»   » 'ದಿ ವಿಲನ್' ಗೆ ರೆಡಿಯಾದ ಸುದೀಪ್: 'ಹೆಬ್ಬುಲಿ' ನಂತರ ಹೇರ್ ಸ್ಟೈಲ್ ಹೇಗಿದೆ ಗೊತ್ತಾ?

'ದಿ ವಿಲನ್' ಗೆ ರೆಡಿಯಾದ ಸುದೀಪ್: 'ಹೆಬ್ಬುಲಿ' ನಂತರ ಹೇರ್ ಸ್ಟೈಲ್ ಹೇಗಿದೆ ಗೊತ್ತಾ?

Posted By:
Subscribe to Filmibeat Kannada

ಕಿಚ್ಚ ಸುದೀಪ್ ಅಭಿನಯಿಸುವ ಸಿನಿಮಾಗಳು ಎಷ್ಟು ಸುದ್ದಿಯಲ್ಲಿರುತ್ತವೋ, ಅದಕ್ಕಿಂತ ಡಬಲ್ ಸುದ್ದಿಯಲ್ಲಿ ಅವರು ಚಿತ್ರದಲ್ಲಿ ಕಾಣಿಸಿಕೊಳ್ಳುವ ಲುಕ್ ಮತ್ತು ಹೇರ್ ಸ್ಟೈಲ್ ಬಗ್ಗೆ ಸುದ್ದಿ ಹರಿದಾಡುತ್ತವೆ. ಅದಕ್ಕೆ ಸಾಕ್ಷಿಯಾಗಿ ಸುದೀಪ್ 'ಹೆಬ್ಬುಲಿ' ಹೇರ್ ಸ್ಟೈಲ್ ಎಷ್ಟು ಟ್ರೆಂಡ್ ಆಗಿತ್ತು ಅನ್ನೋದು ನಿಮಗೆಲ್ಲಾ ಗೊತ್ತೇ ಇದೆ.[ಕಿಚ್ಚ ಬಿಚ್ಚಿಟ್ಟ 'ಹೆಬ್ಬುಲಿ' ಹೇರ್ ಸ್ಟೈಲ್ ಕಹಾನಿ..!]

ಅಂದಹಾಗೆ 'ಹೆಬ್ಬುಲಿ' ಚಿತ್ರ ಮುಗಿಸಿದಾಗಿನಿಂದ ಕಿಚ್ಚ ಸುದೀಪ್ ಎಲ್ಲೇ ಹೋದರು ಸ್ಟೋಲ್ ಕಟ್ಟಿಕೊಂಡೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ರು. ಆದ್ದರಿಂದ ಸಹಜವಾಗಿ ಅಭಿಮಾನಿಗಳು ಮುಂದಿನ ಚಿತ್ರ 'ದಿ ವಿಲನ್' ಗೆ ಹೇರ್ ಸ್ಟೈಲ್ ಬಿಟ್ಟಿರಬಹುದು ಎಂದುಕೊಂಡಿದ್ದರು. ಅಲ್ಲದೇ ಸುದೀಪ್ ಹೇರ್ ಸ್ಟೈಲ್ ಈಗ ಹೇಗಿದೆ ಎಂದು ಸಾಕಷ್ಟು ಕುತೂಹಲಗಳನ್ನು ಇಟ್ಟುಕೊಂಡಿದ್ದರು. ಈ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದೆ.

'ಹೆಬ್ಬುಲಿ' ಚಿತ್ರದ ನಂತರ ಕಿಚ್ಚ ಸುದೀಪ್ ಹೇರ್ ಸ್ಟೈಲ್ ಹೇಗಿದೆ ಅನ್ನೋದನ್ನ ನೋಡಿಲ್ಲದವರೆಲ್ಲಾ ಇಲ್ಲಿ ನೋಡಿ...

'ಹೆಬ್ಬುಲಿ' ನಂತರ ಕಿಚ್ಚನ ಹೇರ್ ಸ್ಟೈಲ್

'ಹೆಬ್ಬುಲಿ' ಚಿತ್ರದ ನಂತರ ಕಿಚ್ಚ ಸುದೀಪ್ ಹೇರ್ ಸ್ಟೈಲ್ ಹೇಗಿದೆ ಅನ್ನೋ ಕುತೂಹಲ ಅಭಿಮಾನಿಗಳಲ್ಲಿ ಕಾಡುತ್ತಿತ್ತು. ಯಾಕಂದ್ರೆ ಸುದೀಪ್ ಎಲ್ಲೇ ಹೋದರೂ ತಲೆಗೆ ಸ್ಟೋಲ್ ಕಟ್ಟಿಕೊಂಡು ಅಥವಾ ಹ್ಯಾಟ್ ಧರಿಸಿಕೊಂಡು ಹೋಗುತ್ತಿದ್ದರು. ಆದರೆ ಈ ಕುತೂಹಲಕ್ಕೆ ಈಗ ಬ್ರೇಕ್ ಬಿದ್ದಿದ್ದು, ಕಿಚ್ಚ ಸುದೀಪ್ ಹೇರ್ ಸ್ಟೈಲ್ ಹೇಗಿದೆ ಅನ್ನೋದನ್ನ ನೋಡಬಹುದಾಗಿದೆ.[ಕಿಚ್ಚನ 'ಹೆಬ್ಬುಲಿ' ಹೇರ್ ಸ್ಟೈಲ್ ಇನ್ಮುಂದೆ ನೋಡೋಕೆ ಆಗಲ್ಲ]

ಹೇಗಿದೆ ನೋಡಿ ಸುದೀಪ್ ಹೇರ್ ಸ್ಟೈಲ್

'ದಿ ವಿಲನ್' ಚಿತ್ರಕ್ಕೆ ರೆಡಿಯಾಗುತ್ತಿರುವ ಸುದೀಪ್, ತಮ್ಮ ನ್ಯೂ ಹೇರ್ ಸ್ಟೈಲ್ ನಲ್ಲಿ ಮೊನ್ನೆ ನಡೆದ 'ಸಿಲಿಕಾನ್ ಸಿಟಿ' ಚಿತ್ರದ ಆಡಿಯೋ ರಿಲೀಸ್ ವೇಳೆ ಕಾಣಿಸಿದ್ದು ಹೀಗೆ.

ನ್ಯೂ ಹೇರ್ ಸ್ಟೈಲ್ ಗೆ ಬಣ್ಣ

ಸುದೀಪ್ ನ್ಯೂ ಹೇರ್ ಸ್ಟೈಲ್ ಗೆ ಬಣ್ಣ ಹಚ್ಚಿದ್ದು, 'ದಿ ವಿಲನ್' ಚಿತ್ರದಲ್ಲಿ ಈ ಹಿಂದಿಗಿಂತಲೂ ವಿಭಿನ್ನ ಶೇಡ್ ನಲ್ಲಿ ಕಾಣಿಸಿಕೊಳ್ಳಲಿದ್ದಾರಂತೆ.

ಇದೆನಾ ಸುದೀಪ್ 'ದಿ ವಿಲನ್' ಲುಕ್?

'ದಿ ವಿಲನ್' ಚಿತ್ರದಲ್ಲಿ ಸುದೀಪ್ ಹೇರ್ ಸ್ಟೈಲ್ ವಿಭಿನ್ನವಾಗಿ ಕಾಣಿಸಿಕೊಳ್ಳುವುದಂತು ನಿಜ. ಆದರೆ 'ದಿ ವಿಲನ್' ಚಿತ್ರದ ಸುದೀಪ್ ಲುಕ್ ಇನ್ನೂ ಬಿಡುಗಡೆ ಆಗಿಲ್ಲದ ಕಾರಣ, ಅವರ ಲುಕ್ ಇದೇ ಎಂಬುದು ಕನ್ಫರ್ಮ್ ಅಲ್ಲ.

'ದಿ ವಿಲನ್' ಗೆ ಫೋಟೋ ಶೂಟ್ ಮುಗಿದಿದೆ

'ಜೋಗಿ' ಪ್ರೇಮ್ ನಿರ್ದೇಶನ ಮಾಡುತ್ತಿರುವ 'ದಿ ವಿಲನ್' ಚಿತ್ರಕ್ಕೆ ಸುದೀಪ್ ಅವರ ಫೋಟೋ ಶೂಟ್ ಈಗಾಗಲೇ ಮುಗಿದಿದೆ. ಅವರ 'ದಿ ವಿಲನ್' ಲುಕ್ ಬಿಡುಗಡೆ ಆಗುವುದಷ್ಟೇ ಬಾಕಿ.

ಶ್ರೀನಗರ ಕಿಟ್ಟಿ ಜೊತೆ ಸುದೀಪ್

ಶ್ರೀನಗರ ಕಿಟ್ಟಿ ಅಭಿನಯದ 'ಸಿಲಿಕಾನ್ ಸಿಟಿ' ಚಿತ್ರದ ಆಡಿಯೋ ಬಿಡುಗಡೆ ವೇಳೆ ಸುದೀಪ್ ಅವರೊಂದಿಗೆ ಕಾಣಿಸಿಕೊಂಡ ಸಂದರ್ಭ.

English summary
After 'Hebbuli' Movie Kannada Actor Kiccha Sudeep New Hair Style is here you can see.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada