twitter
    For Quick Alerts
    ALLOW NOTIFICATIONS  
    For Daily Alerts

    ಬೆಂಗಳೂರಿನಲ್ಲಿ ಮಳೆ ಅವಾಂತರ: MLA- MPಗಳ ರಿಯಲ್ ಎಸ್ಟೇಟ್ ಬ್ಯುಸಿನೆಸ್‌ ಮೇಲೆ ರಮ್ಯಾ ಟಾರ್ಗೆಟ್!

    |

    ಪ್ರತಿ ದಿನ ಸುರಿಯುತ್ತಿರುವ ಮಳೆಗೆ ಬೆಂಗಳೂರು ತತ್ತರಿಸಿ ಹೋಗಿದೆ. ರಸ್ತೆಯಲ್ಲಿ ನೀರು ಸಂಚಾರ ಅಸ್ತವ್ಯಸ್ತವಾಗಿದೆ. ಮನೆಗಳಿಗೆ ನೀರು ನುಗ್ಗಿ ಜನರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಬೋಟ್ ಸಹಾಯದಿಂದ ಮನೆಯೊಳಗೆ ಸಿಕ್ಕಿಕೊಂಡಿರುವ ಜನರನ್ನು ಬೇರೆ ಕಡೆಗೆ ಕರೆದುಕೊಂಡು ಬರುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

    ಒಂದು ಹೊತ್ತು ಸುರಿಯುತ್ತಿರುವ ಮಳೆಗೆ ಬೆಂಗಳೂರು ನಲುಗಿ ಹೋಗಿದೆ. ಕಳೆದ ಮೂರು-ನಾಲ್ಕು ದಿನಗಳಿಂದ ಜನರು ಮನೆಯಿಂದ ಹೊರ ಬಾರದೆ ಇರುವ ಪರಿಸ್ಥಿತಿಗೆ ಸಿಲುಕಿದ್ದಾರೆ. ಕೆಲವರು ಕಚೇರಿಗೆ ಹೋಗಲಾರದೆ ಮನೆಯಲ್ಲಿಯೇ ಕೆಲಸ ಮಾಡುವಂತಾಗಿದೆ. ಹೀಗಾಗಿ ರಾಜ್ಯ ಸರ್ಕಾರ ವಿರುದ್ಧ ಜನರು, ಸೆಲೆಬ್ರೆಟಿಗಳು ಕಿಡಿಕಾರುತ್ತಿದ್ದಾರೆ. ಇವರಲ್ಲಿ ರಮ್ಯಾ ಕೂಡ ಒಬ್ಬರು. ಕಳೆದೆರಡು ದಿನಗಳಿಂದ ರಮ್ಯಾ ನಿರಂತರವಾಗಿ ಜನಪ್ರತಿನಿಧಿಗಳನ್ನು ಟಾರ್ಗೆಟ್ ಮಾಡುತ್ತಲೇ ಇದ್ದಾರೆ.

     MLA- MPಗಳ ವಿರುದ್ಧ ರಮ್ಯಾ ಟಾರ್ಗೆಟ್!

    MLA- MPಗಳ ವಿರುದ್ಧ ರಮ್ಯಾ ಟಾರ್ಗೆಟ್!

    ಮೋಹಕತಾರೆ ರಮ್ಯಾ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿರುವ ಸೆಲೆಬ್ರೆಟಿ. ಅವ್ಯವಸ್ಥೆಯ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ಕಿಡಿಕಾರುತ್ತಲೇ ಇರುತ್ತಾರೆ. ಸದ್ಯ ಬೆಂಗಳೂರಿನಲ್ಲಿ ಮಳೆ ಸೃಷ್ಟಿಸಿದ ಅವಾಂತರಕ್ಕೆ ಜನಪ್ರತಿನಿಧಿಗಳ ಮೇಲೆ ರಮ್ಯಾ ಕಿಡಿಕಾರುತ್ತಿದ್ದಾರೆ. ಸದ್ಯ MLA- MPಗಳ ವಿರುದ್ಧ ಮೋಹಕತಾರೆ ಆಕ್ರೋಶ ಹೊರ ಹಾಕಿದ್ದು, ಅವರ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಅನ್ನು ಟಾರ್ಗೆಟ್ ಮಾಡಿದ್ದಾರೆ.

     ರಮ್ಯಾ ಟ್ವೀಟ್‌ನಲ್ಲಿ ಹೇಳಿದ್ದೇನು?

    ರಮ್ಯಾ ಟ್ವೀಟ್‌ನಲ್ಲಿ ಹೇಳಿದ್ದೇನು?

    ರಾಜಕೀಯರ ಮುಖಂಡರು ಪ್ರತ್ಯಕ್ಷವಾಗಿಯೋ.. ಇಲ್ಲ ಪರೋಕ್ಷವಾಗಿಯೋ ರಿಯಲ್ ಎಸ್ಟೇಟ್ ಬ್ಯುಸಿನೆಸ್‌ ಹೊಂದಿರೋದು ಹೊಸ ವಿಷಯವೇನಲ್ಲ. ಆದರೆ, ಬೆಂಗಳೂರಲ್ಲಿ ಈ ಮಟ್ಟಿಗೆ ಮಳೆ ಅವಾಂತರ ಸೃಷ್ಟಿಸೋಕೆ ಇವರ ರಿಯಲ್ ಎಸ್ಟೇಟ್ ಬ್ಯುಸಿನೆಸ್ ಕಾರಣ ಅನ್ನೋದನ್ನೂ ರಮ್ಯಾ ಪರೋಕ್ಷವಾಗಿಯೇ ಹೇಳಿದ್ದಾರೆ. " ಕರ್ನಾಟಕದಲ್ಲಿ ಎಷ್ಟು ಮಂದಿ ಎಂಎಲ್‌ಎ ಹಾಗೂ ಎಂಪಿಗಳು ರಿಯಲ್‌ ಎಸ್ಟೇಟ್ ಬ್ಯುಸಿನೆಸ್ ಮಾಡುತ್ತಿದ್ದಾರೆ ಅನ್ನೋದು ನಿಮಗೆ ಗೊತ್ತಿದೆಯೇ? 28 ಮಂದಿ ಎಂಎಲ್‌ಎಗಳಲ್ಲಿ 26 ಮಂದಿ ಬಳಿ ರಿಯಲ್‌ ಎಸ್ಟೇಟ್ ಬ್ಯುಸಿನೆಸ್‌ ಇದೆ ಎಂದು ಯಾರೋ ಹೇಳಿದ್ರು." ಅಂತ ರಮ್ಯಾ ಟ್ವೀಟ್ ಮಾಡಿದ್ದಾರೆ.

     ಯೋಚನೆ ಮಾಡಿ ಮತ ಚಲಾಯಿಸಿ

    ಯೋಚನೆ ಮಾಡಿ ಮತ ಚಲಾಯಿಸಿ

    ರಮ್ಯಾ ಕೇವಲ 26 ಎಂಎಲ್‌ಎಗಳನ್ನು ಟಾರ್ಗೆಟ್ ಮಾಡಿದ್ದಷ್ಟೇ ಅಲ್ಲ. ಇದಕ್ಕೆಲ್ಲಾ ಕಾರಣ ಜನರು ಅಂತನೂ ಹೇಳಿದ್ದಾರೆ. " ಈ 26 ರಿಯಲ್‌ ಎಸ್ಟೇಟ್ ಎಂಎಲ್‌ಎಗಳನ್ನು ಆಯ್ಕೆ ಮಾಡಿದ್ದು ಜನರೇ. ಇವರೆಲ್ಲರೂ ಜನರ ಆಯ್ಕೆಯಾಗಿದ್ದಾರೆ. ಹೀಗಾಗಿ ಈ ಬಾರಿ ಮೊದಲು ಮತ ಚಲಾಯಿಸಿ. ಹಾಗೇ ಯೋಚನೆ ಮಾಡಿ ವೋಟ್ ಹಾಕಿ. ಕೆಲವರು ಮತವನ್ನೇ ಚಲಾಯಿಸುವುದಿಲ್ಲ. ಅದರಲ್ಲೂ ನಗರ ಪ್ರದೇಶಗಳಲ್ಲಿ ಜನರು ವೋಟ್ ಮಾಡುವುದಿಲ್ಲ. ಆ ಮೇಲೆ ನಾವು ದೋಷಿಸಲು ಆರಂಭಿಸುತ್ತೇವೆ." ಎಂದು ಟ್ವೀಟ್ ಮಾಡಿದ್ದಾರೆ ರಮ್ಯಾ.

     ಮೋಹಕತಾರೆ ಸಿನಿಮಾ ಎಂಟ್ರಿ

    ಮೋಹಕತಾರೆ ಸಿನಿಮಾ ಎಂಟ್ರಿ

    ಮೋಹತಾರೆ ರಮ್ಯಾ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದರಿಂದ ಸಿನಿಮಾದಿಂದ ದೂರ ಉಳಿದಿದ್ದರು. ಆದ್ರೀಗ ಮತ್ತೆ ಚಿತ್ರರಂಗಕ್ಕೆ ರೀ-ಎಂಟ್ರಿ ಕೊಟ್ಟಿದ್ದಾರೆ. ಮೋಹಕತಾರೆ ರಮ್ಯಾ ಪ್ರೊಡಕ್ಷನ್ ಹೌಸ್ ನಿರ್ಮಾಣ ಮಾಡುವ ಮೂಲಕ ಸಿನಿಮಾ ಪ್ರಡ್ಯೂಸ್ ಮಾಡುವುದಕ್ಕೆ ನಿರ್ಧರಿಸಿದ್ದಾರೆ. ಇತ್ತ ಸೋಶಿಯಲ್ ಮೀಡಿಯಾಗಳಲ್ಲಿ ರಾಜಕೀಯದ ಬಗ್ಗೆ ಮಾತಾಡುವುದನ್ನೂ ನಿಲ್ಲಿಸಿಲ್ಲ. ಹಾಗಾಗಿ ಮುಂದಿನ ಚುನಾವಣೆಯಲ್ಲಿ ರಮ್ಯಾ ಏನು ಮಾಡುತ್ತಾರೆ? ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರಾ? ಇಲ್ಲಾ ರಾಜಕೀಯದಿಂದ ದೂರ ಉಳಿಯುತ್ತಾರಾ? ಅನ್ನೋ ಕುತೂಹಲ ಸೃಷ್ಟಿಯಾಗಿದೆ.

    English summary
    Actress Ramya Tweet On MLA And MPs Have Real Estate Business And Also Bengaluru Rain, Know More.
    Tuesday, September 6, 2022, 13:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X