twitter
    For Quick Alerts
    ALLOW NOTIFICATIONS  
    For Daily Alerts

    ಯತಿರಾಜ್ ಕಾರು ಅಪಘಾತ ಪ್ರಕರಣ: ಟ್ವೀಟ್ ಡಿಲೀಟ್ ಮಾಡಿದ್ದೇಕೆ ಜಗ್ಗೇಶ್?

    By ಫಿಲ್ಮೀ ಬೀಟ್ ಡೆಸ್ಕ್
    |

    ಕನ್ನಡದ ಹಿರಿಯ ನಟ, ರಾಜಕಾರಣಿ ಜಗ್ಗೇಶ್ ಪುತ್ರ ಯತಿರಾಜ್ ಪ್ರಯಾಣಿಸುತ್ತಿದ್ದ ಕಾರು ಇಂದು (ಜುಲೈ 1) ಮಧ್ಯಾಹ್ನ ಅಪಘಾತಕ್ಕೆ ಒಳಗಾಗಿದೆ. ಬೆಂಗಳೂರು-ಹೈದರಾಬಾದ್ ಹೆದ್ದಾರಿಯ ಅಗಲಗುರ್ಕಿ ಬಳಿ ಅಪಘಾತವಾಗಿದ್ದು ಯತಿರಾಜ್ ಅಪಾಯದಿಂದ ಪಾರಾಗಿದ್ದಾರೆ. ಆದರೆ ಯತಿರಾಜ್ ಚಲಾಯಿಸುತ್ತಿದ್ದ ಕಾರು ನುಜ್ಜುಗುಜ್ಜಾಗಿದೆ.

    Recommended Video

    ಜಗ್ಗೇಶ Tweet ಡಿಲೀಟ್ ಮಾಡಿ ಗೊಂದಲ ಸೃಷ್ಟಿ ಮಾಡಿದ್ರಾ! | Jaggesh Son Car Accident | Filmibeat Kannada

    ಈ ಬಗ್ಗೆ ನಟ ಜಗ್ಗೇಶ್ ಕುಟುಂಬ ಪೊಲೀಸರಿಗೆ ಸರಿಯಾದ ಮಾಹಿತಿ ನೀಡಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ಪ್ರತ್ಯಕ್ಷದರ್ಶಿಗಳನ್ನು ವಿಚಾರಿಸುತ್ತಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ. ಹಾಗಾಗಿ ಅಪಘಾತ ಪ್ರಕರಣದ ಬಗ್ಗೆ ಗೊಂದಲ ಸೃಷ್ಟಿಯಾಗಿದೆ.

    ಮಗನ ಕಾರು ಅಪಘಾತ: ದುರ್ಘಟನೆ ನಡೆದಿದ್ದು ಹೇಗೆಂದು ತಿಳಿಸಿದ ಜಗ್ಗೇಶ್ಮಗನ ಕಾರು ಅಪಘಾತ: ದುರ್ಘಟನೆ ನಡೆದಿದ್ದು ಹೇಗೆಂದು ತಿಳಿಸಿದ ಜಗ್ಗೇಶ್

    ಇದರ ಬೆನ್ನಲ್ಲೇ ನಟ ಜಗ್ಗೇಶ್ ಅಪಘಾತ ಪ್ರಕರಣದ ಬಗ್ಗೆ ಮಾಡಿದ್ದ ಟ್ವೀಟ್ ಅನ್ನು ಸಾಮಾಜಿಕ ಜಾಲತಾಣದಿಂದ ಡಿಲೀಟ್ ಮಾಡಿದ್ದಾರೆ. ಜಗ್ಗೇಶ್ ಟ್ವೀಟ್ ಡಿಲೀಟ್ ಮಾಡಿರುವುದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಪುತ್ರನ ಕಾರು ಅಪಘಾತ ವಾದ ಬಳಿಕ ಜಗ್ಗೇಶ್ ಎರಡು ಟ್ವೀಟ್ ಗಳನ್ನು ಮಾಡಿದ್ದರು.

    Actor Jaggesh deletes tweet about his son car accident

    ''ಕೊರೋನ ಬಂದಾಗಿನಿಂದ ಹೊರ ಹೋಗಿಲ್ಲಾ ಹೋಗಿಬರುವೆ ಎಂದು ಅಮ್ಮನಿಗೆ ಹೇಳಿ ಹೊರ ಹೋದ ಮಗ ಯತಿರಾಜ,ಅವನು ಪ್ರತಿಬಾರಿ ಅವನ ಇಷ್ಟದ ರಸ್ತೆ ಬೆಂಗಳೂರಿನಿಂದ ಚಿಕ್ಕಬಳ್ಳಾಪುರಕ್ಕೆ ಹೋಗಿ ಬರುವಾಗ ಅಡ್ಡ ಬಂದ ನಾಯಿ ರಕ್ಷಿಸಲು ಹೋಗಿ ರಸ್ತೆ ವಿಭಜಕ್ಕೆ ಹೊಡೆದು ಕಾರು ಪಕ್ಕದ ರಸ್ತೆಗೆಬಿದ್ದಿದೆ. ರಾಯರ ದಯೇ ಹಾಗು ನಿಮ್ಮ ಶುಭಹಾರೈಕೆ ಯತಿರಾಜನಿಗೆ ಸಣ್ಣ ಗಾಯವು ಇಲ್ಲ'' ಎಂದು ಜಗ್ಗೇಶ್ ಟ್ವೀಟ್ ಮಾಡಿದ್ದರು.

    ಮತ್ತೊಂದು ಟ್ವೀಟ್ ನಲ್ಲಿ, "ರಾಯರು ನನ್ನಜೊತೆ ಸದ ಇರುತ್ತಾರೆ ಇದ್ದಾರೆ. ಇಂಥ ಘಟನೆಗಳು ಚಮತ್ಕಾರ ನನ್ನ ಬದುಕಲ್ಲಿ ನಡೆವುದೆ ನಾನಿದ್ದೀನೋ ಇರುತ್ತೀನೋ ನಿನ್ನ ಜೊತೆ ಯಾವಾಗಲು ಎಂದು ರಾಯರು ಅವರ ಪವಾಡ ನಿರೂಪಿಸಲು. ನಿನ್ನೆ ಪೂಜೆಯಲ್ಲಿ ಕುಟುಂಬದ ರಕ್ಷಣೆಗೆ ಪ್ರಾರ್ಥಿಸಿದ್ದೆ. ಸದ ಅವರ ಸ್ಮರಣೆಯಲ್ಲೇ ಬದುಕುವ ನನಗೆ ಇದು ಮತ್ತೊಂದು ಪವಾಡ. ನಂಬಿ ಕೆಟ್ಟವರಿಲ್ಲ ಗುರುರಾಯರ. ಎಂದು ಗುರುರಾಯರ ನೆನೆದಿದ್ದರು. ಆದರೀಗ ಈ ಎರಡು ಟ್ವೀಟ್ ಗಳನ್ನು ಜಗ್ಗೇಶ್ ಟ್ವಿಟ್ಟರ್ ಖಾತೆಯಿಂದ ಮಾಯವಾಗಿದೆ.

    English summary
    Actor Jaggesh deletes tweet about his son car accident.
    Thursday, July 1, 2021, 18:19
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X