»   » ವಸಿಷ್ಠ ಸಿಂಹ ಪ್ರತಿಭೆಗೆ ಫುಲ್ ಮಾರ್ಕ್ಸ್ ಕೊಟ್ಟ ಪ್ರಕಾಶ್ ರೈ

ವಸಿಷ್ಠ ಸಿಂಹ ಪ್ರತಿಭೆಗೆ ಫುಲ್ ಮಾರ್ಕ್ಸ್ ಕೊಟ್ಟ ಪ್ರಕಾಶ್ ರೈ

Posted By:
Subscribe to Filmibeat Kannada

ಕಂಚಿನ ಕಂಠದ ನಟ ವಸಿಷ್ಠ ಸಿಂಹ ಅವರ ಪ್ರತಿಭೆಗೆ ಬಹುಭಾಷ ನಟ ಪ್ರಕಾಶ್ ರೈ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ಕರ್ನಾಟಕದ ಈ ಅದ್ಭುತ ಪ್ರತಿಭೆ ಬಗ್ಗೆ ನನಗೆ ಖುಷಿ ಮತ್ತು ಹೆಮ್ಮೆ ಇದೆ'' ಎಂದಿದ್ದಾರೆ.

ಪ್ರಕಾಶ್ ರೈ ಅವರು ಯಾಕೆ ವಸಿಷ್ಠ ಸಿಂಹ ಅವರನ್ನ ಹೊಗಳಿದ್ದಾರೆ ಎಂದು ಯೋಚನೆ ಮಾಡುತ್ತಿದ್ದೀರಾ. ಅದಕ್ಕೆ ಕಾರಣ ರೋಹಿತ್ ಪದಕಿ ನಿರ್ದೇಶನದ 'ದಯವಿಟ್ಟು ಗಮನಿಸಿ' ಚಿತ್ರ.[ವಸಿಷ್ಠ ಸಿಂಹ ಧ್ವನಿಯಲ್ಲಿ ಮೂಡಿದ ಈ ಹಾಡಿಗೆ ಮರುಳಾಗದವರಿಲ್ಲ.!]

Actor Prakash Rai Appreciate to Vasishta Simha

ಇತ್ತೀಚೆಗಷ್ಟೇ 'ದಯವಿಟ್ಟು ಗಮನಿಸಿ' ಚಿತ್ರದಲ್ಲಿ ವಸಿಷ್ಠ ಸಿಂಹ ಅವರು ಹಾಡಿರುವ ''ಮರೆತೇ ಹೋದೆನೂ'' ಹಾಡಿನ Unplugged Version ಬಿಡುಗಡೆಯಾಗಿತ್ತು. ಈ ಹಾಡಿಗೆ ಎಲ್ಲರಿಂದಲೂ ಪ್ರಶಂಸೆ ವ್ಯಕ್ತವಾಗಿತ್ತು. ಈ ಹಾಡನ್ನ ಕೇಳಿದ ಪ್ರತಿಯೊಬ್ಬರು ವಸಿಷ್ಠ ಅವರ ಧ್ವನಿಗೆ ಫಿದಾ ಆಗುತ್ತಿದ್ದಾರೆ. ಅಷ್ಟರ ಮಟ್ಟಿಗೆ ಈ ಹಾಡು ಮೋಡಿ ಮಾಡುತ್ತಿದೆ. ಈ ಹಾಡನ್ನ ಕೇಳಿದ ನಟ ಪ್ರಕಾಶ್ ರೈ ಕೂಡ ವಸಿಷ್ಠ ಅವರ ಧ್ವನಿಗೆ ಮರುಳಾಗಿದ್ದು, ಈ ಅದ್ಭುತ ಕಂಠಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.['ದಯವಿಟ್ಟು ಗಮನಿಸಿ'.. ಇದು ಸಂಗೀತ ಭಟ್ ಸಿಹಿ ಮುತ್ತಿನ ಕಥೆ]

ಅಂದ್ಹಾಗೆ, ಚಿತ್ರ ಸಾಹಿತಿ ರೋಹಿತ್ ಪದಕಿ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಚಿತ್ರ 'ದಯವಿಟ್ಟು ಗಮನಿಸಿ'. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಬಿಡುಗಡೆಯ ಸನಿಹದಲ್ಲಿದೆ. ರಘು ಮುಖರ್ಜಿ, ಸಂಯುಕ್ತ ಹೊರನಾಡು, ರಾಜೇಶ್ ನಟರಾಜ್, ವಸಿಷ್ಠ ಸಿಂಹ, ಸಂಗೀತಾ ಭಟ್, ಸುಕೃತಾ ವಾಗ್ಲೆ, ಭಾವನಾ ರಾವ್, ಪ್ರಕಾಶ್ ಬೆಳವಾಡಿ, ಸೇರಿದಂತೆ ಹಲವರು ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ.

ವಸಿಷ್ಠ ಸಿಂಹ ಹಾಡಿರುವ ಹಾಡಿ ಇಲ್ಲಿದೆ ನೋಡಿ

English summary
Kannada Actor Prakash Rai has taken his twitter account to Appreciate Kannada Actor Vasishta Simha For his Wonderful Song from Dayavittu Gamanisi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada