For Quick Alerts
  ALLOW NOTIFICATIONS  
  For Daily Alerts

  ಶಿವಾಜಿ ಸೂರತ್ಕಲ್ ಜೊತೆ ದಕ್ಷ ಪೊಲೀಸ್ ಅಧಿಕಾರಿಯಾಗಿ ಮೇಘನಾ ಗಾಂವ್ಕರ್

  |

  ಎರಡು ವರ್ಷದ ಹಿಂದೆ ರಮೇಶ್ ಅರವಿಂದ್ ಅಭಿನಯದ 101ನೇ ಸಿನಿಮಾ 'ಶಿವಾಜಿ ಸೂರತ್ಕಲ್' ಸಿನಿಮಾ ರಿಲೀಸ್ ಆಗಿತ್ತು. ಮಿಸ್ಟ್ರಿ, ಸಸ್ಪೆನ್ಸ್ ಸಿನಿಮಾಗಳು ಕಣ್ಮರೆಯಾಗಿದ್ದ ಕಾಲದಲ್ಲಿ ಈ ಸಿನಿಮಾ ಬಿಡುಗಡೆಯಾಗಿತ್ತು. ಈ ಸಿನಿಮಾಗೆ ಪ್ರೇಕ್ಷಕರಿಂದ ಸಖತ್ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು.

  ರಮೇಶ್ ಅರವಿಂದ್ ಹಾಗೂ ರಾಧಿಕಾ ನಾರಾಯಣ್ ನಟಿಸಿದ್ದ ಸಿನಿಮಾ ಬಾಕ್ಸಾಫೀಸ್‌ನಲ್ಲೂ ಗೆದ್ದಿತ್ತು. ಅಲ್ಲದೆ ಬೇರೆ ಬೇರೆ ಭಾಷೆಗಳಲ್ಲೂ ರಿಮೇಕ್ ರೈಟ್ಸ್ ಸೇಲ್ ಆಗಿತ್ತು. ಈ ಯಶಸ್ಸಿನ ಬೆನ್ನಲ್ಲೇ ಪಾರ್ಟ್ ಮಾಡೋಕೆ ಚಿತ್ರತಂಡ ಮುಂದಾಗಿತ್ತು. ಈಗಾಗಲೇ 'ಶಿವಾಜಿ ಸೂರತ್ಕಲ್ 2' ಆರಂಭ ಆಗಿದ್ದು, ಶೂಟಿಂಗ್ ಭರದಿಂದ ಸಾಗಿದೆ.

  'ಶಿವಾಜಿ ಸೂರತ್ಕಲ್‌ 2'ನಲ್ಲಿ ಮೇಘನಾ ಪೊಲೀಸ್

  'ಶಿವಾಜಿ ಸುರತ್ಕಲ್ 2' ಸಿನಿಮಾದಲ್ಲಿ ನಟಿ ಮೇಘನಾ ಗಾಂವ್ಕರ್ ದಕ್ಷ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಾಕಷ್ಟು ಯುವ ಮಹಿಳಾ ಪೊಲೀಸ್ ಅಧಿಕಾರಿಗಳ ಬಗ್ಗೆ ವಿವರವಾಗಿ ಅಧ್ಯಯನ ಬಳಿಕ ನಿರ್ದೇಶಕ ಆಕಾಶ್ ಶ್ರೀವತ್ಸವ್ ಈ ಪಾತ್ರವನ್ನು ಸೃಷ್ಟಿ ಮಾಡಿದ್ದಾರೆ.

  ಮೇಘನಾ ಗಾಂವ್ಕರ್ ತಂದೆ ಕೂಡ ಪೊಲೀಸ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಹೀಗಾಗಿ ಮೇಘನಾ ಗಾಂವ್ಕರ್‌ಗೆ ಪೊಲೀಸ್ ಅಧಿಕಾರಿ ಪಾತ್ರವನ್ನು ನಿಭಾಯಿಸುವುದು ಹೆಚ್ಚೇನು ಕಷ್ಟ ಆಗಿರಲಿಕ್ಕಿಲ್ಲ. ಇನ್ನು ಈ ಸಿನಿಮಾದಲ್ಲಿ ಮೇಘನಾ ಗಾಂವ್ಕರ್ ಅವರದ್ದು ಶಿವಾಜಿಯ ಮೇಲಧಿಕಾರಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಿವಾಜಿ ತನಿಖೆಯ ಪ್ರತಿ ಹಂತದಲ್ಲೂ ಜೊತೆಗಿದ್ದು ಸಮಸ್ಯೆ ಬಗೆ ಹರಿಸಲು ಸಹಾಯ ಮಾಡಲಿದ್ದಾರೆ.

  Actress Meghana Gaonkar Became Police Officer in Shivaji Surathkal 2

  ರಮೇಶ್ ಅರವಿಂದ್ ಬರ್ತ್‌ಡೇಗೆ ಟೀಸರ್

  'ಶಿವಾಜಿ ಸುರತ್ಕಲ್-2' ಟೀಮ್ ರಮೇಶ್ ಅರವಿಂದ್ ಹುಟ್ಟು ಹಬ್ಬಕ್ಕೆ ತಯಾರಿ ನಡೆಸಿದೆ. ಸೆಪ್ಟೆಂಬರ್ 10 ರಂದು 'ಶಿವಾಜಿ ಸೂರತ್ಕಲ್ 2' ಟೀಸರ್ ಅನ್ನು ಬಿಡುಗಡೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆ. ಇನ್ನು ಸಿನಿಮಾ ಚಿತ್ರೀಕರಣ ಬಹುತೇಕ ಮುಗಿದಿದ್ದು ಡಬ್ಬಿಂಗ್ ಕೆಲಸಗಳು ಶುರುವಾಗಿದೆ.

  'ಶಿವಾಜಿ ಸುರತ್ಕಲ್-2' ಚಿತ್ರಕ್ಕೆ ಜೂಡ ಸ್ಯಾಂಡಿ ಮ್ಯೂಸಿಕ್ ನೀಡಿದ್ದಾರೆ. ದರ್ಶನ್ ಅಂಬಟ್, ಗುರು ಪ್ರಸಾದ್ ಎಂ ಜಿ ಛಾಯಾಗ್ರಹಣವಿದೆ. ರೇಖಾ ಕೆ.ಎನ್ ಮತ್ತು ಅನುಪ್ ಗೌಡ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. ಮೊದಲ ಪಾರ್ಟ್ ನಿರ್ಮಿಸಿದ್ದ ಆಕಾಶ್ ಶ್ರೀವತ್ಸ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

  English summary
  Actress Meghana Gaonkar Became Police Officer in Shivaji Surathkal 2, Know More.
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X