»   » ರಿಯಲ್ ಗ್ಯಾಂಗ್ ಸತ್ಯ ಕಥೆಯ 'ಜಿಂದಾ' ಟ್ರೈಲರ್ ಹೇಗಿದೆ ನೋಡಿ..

ರಿಯಲ್ ಗ್ಯಾಂಗ್ ಸತ್ಯ ಕಥೆಯ 'ಜಿಂದಾ' ಟ್ರೈಲರ್ ಹೇಗಿದೆ ನೋಡಿ..

Posted By:
Subscribe to Filmibeat Kannada

ಸ್ಯಾಂಡಲ್‌ ವುಡ್ ಮಾತ್ರವಲ್ಲದೇ, ಟಾಲಿವುಡ್, ಕಾಲಿವುಡ್, ಮಾಲಿವುಡ್ ನಲ್ಲೂ ಬೇಡಿಕೆ ಕಂಡುಕೊಂಡಿರುವ ನಟಿ ಮೇಘನಾ ರಾಜ್, ಇತ್ತೀಚೆಗೆ ಟಿ.ಎಸ್ ನಾಗಾಭರಣ ಆಕ್ಷನ್ ಕಟ್ ಹೇಳಿದ್ದ 'ಅಲ್ಲಮ' ಚಿತ್ರದಲ್ಲಿ ನೃತ್ಯಗಾರ್ತಿ ಮಾಯಾದೇವಿ ಪಾತ್ರದಲ್ಲಿ ಕಣ್ಮನ ಸೆಳೆದಿದ್ದರು. ಅಲ್ಲದೇ ಸಾಲು ಸಾಲು ಚಿತ್ರಗಳಲ್ಲಿ ತೊಡಗಿಕೊಳ್ಳುವ ಮೇಘನಾ ರಾಜ್ ಹಿನ್ನೆಲೆ ಗಾಯಕಿಯಾಗಿ ತೆರೆಹಿಂದೆಯೂ ಕಮಾಲ್ ಮಾಡಲು ಶುರು ಮಾಡಿದ್ದಾರೆ.[ಹಿನ್ನಲೆ ಗಾಯಕಿಯಾದ ನಟಿ ಮೇಘನಾ ರಾಜ್]

ಅಂದಹಾಗೆ ಮೇಘನಾ ರಾಜ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿರುವ 'ಜಿಂದಾ' ಚಿತ್ರದ ಹಾಡೊಂದಕ್ಕೆ ತಾವೇ ಹಿನ್ನೆಲೆ ಗಾಯಕಿ ಆಗಿ ಹಾಡಿದ್ದಾರೆ ಅಂತ ನಾವೇ ಹೇಳಿದ್ವಿ. ಈಗ ಅದೇ ಚಿತ್ರದ ಅಫೀಶಿಯಲ್ ಟ್ರೈಲರ್ ಬಿಡುಗಡೆ ಆಗಿದೆ. ಚಿತ್ರದ ಟ್ರೈಲರ್ ನಲ್ಲಿ ಹಲವು ಕುತೂಹಲಕಾರಿ ಸನ್ನಿವೇಶಗಳು ಮತ್ತು ಸಸ್ಪೆನ್ಸ್ ಥ್ರಿಲ್ಲರ್ ಅಂಶಗಳು ಕಂಡುಬಂದಿದ್ದು, 'ಜಿಂದಾ' ಚಿತ್ರದ ಅಡಿಬರಹ ರಿಯಲ್ ಗ್ಯಾಂಗ್ ಎಂದು ಇರುವ ಕಾರಣ ಸಿನಿಮಾ ಬಗ್ಗೆ ನಿರೀಕ್ಷೆ ಹೆಚ್ಚಾಗುವಲ್ಲಿ ಯಾವುದೇ ಸಂಶಯವಿಲ್ಲ.

Actress Meghana raj Starrer 'Jindaa' Movie Official Trailer Released

ಒಂದು ಹೆಣ್ಣಿನಿಂದ ಆರು ಜನ ಯುವಕರ ಜೀವನದಲ್ಲಿ ದೊಡ್ಡ ಅಲ್ಲೋಲ ಕಲ್ಲೋಲವೇ ನಡೆದು ಹೋಗುವ ಚಿತ್ರಕಥೆಯನ್ನು ಸಿನಿಮಾ ಹೊಂದಿದೆ ಎಂದು ತಿಳಿಯಲಾಗಿತ್ತು. ಆದರೆ ಟ್ರೈಲರ್ ನಲ್ಲಿ 'ಈ ಗಂಡು ಅನ್ನೋ ಒಬ್ಬ ಕಚಡಾ ನನ್ನ ಮಗನೂ ಪ್ರೀತಿ ಮಾಡುವಾಗ ಸತ್ಯ ಹೇಳೋಲ್ವಲ್ಲ ಯಾಕ್ ಸಾರ್" ಅನ್ನೋ ಮೇಘನಾ ರಾಜ್ ಅವರ ಡೈಲಾಗ್ ಚಿತ್ರಕಥೆಗೆ ತದ್ವಿರುದ್ಧವಾಗಿ ಇದೆ. ಚಿತ್ರದ ಬಗ್ಗೆ ಹೈಪ್ ಕ್ರಿಯೇಟ್ ಆಗಲು ಇದೊಂದು ಡೈಲಾಗ್ ಸಾಕು ಎನಿಸುವ ಹಾಗಿದೆ.[ಇದೆಲ್ಲಾ ಮೇಘನಾ ರಾಜ್ ಹೆಸರಿಗೆ ಮಸಿ ಬಳಿಯುವ ಕೆಲಸ?]

'ಜಿಂದಾ' 1979-85 ರ ಕಾಲಘಟ್ಟದಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ನಿರ್ಮಾಣ ಮಾಡಿರುವ ಚಿತ್ರ. ಮುಸ್ಸಂಜೆ ಮಹೇಶ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದು, ದತ್ತಾತ್ತೇಯ ಬಚ್ಚೇಗೌಡ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಶ್ರೀಧರ್ ವಿ.ಸಂಭ್ರಮ ಸಂಗೀತ ಸಂಯೋಜನೆ ನೀಡಿದ್ದಾರೆ.

Actress Meghana raj Starrer 'Jindaa' Movie Official Trailer Released

ಚಿತ್ರದ ಮುಖ್ಯ ಭೂಮಿಕೆಯಲ್ಲಿ ಮೇಘನಾ ರಾಜ್ ಕಾಣಿಸಿಕೊಂಡಿದ್ದು, ಉಳಿದಂತೆ ಅರುಣ್, ಲೋಕಿ, ಕೃಷ್ಣಚಂದ್ರ ಯುವರಾಜ, ದೇವ್ ತಾಳಿಕೋಟೆ, ಅನಿರುದ್ಧ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಇನ್ನೂ ಪೊಲೀಸ್ ಗೆಟಪ್ ನಲ್ಲಿ ಡೈನಾಮಿಕ್ ಹೀರೋ ದೇವರಾಜ್ ನಟಿಸಿದ್ದು, ಕೆಲವು ಹಿರಿಯ ಕಲಾವಿದರು ತೆರೆಹಂಚಿಕೊಂಡಿದ್ದಾರೆ.

'ಜಿಂದಾ' ಚಿತ್ರದ ಟ್ರೈಲರ್ ನೋಡಲು ಕ್ಲಿಕ್ ಮಾಡಿ

English summary
Musanje Mahesh Directorial, Actress Meghana raj Starrer 'Jindaa' Movie Official Trailer Released. Here you can watch 'Jindaa' Movie Trailer.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada