»   » ಗೋಲ್ಡನ್ ಸ್ಟಾರ್ ಗಣೇಶ್ ಮನೆ ಹೊಸ ಅತಿಥಿ ರಣ್ಬೀರ್!

ಗೋಲ್ಡನ್ ಸ್ಟಾರ್ ಗಣೇಶ್ ಮನೆ ಹೊಸ ಅತಿಥಿ ರಣ್ಬೀರ್!

Posted By:
Subscribe to Filmibeat Kannada

ಗೋಲ್ಡನ್ ಸ್ಟಾರ್ ಗಣೇಶ್ ಅಭಿಮಾನಿಗಳಿಗೆ ಇಲ್ಲಿದೆ ಸಿಹಿ ಸುದ್ದಿ. ಮೊನ್ನೆಮೊನ್ನೆಯಷ್ಟೇ, ತಮ್ಮ ಏಳನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನ ಆಚರಿಸಿಕೊಂಡ ಗಣೇಶ್ ಗೆ ಪತ್ನಿ ಶಿಲ್ಪಾ ಗುಡ್ ನ್ಯೂಸ್ ಕೊಟ್ಟಿದ್ದಾರೆ.

ಗಣೇಶ್ ಮತ್ತು ಶಿಲ್ಪಾ ಮತ್ತೊಂದು ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷದ ಕೊನೆಯ ವೇಳೆಗೆ ಗಣಿ ಮನೆಗೆ ಮತ್ತೊಂದು ಪುಟಾಣಿಯ ಆಗಮನವಾಗುವುದು ದೃಢವಾಗಿದೆ. ಮೂಲಗಳ ಪ್ರಕಾರ, ಶಿಲ್ಪಾ ಈಗ ಮೂರು ತಿಂಗಳ ಗರ್ಭಿಣಿ.

Actor Ganesh and wife Shilpa

ಗಣಿ ಪುತ್ರಿ ಐದು ವರ್ಷದ ಚಾರಿತ್ರ್ಯಾ ಈಗಾಗಲೇ ಪುಟಾಣಿಗಾಗಿ ಎದುರು ನೋಡುತ್ತಿದ್ದಾಳಂತೆ. ಪ್ರತಿ ದಿನ ಅಮ್ಮನ ಬಳಿ ಬಂದು, ''ಪಾಪು ಯಾವಾಗ ಮನೆಗೆ ಬರುತ್ತೆ'' ಅಂತ ಮುದ್ದು ಮುದ್ದಾಗಿ ಕೇಳುತ್ತಿದ್ದಾಳಂತೆ. [ಗೋಲ್ಡನ್ ಸ್ಟಾರ್ ಗೆ ಬೆಂಜ್ ಕಾರು ಉಡುಗೊರೆ]

ಅಲ್ಲದೇ, ''ತಮ್ಮ ಬೇಕು ಅಂತ ಹೇಳಿರುವ ಚಾರಿತ್ರ್ಯಾ ಅದಾಗಲೇ, 'ರಣ್ಬೀರ್ ಗಣೇಶ್' ಅಂತ ಹೆಸರೂ ಇಟ್ಟಿದ್ದಾಳಂತೆ''. ಮಗಳ ಈ ಉತ್ಸಾಹ ಕಂಡು, ಶಿಲ್ಪಾ ಗಣೇಶ್ ಹರ್ಷ ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್)

English summary
Golden Star Ganesh and his wife Shilpa are expecting second baby. Already being parents to a five year old Charitrya, Ganesh and Shilpa will be parents yet again by the end of this year.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada