»   » ಕಾಕ್ ಪಿಟ್ ನಲ್ಲಿ ಕನ್ನಡ ನಟಿ; ಪೈಲಟ್ ಗಳು ವಜಾ

ಕಾಕ್ ಪಿಟ್ ನಲ್ಲಿ ಕನ್ನಡ ನಟಿ; ಪೈಲಟ್ ಗಳು ವಜಾ

By: ಅನಂತರಾಮು, ಹೈದರಾಬಾದ್
Subscribe to Filmibeat Kannada
ಕನ್ನಡ ಸಿನಿಮಾ ತಾರೆಯೊಬ್ಬರು ಕಾಕ್ ಪಿಟ್ ಪ್ರವೇಶಿಸಿದ ಆರೋಪದ ಮೇಲೆ ಇಬ್ಬರು ಏರ್ ಇಂಡಿಯಾ ಪೈಲಟ್ ಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಈ ವಿಮಾನ ಬೆಂಗಳೂರಿನಿಂದ ಹೈದರಾಬಾದಿಗೆ ಪ್ರಯಾಣಿಸುತ್ತಿತ್ತು.

ವಿಮಾನದ ಕಾಕ್ ಪಿಟ್ ಗೆ ನಟಿಯೊಬ್ಬರಿಗೆ ಪ್ರವೇಶ ನೀಡುವ ಮೂಲಕ ವಿಮಾನಯಾನದ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿರುವ ಹಾಗೂ ಕರ್ತವ್ಯಲೋಪ ಎಸಗಿರುವ ಆರೋಪದ ಮೇರೆಗೆ ಇವರನ್ನು ಸೇವೆಯಿಂದ ವಜಾಗೊಳಿಸಲಾಗಿದೆ.

ನಟಿಯೊಬ್ಬರು ಕಾಕ್ ಪಿಟ್ ಪ್ರವೇಶಿಸಿ ಅಬ್ಸರ್ವರ್ ಸೀಟ್ ನಲ್ಲಿ ಕುಳಿತಿದ್ದರು. ಈ ಸೀಟಿನಲ್ಲಿ ಕುಳಿತುಕೊಳ್ಳಬೇಕಾದರೆ ಡಿಜಿಸಿಎ ಅನುಮತಿ ಇರಬೇಕು. ನಿಯಮಗಳನ್ನು ಉಲ್ಲಂಘಿಸಿರುವ ಇಬ್ಬರು ಪೈಲಟ್ ಗಳನ್ನು ಅಮಾನತುಗೊಳಿಸಿ ತನಿಖೆಗೆ ಆದೇಶಿಸಲಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.

ತುರ್ತು ಸಂದರ್ಭಗಳನ್ನು ಹೊರಪಡಿಸಿದರೆ ನಿಯಮಗಳ ಪ್ರಕಾರ ಯಾವುದೇ ಪ್ರಯಾಣಿಕರು ಕಾಕ್ ಪಿಟ್ ಗೆ ಪ್ರವೇಶಿಸುವಂತಿಲ್ಲ. ಆದರೆ ಈ ಇಬ್ಬರು ಪೈಲಟ್ ಗಳು ಕರ್ತವ್ಯಪ್ರಜ್ಞೆ ಮರೆತು ನಡೆದುಕೊಂಡಿದ್ದಾರೆ ಎಂಬ ಆರೋಪಗಳನ್ನು ಮಾಡಲಾಗಿದೆ.

ಇಷ್ಟಕ್ಕೂ ಕಾಕ್ ಪಿಟ್ ಪ್ರವೇಶಿಸಿದ್ದ ನಟಿ ಯಾರು ಎಂಬ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ಮೂಲಗಳ ಪ್ರಕಾರ ಆ ನಟಿ ಕನ್ನಡದ 'ಮೈನಾ' ಚಿತ್ರದ ನಾಯಕಿ ನಿತ್ಯಾ ಮೆನನ್ ಎನ್ನಲಾಗಿದೆ. ಆದರೆ ಈ ಸುದ್ದಿಯನ್ನು ನಿತ್ಯಾ ಮೆನನ್ ಸಂಪೂರ್ಣ ಅಲ್ಲಗಳೆದಿದ್ದಾರೆ. (ಮೈನಾ ಚಿತ್ರ ವಿಮರ್ಶೆ)

ಸದ್ಯಕ್ಕೆ ನಿತ್ಯಾ ಮೆನನ್ ಅವರು ತೆಲುಗು ಚಿತ್ರವೊಂದರಲ್ಲಿ ಅಭಿನಯಿಸಲು ಹೈದರಾಬಾದ್ ಗೆ ತೆರಳಿದ್ದಾರೆ. ಅವರು ಯಾವುದೇ ವಿಮಾನದ ಕಾಕ್ ಪಿಟ್ ಗೆ ಪ್ರವೇಶಿಸಿಲ್ಲ. ಇಷ್ಟಕ್ಕೂ ಕಾಕ್ ಪಿಟ್ ಪ್ರವೇಶಿಸಿರುವವರು ಯಾರು ಎಂಬ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದಿದ್ದಾರೆ ಅವರ ಮ್ಯಾನೇಜರ್.

English summary
In violation of all rules and in complete negligence of passenger safety, Air India (AI) pilots on a Bangalore-Hyderabad flight, allowed a south Indian actress to travel in the cockpit. The actress sat in the observer's seat during the flight.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada