»   » ಮಾರಕ ರೋಗ ಗೆದ್ದು ಬಂದ ಸ್ನೇಹಾ 'ಆಯುಷ್ಮಾನ್ ಭವ'

ಮಾರಕ ರೋಗ ಗೆದ್ದು ಬಂದ ಸ್ನೇಹಾ 'ಆಯುಷ್ಮಾನ್ ಭವ'

Posted By:
Subscribe to Filmibeat Kannada

ತನ್ನ ಮೋಹಕ ಸೌಂದರ್ಯದಿಂದ ''ಜೂನಿಯರ್ ಐಶ್ವರ್ಯ ರೈ'' ಎಂದೇ ಖ್ಯಾತಿ ಗಳಿಸಿಕೊಂಡಿದ್ದ ಸ್ನೇಹಾ ಉಲ್ಲಾಳ್ ಕೆಲವು ವರ್ಷಗಳಿಂದ ಬಣ್ಣದ ಲೋಕದಲ್ಲಿ ಕಾಣಿಸಲೇ ಇಲ್ಲ. ಇದ್ದಕ್ಕಿದ್ದಂತೆ ಸಿನಿಮಾದಿಂದ ದೂರವಾಗಿದ್ದ ಸ್ನೇಹಾ ಉಲ್ಲಾಳ್ ಅವರಿಗೆ ಏನಾಯಿತು ಎಂಬುದು ಯಾರಿಗೂ ಗೊತ್ತಿರಲಿಲ್ಲ.

ಮೂಲತಃ ಮಂಗಳೂರಿನ ಈ ಚೆಲುವೆ ಕನ್ನಡ ಸೇರಿದಂತೆ, ತೆಲುಗು, ಹಿಂದಿ, ಹೀಗೆ ಬಹುಭಾಷೆಗಳಲ್ಲಿ ನಟಿಸಿದ್ದರು. ಆದ್ರೆ, ಸಡನ್ ಆಗಿ ಚಿತ್ರರಂಗದಿಂದ ದೂರು ಉಳಿದಿದ್ದು ಸಹಜವಾಗಿ ಆತಂಕ ಮೂಡಿಸಿತ್ತು.[ಮಲಯಾಳಂಗೆ ಮಂಗಳೂರು ಮೊಲ್ಲೆ ಸ್ನೇಹಾ ಉಲ್ಲಾಳ್]

ಆದ್ರೀಗ, ತಾನು ಇಷ್ಟು ದಿನ ಯಾಕೆ ಸಿನಿಮಾ ಮಾಡ್ಲಿಲ್ಲ ಎನ್ನುವುದನ್ನ ಸ್ವತಃ ಸ್ನೇಹಾ ಅವರೇ ತಿಳಿಸಿದ್ದಾರೆ. ಇತ್ತೀಚೆಗೆ ಮಾಧ್ಯಮದವರು ಜೊತೆ ಮಾತನಾಡಿದ ಸ್ನೇಹಾ, ತಾನು 'ಆಟೋ ಇಮ್ಯೂನ್ ಡಿಸಾರ್ಡರ್ ಕಾಯಿಲೆ'ಯಿಂದ ಬಳುತ್ತಿದ್ದೆ ಎಂಬ ಆತಂಕಕಾರಿ ಸಂಗತಿಯನ್ನ ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ, ಸ್ನೇಹಾ ಅವರು ಈ ಕಾಯಿಲೆಯನ್ನ ಹೇಗೆ ಗೆದ್ದು ಬಂದರು ಎಂಬುದು ಮುಂದೆ ಓದಿ......

ನಾಲ್ಕು ವರ್ಷದಿಂದ ಆನಾರೋಗ್ಯ

ಸ್ನೇಹಾ ಉಲ್ಲಾಳ್ ಅವರು ಕಳೆದ ನಾಲ್ಕು ವರ್ಷದಿಂದ ಅನಾರೋಗ್ಯದಿಂದ ಬಳುತ್ತಿದ್ದರು. ಸ್ನೇಹಾ ಅವರು ಸಂಪೂರ್ಣವಾಗಿ ಬಲಹೀನಾರಾಗಿದ್ದರು. ಅರ್ಧ ಗಂಟೆಗಿಂತ ಹೆಚ್ಚು ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ. ಅನಾರೋಗ್ಯವಿದ್ದರು ಸಿನಿಮಾಗಳಲ್ಲಿ ಅಭಿನಯಿಸಿದಿದ್ದು ಆರೋಗ್ಯ ಮತ್ತಷ್ಟು ಕೆಡುವಂತೆ ಮಾಡಿತ್ತು.[ಮತ್ತೆ ಮತ್ತೆ ಮತ್ತೇರಿಸುವಂಥ ಸ್ನೇಹಾ ಉಲ್ಲಾಳ್ ವಿಡಿಯೋ]

ಯಾವ ಕಾಯಿಲೆ

ಸ್ನೇಹಾ ಉಲ್ಲಾಳ್ ಅವರು 'ಆಟೋ ಇಮ್ಯೂನ್ ಡಿಸಾರ್ಡರ್' ಕಾಯಿಲೆಯಿಂದ ಬಳುತ್ತಿದ್ದರು. ಇದು ರಕ್ತ ಸಂಚಲನಕ್ಕೆ ಸಂಬಂಧಿಸಿದ ಕಾಯಿಲೆ. ಈ ಕಾಯಿಲೆಯಿಂದ ಸ್ನೇಹಾ ಅವರು ದೈಹಿಕವಾಗಿ ತುಂಬಾನೇ ಬಳಲಿದ್ದರಂತೆ.[ಮತ್ತೆ ಮತ್ತೆ ಮತ್ತೇರಿಸುವಂಥ ಸ್ನೇಹಾ ಉಲ್ಲಾಳ್ ವಿಡಿಯೋ ]

ಚಿಕಿತ್ಸೆಗಾಗಿ ವಿಶ್ರಾಂತಿ

ದೈಹಿಕವಾಗಿ ಬಲಹೀನಾವಾಗಿದ್ದ ಸ್ನೇಹಾ ಉಲ್ಲಾಳ್ ಅವರು ಮಾನಸಿಕವಾಗಿ ಶಕ್ತಿಯುತವಾಗಿದ್ದರಂತೆ. ಸ್ನೇಹಿತರು, ಕುಟುಂಬಸ್ಥರು ಎಲ್ಲರೂ ಧೈರ್ಯ ತುಂಬಿದ್ದರಂತೆ. ಹೀಗಾಗಿ, ನಿರಂತರವಾಗಿ ಚಿಕಿತ್ಸೆ ಪಡೆದುಕೊಂಡು, ಅದರ ಜತೆಗೆ ಯೋಗಾ, ವ್ಯಾಯಾಮ ಅಂತ ತಮ್ಮ ಆರೋಗ್ಯವನ್ನ ಸರಿಪಡಿಸಿಕೊಂಡರಂತೆ.

ಬಣ್ಣದ ಲೋಕಕ್ಕೆ ಕಮ್ ಬ್ಯಾಕ್

ಅನಾರೋಗ್ಯದಿಂದ ಸಂಪೂರ್ಣವಾಗಿ ಚೇತರಿಸಿಕೊಂಡ ಸ್ನೇಹಾ ಈಗ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ ಶುರು ಮಾಡಿದ್ದಾರೆ. ಚರಣ್ ತೇಜ ಹಾಗೂ ಅಮಲಾ ಪೌಲ್ ಅಭಿನಯಿಸುತ್ತಿರುವ 'ಆಯುಷ್ಮಾನ್ ಭವ' ಚಿತ್ರದ ಮೂಲಕ ಮತ್ತೆ ಬಣ್ಣದ ಲೋಕಕ್ಕೆ ಮರಳಿದ್ದಾರೆ.

ಮಂಗಳೂರು ಹುಡುಗಿ ಸ್ನೇಹಾ

ಅಂದ್ಹಾಗೆ, ಸ್ನೇಹಾ ಉಲ್ಲಾಳ್ ಮೂಲತಃ ಮಂಗಳೂರಿನವರು. ಅಷ್ಟೇ ಅಲ್ಲದೇ ಕನ್ನಡದಲ್ಲೂ ಒಂದು ಸಿನಿಮಾ ಮಾಡಿದ್ದಾರೆ. ಮಧು ಬಂಗಾರಪ್ಪ ಅಭಿನಯದ 'ದೇವಿ' ಚಿತ್ರದಲ್ಲಿ ಸ್ನೇಹಾ ಅಭಿನಯಿಸಿದ್ದರು.

ಬಾಲಿವುಡ್ ನಿಂದ ಟಾಲಿವುಡ್ ಗೆ

2005 ರಲ್ಲಿ ಸಲ್ಮಾನ್ ಖಾನ್ ಅಭಿನಯದ 'ಲಕ್ಕಿ' ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪರಿಚಯವಾದ ಸ್ನೇಹಾ ಉಲ್ಲಾಳ್, 'ಉಲ್ಲಾಸಂಗಾ ಉತ್ಸಾಹಂಗಾ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಬಾಲಕೃಷ್ಣ, ನಾಗಾರ್ಜುನ ಅಂತಹ ನಟರ ಜೊತೆ ತೆರೆ ಹಂಚಿಕೊಂಡು ಯಶಸ್ಸು ಕಂಡರು.

ಜೂನಿಯರ್ ಐಶ್ವರ್ಯ ರೈ

ಸ್ನೇಹಾ ಉಲ್ಲಾಳ್ ಅವರನ್ನ ಚಿತ್ರ ಜಗತ್ತಿನಲ್ಲಿ ''ಜೂನಿಯರ್ ಐಶ್ವರ್ಯ ರೈ'' ಎಂದೇ ಕರೆಯುತ್ತಿದ್ದರು. ಯಾಕಂದ್ರೆ, ಸ್ನೇಹಾ ಉಲ್ಲಾಳ್ ಅವರು ಕಣ್ಣು ನೋಡಲು, ಯಥಾವತ್ತು ಐಶ್ವರ್ಯ ರೈ ಅವರಂತೆ ಕಾಣಿಸುತ್ತದೆ ಎಂಬ ಕಾರಣಕ್ಕೆ.

English summary
Actress Sneha Ullal Recently Interacted with the Media and Revealed The Reason Behind Her Staying Sway From the Limelight and the Main Reason for This is That she was Suffering From a Blood-Related illness Called Autoimmune Disorder.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada