For Quick Alerts
  ALLOW NOTIFICATIONS  
  For Daily Alerts

  ಸಂತಸದ ಸುದ್ದಿಯ ಜತೆಗೆ ಎಲ್ಲರೂ ಗಮನಿಸಬೇಕಾದ ಸಲಹೆ ನೀಡಿದ ನಟ 'ನೆನಪಿರಲಿ' ಪ್ರೇಮ್

  |

  ನಟ 'ನೆನಪಿರಲಿ' ಪ್ರೇಮ್ ಸಂತೋಷದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಕೆಲವು ದಿನಗಳ ಹಿಂದೆ ಅವರ ತಾಯಿ ಕೊರೊನಾ ವೈರಸ್ ಪಾಸಿಟಿವ್ ಕಂಡುಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಈಗ ಅವರ ತಾಯಿ ಗುಣಮುಖರಾಗಿ ಮನೆಗೆ ಮರಳಿದ್ದಾರೆ. ಈ ಖುಷಿಯ ಸಂಗತಿಯನ್ನು ಹೇಳಿಕೊಂಡಿರುವ ಪ್ರೇಮ್. ಅದರ ಜತೆಗೆ ಕೆಲವು ಮಹತ್ವದ ಸಲಹೆಗಳನ್ನೂ ಜನರಿಗೆ ನೀಡಿದ್ದಾರೆ.

  1500 ಜನ ವಿದ್ಯಾರ್ಥಿಗಳನ್ನು ವಿದೇಶದಿಂದ ಕರೆತಂದ Sonu Sood | Kyrgyzstan | Filmibeat Kannnada

  'ಕೆಲವು ದಿನಗಳ ನನ್ನ ತಾಯಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಹಾಗಾಗಿ ಆಸ್ಪತ್ರೆ ಸೇರಿದ್ದರು, ಈಗ ಸಂತೋಷದ ಸಂಗತಿಯೆಂದರೆ ಅವರು ಈ ಮೊದಲಿಗಿಂತಲೂ ಹೆಚ್ಚು ಆರೋಗ್ಯವಂತರಾಗಿ, ಆನಂದದಿಂದ ಮನೆಗೆ ಮರಳಿದ್ದಾರೆ' ಎಂದು ಪ್ರೇಮ್ ಮಾಹಿತಿ ನೀಡಿದ್ದಾರೆ. ಮುಂದೆ ಓದಿ.

  ಕೊರೊನಾ ಹಾವಳಿ ದೂರವಾಗಲಿ ಎಂದು ಮಂತ್ರಾಲಯದಲ್ಲಿ 'ನೆನಪಿರಲಿ' ಪ್ರೇಮ್ ಉರುಳುಸೇವೆ

  ವದಂತಿಗೆ ಕಿವಿಗೊಡಬೇಡಿ

  ವದಂತಿಗೆ ಕಿವಿಗೊಡಬೇಡಿ

  ಕೊರೊನಾ ವೈರಸ್ ಕುರಿತಂತೆ ಎಲ್ಲೆಡೆ ಕೆಲವು ವದಂತಿ ಮತ್ತು ತಪ್ಪು ಕಲ್ಪನೆಗಳು ಹರಡಿವೆ ಎಂದು ಪ್ರೇಮ್ ಹೇಳಿದ್ದಾರೆ. 60 ವರ್ಷ ಮೇಲ್ಪಟ್ಟವರು, ಬಿಪಿ ಮತ್ತು ಶುಗರ್ ಇರುವವರಿಗೆ ಕೊರೊನಾ ಬಂದರೆ ಅವರು ಮತ್ತೆ ವಾಪಸ್ ಜೀವಂತವಾಗಿ ಬರುವುದಿಲ್ಲ ಎಂದು ವದಂತಿ ಹರಡಿದೆ. ಇದೆಲ್ಲವೂ ಸುಳ್ಳು ಸುದ್ದಿ. ನನ್ನ ತಾಯಿಗೆ 66 ವರ್ಷ, ಅವರಿಗೂ ಬಿಪಿ, ಶುಗರ್ ಇದೆ. ಆದರೂ ಧೈರ್ಯವಾಗಿ ಕೊರೊನಾ ಎದುರಿಸಿ ನಗು ನಗುತ್ತಾ ಮನೆಗೆ ಮರಳಿದ್ದಾರೆ ಎಂದು ಪ್ರೇಮ್ ಶುಭ ಸಂಗತಿಯನ್ನು ತಿಳಿಸಿದ್ದಾರೆ.

  ಆತ್ಮಸ್ಥೈರ್ಯ ಇದ್ದರೆ ಸಾಕು

  ಆತ್ಮಸ್ಥೈರ್ಯ ಇದ್ದರೆ ಸಾಕು

  ರಕ್ತದೊತ್ತಡ ಮತ್ತು ಮಧುಮೇಹ ಇದ್ದರೂ ವಯಸ್ಸಾದ ತಮ್ಮ ತಾಯಿ ಅದರ ನಡುವೆ ಕೊರೊನಾ ವೈರಸ್ ಅನ್ನೂ ಎದುರಿಸಿ ಗೆದ್ದು ಬಂದಿದ್ದಾರೆ. ಹೀಗಾಗಿ ಬಿಪಿ ಮತ್ತು ಶುಗರ್ ಇರುವವರು, ಹಿರಿಯರು ದಯವಿಟ್ಟು ಯಾವುದೇ ರೀತಿಯ ಆತಂಕ ಇಟ್ಟುಕೊಳ್ಳಬೇಡಿ. ಭಯ ಪಡಬೇಡಿ. ನಿಮ್ಮಲ್ಲಿ ಧೈರ್ಯ ತಂದುಕೊಳ್ಳಿ. ಆತ್ಮಸ್ಥೈರ್ಯವಿದ್ದರೆ ಕೊರೊನಾ ಬಂದಾಗಲೂ ನಗು ನಗುತ್ತಾ ಮನೆಗೆ ಬರುವಂತೆ ಮಾಡುತ್ತದೆ ಎಂದು ಸ್ಫೂರ್ತಿ ನೀಡಿದ್ದಾರೆ.

  ಒಟ್ಟಿಗಿದ್ದರೂ ದೂರ-ದೂರ: ಮಗ ಅಭಿಷೇಕ್ ಹಂಚಿಕೊಂಡ ಸುಮಲತಾ ಚಿತ್ರ

  ವೈದ್ಯರಿಗೆ ಧನ್ಯವಾದ

  ವೈದ್ಯರಿಗೆ ಧನ್ಯವಾದ

  ಇದರ ಜತೆಗೆ ಅವರು ತಮ್ಮ ತಾಯಿಯನ್ನು ಅಷ್ಟು ಚೆನ್ನಾಗಿ ನೋಡಿಕೊಂಡು, ಆರೈಕೆ ಮಾ,ಡಿ ಔಷಧ ನೀಡಿ ಗುಣಪಡಿಸಿದ ವೈದ್ಯರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಅಮ್ಮ ಆರೋಗ್ಯವಂತರಾಗಿ ಬರುವಂತೆ ಹಾರೈಕೆ ಮಾಡಿದ ಎಲ್ಲ ಮನಸುಗಳಿಗೂ ಧನ್ಯವಾದ ಎಂದಿದ್ದಾರೆ. ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ. ಕೊರೊನಾ ಬಂದವರು ಬೇಗನೆ ಗುಣಮುಖರಾಗಿ ಮನೆಗೆ ಬರಲಿ ಎಂದು ಹಾರೈಸುತ್ತೇನೆ ಎಂದು ಪ್ರೇಮ್ ಹೇಳಿದ್ದಾರೆ.

  ಇನ್ಮುಂದೆ ಜಾಕ್‌ಪಾಟ್ ಎಂದ ಪ್ರೇಮ್

  ಇನ್ಮುಂದೆ ಜಾಕ್‌ಪಾಟ್ ಎಂದ ಪ್ರೇಮ್

  ಇತ್ತೀಚೆಗೆ ಭೀಮನ ಅಮಾವಾಸ್ಯೆಯಂದು ಪತ್ನಿಯಿಂದ ಪಾದಪೂಜೆ ಮಾಡಿಸಿಕೊಂಡ ಫೋಟೊಗಳನ್ನು ಪ್ರೇಮ್ ಹಂಚಿಕೊಂಡಿದ್ದರು. 'ನಿನ್ನ ಪ್ರೀತಿಸಿದ ಮೇಲೆ ಆಯಸ್ಸು ಜಾಸ್ತಿ ಆಯ್ತು. ಮದುವೆ ಆದ್ಮೇಲೆ ಅದೃಷ್ಟ ಖುಲಾಯಿಸಿತು. ಈಗ ಪಾದಪೂಜೆ ಮಾಡಿದ್ದೀಯ. ನನ್ಮಗಂದು ಇನ್ಮೇಲೆ ಜಾಕ್ಪಾಟ್' ಎಂದು ಲವ್ಲಿ ಸ್ಟಾರ್ ಬರೆದುಕೊಂಡಿದ್ದರು.

  ಧ್ರುವ ಸರ್ಜಾ ದಂಪತಿಗೆ ಕೊರೊನಾ ನೆಗೆಟಿವ್: ಅಣ್ಣನ ಆಶೀರ್ವಾದ ಎಂದ ನಟ

  English summary
  Actor Prem's mother has returned to home after recovering from coronavirus.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X