»   » ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಅವಘಡ: ನಟ ಕೋಮಲ್, ಯೋಗೇಶ್ ಗೆ ಪೆಟ್ಟು

ಸಾಹಸ ದೃಶ್ಯ ಚಿತ್ರೀಕರಣದ ವೇಳೆ ಅವಘಡ: ನಟ ಕೋಮಲ್, ಯೋಗೇಶ್ ಗೆ ಪೆಟ್ಟು

Posted By:
Subscribe to Filmibeat Kannada
kempegowda- 2 : loose mada yogesh and komal injured during shooting at mahabalipuram

'ಕೆಂಪೇಗೌಡ-2' ಚಿತ್ರದ ಚಿತ್ರೀಕರಣದ ವೇಳೆ ಅಪಘಾತ ಸಂಭವಿಸಿದ್ದು, ನಟ ಕೋಮಲ್ ಮತ್ತು ಲೂಸ್ ಮಾದ ಯೋಗೇಶ್ ಅವರಿಗೆ ಪೆಟ್ಟಾಗಿದೆ.

ಚೆನ್ನೈನ ಮಹಾಬಲಿಪುರದಲ್ಲಿ ಚಿತ್ರದ ಸಾಹಸ ದೃಶ್ಯವನ್ನ ಚಿತ್ರೀಕರಿಸುವಾಗ ಬೈಕ್ ನಿಂದ ಕೆಳಗೆ ಬಿದ್ದು ಇಬ್ಬರಿಗೂ ಗಾಯವಾಗಿದೆ. ಚೇಸಿಂಗ್ ಮಾಡುವ ದೃಶ್ಯದಲ್ಲಿ ಆಕ್ಸಿಡೆಂಟ್ ನಡೆದಿದ್ದು, ಕೋಮಲ್ ಅವರು ಬೈಕ್ ಓಡಿಸುತ್ತಿದ್ದರು. ಲೂಸ್ ಮಾದ ಅವರು ಹಿಂದೆ ಕೂತಿದ್ದರು.

Actor Komal and Loose Mada injured while shooting for Kempegowda 2

ಲೂಸ್ ಮಾದ ಯೋಗೇಶ್ ಅವರಿಗೆ ಮೊಣಕಾಲಿಗೆ ಗಾಯವಾಗಿದ್ದು, ಕೋಮಲ್ ಅವರಿಗೆ ಬೆನ್ನಿಗೆ ಪೆಟ್ಟು ಬಿದ್ದಿದೆ ಎಂದು ಹೇಳಲಾಗ್ತಿದೆ. ಸದ್ಯ, ಇಬ್ಬರಿಗೂ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ.

ಈ ಬಗ್ಗೆ ಸುದ್ದಿ ವಾಹಿನಿಗೆ ಪ್ರತಿಕ್ರಿಯೆ ನೀಡಿರುವ 'ಕೆಂಪೇಗೌಡ-2' ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕ ಶಂಕರ್ ಗೌಡ ''ಇಬ್ಬರಿಗೂ ಸಣ್ಣ ಪುಟ್ಟ ಗಾಯವಾಗಿದೆ. ಇಬ್ಬರು ಆರಾಮಗಿದ್ದಾರೆ. ಸ್ಥಳದಲ್ಲೇ ಚಿಕಿತ್ಸೆ ನೀಡಲಾಗಿದೆ. ಸ್ಕ್ಯಾನಿಂಗ್ ಮಾಡಲು ವೈದ್ಯರು ಸೂಚಿಸಿದ ಹಿನ್ನೆಲೆ ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದೇವೆ'' ಎಂದು ತಿಳಿಸಿದ್ದಾರೆ.

English summary
Sandalwood actor 'Loose Mada' aka Yogesh and Komal Kumar has suffered injuries while shooting for a chasing sequence for the Kempegowda 2 movie at Mahabalipuram in Chennai on Wednesday (august 30th).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada