»   » ಮೋಹಕ ತಾರೆ ರಮ್ಯಾ ಜಾಗಕ್ಕೆ ರಚಿತಾ ರಾಮ್ ಎಂಟ್ರಿ!

ಮೋಹಕ ತಾರೆ ರಮ್ಯಾ ಜಾಗಕ್ಕೆ ರಚಿತಾ ರಾಮ್ ಎಂಟ್ರಿ!

Posted By:
Subscribe to Filmibeat Kannada

ನಿರ್ದೇಶಕ ಪ್ರೀತಂ ಗುಬ್ಬಿ ಹಾಗೂ ನಟ ದುನಿಯಾ ವಿಜಯ್ ಮತ್ತೊಮ್ಮೆ ಒಂದಾಗುತ್ತಿದ್ದಾರೆ ಎಂಬುದು ಹಳೆ ಸುದ್ದಿ. ಆದ್ರೆ, ಆ ಚಿತ್ರಕ್ಕೆ ಈಗ ಹೀರೋಯಿನ್ ಸಿಕ್ಕಿದ್ದಾರೆ ಎಂಬುದು ಹೊಸ ಸುದ್ದಿ.

ಪ್ರೀತಂ ಗುಬ್ಬಿ ಹಾಗೂ ದುನಿಯಾ ವಿಜಯ್ ಜೋಡಿಯಲ್ಲಿ 'ಜಾನಿ ಮೇರಾ ನಾಮ್' ಸಿನಿಮಾ ಬಂದಿತ್ತು. ಲವ್ ಸ್ಟೋರಿ ಜೊತೆಗೆ ಕಾಮಿಡಿ ಮಿಕ್ಸ್ ಆಗಿದ್ದ 'ಜಾನಿ ಮೇರಾ ನಾಮ್' ಪ್ರೇಕ್ಷಕರನ್ನ ರಂಜಿಸುವಲ್ಲಿ ಯಶಸ್ವಿ ಆಗಿತ್ತು. ಆರು ವರ್ಷಗಳ ನಂತರ ಪ್ರೀತಂ ಗುಬ್ಬಿ ಮತ್ತು ದುನಿಯಾ ವಿಜಯ್ ಒಟ್ಟಿಗೆ ಸಿನಿಮಾ ಮಾಡ್ತಿದ್ದು ಆ ಚಿತ್ರಕ್ಕೆ 'ಜಾನಿ ಜಾನಿ ಎಸ್ ಪಪ್ಪಾ' ಎಂದು ಟೈಟಲ್ ಇಡಲಾಗಿದೆ.[ಮತ್ತೆ 'ಜಾನಿ' ಜಪ ಮಾಡಲು ಆರಂಭಿಸಿದ ದುನಿಯಾ ವಿಜಯ್-ಪ್ರೀತಂ ಗುಬ್ಬಿ]

ಸಹಜವಾಗಿ ಈ ಚಿತ್ರದಲ್ಲಿ ಸ್ಯಾಂಡಲ್ ವುಡ್ ಕ್ವೀನ್ ರಮ್ಯಾ ಅಭಿನಯಿಸ್ತಾರ ಎಂಬ ಕುತೂಹಲವಿತ್ತು. ಆದ್ರೆ, ರಮ್ಯಾ ಜಾಗಕ್ಕೆ ಡಿಂಪಲ್ ಕ್ವೀನ್ ಎಂಟ್ರಿ ಕೊಟ್ಟಿದ್ದಾಳೆ. ಮುಂದೆ ಓದಿ.....

'ಜಾನಿ ಜಾನಿ ಎಸ್ ಪಪ್ಪಾ'ಗೆ ನಾಯಕಿ ಫಿಕ್ಸ್!

ಪ್ರೀತಂ ಗುಬ್ಬಿ ನಿರ್ದೇಶನ ಮಾಡಲಿರುವ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರಕ್ಕೆ ನಾಯಕಿ ಫಿಕ್ಸ್ ಆಗಿದ್ದು, ಡಿಂಪಲ್ ಕ್ವೀನ್ ರಚಿತಾ ರಾಮ್ ಹೆಜ್ಜೆ ಹಾಕಲಿದ್ದಾರಂತೆ.

ರಮ್ಯಾ ಜಾಗಕ್ಕೆ ರಚಿತಾ!

ಅಂದ್ಹಾಗೆ, 'ಜಾನಿ ಮೇರಾ ನಾಮ್' ಚಿತ್ರದಲ್ಲಿ ರಮ್ಯಾ ನಾಯಕಿಯಾಗಿದ್ದರು. ಈ ಚಿತ್ರವನ್ನ ನಿರ್ದೇಶನ ಮಾಡಿದ್ದ ಪ್ರೀತಂ ಗುಬ್ಬಿ ಈಗ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರವನ್ನ ಮಾಡುತ್ತಿದ್ದಾರೆ. ಅಲ್ಲಿ ನಾಯಕನಾಗಿದ್ದ ದುನಿಯಾ ವಿಜಯ್ ಇಲ್ಲೂ ನಾಯಕನಾಗಿದ್ದಾರೆ. ಹೀಗಾಗಿ, ಅಲ್ಲಿ ನಾಯಕಿಯಾಗಿದ್ದ ರಮ್ಯಾ ಇಲ್ಲಿಯೂ ನಾಯಕಿ ಆಗ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದ್ರೆ, ರಮ್ಯಾ ಬದಲು ರಚಿತಾ ರಾಮ್ ಬಂದಿದ್ದಾರೆ.[ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್ ವಿಮರ್ಶೆ]

ದುನಿಯಾ ವಿಜಯ್ ಮತ್ತು ರಚಿತಾ ರಾಮ್!

ರಚಿತಾ ರಾಮ್ ಈಗಾಗಲೇ ದರ್ಶನ್, ಸುದೀಪ್, ಪುನೀತ್ ಅಂತಹ ಸ್ಟಾರ್ ನಟರ ಸಿನಿಮಾಗಳಲ್ಲಿ ಅಭಿನಯಿಸಿ ಯಶಸ್ಸು ಕಂಡಿದ್ದಾರೆ. ಈಗ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದ ಮೂಲಕ ಮೊದಲ ಬಾರಿಗೆ ದುನಿಯಾ ವಿಜಯ್ ಗೆ ಜೋಡಿಯಾಗಿದ್ದಾರೆ.

ಅಲ್ಲಿರುವವರೇ ಇಲ್ಲಿರುತ್ತಾರೆ.!

ಉಳಿದಂತೆ 'ಜಾನಿ ಮೇರಾ ನಾಮ್' ಚಿತ್ರದಲ್ಲಿ ರಂಗಾಯಣ ರಘು, ಸಾಧು ಕೋಕಿಲ, ದತ್ತಣ್ಣ ಮುಂತಾದವರ ತಾರಾಬಳಗ ಇತ್ತು. ಈ ಸಿನಿಮಾದಲ್ಲೂ ಅದೇ ನಟರ ದಂಡೇ ಮುಂದುವರಿಯಲಿದ್ಯಂತೆ.

ಮುಂದುವರಿದ ಭಾಗ ಅಲ್ಲ.!

'ಜಾನಿ ಮೇರಾ ನಾಮ್' ಹಾಗೂ 'ಜಾನಿ ಜಾನಿ ಎಸ್ ಪಪ್ಪಾ'... ಚಿತ್ರಗಳ ನಡುವೆ ಅನೇಕ ಸಾಮ್ಯತೆ ಇರಬಹುದು. ಆದ್ರೆ, ಇದು 'ಜಾನಿ ಮೇರಾ ನಾಮ್' ಚಿತ್ರದ ಮುಂದುವರಿದ ಭಾಗ ಅಲ್ಲ ಅಂತ ಪ್ರೀತಂ ಗುಬ್ಬಿ ಸ್ಪಷ್ಟಪಡಿಸಿದ್ದಾರೆ.

English summary
Kannada Actress Rachita Ram Will Play Female Lead Role Opposite Duniya Vijay in 'Johnny Johnny Yes Papa' Movie. The Movie Directed By Preetham Gubbi.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada