Don't Miss!
- Sports
Ind vs NZ 3rd T20: ಸರಣಿ ಗೆಲ್ಲುವ ಉತ್ಸಾಹದಲ್ಲಿ ಟೀಂ ಇಂಡಿಯಾ: ಪಿಚ್ ವರದಿ ನೋಡಿ ತಂಡದಲ್ಲಿ ಬದಲಾವಣೆ
- News
ತ್ರಿಪುರಾ ಚುನಾವಣೆ: ಟಿಎಂಸಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
- Technology
ಸ್ಯಾಮ್ಸಂಗ್ನ ಈ ಹೊಸ ಡಿವೈಸ್ ನೋಡಿದ್ರೆ ನಿಮಗೆ ಏನನ್ನಿಸುತ್ತೆ? ಇದೇನು ಸಾಬೂನಾ?
- Lifestyle
ಒಂಟಿಯಾಗಿ ಅಂಟಾರ್ಟಿಕಾ ಯಾತ್ರೆ ಮಾಡಿದ ಮೊದಲ ಮಹಿಳೆ: ಕ್ಯಾಪ್ಟನ್ ಪ್ರೀತ್ ಚಾಂದಿ, ಇವರ ಸ್ಟೋರಿಯೇ ಸ್ಪೂರ್ತಿದಾಯಕ
- Finance
Budget 2023 Expectations: ಸಾಮಾನ್ಯ ಜನರ ಬಜೆಟ್ ನಿರೀಕ್ಷೆಗಳೇನು?
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬೆಂಗಳೂರಿನಲ್ಲಿ 'ಮೇಜರ್' ಖ್ಯಾತಿಯ ಅಡಿವಿ ಶೇಷ್: 'ಹಿಟ್ 2' ಭರ್ಜರಿ ಪ್ರಚಾರ!
ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜೀವನವನ್ನಾಧರಿಸಿದ ಸಿನಿಮಾ ಕೆಲವು ತಿಂಗಳ ಹಿಂದಷ್ಟೇ ರಿಲೀಸ್ ಆಗಿತ್ತು. ಅಡಿವಿ ಶೇಷ್ ಅಭಿನಯದ ಆ ಸಿನಿಮಾ 'ಮೇಜರ್'. ಈ ಸಿನಿಮಾ ಮೂಲಕ ಮತ್ತಷ್ಟು ಜನಪ್ರಿಯತೆ ಗಿಟ್ಟಿಸಿಕೊಂಡ ನಟನ ಮತ್ತೊಂದು ಸಿನಿಮಾ ಬಿಡುಗಡೆ ಸಜ್ಜಾಗಿದೆ.
ಅಡಿವಿ ಶೇಷ್ ನಟನೆಯ ಮತ್ತೊಂದು ಸಿನಿಮಾ 'ಹಿಟ್-2' ಡಿಸೆಂಬರ್ 2ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗುತ್ತಿದೆ. 'ಹಿಟ್ 2' ಸಿನಿಮಾವನ್ನು ಡಾ. ಶೈಲೇಶ್ ಕೊಲನು ನಿರ್ದೇಶನ ಮಾಡಿದ್ದಾರೆ. ಆಕ್ಷನ್ ಥ್ರಿಲ್ಲರ್ ಕಥೆಯಿರುವ ಈ ಸಿನಿಮಾದ ಪ್ರಚಾರಕ್ಕಾಗಿ ಅಡಿವಿ ಶೇಷ್ ಹಾಗೂ ಚಿತ್ರತಂಡ ಬೆಂಗಳೂರಿಗೆ ಬಂದಿತ್ತು.
ಅಡಿವಿ ಶೇಷ್ ಸಿನಿಮಾಗಳಿಗೆ ಬೆಂಗಳೂರಿನಲ್ಲಿ ಹೆಚ್ಚು ಬೇಡಿಕೆ ಇದೆ. ಅವರೇ ಹೇಳಿಕೊಂಡಂತೆ ಹೈದರಾಬಾದ್ ಬಳಿಕ ಬೆಂಗಳೂರಿನಲ್ಲಿ ಅತೀ ಹೆಚ್ಚು ಮಂದಿ ಅವರ ಸಿನಿಮಾವನ್ನು ವೀಕ್ಷಣೆ ಮಾಡಿದ್ದಾರೆ. ಹೀಗಾಗಿ ಬಿಡುಗಡೆಗೆ ಇನ್ನೂ ಒಂದು ದಿನ ಇದೆ ಅನ್ನುವಾಗಲೂ ಬೆಂಗಳೂರಿಗೆ ಬಂದು ಪ್ರಚಾರ ಮಾಡಿ ಹೋಗಿದ್ದಾರೆ.
"ನನ್ನ ಕೊನೆಯ ಐದು ಸಿನಿಮಾಗಳಿಗೆ ಹೈದರಾಬಾದ್ ಬಳಿಕ ಹೆಚ್ಚಿನ ಪ್ರೀತಿ ಸಿಕ್ಕಿದ್ದು ಬೆಂಗಳೂರಿನಲ್ಲಿಯೇ. 'ಮೇಜರ್' ಸಿನಿಮಾ ಬಳಿಕ ಬೆಂಗಳೂರು ನನಗೆ ಎರಡನೇ ಮನೆಯಂತಾಗಿದೆ. ಇಲ್ಲಿಯೇ ಒಂದು ಮನೆ ಖರೀದಿ ಮಾಡಲು ನಾನು ಪ್ಲ್ಯಾನ್ ಮಾಡಿದ್ದೇನೆ. ಅಂದ್ಹಾಗೆ 'ಹಿಟ್ 2' ಚಿತ್ರಕ್ಕೆ ನಾನು ಹೊಸ ಎಂಟ್ರಿ. ಒಂದು ಚಿಕ್ಕ ಹಳ್ಳಿಯಲ್ಲಿರುವ ತನ್ನ ಊರಿನಲ್ಲಿ ಏನ್ ಆಗ್ತಿದೆ ಎಂದು ಗೊತ್ತೇ ಇಲ್ಲದ ಒಬ್ಬ ಲೇಜಿ ಪೊಲೀಸ್ ಆಫೀಸರ್ ಗೆ ಒಂದು ದೊಡ್ಡ ಸೀರಿಯಲ್ ಕಿಲ್ಲರ್ ಕೇಸ್ ಸಿಕ್ಕಾಗ ಆತ ಅದನ್ನು ಹೇಗೆ ನಿಭಾಯಿಸುತ್ತಾನೆ ಎನ್ನುವುದು ಈ ಚಿತ್ರದ ಕಥೆ" ಎಂದು ಅಡಿವಿ ಶೇಷ್ ಕಥೆಯನ್ನು ಬಿಟ್ಟುಕೊಟ್ಟಿದ್ದಾರೆ.
ಅಂದ್ಹಾಗೆ ಅಡಿವಿ ಶೇಷ್ ಸಿನಿಮಾ ತೆಲುಗಿನಲ್ಲೇ ಬಿಡುಗಡೆಯಾಗುತ್ತಿದೆ. ಮೊದಲು ಎಲ್ಲಾ ಕಡೆ ಒಂದೇ ಭಾಷೆಯಲ್ಲಿ ರಿಲೀಸ್ ಆಗುತ್ತೆ. ಆ ಬಳಿಕ ಕನ್ನಡಕ್ಕೂ ಡಬ್ ಆಗಲಿದೆ. ಅಲ್ಲದೆ ಬೇರೆ ಬೇರೆ ಭಾಷೆಗಳಿಗೆ ಡಬ್ ಮಾಡಿ ಪ್ಯಾನ್ ಇಂಡಿಯಾ ರಿಲೀಸ್ ಡೇಟ್ ಅನೌನ್ಸ್ ಮಾಡುವುದಕ್ಕೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.
ವಿಶಾಖಪಟ್ಟಣದ ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಕ್ರೈಂ ಘಟನೆಗಳು ಹೇಗೆ ಒಬ್ಬ ಪೊಲೀಸ್ ಆಫೀಸರ್ ನಿದ್ದೆಗೆಡಿಸುತ್ತೆ. ಆತ ಅದನ್ನು ಹೇಗೆ ಬಗೆಹರಿಸುತ್ತಾನೆ ಅನ್ನೋದು 'ಹಿಟ್ 2' ಸಿನಿಮಾ ಒನ್ ಲೈನ್ ಸ್ಟೋರಿ. " ಹಿಟ್ 1' ಅಮೆಜಾನ್ ಪ್ರೈಮ್‌ನಲ್ಲಿ ರಿಲೀಸ್ ಆದಾ ಬಹಳ ದೊಡ್ಡ ಮಟ್ಟದ ರೆಸ್ಪಾನ್ಸ್ ಸಿಕ್ಕಿತ್ತು. ಅದರಲ್ಲೂ ಕರ್ನಾಟಕದಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈ ಸಿನಿಮಾ ನೋಡಿ ಮೆಚ್ಚುಗೆ ಸೂಚಿಸಿದ್ದರು. ಆ ಕಾರಣಕ್ಕೆ ಕರ್ನಾಟಕ ಜನತೆ ಆಶೀರ್ವಾದ ಪಡೆಯಲು ಚಿತ್ರತಂಡ ಇಲ್ಲಿ ಬಂದಿದೆ." ಎಂದು ನಿರ್ದೇಶಕ ಡಾ. ಶೈಲೇಶ್ ಕೊಲನು ತಿಳಿಸಿದ್ದಾರೆ.

ಅಡಿವಿ ಶೇಷ್‌ಗೆ ನಾಯಕಿಯಾಗಿ ಮೀನಾಕ್ಷಿ ಚೌಧರಿ ಕಾಣಿಸಿಕೊಂಡಿದ್ದಾರೆ. ಇದು ಮೀನಾಕ್ಷಿಯ ಮೂರನೇ ತೆಲುಗು ಸಿನಿಮಾ. ಇವರೊಂದಿಗೆ ರಾವ್ ರಮೇಶ್, ಶ್ರೀಕಾಂತ್ ಮಗಂಟಿ, ಕೋಮಲಿ ಪ್ರಸಾದ್, ಪೋಸನಿ ಕೃಷ್ಣ ಮುರಳಿ ಚಿತ್ರದ ಮುಖ್ಯ ಸ್ಟಾರ್‌ಕಾಸ್ಟ್‌ನಲ್ಲಿದ್ದಾರೆ.