»   »  ಉಪೇಂದ್ರ, ಮೇಘನಾ ರಾಜ್ ಕಾಂಬಿನೇಷನ್ ಚಿತ್ರಕ್ಕೆ ಏಪ್ರಿಲ್ 3 ರಂದು ಮುಹೂರ್ತ

ಉಪೇಂದ್ರ, ಮೇಘನಾ ರಾಜ್ ಕಾಂಬಿನೇಷನ್ ಚಿತ್ರಕ್ಕೆ ಏಪ್ರಿಲ್ 3 ರಂದು ಮುಹೂರ್ತ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಅವರ 50 ನೇ ಸಿನಿಮಾ ನಿರ್ದೇಶನ ಮಾಡುವುದು ಯಾರು? ಎಂಬ ಬಗ್ಗೆ ಹಲವು ದಿನಗಳಿಂದ ಸಿನಿ ದುನಿಯಾದಲ್ಲಿ ಚರ್ಚೆ ಆಗುತ್ತಲೇ ಇತ್ತು. ಹೀಗಿರುವಾಗ 'ಎ' ಚಿತ್ರದ ನಿರ್ಮಾಪಕ ಸಿಲ್ಕ್ ಮಂಜು ಮೊನ್ನೆಯಷ್ಟೇ ಉಪೇಂದ್ರ ಅವರ 50 ನೇ ಸಿನಿಮಾ ನಿರ್ಮಾಣ ಮಾಡುವುದಾಗಿ ಹೇಳಿ ಎಲ್ಲಾ ಅಂತೆ-ಕಂತೆಗಳಿಗೆ ಬ್ರೇಕ್ ಹಾಕಿದ್ದರು.['ಎ' ಚಿತ್ರದ ನಿರ್ಮಾಪಕ ಸಿಲ್ಕ್ ಮಂಜು ಹೊಸ ಸಾಹಸ ಉಪ್ಪಿ 50]

ಇತ್ತೀಚೆಗಷ್ಟೆ 'ಉಪ್ಪಿ.. ಮತ್ತೆ ಹುಟ್ಟಿ ಬಾ.. ಇಂತಿ ಪ್ರೇಮ' ಚಿತ್ರೀಕರಣ ಮುಗಿಸಿದ್ದ ಉಪೇಂದ್ರ 'ಉಪ್ಪಿ-ರುಪಿ' ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಕೊಂಡಿದ್ದರು. ಮಂಜು ಮಾಂಡವ್ಯ ಮತ್ತು ಶಶಾಂಕ್ ನಿರ್ದೇಶನದ ಚಿತ್ರಗಳು ಕೈಯಲ್ಲಿ ಇರುವಾಗಲೇ, ಉಪೇಂದ್ರ ಮತ್ತು ನಟಿ ಮೇಘನಾ ರಾಜ್ ಅವರ ಕಾಂಬಿನೇಷನ್ ಚಿತ್ರವೊಂದಕ್ಕೆ ನಾಳೆ (ಏಪ್ರಿಲ್ 3) ಮುಹೂರ್ತ ನಡೆಯಲಿದೆ. ಈ ಬಗ್ಗೆ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ ನೋಡಿ.

'ನಾಗಾರ್ಜುನ' ಚಿತ್ರಕ್ಕೆ ನಾಳೆ ಮುಹೂರ್ತ

ಹೌದು, ಪ್ರಸ್ತುತ 'ಉಪ್ಪಿ-ರುಪಿ' ಚಿತ್ರೀಕರಣದಲ್ಲಿ ಬಿಜಿ ಆಗಿರುವ ಉಪೇಂದ್ರ ಅವರು, 'ನಾಗಾರ್ಜುನ' ಸಿನಿಮಾದಲ್ಲಿಯೂ ಅಭಿನಯಿಸಲು ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ನಾಳೆ ಮುಹೂರ್ತ ನೆರವೇರಲಿದ್ದು, ಏಪ್ರಿಲ್ 13 ರಿಂದ ಚಿತ್ರೀಕರಣ ಶುರುವಾಗಲಿದೆಯಂತೆ.[ರಿಯಲ್ ಸ್ಟಾರ್ ಉಪೇಂದ್ರ ಬಗ್ಗೆ ಹೀಗೊಂದು ದಿಢೀರ್ ಸುದ್ದಿ.!]

ಗುರುದತ್ ನಿರ್ದೇಶನದಲ್ಲಿ 'ನಾಗಾರ್ಜುನ'

ಅಂದಹಾಗೆ ಉಪೇಂದ್ರ ಮತ್ತು ಮೇಘನಾ ರಾಜ್ ಕಾಂಬಿನೇಷನ್ ನಲ್ಲಿ ಮೂಡಿಬರುತ್ತಿರುವ 'ನಾಗಾರ್ಜುನ' ಚಿತ್ರವನ್ನು ಈ ಹಿಂದೆ 'ಸೈಕೋ' ಮತ್ತು 'ಖೈದಿ' ಚಿತ್ರಗಳಿಗೆ ಆಕ್ಷನ್ ಕಟ್ ಹೇಳಿದ್ದ ಗುರುದತ್ ನಿರ್ದೇಶನ ಮಾಡುತ್ತಿದ್ದಾರೆ.[ಅಮೀರ್ ಖಾನ್ ಚಿತ್ರದ ರೀಮೇಕ್ ನಲ್ಲಿ ಉಪೇಂದ್ರ?]

ಮೊದಲ ಬಾರಿಗೆ ಉಪ್ಪಿ ಜೊತೆ ಮೇಘನಾ ರಾಜ್ ಡ್ಯುಯೆಟ್

ಹಲವು ಸಿನಿಮಾಗಳಲ್ಲಿ ನಟಿಸುತ್ತಿರುವ ಬಹುಭಾಷಾ ನಟಿ ಮೇಘನಾ ರಾಜ್ ಇದೇ ಮೊದಲ ಬಾರಿಗೆ ಉಪೇಂದ್ರ ಅವರೊಂದಿಗೆ 'ನಾಗಾರ್ಜುನ' ಚಿತ್ರದಲ್ಲಿ ಅಭಿನಯಿಸಲಿದ್ದಾರೆ. "ನಟ ಮತ್ತು ನಿರ್ದೇಶಕರು ಆದ ಉಪೇಂದ್ರ ಅವರ ಜೊತೆ ನಟಿಸುವುದರಿಂದ ಹಲವು ವಿಷಯಗಳನ್ನು ಕಲಿಯಬಹುದು' ಎಂದು ಮೇಘನಾ ರಾಜ್ ಹೇಳಿದ್ದಾರೆ.

'ನಾಗಾರ್ಜುನ'ನನ್ನು ಪೋಷಿಸಲಿದ್ದಾರೆ ಉಪೇಂದ್ರ

ಉಪೇಂದ್ರ ಅವರು ಚಿತ್ರದ ಟೈಟಲ್ 'ನಾಗಾರ್ಜುನ'ನನ್ನು ಪೋಷಿಸುವ ಪಾತ್ರವನ್ನು ನಿರ್ವಹಿಸಲಿದ್ದು, ಕೌಟುಂಬಿಕ ವ್ಯಕ್ತಿ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ. ಮಧ್ಯಮ ವರ್ಗದ ಜನರ ಸುತ್ತ ಸುತ್ತುವ ಈ ಕಥೆಯನ್ನು ನಿರ್ದೆಶಕರು ಕಮರ್ಷಿಯಲ್ ಚೌಕಟ್ಟಿನಲ್ಲಿ ಹೇಳಲಿದ್ದಾರಂತೆ.

ಚಿತ್ರದ ತಾರಾಬಳಗ

ಅಂದಹಾಗೆ 'ನಾಗಾರ್ಜುನ' ಚಿತ್ರಕ್ಕೆ ನಾಯಕ ಉಪೇಂದ್ರ ಮತ್ತು ನಾಯಕಿ ಮೇಘನಾ ರಾಜ್ ಹೊರತುಪಡಿಸಿ ಇತರೆ ತಾರಾಬಳಗವನ್ನು ಅಂತಿಮಗೊಳಿಸಿಲ್ಲವಂತೆ.

ಮೈಸೂರಿನಲ್ಲಿ ಚಿತ್ರೀಕರಣ ಅರಂಭ

ವಿದ್ಯಾಧರನ್ ಕಥೆ, ಕಿರಣ್ ಶಂಕರ್ ಸಂಗೀತ ಹಾಗೂ ಮನೋಹರ್ ಜೋಶಿ ಛಾಯಾಗ್ರಹಣ ಇರುವ 'ನಾಗಾರ್ಜುನ' ಚಿತ್ರಕ್ಕೆ ನಾಳೆ ಮೈಸೂರಿನಲ್ಲಿ ಮುಹೂರ್ತ ನಡೆಯಲಿದ್ದು, 10 ದಿನಗಳ ನಂತರ ಮೈಸೂರಿನಲ್ಲೇ ಚಿತ್ರೀಕರಣ ಆರಂಭಿಸಲಾಗುತ್ತದೆಯಂತೆ.

English summary
Kannada Actress Meghana Raj will be seen opposite Upendra in the upcoming movie 'Nagarjuna', set to be launched on Monday(April 3).
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada