For Quick Alerts
  ALLOW NOTIFICATIONS  
  For Daily Alerts

  ಎಡಗೈ ಅಪಘಾತಕ್ಕೆ ಕಾರಣ ಎನ್ನುತ್ತಲೇ ಎಡಗಾಲಿಗೆ ಪೆಟ್ಟು ಮಾಡಿಕೊಂಡ ದಿಗಂತ್!

  |

  ದಿಗಂತ್ ಬೇಕಂತಲೇ ಪೆಟ್ಟು ಮಾಡಿಕೊಳ್ಳುತ್ತಾರೋ.. ಅಥವಾ ಅವರ ಗೃಹಗತಿನೇ ಚೆನ್ನಾಗಿಲ್ಲವೋ ಗೊತ್ತಿಲ್ಲ. ಮೂರು ಮೂರು ತಿಂಗಳಿಗೂ ಏನಾದರೂ ಒಂದು ಪೆಟ್ಟು ಮಾಡಿಕೊಳ್ಳುತ್ತಲೇ ಇರುತ್ತಾರೆ. ಕೆಲವು ದಿನಗಳ ಹಿಂದಷ್ಟೇ ದಿಗಂತ್ ಕತ್ತಿಗೆ ಗಂಭೀರ ಪೆಟ್ಟು ಮಾಡಿಕೊಂಡಿದ್ದರು.

  ದಿಗಂತ್ ಹಾಗೂ ಐಂದ್ರಿತಾ ರೇ ಗೋವಾಗೆ ತೆರಳಿದ್ದ ವೇಳೆ ಸೊಮರ್ ಸಾಲ್ಟ್ ಮಾಡುವಾಗ ಆಯಾ ತಪ್ಪಿ ಬಿದ್ದಿದ್ದರು. ಈ ವೇಳೆ ದೂದ್‌ ಪೇಡಾ ದಿಗಂತ್ ಕತ್ತಿಗೆ ಗಾಯಗಳಾಗಿತ್ತು. ಈ ಗಾಯ ಗಂಭೀರ ಸ್ವರೂಪ ತಾಳಬಹುದೆಂದು ಗೋವಾದಿಂದ ಬೆಂಗಳೂರಿಗೆ ಏರ್‌ಲಿಫ್ಟ್ ಮಾಡಲಾಗಿತ್ತು. ತಕ್ಷಣವೇ ಶಸ್ತ್ರ ಚಿಕಿತ್ಸೆ ಮಾಡಿ ಸರಿಪಡಿಸಲಾಗಿತ್ತು.

  ದಸರಾ ಹಬ್ಬದಂದೇ ಓಟಿಟಿಯಲ್ಲಿ 'ಗಾಳಿಪಟ' ಹಾರಿಸಲು ಹೊರಟ ಗಣಿ, ಯೋಗರಾಜ್‌ ಭಟ್: ಇಲ್ಲಿದೆ ಡಿಟೈಲ್ಸ್!ದಸರಾ ಹಬ್ಬದಂದೇ ಓಟಿಟಿಯಲ್ಲಿ 'ಗಾಳಿಪಟ' ಹಾರಿಸಲು ಹೊರಟ ಗಣಿ, ಯೋಗರಾಜ್‌ ಭಟ್: ಇಲ್ಲಿದೆ ಡಿಟೈಲ್ಸ್!

  ಇನ್ನೇನು ದಿಗಂತ್ ಅಪಾಯದಿಂದ ಪಾರಾಗಿ, ಮತ್ತೆ ಗುಣಮುಖರಾಗಿ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಇದೇ ವೇಳೆ ದಿಗಂತ್ ಮತ್ತೆ ಎಡಗಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಈ ಪೆಟ್ಟು ಆಗಿದ್ದು ಹೇಗೆ ಅನ್ನೋದನ್ನು ತಿಳಿಯಲು ಮುಂದೆ ಓದಿ.

  ದಿಗಂತ್ ಎಡಗಾಲಿಗೆ ಗಾಯ

  ದಿಗಂತ್ ಎಡಗಾಲಿಗೆ ಗಾಯ

  ದಿಗಂತ್ ಹಾಗೂ ಅನಂತ್‌ನಾಗ್ ಅಭಿನಯದ 'ತಿಮ್ಮಯ್ಯ ಅಂಡ್ ತಿಮ್ಮಯ್ಯ' ಸಿನಿಮಾ ಬಿಡುಗಡೆ ಸಜ್ಜಾಗಿದೆ. ಈ ಸಿನಿಮಾದ ಪ್ರಚಾರದ ವೇಳೆ ನಟ ದಿಗಂತ್ ಕಾಲಿಗೆ ಪೆಟ್ಟು ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಇತ್ತೀಚೆಗೆ ಅಪ್ಪು ಕಪ್ ಬ್ಯಾಟ್ಮಿಂಟನ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು. ಈ ವೇಳೆ ದಿಗಂತ್ ಎಡಗಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ. ಎಡಗಾಲಿನ ಮೊಣಕಾಲಿನವರೆಗೂ ಪ್ಲಾಸ್ಟರ್ ಆಫ್ ಪ್ಯಾರಿಸ್ (POP) ಹಾಕಲಾಗಿದೆ.

  ಕುಂಟುತ್ತಲೇ ವೇದಿಕೆ ಏರಿದ ದಿಗಂತ್

  ಕುಂಟುತ್ತಲೇ ವೇದಿಕೆ ಏರಿದ ದಿಗಂತ್

  ದೂದ್ ಪೇಡಾ ದಿಗಂತ್ ಎಡಗಾಲಿಗೆ ಪೆಟ್ಟು ಮಾಡಿಕೊಂಡಿದ್ದರೂ ಸಿನಿಮಾದ ಪ್ರಚಾರದಲ್ಲಿ ಪಾಲ್ಗೊಂಡಿದ್ದಾರೆ. ಹೆಜ್ಜೆ ಊರಲೂ ಕಷ್ಟಪಡುತ್ತಿರುವ ದಿಗಂತ್ ಕುಂಟುತ್ತಲೇ ವೇದಿಕೆ ಏರಿದ್ದಾರೆ. 'ತಿಮ್ಮಯ್ಯ & ತಿಮ್ಮಯ್ಯ' ಸಿನಿಮಾದಲ್ಲಿ ಅನಂತ್‌ನಾಗ್ ಹಾಗೂ ದಿಗಂತ್ ಜೊತೆಯಾಗಿ ನಟಿಸಿದ್ದಾರೆ. ಸಿನಿಮಾ ರಿಲೀಸ್ ವೇಳೆನೇ ಕಾಲಿಗೆ ಪೆಟ್ಟಿಕೊಂಡಿದ್ದಾರೆ. ಹೀಗಿದ್ದರೂ, ಸಿನಿಮಾದ ಪ್ರಚಾರದಲ್ಲಿ ದೂದ್ ಪೇಡಾ ಭಾಗಿಯಾಗಿದ್ದಾರೆ.

  3 ತಿಂಗಳು ಬೆಡ್ ರೆಸ್ಟ್ ಬಳಿಕ ಮತ್ತೆ ಪೆಟ್ಟು

  3 ತಿಂಗಳು ಬೆಡ್ ರೆಸ್ಟ್ ಬಳಿಕ ಮತ್ತೆ ಪೆಟ್ಟು

  ದೂದ್ ಪೇಡಾ ದಿಗಂತ್‌ ಗೋವಾದಲ್ಲಿ ಕತ್ತಿಗೆ ಪೆಟ್ಟು ಮಾಡಿಕೊಂಡಾಗ ಅಭಿಮಾನಿಗಳು ಆತಂಕಕ್ಕೆ ಒಳಗಾಗಿದ್ದರು. ಅದರಲ್ಲೂ ಗೋವಾದಿಂದ ಏರ್‌ಲಿಫ್ಟ್ ಮಾಡಿದ ವಿಷಯ ಕೇಳುತ್ತಿದ್ದಂತೆ ಫ್ಯಾನ್ಸ್ ಶಾಕ್ ಆಗಿದ್ದರು. ಆದರೆ, ಶಸ್ತ್ರ ಚಿಕಿತ್ಸೆ ನಡೆದ ಒಂದು ದಿನದ ಬಳಿಕ ವೈದ್ಯರು ಡಿಸ್ಚಾರ್ಚ್ ಮಾಡಿದಾಗ ನಿಟ್ಟುಸಿರು ಬಿಟ್ಟಿದ್ದರು. ಜೊತೆಗೆ ಮೂರು ತಿಂಗಳು ಬೆಡ್ ರೆಸ್ಟ್ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದರು. ಸಂಪೂರ್ಣ ಚೇತರಿಸಿಕೊಂಡು ಮತ್ತೆ ಆಕ್ಟಿಂಗ್ ಆಗಿದ್ದ ದಿಗಂತ್ ಈಗ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ.

  ದಿಗಂತ್ ಕಣ್ಣಿಗೆ ಪೆಟ್ಟು

  ದಿಗಂತ್ ಕಣ್ಣಿಗೆ ಪೆಟ್ಟು

  ಈ ಹಿಂದೆ ದಿಗಂತ್ ಬಾಲಿವುಡ್ ಸಿನಿಮಾ ಶೂಟಿಂಗ್ ವೇಳೆ ಕಣ್ಣಿಗೆ ಪೆಟ್ಟು ಮಾಡಿಕೊಂಡಿದ್ದರು. ಆಗ ಬಳಿಕ ಕತ್ತು, ಈಗ ಎಡಗಾಲಿಗೆ ಏಟು ಮಾಡಿಕೊಂಡಿದ್ದು, ಒಂದಲ್ಲ ಒಂದು ಅವಘಡಗಳು ಇವರ ಜೀವನದಲ್ಲಿ ನಡೆಯುತ್ತಲೇ ಇದೆ. ಸದ್ಯ ರೆಸ್ಟ್‌ನಲ್ಲಿದ್ದು, ಕಾಲು ಸಂಪೂರ್ಣ ಸರಿ ಹೋದ ಬಳಿಕ ಮತ್ತೆ ಸಿನಿಮಾ ಕೆಲಸಗಳಲ್ಲಿ ಭಾಗಿಯಾಗಲಿದ್ದಾರೆ. ಸದ್ಯ ದೂದ್‌ ಪೇಡಾ ದಿಗಂತ್ ಬಿಡುಗಡೆಗೆ ಸಜ್ಜಾಗಿರುವ 'ತಿಮ್ಮಯ್ಯ & ತಿಮ್ಮಯ್ಯ' ಸಿನಿಮಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.

  English summary
  After Neck Injury Actor Diganth Once Again Met With An Accident Fractured Left Leg, Know More.
  Wednesday, November 23, 2022, 13:59
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X