twitter
    For Quick Alerts
    ALLOW NOTIFICATIONS  
    For Daily Alerts

    ಮೈಸೂರಿನಲ್ಲಿ ಫಿಲ್ಮ್ ಸಿಟಿ ಕೆಲಸ ಆರಂಭಿಸುವಂತೆ ಸಂಸದ ಪ್ರತಾಪ್ ಸಿಂಹಗೆ ವಸಿಷ್ಠ ಸಿಂಹ ಮನವಿ!

    |

    ಸ್ಯಾಂಡಲ್‌ವುಡ್‌ ನಟ ವಸಿಷ್ಠ ಸಿಂಹ ಯಾರಿಗೆ ಗೊತ್ತಿಲ್ಲ. ಕನ್ನಡ ಚಿತ್ರರಂಗದ ಕಂಚಿನ ಕಂಠ ಎಂದೇ ಜನಪ್ರಿಯರಾಗಿರುವ ವಸಿಷ್ಠ ಸಿಂಹ ಮೈಸೂರು ಹಾಗೂ ಕೊಡಗು ಲೋಕಸಭಾ ಸದಸ್ಯ ಪ್ರತಾಪ್ ಸಿಂಹರನ್ನು ಭೇಟಿ ಮಾಡಿದ್ದಾರೆ.

    ಮೈಸೂರಿನಲ್ಲಿ ಆದಷ್ಟು ಬೇಗಸ ಸರ್ಕಾರ ಫಿಲ್ಮ್ ಸಿಟಿಯ ಅಭಿವೃದ್ಧಿ ಕೆಲಸವನ್ನು ಆರಂಭ ಮಾಡುವಂತೆ ಪ್ರತಾಪ್ ಸಿಂಹ ಬಳಿ ಮನವಿ ಮಾಡಿಕೊಂಡಿದ್ದಾರೆ. ವಸಿಷ್ಠ ಸಿಂಹ ಹಾಗೂ ಪ್ರತಾಪ್ ಸಿಂಹ ಇಬ್ಬರೂ ಭೇಟಿ ಮಾಡಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

    'ಓದೆಲಾ ರೇಲ್ವೆ ಸ್ಟೇಷನ್'ನಲ್ಲಿ ವಸಿಷ್ಠ ಸಿಂಹ: ಕನ್ನಡಿಗನ ನಟನೆಗೆ ತೆಲುಗು ಪ್ರೇಕ್ಷಕ ಫಿದಾ'ಓದೆಲಾ ರೇಲ್ವೆ ಸ್ಟೇಷನ್'ನಲ್ಲಿ ವಸಿಷ್ಠ ಸಿಂಹ: ಕನ್ನಡಿಗನ ನಟನೆಗೆ ತೆಲುಗು ಪ್ರೇಕ್ಷಕ ಫಿದಾ

    ಮೈಸೂರಿನಲ್ಲಿ ಫಿಲ್ಮ್ ಸಿಟಿಯನ್ನು ಆರಂಭ ಮಾಡುವುದಾಗಿ ಮೂರ್ನಾಲ್ಕು ವರ್ಷಗಳ ಹಿಂದೆನೇ ಸರ್ಕಾರ ಹೇಳಿತ್ತು. ಆದರೆ, ಇನ್ನೂ ಫಿಲ್ಮ್ ಸಿಟಿ ನಿರ್ಮಾಣ ಕಾರ್ಯ ಆರಂಭ ಆಗಿಲ್ಲ. ಮೈಸೂರಿನಲ್ಲಿಯೇ ಫಿಲ್ಮ್ ಸಿಟಿ ನಿರ್ಮಾಣ ಆಗೋದರಿಂದ ಕನ್ನಡದ ಕಲಾವಿದರಿಗೆ ಕೆಲಸ ಸಿಗಲಿದೆ. ಅಲ್ಲದೆ ಬೇರೆ ಎಲ್ಲೋ ಹೋಗಿ ಶೂಟಿಂಗ್ ಮಾಡುವ ಅವಶ್ಯಕತೆಯೂ ಇರೋದಿಲ್ಲ. ಹೀಗಾಗಿ ಸರ್ಕಾರ ಗಮನ ಹರಿಸಬೇಕಿದೆ ಎಂದು ವಸಿಷ್ಠ ಸಿಂಹ ಹೇಳಿದ್ದಾರೆ.

    Actor Vasishta Simha Met Prathap Simha And Requested To Develop Film City In Mysore

    "ಮೈಸೂರಿನ ಭವಿಷ್ಯದ ಬೆಳವಣಿಗೆ ದೃಷ್ಟಿಯಲ್ಲಿ ದಶಪಥ ಹೆದ್ದಾರಿಯನ್ನು ಸಂಸದ ಪ್ರತಾಪ್ ಸಿಂಹ ಆರಂಭಿಸಿದ್ದಾರೆ. ಕಾಳಜಿಯಿಂದ ಅಭಿವೃದ್ಧಿ ಕೆಲಸಗಳು ನಡೆಯುತ್ತಿರುವುದು ಸಂತಸದ ವಿಚಾರ. ಇದರಿಂದ ಮೈಸೂರಿನಲ್ಲಿ ನೂರಾರು ಕಾರ್ಖಾನೆ ಕೈಗಾರಿಕೋದ್ಯಮ ಸ್ಥಾಪನೆಯಾಗಿ ಲಕ್ಷಾಂತರ ಮಂದಿಗೆ ಕೆಲಸ ಸಿಗುವಂತಾಗುತ್ತದೆ. ಈಗ ಮೈಸೂರಿನಲ್ಲಿ ಫಿಲ್ಮ್ ಸಿಟಿಯನ್ನುಅಭಿವೃದ್ಧಿ ಕೆಲಸವನ್ನು ಆದಷ್ಟು ಬೇಗ ಆರಂಭ ಮಾಡಬೇಕು." ಎಂದು ವಸಿಷ್ಟ ಸಿಂಹ ಮೈಸೂರು ಸಂಸ ಪ್ರತಾಪ್ ಸಿಂಹ ಬಳಿ ಮನವಿ ಮಾಡಿಕೊಂಡಿದ್ದಾರೆ.

    ನನ್ನನ್ನು ಮನುಷ್ಯನನ್ನಾಗಿಸಿದ ಗುರುಗಳು ನೀವು: ಹಂಸಲೇಖಗೆ ಕೈ ಮುಗಿದ ಧನಂಜಯ್ನನ್ನನ್ನು ಮನುಷ್ಯನನ್ನಾಗಿಸಿದ ಗುರುಗಳು ನೀವು: ಹಂಸಲೇಖಗೆ ಕೈ ಮುಗಿದ ಧನಂಜಯ್

    ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಹಿಮ್ಮಾವು ಗ್ರಾಮದಲ್ಲಿ ಫಿಲ್ಮ್ ಸಿಟಿ ಸ್ಥಾಪನೆ ಮಾಡುವ ಉದ್ದೇಶ ಮಾಡಲಾಗಿತ್ತು. ಈ ಕಾರಣಕ್ಕಾಗಿ ಸುಮಾರು 110.08 ಎಕರೆ ಜಮೀನನ್ನೂ ಮಂಜೂರು ಮಾಡಲಾಗಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಸಚಿವ ಸಿ.ಸಿ.ಪಾಟೀಲ್‌ ಕಳೆದ ಮಾರ್ಚ್ ತಿಂಗಳಿನಲ್ಲಿಯೇ ಹೇಳಿದ್ದರು. ಖಾಸಗಿ ಸಹಭಾಗಿತ್ವದಲ್ಲಿ 500 ಕೋಟಿ ರೂ. ವೆಚ್ಚದಲ್ಲಿ ಫಿಲ್ಮ್ ಸಿಟಿ ನಿರ್ಮಿಸುವುದಾಗಿ 2020-21ನೇ ಸಾಲಿನ ಬಜೆಟ್‌ನಲ್ಲಿ ಸಿಎಂ ಘೋಷಿಸಿದ್ದರು.

    English summary
    Actor Vasishta Simha Met Prathap Simha And Requested To Develop Film City In Mysore, Know More.
    Tuesday, September 6, 2022, 18:44
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X