂವತ್ತರ ಆಸುಪಾಸಿನಲ್ಲಿರುವ ರಮೇಶ್ ಅರವಿಂದ್ ಪೋಷಕ ನಟನಾಗಿಯೂ ಸೇರಿದಂತೆ, ಅವರು ನೀಡಿದ ಹಿಟ್ ಕನ್ನಡ ಚಿತ್ರಗಳ ಒಂದು ಸ್ಲೈಡ್ ಶೋ..

ಸುಂದರಸ್ವಪ್ನಗಳು

1986ರಲ್ಲಿ ಬಿಡುಗಡೆಯಾದ ಈ ಚಿತ್ರದಲ್ಲಿ ರಮೇಶ್ ಸಹಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಶ್ರೀಧರ್, ತಾರಾ ಪ್ರಮುಖ ಭೂಮಿಕೆಯಲ್ಲಿದ್ದ ಈ ಚಿತ್ರವನ್ನು ಕೆ ಬಾಲಚಂದರ್ ನಿರ್ದೇಶಿಸಿದ್ದರು.

ಕೆಂಪುಗುಲಾಬಿ

ವಿಜಯ್ ನಿರ್ದೇಶನದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಅಂಬರೀಶ್, ಪಾರಿಜಾತ, ರಮೇಶ್ ಕಾಣಿಸಿಕೊಂಡಿದ್ದರು. ಈ ಚಿತ್ರ 1990ರಲ್ಲಿ ಬಿಡುಗಡೆಯಾಗಿತ್ತು.

ಪಂಚಮವೇದ

ರಮೇಶ್ ವೃತ್ತಿ ಜೀವನಕ್ಕೆ ಮಹತ್ತರ ಬ್ರೇಕ್ ಕೊಟ್ಟ ಚಿತ್ರ. 1990ರಲ್ಲಿ ಬಿಡುಗಡೆಯಾಗಿದ್ದ ಈ ಚಿತ್ರದಲ್ಲಿ ರಮೇಶ್, ಸುಧಾರಾಣಿ, ರಾಮಕೃಷ್ಣ ಪ್ರಮುಖ ಭೂಮಿಕೆಯಲ್ಲಿದ್ದರು. ಈ ಚಿತ್ರವನ್ನು ಪಿ ಎಚ್ ವಿಶ್ವನಾಥ್ ನಿರ್ದೇಶಿಸಿದ್ದರು.

ಬೆಳ್ಳಿಮೋಡಗಳು

1992ರಲ್ಲಿ ಬಿಡುಗಡೆಯಾದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ರಮೇಶ್, ಮಾಲಾಶ್ರೀ, ಜಯಂತಿ, ದೊಡ್ಡಣ್ಣ ಮುಂತಾದವರಿದ್ದರು. ಈ ಚಿತ್ರವನ್ನು ಕೆ ವಿ ರಾಜು ನಿರ್ದೇಶಿಸಿದ್ದರು.

ಕರ್ಪೂರದ ಗೊಂಬೆ

ಎಸ್ ಮಹೇಂದರ್ ನಿರ್ದೇಶನದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ರಮೇಶ್, ಶೃತಿ, ಶ್ವೇತಾ, ಲೋಕೇಶ್, ಶ್ರೀನಿವಾಸಮೂರ್ತಿ, ದೊಡ್ಡಣ್ಣ ಮುಂತಾದವರಿದ್ದರು. ಈ ಚಿತ್ರ 1996ರಲ್ಲಿ ಬಿಡುಗಡೆಯಾಗಿತ್ತು.

ನಮ್ಮೂರ ಮಂದಾರ ಹೂವೇ

ಸುನಿಲ್ ಕುಮಾರ್ ದೇಸಾಯಿ ನಿರ್ದೇಶನದ ಈ ಚಿತ್ರ 1996ರಲ್ಲಿ ಬಿಡುಗಡೆಯಾಗಿತ್ತು. ರಮೇಶ್, ಶಿವರಾಜ್ ಕುಮಾರ್, ಪ್ರೇಮಾ, ಸುಮನ್ ನಗರ್ಕರ್, ಕಾಶಿ, ರಮೇಶ್ ಭಟ್ ಮುಂತಾದವರ ತಾರಾಗಣ ಚಿತ್ರಕ್ಕಿತ್ತು.

ಅಮೃತವರ್ಷಿಣಿ

ದಿನೇಶ್ ಬಾಬು ನಿರ್ದೇಶನದ ಈ ಚಿತ್ರ 1997ರಲ್ಲಿ ಬಿಡುಗಡೆಯಾಗಿತ್ತು. ಶರತ್ ಬಾಬು, ಸುಹಾಸಿನಿ, ರಮೇಶ್ ಚಿತ್ರದ ತಾರಾಬಳಗದಲ್ಲಿದ್ದರು.

ಅಮೆರಿಕ ಅಮೆರಿಕ

ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಈ ಚಿತ್ರದಲ್ಲಿ ರಮೇಶ್, ಹೇಮಾ, ಅಕ್ಷಯ್ ಆನಂದ್, ವೈಶಾಲಿ ಕಾಸರವಳ್ಳಿ, ದತ್ತಾತ್ರೇಯ ಪ್ರಮುಖ ಭೂಮಿಕೆಯಲ್ಲಿದ್ದರು. ಈ ಚಿತ್ರ 1997ರಲ್ಲಿ ಬಿಡುಗಡೆಯಾಗಿತ್ತು.

ಓ ಮಲ್ಲಿಗೆ

ವಿ ಮನೋಹರ್ ನಿರ್ದೇಶನದ ಈ ಚಿತ್ರ 1997ರಲ್ಲಿ ತೆರೆಕಂಡಿತ್ತು. ರಮೇಶ್, ಚಾರುಲತಾ, ಜುಲ್ಫಿ ಸಯ್ಯದ್ ಚಿತ್ರದ ತಾರಗಣದಲ್ಲಿದ್ದರು.

ಉಲ್ಟಾಪಲ್ಟಾ

1997ರಲ್ಲಿ ತೆರೆಕಂಡ ಮತ್ತೊಂದು ಯಶಸ್ವೀ ಚಿತ್ರ. ರಮೇಶ್, ಸುಷ್ಮಾ ವೀರ್, ಕರಿಬಸವಯ್ಯ, ಪೂಜಾ ಲೋಕೇಶ್ ಚಿತ್ರದ ಪ್ರಮುಖ ತಾರಗಣದಲ್ಲಿದ್ದರು. ಈ ಚಿತ್ರವನ್ನು ಎನ್ ಎಸ್ ಶಂಕರ್ ನಿರ್ದೇಶಿಸಿದ್ದರು.

ತುತ್ತಾಮುತ್ತಾ

ಕಿಶೋರ್ ಸರ್ಜಾ ನಿರ್ದೇಶನದ ಈ ಚಿತ್ರ 1998ರಲ್ಲಿ ಬಿಡುಗಡೆಯಾಗಿತ್ತು. ರಮೇಶ್, ಪ್ರೇಮಾ, ಕಸ್ತೂರಿ, ಟೆನ್ನಿಸ್ ಕೃಷ್ಣ ಮುಂತಾದವರು ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದರು.

ಚಂದ್ರಮುಖಿ ಪ್ರಾಣಸಖಿ

ಸೀತಾರಾಂ ಕಾರಂತ್ ನಿರ್ದೇಶನದ ಈ ಚಿತ್ರ 1999ರಲ್ಲಿ ಬಿಡುಗಡೆಯಾಗಿತ್ತು. ಪ್ರೇಮಾ, ಭಾವನಾ, ಶ್ರೀನಿವಾಸಮೂರ್ತಿ, ವೈಶಾಲಿ ಕಾಸರವಳ್ಳಿ ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದರು.

ಕುರಿಗಳು ಸಾರ್ ಕುರಿಗಳು

ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಈ ಚಿತ್ರ 2001ರಲ್ಲಿ ಬಿಡುಗಡೆಯಾಗಿತ್ತು. ರಮೇಶ್, ಎಸ್ ನಾರಾಯಣ್, ಮೋಹನ್, ಅನಂತ್ ನಾಗ್, ಭಾವನಾ, ಉಮಾಶ್ರೀ ಮುಂತಾವರು ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದರು. ಈ ಚಿತ್ರ 2001ರಲ್ಲಿ ಬಿಡುಗಡೆಯಾಗಿತ್ತು.

ಕೋತಿಗಳು ಸಾರ್ ಕೋತಿಗಳು

ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ಮತ್ತೊಂದು ಹಾಸ್ಯಪ್ರಧಾನ ಚಿತ್ರ. ರಮೇಶ್, ಎಸ್ ನಾರಾಯಣ್, ಮೋಹನ್, ಪ್ರೇಮಾ, ಊರ್ವಶಿ, ತಾರಾ ಮುಂತಾವರು ಚಿತ್ರದ ಪ್ರಮುಖ ಭೂಮಿಕೆಯಲ್ಲಿದ್ದರು. ಈ ಚಿತ್ರ 2001ರಲ್ಲಿ ಬಿಡುಗಡೆಯಾಗಿತ್ತು.

ಆಪ್ತಮಿತ್ರ

ಪಿ ವಾಸು ನಿರ್ದೇಶನದ ಈ ಚಿತ್ರದ ಪ್ರಮುಖ ಭೂಮಿಕೆಯಲ್ಲಿ ಡಾ. ವಿಷ್ಣು, ರಮೇಶ್, ಸೌಂದರ್ಯ, ಪ್ರೇಮಾ, ಅವಿನಾಶ್ ಮುಂತಾವರಿದ್ದರು. ಈ ಚಿತ್ರ 2004ರಲ್ಲಿ ಬಿಡುಗಡೆಯಾಗಿತ್ತು.

ಜೋಕ್ ಫಾಲ್ಸ್

ಅಶೋಕ್ ಪಾಟೀಲ್ ನಿರ್ದೇಶನದ ಈ ಚಿತ್ರ ಕೂಡಾ 2004ರಲ್ಲಿ ಬಿಡುಗಡೆಯಾಗಿತ್ತು. ರಮೇಶ್, ನೀತಾ, ದೀಪಾಲಿ, ದಿಲೀಪ್ ಮುಂತಾದವರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು.

ರಾಮ, ಶಾಮ, ಭಾಮಾ

ರಮೇಶ್ ನಿರ್ದೇಶಿಸಿ ನಟಿಸಿದ್ದ ಚಿತ್ರ. ಕಮಲ್ ಹಾಸನ್, ರಮೇಶ್, ಊರ್ವಶಿ, ಶೃತಿ, ಅನಿರುದ್ದ್, ಡೈಸಿ ಬೋಪಣ್ಣ ಮುಂತಾದವರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು. ಈ ಚಿತ್ರ 2005ರಲ್ಲಿ ಬಿಡುಗಡೆಯಾಗಿತ್ತು.

ಸತ್ಯವಾನ್ ಸಾವಿತ್ರಿ

ರಮೇಶ್ ನಿರ್ದೇಶಿಸಿ, ನಟಿಸಿದ ಮತ್ತೊಂದು ಚಿತ್ರ. ರಮೇಶ್, ಜೆನ್ನಿಫರ್ ಕೊತ್ವಾಲ್, ಡೈಸಿ ಬೋಪಣ್ಣ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದರು. ಈ ಚಿತ್ರ 2007ರಲ್ಲಿ ಬಿಡುಗಡೆಯಾಗಿತ್ತು.

English summary
Actor cum Director Ramesh Aravin'ds best movies so far. Ramesh debuted film industry in 1986 with Super Hit 'Sundara Swapnagalu' movie. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada