For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕದ ದಂತಕಥೆ 'ಕಾಂತಾರ' ತುಳು ಭಾಷೆಗೂ ಡಬ್: ವಿದೇಶದಲ್ಲೇ ಮೊದಲು ರಿಲೀಸ್!

  |

  ಜಗತ್ತೇ ಮೆಚ್ಚಿದ ರಿಷಬ್ ಶೆಟ್ಟಿಯ ಸಿನಿಮಾ 'ಕಾಂತಾರ' ಮತ್ತೆ ಸದ್ದು ಮಾಡುವುದಕ್ಕೆ ಸಜ್ಜಾಗಿದೆ ನಿಂತಿದೆ. 50 ದಿನಗಳನ್ನು ಪೂರೈಸಿ, ಬಾಕ್ಸಾಫೀಸ್‌ನಲ್ಲಿ ಸೌಂಡ್ ಮಾಡಿರೋ ಈ ಸಿನಿಮಾ ಮತ್ತೊಂದು ಭಾಷೆಗೆ ಡಬ್ ಆಗಿ ರಿಲೀಸ್‌ಗೆ ರೆಡಿಯಾಗಿದೆ.

  ಈಗಾಗಲೇ 'ಕಾಂತಾರ' ಕನ್ನಡ ಸೇರಿದಂತೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ರಿಲೀಸ್ ಆಗಿ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿದೆ. ಕನ್ನಡದ ಮೆಗಾ ಬ್ಲಾಕ್‌ಬಸ್ಟರ್ ಸಿನಿಮಾ ಇನ್ನೇನು ಓಟಿಟಿಗೆ ಲಗ್ಗೆ ಇಟ್ಟಿದೆ ಅನ್ನುವಾಗಲೇ ಮತ್ತೊಂದು ಅನೌನ್ಸ್‌ಮೆಂಟ್ ಮಾಡಿದೆ.

  "ಕಾಂತಾರ ತಂಡದವರು ನಮ್ಮೊಂದಿಗೆ ಸೌಜನ್ಯಕ್ಕೂ ಮಾತಾಡಿಲ್ಲ": ಥೈಕ್ಕುಡಂ ಬ್ರಿಡ್ಜ್ ಆರೋಪ!

  ಕಳೆದ ಕೆಲವು ದಿನಗಳಿಂದ 'ಕಾಂತಾರ' ಸಿನಿಮಾವನ್ನು ತುಳುಗೆ ಡಬ್ ಮಾಡುವಂತೆ ಮನವಿ ಮಾಡಿಕೊಳ್ಳಲಾಗಿತ್ತು. ಇತ್ತ ಹೊಂಬಾಳೆ ಫಿಲ್ಮ್ಸ್ ಕೂಡ ತುಳುಗೆ ಡಬ್ ಮಾಡಿ ಬಿಡುಗಡೆ ಮಾಡುವುದಕ್ಕೆ ಸಕಲ ಸಿದ್ಧತೆಗಳನ್ನೂ ಮಾಡಿಕೊಂಡಿತ್ತು. ಅಷ್ಟಕ್ಕೂ 'ಕಾಂತಾರ' ಸಿನಿಮಾ ತುಳು ಭಾಷೆಯಲ್ಲಿ ರಿಲೀಸ್ ಆಗೋದ್ಯಾವಾಗ? ತುಳು ಟ್ರೈಲರ್ ಹೇಗಿದೆ? ವಿದೇಶದಲ್ಲಿಯೇ ಮೊದಲ ರಿಲೀಸ್ ಆಗ್ತಿರೋದು ಯಾಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

  'ಕಾಂತಾರ' ತುಳು ಭಾಷೆಗೆ ಡಬ್!

  'ಕಾಂತಾರ' ತುಳು ಭಾಷೆಗೆ ಡಬ್!

  'ಕಾಂತಾರ' ತುಳು ನಾಡಿನ ಆಚಾರ-ವಿಚಾರಗಳನ್ನು ತೆರೆಮೇಲೆ ತಂದಿರೋ ಸಿನಿಮಾ. ಮೊದಲು ಕನ್ನಡದಲ್ಲಿ ಮಾತ್ರ ಬಿಡುಗಡೆ ಮಾಡಿ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಆದರೆ, ಕನ್ನಡ ಸಿನಿಮಾ ನೋಡಿದ ಪರಭಾಷಿಗರು ಅವರದ್ದೇ ಭಾಷೆಗೆ ಡಬ್ ಮಾಡಿ ರಿಲೀಸ್ ಮಾಡುವಂತೆ ಒತ್ತಾಯ ಮಾಡಿದ್ದರು. ಈ ವೇಳೆ ತುಳು ಭಾಷಿಗರು ಕೂಡ ತುಳು ಭಾಷೆಯಲ್ಲಿ ಡಬ್ ಮಾಡುವಂತೆ ಒತ್ತಡ ತಂದಿದ್ದರು. ಅದರ ಭಾಗವಾಗಿಯೇ ಈಗ 'ಕಾಂತಾರ' ತುಳು ಭಾಷೆಗೆ ಡಬ್ ಆಗಿ ರಿಲೀಸ್‌ಗೆ ರೆಡಿಯಾಗಿದೆ. ಅದಕ್ಕೂ ಮೊದಲ 'ಕಾಂತಾರ' ಸಿನಿಮಾದ ತುಳು ಭಾಷೆಯ ಟ್ರೈಲರ್ ಅನ್ನು ರಿಲೀಸ್ ಮಾಡಿದೆ.

  'ಕಾಂತಾರ' ವಿದೇಶದಲ್ಲೇ ಮೊದಲು ರಿಲೀಸ್

  'ಕಾಂತಾರ' ವಿದೇಶದಲ್ಲೇ ಮೊದಲು ರಿಲೀಸ್

  'ಕಾಂತಾರ' ಸಿನಿಮಾ ತುಳು ಭಾಷೆಗೆ ಡಬ್ ಆಗಿರೋದೇನೋ ನಿಜ. ಆದರೆ ವಿದೇಶದಲ್ಲಿ ಈ ಸಿನಿಮಾವನ್ನು ಮೊದಲು ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದಾರೆ. ನವೆಂಬರ್ 25ರಂದು ವಿದೇಶದಲ್ಲಿ 'ಕಾಂತಾರ' ತುಳು ವರ್ಷನ್ ಬಿಡುಗಡೆಯಾಗುತ್ತಿದೆ. ಅಷ್ಟಕ್ಕೂ ತುಳು ಭಾಷೆಗೆ ಡಬ್ ಮಾಡಿ, ವಿದೇಶದಲ್ಲಿ ಮೊದಲು ರಿಲೀಸ್ ಮಾಡುತ್ತಿರೋದು ಯಾಕೆ? ಅನ್ನೋ ಪ್ರಶ್ನೆ ಸಹಜವಾಗಿ ಎಲ್ಲರನ್ನೂ ಎದ್ದಿದೆ. ಆದರೆ, ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಎಲ್ಲೂ ಮಾಹಿತಿಯನ್ನು ನೀಡಿಲ್ಲ.

  ತುಳು ವರ್ಷನ್ ಭಾರತದಲ್ಲಿ ರಿಲೀಸ್ ಯಾವಾಗ?

  ತುಳು ವರ್ಷನ್ ಭಾರತದಲ್ಲಿ ರಿಲೀಸ್ ಯಾವಾಗ?

  'ಕಾಂತಾರ' ತುಳುಗೆ ಡಬ್ ಆದ್ಮೇಲೆ ಭಾರತದಲ್ಲಿಯೇ ಮೊದಲು ರಿಲೀಸ್ ಆಗಬೇಕಿತ್ತು. ಆದರೆ, ಭಾರತದಲ್ಲಿ ಮುಂದಿನ ತಿಂಗಳು ಅಂದರೆ, ಡಿಸೆಂಬರ್ 02ರಂದು ರಿಲೀಸ್ ಆಗುತ್ತಿದೆ. ಈಗಾಗಲೇ 'ಕಾಂತಾರ' ಸಿನಿಮಾವನ್ನು ತುಳು ಭಾಷಿಗರು ಕನ್ನಡದಲ್ಲಿಯೇ ನೋಡಿದ್ದಾರೆ. ಈ ಕಾರಣಕ್ಕಾಗಿಯೇ ಭಾರತದಲ್ಲಿ ತಡವಾಗಿ ರಿಲೀಸ್ ಮಾಡುತ್ತಿರಬಹುದು. ಇಲ್ಲವೇ ಭಾರತದಲ್ಲಿ ಪ್ರಚಾರ ಮಾಡಿ ರಿಲೀಸ್ ಮಾಡುವ ಆಲೋಚನೆ ಕೂಡ ಇರಬಹುದು. ಈ ಕಾರಣಕ್ಕಾಗಿಯೇ ಒಂದು ವಾರದ ಬಳಿಕ ರಿಲೀಸ್ ಮಾಡುತ್ತಿದ್ದಾರೆ ಅನ್ನೋ ಮಾತು ವಿತರಕರ ವಲಯದಲ್ಲಿ ಕೇಳಿ ಬರುತ್ತಿದೆ.

  'ಕಾಂತಾರ' ಓಟಿಟಿಗೆ ರಿಲೀಸ್

  'ಕಾಂತಾರ' ಓಟಿಟಿಗೆ ರಿಲೀಸ್

  'ಕಾಂತಾರ' ಸಿನಿಮಾ ಕರ್ನಾಟಕದಲ್ಲಿ 50 ದಿನಗಳನ್ನು ಯಶಸ್ವಿಯಾಗಿ ಪೂರೈಸಿದೆ. ಅಲ್ಲದೆ ಕರ್ನಾಟಕದ ಬಾಕ್ಸಾಫೀಸ್‌ನಲ್ಲಿ ಹಿಂದೆಂದೂ ಕಾರಣದ ಕಲೆಕ್ಷನ್ ದಾಖಲಿಸಿದೆ. ಸದ್ಯ 50 ದಿನಗಳನ್ನು ಪೂರೈಸಿದ ಬಳಿಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ ಸಿನಿಮಾ ಓಟಿಟಿಗೆ ಲಗ್ಗೆ ಇಟ್ಟಿದೆ. ಅಮೆಜಾನ್ ಪ್ರೈಂನಲ್ಲಿ ನವೆಂಬರ್ 24ರಂದು ಸ್ಟ್ರೀಮಿಂಗ್ ಆಗುತ್ತಿದೆ. ಆದರೆ, 'ಕಾಂತಾರ' ಹಿಂದಿ ವರ್ಷನ್ ಇನ್ನೂ ರಿಲೀಸ್ ಆಗಿಲ್ಲ.

  English summary
  After Ott Release Hombale Films Releases Kantara Tulu Trailer Here Is the Details, Know More.
  Thursday, November 24, 2022, 14:39
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X